ಒಂದು ದಶಕದಲ್ಲಿ ಬದಲಾಗಲಿದೆ ಉದ್ಯೋಗ ಜಗತ್ತು! 20% ಉದ್ಯೋಗ ರೋಬೋಟ್‌ ಪಾಲು!

|

ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ತಂತ್ರಜ್ಞಾನ ಬೆಳೆದಂತೆಲ್ಲಾ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಮನುಷ್ಯ ದಿನಪೂರ್ತಿ ಮಾಡುವ ಕೆಲಸವನ್ನು ಗಂಟೆಗಳ ಲೆಕ್ಕ್ದಲ್ಲಿ ಮಾಡಿ ಮುಗಿಸುವ ಯಾಂತ್ರಿಕ ಪ್ರಪಂಚದಲ್ಲಿ ನಾವಿದ್ದೇವೆ. ಇನ್ನು ಮನುಷ್ಯನನ್ನೇ ಹೋಲುವ ರೋಬೋಟಿಕ್‌ ತಂತ್ರಜ್ಞಾನ ಕೂಡ ಇಂದು ಸಾಕಷ್ಟು ಅಭಿವೃದ್ದಿಗೊಂಡಿದೆ. ಈಗಾಗಲೇ ಹಲವು ಕಡೆ ರೋಬೋಟ್‌ಗಳ ಮೂಲಕ ಕೆಲಸವನ್ನು ಮಾಡಿಸಲಾಗ್ತಿದೆ. ಆದರೆ ಇದೀಗ ಬಂದಿರುವ ವರದಿ ಮುಂದಿನ ದಿನಗಳಲ್ಲಿ ಮನುಷ್ಯ ಮಾಡುವ ಉದ್ಯೋಗಕ್ಕೂ ಕುತ್ತು ಬರಲಿದೆ ಎಂದು ಹೇಳಿದೆ.

ರೋಬೋಟಿಕ್‌

ಹೌದು, ರೋಬೋಟಿಕ್‌ ಟೆಕ್ನಾಲಜಿ ಅಭಿವೃದ್ದಿ ಆದಷ್ಟು ಕೂಲಿ ಕಾರ್ಮಿಕರ ಉದ್ಯೋಗಕ್ಕೆ ಕುತ್ತು ಬರಲಿದೆ. ಸದ್ಯ ರಿಸ್ಟಾಡ್ ಎನರ್ಜಿಯ ವರದಿಯ ಪ್ರಕಾರ, ಯು.ಎಸ್. ತೈಲ ಉದ್ಯಮಗಳಲ್ಲಿ, ಒರಟುತನವನ್ನು ಹೊಂದಿರುವ ರಿಗ್‌ಗಳ ಮೇಲೆ ಕಾರ್ಮಿಕರ ಬದಲಿಗೆ ರೋಬೋಟ್‌ಗಳನ್ನು ಬಳಸುವ ಯೋಚನೆ ಮಾಡಲಾಗಿದೆಯಂತೆ. ಈ ಮೂಲಕ 7 ಬಿಲಿಯನ್‌ ಶತಕೋಟಿಗಿಂತ ಹೆಚ್ಚಿನ ವೇತನವನ್ನು ಉಳಿಸಬಹುದು ಎಂದು ಹೇಳಲಾಗಿದೆ. ಇದು ಇನ್ನು ಬೇರೆ ವಲಯಗಳಲ್ಲೂ ಮುಂದುವರೆದರೆ ಕಾರ್ಮಿಕರಿಗೆ ಸಂಕಷ್ಟ ತಂದಿಡುವುದು ಖಚಿತ. ಅಷ್ಟಕ್ಕೂ ರೋಬೋಟಿಕ್‌ ಟೆಕ್ನಾಲಜಿಯನ್ನು ತೈಲ ಉದ್ಯಮಗಳಲ್ಲಿ ಬಳಸಲು ಯುಎಸ್‌ ಮುಂದಾಗಿರುವುದು ಏಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರದೇಶ

ಸಾಕಷ್ಟು ಒರಟು ಪ್ರದೇಶ ಹಾಗೂ ಕೊರೆಯುವ ಪ್ರದೇಶಗಳಲ್ಲಿ ಕಾರ್ಯಾಚರಣೆಯ ಬೆಂಬಲ ಮತ್ತು ನಿರ್ವಹಣೆಯಲ್ಲಿ ಜಾಗತಿಕವಾಗಿ ಪ್ರತಿ 10 ತೈಲ ಕಾರ್ಮಿಕರಲ್ಲಿ ಕನಿಷ್ಠ ಇಬ್ಬರು ಮುಂದಿನ ದಶಕದಲ್ಲಿ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಕ್ಷೇತ್ರದಲ್ಲಿ ಕೂಲಿಕಾರ್ಮಿಕರ ಬದಲಿಗೆ ರೋಬೋಟಿಕ್‌ ಟೆಕ್ನಾಲಜಿ ಯಾಂತ್ರೀಕೃತಗೊಂಡರೆ ಅದನ್ನು ಕೆಲಸವನ್ನು ಇನ್ನಷ್ಟು ವೇಗವಾಗಿ ನಿರ್ವಹಿಸಬಹುದು ಎಂದು ಇಂಧನ ದತ್ತಾಂಶ ಪೂರೈಕೆದಾರರು ವರದಿಯಲ್ಲಿ ತಿಳಿಸಿದ್ದಾರೆ. ಇದು ಯು.ಎಸ್ನಲ್ಲಿ ಬದಲಾದ ಒಟ್ಟು ಉದ್ಯೋಗಗಳಲ್ಲಿ 100,000 ಕ್ಕಿಂತ ಹೆಚ್ಚು ಮಂದಿಗೆ ಅನುವಾದಿಸುತ್ತದೆ.

ಈಗಾಗಲೇ

ಈಗಾಗಲೇ "ಕೋವಿಡ್ -19 ಸಂಕಷ್ಟದಿಂದಾಗಿ ಸಾಕಷ್ಟು ಆರ್ಥಿಕ ಕುಸಿತಗೊಂಡಿರುವ ಉದ್ದಿಮೆಗಳು ರೋಬೋಟ್‌ಗಳ ಕಡೆ ಒಲವು ತೋರುತ್ತಿದ್ದಾರೆ. ಆದರೆ ಇದರಿಂದ ಕೊವೀಡ್‌ ಸಮಯದಲ್ಲಿ ಕುಸಿತಕ್ಕೆ ಒಳಗಾಗಿರುವ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಬೀತಿಯಲ್ಲಿದ್ದಾರೆ. ಈ ರೀತಿಯ ಉದ್ಯೋಗ ಕುಸಿತವು ನಿರ್ವಾಹಕರು ವೆಚ್ಚ ಕಡಿತಕ್ಕಾಗಿ ಹೊಸ ಮಾರ್ಗಗಳನ್ನು ಅನ್ವೇಷಿಸುವುದನ್ನು ಮುಂದುವರಿಸಬೇಕಾಗುತ್ತದೆ" ಎಂದು ರಿಸ್ಟಾಡ್‌ನ ವಿಶ್ಲೇಷಕ ಸುಮಿತ್ ಯಾದವ್ ಹೇಳಿದ್ದಾರೆ.

ಸಾಂಕ್ರಾಮಿಕ

ರೋಬೋಟ್‌ಗಳಿಂದ ಯು.ಎಸ್.ನಲ್ಲಿ ಹೆಡ್‌ಕೌಂಟ್ ಕಡಿತವು ಸಾಂಕ್ರಾಮಿಕ ಪೂರ್ವ ಹಂತಕ್ಕೆ ಮರಳಲು ಹೆಣಗಾಡಿದ ಉದ್ಯಮಕ್ಕೆ ಮತ್ತಷ್ಟು ಹೊಡೆತವಾಗಿದೆ. ಶೇಲ್ ಪ್ಯಾಚ್ ಮತ್ತು ಯು.ಎಸ್. ಗಲ್ಫ್ ಆಫ್ ಮೆಕ್ಸಿಕೊದಲ್ಲಿ ರಿಗ್ ಬಳಕೆ ಕಳೆದ ವರ್ಷದ ಆರಂಭಕ್ಕೆ ಹೋಲಿಸಿದರೆ ಇನ್ನೂ ಅರ್ಧದಷ್ಟು ಕಡಿಮೆಯಾಗಿದೆ. ಏನೇ ಇರಲಿ ಪ್ರತಿ ಇಬ್ಬರು ಉದ್ಯೋಗಿಗಳ ಬದಲಿಗೆ ರೋಬೋಟ್‌ ಅನ್ನು ಕೆಲಸ ನಿರ್ವಹಿಸುವುದಕ್ಕೆ ಮುಂದಾಗಿರುವುದು ಭವಿಷ್ಯದಲ್ಲಿ ಮನುಷ್ಯನ ಸ್ಥಾನ ಏನು ಅನ್ನೊದು ಇಂದೇ ನಿರ್ಧಾರವಾದಂತೆ ಕಾಣಲಿದೆ.

Best Mobiles in India

English summary
20 percent of oilfield jobs will be taken over by robots in next 10 years.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X