Home
ಸುದ್ದಿಜಾಲ

200 units free electricity: ಇಲ್ಲಿದೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರ!

ರಾಜ್ಯದಲ್ಲಿ ಚುನಾವಣೆ ಮುಗಿದು ಕಾಂಗ್ರೆಸ್‌ ನೇತೃತ್ವದ ಹೊಸ ಸರ್ಕಾರ ಬರುತ್ತಿದ್ದ ಹಾಗೇ ಐದು ಗ್ಯಾರಂಟಿಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಜನರ ಅನುಕೂಲಕ್ಕಾಗಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಇದರಲ್ಲಿ 200 ಯೂನಿಟ್‌ ಉಚಿತ ವಿದ್ಯುತ್‌ ಗ್ಯಾರಂಟಿ (200 units free electricity) ಕೂಡ ಒಂದಾಗಿದೆ.

ಪ್ರಸ್ತುತ ಹೊಸ ಸರ್ಕಾರ ರಚನೆಯಾದ ನಂತರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನರು ವಿದ್ಯುತ್‌ ಬಿಲ್‌ ಪಾವತಿಸುವುದಕ್ಕೆ ಹಿಂದೆಟು ಹಾಕುತ್ತಿದ್ದಾರೆ. 200 ಯೂನಿಟ್‌ ಉಚಿತ ವಿದ್ಯುತ್‌ ಗ್ಯಾರಂಟಿ ನೀಡಿರುವುದರಿಂದ ನಾವು ಬಿಲ್‌ ಪಾವತಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನು ಸರ್ಕಾರ ಕೂಡ ಇದೇ ಜೂನ್‌ ಒಂದರಂದು ಐದು ಗ್ಯಾರಂಟಿಗಳನ್ನು ಸಹ ಅನುಷ್ಠಾನಕ್ಕೆ ತರುವುದಾಗಿ ಹೇಳಿದೆ. ಇದರ ನಡುವೆ 200 ಯೂನಿಟ್‌ ಉಚಿತ ವಿದ್ಯುತ್‌ಗಾಗಿ ಕಾದುಕುಳಿತವರಿಗೆ ಬಿಗ್‌ ಶಾಕ್‌ ಕೂಡ ಎದುರಾಗಿದೆ ಅದು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

200 ಯೂನಿಟ್‌ ಉಚಿತ ವಿದ್ಯುತ್‌! ಇಲ್ಲಿದೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರ!

ಹೊಸ ಸರ್ಕಾರ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ಗ್ಯಾರಂಟಿ ಭರವಸೆ ನೀಡಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡ ಉನ್ನತ ಮಟ್ಟದ ಸಭೆಗಳನ್ನು ನಡೆಸುತ್ತಿದೆ. ಇದೇ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಹೊಸ ಸ್ಕ್ಯಾಮ್‌ ನಿಧಾನವಾಗಿ ಕಾಲಿಟ್ಟಿದೆ. 200 ಉಚಿತ ವಿದ್ಯುತ್‌ ಗ್ಯಾರಂಟಿ ಹೆಸರಿನಲ್ಲಿ ಸೈಬರ್‌ ಸ್ಕ್ಯಾಮ್‌ಗಳು ಕೂಡ ತಲೆ ಎತ್ತುವ ಸೂಚನೆ ಕಾಣುತ್ತಿದೆ.

ಅದರಲ್ಲೂ ವಂಚಕರು ಬೆಂಗಳೂರು ಮಹಾನಗರದ ಜನತೆಯನ್ನೇ ಗುರಿಯಾಗಿಸಿಕೊಂಡಿದ್ದಾರೆ. 200 ಯೂನಿಟ್‌ ವಿದ್ಯುತ್‌ ಉಚಿತವಾಗಿ ಬೇಕಿದ್ದರೆ ಕೂಡಲೇ ನಿಮ್ಮ ಹಳೆಯ ಬಿಲ್‌ಗಳನ್ನು ಪಾವತಿಸಿ, ಇವತ್ತೇ ನೀವು ಬಿಲ್‌ ಪಾವತಿಸಬೇಕು ಇಲ್ಲದಿದ್ದರೆ ನಿಮಗೆ 200 ಯೂನಿಟ್‌ ಉಚಿತ ವಿದ್ಯುತ್‌ ಯೋಜನೆ ಅನ್ವಯವಾಗುವುದಿಲ್ಲ ಎಂಬ ಸಂದೇಶಗಳ ಹಾವಳಿ ಜೋರಾಗಿದೆ. ಈ ರೀತಿಯ ಸಂದೇಶಗಳನ್ನು ನಂಬಿ ಸಂದೇಶದ ಲಿಂಕ್‌ ಕ್ಲಿಕ್‌ ಮಾಡಿದರೆ ನಿಮ್ಮ ಖಾತೆಯಲ್ಲಿರುವ ಹಣ ಕ್ಷಣಾರ್ಧದಲ್ಲಿ ಮಾಯಾವಾಗಲಿದೆ.

200 ಯೂನಿಟ್‌ ಉಚಿತ ವಿದ್ಯುತ್‌! ಇಲ್ಲಿದೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರ!

ಸಾಮಾನ್ಯವಾಗಿ ಬೆಸ್ಕಾಂ ಆಗಲಿ, ಇಲ್ಲವೇ ರಾಜ್ಯ ಯಾವುದೇ ವಿಭಾಗದ ವಿದ್ಯುತ್‌ ಸರಬರಾಜು ನಿಗಮ ಗ್ರಾಹಕರಿಗೆ ಬಿಲ್‌ ಪಾವತಿಸುವಂತೆ ಕರೆ ಮಾಡುವುದಿಲ್ಲ. ಅಲ್ಲದೆ ಸಂದೇಶ ಕೂಡ ಕಳುಹಿಸುವುದಿಲ್ಲ, ಆದರಿಂದ ಗ್ರಾಹಕರು ಬಿಲ್‌ ಪಾವತಿಸುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ. 200 ಹಯೂನಿಟ್‌ ವಿದ್ಯುತ್‌ ಉಚಿತ ಗ್ಯಾರಂಟಿ ಆಸೆಗೆ ಬಿದ್ದು ವಂಚಕರ ದಾಳಕ್ಕೆ ಸಿಲುಕಬೇಡಿ ಅನ್ನೊದು ನಮ್ಮ ಕಳಕಳಿಯಾಗಿದೆ.

200 ಯೂನಿಟ್‌ಗಳವರೆಗೆ ಉಚಿತವಾಗಿ ವಿದ್ಯುತ್‌ ನೀಡುವ ಘೋಷಣೆ ಕಾಂಗ್ರೆಸ್‌ ಪಕ್ಷದ ಮೊದಲ ಗ್ಯಾರಂಟಿಯಾಗಿದೆ. ಇದೇ ಕಾರಣಕ್ಕೆ ಸರ್ಕಾರವು ಕೂಡ ಅಧಿಕಾರಕ್ಕೆ ಬಂದ ದಿನದಿಂದಲೂ ಈ ವಿಚಾರವಾಗಿ ಸಾಕಷ್ಟು ಸಭೆಗಳನ್ನು ನಡೆಸುತ್ತಿದೆ. ಜೊತೆಗೆ ಸಂಪನ್ಮೂಲ ಕ್ರೋಡಿಕರಣಕ್ಕೆ ಒತ್ತನ್ನು ನೀಡಿದೆ. ಆದರೆ ಕರ್ನಾಟಕದಲ್ಲಿ ಹೊಸ ಸರ್ಕಾರ ಬರುತ್ತಿದ್ದ ಹಾಗೆ ರಾಜ್ಯದ ಬಹುತೇಕ ಕಡಡೆ ವಿದ್ಯುತ್‌ ಬಿಲ್‌ ಪಾವತಿಸುವ ವಿಚಾರದಲ್ಲಿ ಸಾಕಷ್ಟು ಗೊಂದಲ ಗಲಾಟೆಗಳು ನಡೆದಿವೆ.

200 ಯೂನಿಟ್‌ ಉಚಿತ ವಿದ್ಯುತ್‌! ಇಲ್ಲಿದೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರ!

ಹಳ್ಳಿಗಳಲ್ಲಿ ಜನರು ವಿದ್ಯುತ್‌ ಬಿಲ್‌ ಕಟ್ಟಿಸಿಕೊಳ್ಳಲು ಬಂದವರ ಜೊತೆಗೆ ಗಲಾಟೆ ಮಾಡುತ್ತಿದ್ದಾರೆ. ಕೆಲವು ಕಡೆ ದೈಹಿಕ ಹಲ್ಲೆಗಳನ್ನು ಸಹ ಮಾಡಲಾಗಿದೆ. ಇದೇ ಸನ್ನಿವೇಶವನ್ನು ಉಪಯೋಗಿಸಿಕೊಂಡಿರುವ ವಂಚಕರು ಗ್ರಾಹಕರಿಗೆ ನಕಲಿ ಸಂದೇಶ ಕಳುಹಿಸಿ ನೀವು 200 ಯೂನಿಟ್‌ ಉಚಿತ ವಿದ್ಯುತ್‌ ಪಡೆಯಲು ಈ ಲಿಂಕ್‌ ಕ್ಲಿಕ್‌ ಮಾಡಿ ಎಂದು ಹೇಳುತ್ತಿದ್ದಾರೆ. ಇದನ್ನು ನಂಬಿದ ಜನತೆ ನಾನಾ ರೀತಿಯಲ್ಲಿ ಮೋಸ ಹೋಗುತ್ತಿರುವುದು ಬೆಳಕಿಗೆ ಬಂದಿದೆ.

Best Mobiles in India

English summary
200 units free electricity: beware of electricity old bill payment, fake sms, fraud call
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+