200 units free electricity ಯೋಜನೆ ಯಾವಾಗ ಲಭ್ಯ! ಯಾರಿಗೆಲ್ಲಾ ಪ್ರಯೋಜನ ಸಿಗಲಿದೆ!
ಕರ್ನಾಟಕ ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಗೃಹಜ್ಯೋತಿ ಯೋಜನೆಯು ಅಧಿಕೃತವಾಗಿ ಘೋಷಣೆಯಾಗಿದೆ. ಇಂದು ಸಚಿವ ಸಂಪುಟ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಆದರೆ ಗೃಹಜ್ಯೋತಿ ಯೋಜನೆಯಲ್ಲಿ 200 ಯುನಿಟ್ ಉಚಿತ ವಿದ್ಯುತ್ (200 units free electricity) ಪ್ರಯೋಜನ ಪಡೆದುಕೊಳ್ಳಲು ಹಲವು ಮಾನದಂಡಗಳನ್ನು ಪೂರೈಸಬೇಕಾಗುತ್ತದೆ.
ಹೌದು, 200 ಯುನಿಟ್ ಉಚಿತ ವಿದ್ಯುತ್ ಯೋಜನೆಯ ಲಾಭ ಪಡೆಯಬೇಕಾದರೆ ಕೆಲವು ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಆದರೆ ಇಲ್ಲಿಯ ತನಕ ನೀವು ವಿದ್ಯುತ್ ಬಾಕಿ ಉಳಿಸಿಕೊಂಡಿದ್ದರೆ ಅದನ್ನು ಪಾವತಿಸಲೇಬೇಕು ಅನ್ನೊದನ್ನ ಸರ್ಕಾರ ತಿಳಿಸಿದೆ. ಹಾಗಾದ್ರೆ 200 ಯುನಿಟ್ ಉಚಿತ ವಿದ್ಯುತ್ ಪಡೆಯಲು ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೃಹಜ್ಯೋತಿ ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ನೀಡಿದ ಮೊದಲ ಗ್ಯಾರಂಟಿ ಭರವಸೆಯಾಗಿದೆ. ಅದರಂತೆ ಇದೀಗ ಸರ್ಕಾರ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಈ ಯೋಜನೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಯೋಜನೆಯನ್ನು ಐಪಿಎಲ್, ಬಿಪಿಎಲ್ ಎಲ್ಲಾ ಕುಟುಂಬಗಳಿಗೂ ಕೂಡ ನೀಡುವುದಕ್ಕೆ ಸರ್ಕಾರ ನಿರ್ಧರಿಸಿದೆ. ಆದರೆ ಈ ಯೋಜನೆಯಲ್ಲಿ ನಿಮ್ಮ ಹಿಂದಿನ ವರ್ಷದ 12 ತಿಂಗಳ ಸರಾಸರಿ ಲೆಕ್ಕವನ್ನು ತೆಗೆದುಕೊಂಡು ಅದರ ಪ್ರಯೋಜನ ನೀಡಲಾಗುತ್ತದೆ.
ಅಂದರೆ ನೀವು ಈ ಹಿಂದೆ ಪ್ರತಿ ತಿಂಗಳು ಬಳಸಿರುವ ಯುನಿಟ್‌ಗಳ ಮೇಲೆ ಶೇಕಡ 10 ಹೆಚ್ಚು ಮಾಡುತ್ತೇವೆ ಎಂದು ಹೇಳಿದೆ. ಈ ತಿಂಗಳು ಬಿಲ್ ಈಗಾಗಲೇ ತಯಾರು ಆಗಿರುವುದರಿಂದ ಮುಂದಿನ ತಿಂಗಳು ಜುಲೈ 1ರಿಂದ ಈ ಯೋಜನೆ ಜಾರಿಗೆ ಬರಲಿದೆ. ಇನ್ನು ಈ ಯೋಜನೆಯ ಲಾಭ ಬಾಡಿಗೆ ಮನೆಯಲ್ಲಿರುವವರಿಗೂ ಕೂಡ ಅನ್ವಯವಾಗಲಿದೆ ಎಂದು ಸರ್ಕಾರ ಹೇಳಿದೆ.

ಇದೇ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಹೊಸ ಸ್ಕ್ಯಾಮ್ ನಿಧಾನವಾಗಿ ಕಾಲಿಟ್ಟಿದೆ. 200 ಉಚಿತ ವಿದ್ಯುತ್ ಗ್ಯಾರಂಟಿ ಹೆಸರಿನಲ್ಲಿ ಸೈಬರ್ ಸ್ಕ್ಯಾಮ್‌ಗಳು ಕೂಡ ತಲೆ ಎತ್ತುವ ಸೂಚನೆ ಕಾಣುತ್ತಿದೆ. ಅದರಲ್ಲೂ ವಂಚಕರು ಬೆಂಗಳೂರು ಮಹಾನಗರದ ಜನತೆಯನ್ನೇ ಗುರಿಯಾಗಿಸಿಕೊಂಡಿದ್ದಾರೆ. 200 ಯೂನಿಟ್ ವಿದ್ಯುತ್ ಉಚಿತವಾಗಿ ಬೇಕಿದ್ದರೆ ಕೂಡಲೇ ನಿಮ್ಮ ಹಳೆಯ ಬಿಲ್‌ಗಳನ್ನು ಪಾವತಿಸಿ, ಇವತ್ತೇ ನೀವು ಬಿಲ್ ಪಾವತಿಸಬೇಕು ಇಲ್ಲದಿದ್ದರೆ ನಿಮಗೆ 200 ಯೂನಿಟ್ ಉಚಿತ ವಿದ್ಯುತ್ ಯೋಜನೆ ಅನ್ವಯವಾಗುವುದಿಲ್ಲ ಎಂಬ ಸಂದೇಶಗಳ ಹಾವಳಿ ಜೋರಾಗಿದೆ. ಈ ರೀತಿಯ ಸಂದೇಶಗಳನ್ನು ನಂಬಿ ಸಂದೇಶದ ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮ ಖಾತೆಯಲ್ಲಿರುವ ಹಣ ಕ್ಷಣಾರ್ಧದಲ್ಲಿ ಮಾಯಾವಾಗಲಿದೆ.
ಸಾಮಾನ್ಯವಾಗಿ ಬೆಸ್ಕಾಂ ಆಗಲಿ, ಇಲ್ಲವೇ ರಾಜ್ಯ ಯಾವುದೇ ವಿಭಾಗದ ವಿದ್ಯುತ್ ಸರಬರಾಜು ನಿಗಮ ಗ್ರಾಹಕರಿಗೆ ಬಿಲ್ ಪಾವತಿಸುವಂತೆ ಕರೆ ಮಾಡುವುದಿಲ್ಲ. ಅಲ್ಲದೆ ಸಂದೇಶ ಕೂಡ ಕಳುಹಿಸುವುದಿಲ್ಲ, ಆದರಿಂದ ಗ್ರಾಹಕರು ಬಿಲ್ ಪಾವತಿಸುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ. 200 ಯೂನಿಟ್ ವಿದ್ಯುತ್ ಉಚಿತ ಗ್ಯಾರಂಟಿ ಆಸೆಗೆ ಬಿದ್ದು ವಂಚಕರ ದಾಳಕ್ಕೆ ಸಿಲುಕಬೇಡಿ ಅನ್ನೊದು ನಮ್ಮ ಕಳಕಳಿಯಾಗಿದೆ. 200 ಯೂನಿಟ್‌ಗಳವರೆಗೆ ಉಚಿತವಾಗಿ ವಿದ್ಯುತ್ ನೀಡುವ ಘೋಷಣೆ ಕಾಂಗ್ರೆಸ್ ಪಕ್ಷದ ಮೊದಲ ಗ್ಯಾರಂಟಿಯಾಗಿದೆ.

ಇದೇ ಕಾರಣಕ್ಕೆ ಸರ್ಕಾರವು ಕೂಡ ಅಧಿಕಾರಕ್ಕೆ ಬಂದ ದಿನದಿಂದಲೂ ಈ ವಿಚಾರವಾಗಿ ಸಾಕಷ್ಟು ಸಭೆಗಳನ್ನು ನಡೆಸುತ್ತಿದೆ. ಜೊತೆಗೆ ಸಂಪನ್ಮೂಲ ಕ್ರೋಡಿಕರಣಕ್ಕೆ ಒತ್ತನ್ನು ನೀಡಿದೆ. ಆದರೆ ಕರ್ನಾಟಕದಲ್ಲಿ ಹೊಸ ಸರ್ಕಾರ ಬರುತ್ತಿದ್ದ ಹಾಗೆ ರಾಜ್ಯದ ಬಹುತೇಕ ಕಡಡೆ ವಿದ್ಯುತ್ ಬಿಲ್ ಪಾವತಿಸುವ ವಿಚಾರದಲ್ಲಿ ಸಾಕಷ್ಟು ಗೊಂದಲ ಗಲಾಟೆಗಳು ನಡೆದಿವೆ.


Click it and Unblock the Notifications








