ಶಿಯೋಮಿಯ 20000mAh ಪವರ್‌ಬ್ಯಾಂಕ್ ನೋಡಿ ಮಾರುಕಟ್ಟೆ ಸುಸ್ತು!

|

ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ಶಿಯೋಮಿ ದೇಶದಲ್ಲಿ ಮತ್ತೊಂದು ಶಕ್ತಿಶಾಲಿ ಪವರ್ ಬ್ಯಾಂಕ್ ಒಂದನ್ನು ಪರಿಚಯಿಸಿದೆ. ಹೆಚ್ಚಿನ ಸಾಂದ್ರತೆಯ ಲಿಥಿಯಂ ಪಾಲಿಮರ್ ಬ್ಯಾಟರಿಗಳೊಂದಿಗೆ ಸಂಯೋಜಿಸಲ್ಪಟ್ಟಿರುವ 20000 ಎಂಎಹೆಚ್ ಸಾಮರ್ಥ್ಯದ 'ಮಿ ಪವರ್ ಬ್ಯಾಂಕ್ 2ಐ' ಎಂಬ ಪವರ್‌ಬ್ಯಾಂಕ್ ಕೇವಲ 1,499 ರೂ.ಗಳಿಗೆ ಮಾರುಕಟ್ಟೆಗೆ ಕಾಲಿಟ್ಟಿದೆ.

ಶಿಯೋಮಿಯ 20000mAh ಪವರ್‌ಬ್ಯಾಂಕ್ ನೋಡಿ ಮಾರುಕಟ್ಟೆ ಸುಸ್ತು!

ಹೌದು, ಸ್ಮಾರ್ಟ್‌ಫೋನ್‌ ಬ್ಯಾಟರಿ ಬ್ಯಾಕಪ್ ಅನ್ನು ಸುಧಾರಿಸುವಂತಹ ಪವರ್ ಬ್ಯಾಂಕ್‌ಗಳ ಕೊರತೆಯನ್ನು ನೀಗಿಸಲು ಶಿಯೋಮಿ ಕಂಪೆನಿ ಮುಂದಾಗಿದೆ. ಹಾಗಾಗಿ, 20000 ಎಂಎಹೆಚ್ ಸಾಮರ್ಥ್ಯದ ಪವರ್‌ಬ್ಯಾಂಕ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ಪವರ್‌ ಬ್ಯಾಂಕ್ ಸ್ಮಾರ್ಟ್‌ಫೋನ್ ಪ್ರಿಯರ ಬೆಸ್ಟ್ ಆಯ್ಕೆಯಾಗಲಿದೆ ಎಂದು ತಿಳಿಸಿದೆ.

ಡ್ಯುಯಲ್ ಯುಎಸ್‌ಬಿ ಪೋರ್ಟ್‌ಗಳ ಬೆಂಬಲ ಮತ್ತು ದ್ವಿಮುಖ ತ್ವರಿತ ಚಾರ್ಜಿಂಗ್ ನೀಡುವ ಈ ಸಾಧನವು ಅವಶ್ಯಕತೆಗಳಿಗೆ ಸರಿಹೊಂದುವಂತೆ ಬುದ್ಧಿವಂತಿಕೆ ವಿದ್ಯುತ್ ಅನ್ನು ಪ್ರವಹಿಸುವ ಶಕ್ತಿಯನ್ನು ಹೊಂದಿದೆ. ಇಷ್ಟು ಮಾತ್ರವಲ್ಲದೇ, ತಾಪಮಾನ ನಿರೋಧಕತೆ, ಶಾರ್ಟ್ ಸರ್ಕ್ಯೂಟ್ ಪ್ರೊಟೆಕ್ಷನ್ ಸೇರಿದಂತೆ ಒಂಬತ್ತು ಲೇಯರ್ ಸರ್ಕ್ಯೂಟ್ ಚಿಪ್ ರಕ್ಷಣೆಯನ್ನು ಒದಗಿಸುತ್ತದೆ.

ಶಿಯೋಮಿಯ 20000mAh ಪವರ್‌ಬ್ಯಾಂಕ್ ನೋಡಿ ಮಾರುಕಟ್ಟೆ ಸುಸ್ತು!

ಹೆಚ್ಚಿನ ಸಾಂದ್ರತೆಯ ಲಿಥಿಯಂ ಪಾಲಿಮರ್ ಬ್ಯಾಟರಿಗಳೊಂದಿಗೆ ಸಂಯೋಜಿಸಲ್ಪಟ್ಟಿರುವ ಈ ಪವರ್ ಬ್ಯಾಂಕ್, ರೆಡ್‌ಮಿ ಕೆ20 ಪ್ರೊ ಅಥವಾ ನೋಟ್ 7 ಪ್ರೊ ಅನ್ನು ಮೂರು ಬಾರಿ ಸಂಪೂರ್ಣ ಚಾರ್ಜ್ ಮಾಡುತ್ತದೆ.ಮತ್ತು ಇದು ಐಒಎಸ್ ಸಾಧನಗಳನ್ನು ಸಹ ಬೆಂಬಲಿಸುತ್ತದೆ (7.2 ಬಾರಿ ಐಫೋನ್ 8 ಅನ್ನು ಸಂಪೂರ್ಣ ಚಾರ್ಜ್ ಮಾಡುವ ಸಾಮರ್ಥ್ಯ) ಎಂದು ಕಂಪೆನಿ ಹೇಳಿಕೊಂಡಿದೆ.

ಆನ್‌ಲೈನಿನಲ್ಲಿ 'ಆಧಾರ್ ಕಾರ್ಡ್‌' ವಿಳಾಸ ಬದಲಿಸುವುದು ಹೇಗೆ?..ಫುಲ್ ಡೀಟೇಲ್ಸ್!ಆನ್‌ಲೈನಿನಲ್ಲಿ 'ಆಧಾರ್ ಕಾರ್ಡ್‌' ವಿಳಾಸ ಬದಲಿಸುವುದು ಹೇಗೆ?..ಫುಲ್ ಡೀಟೇಲ್ಸ್!

ಎಲ್ಇಡಿ ಸೂಚಕದೊಂದಿಗೆ ಬಂದಿರುವ ಈ ಸಾಧನ ಚಾರ್ಜಿಂಗ್ ಉದ್ದೇಶಗಳಿಗಾಗಿ ಮೈಕ್ರೋ ಯುಎಎಸ್ಬಿ ಪೋರ್ಟ್ ಹೊಂದಿದೆ. ಇನ್ನು ಇನ್ಪುಟ್ ಓವರ್ವೋಲ್ಟೇಜ್ ರಕ್ಷಣೆ, ತಪ್ಪಾದ ಅಳವಡಿಕೆ ರಕ್ಷಣೆ, ಔಟ್‌ಪುಪ್ ಓವರ್‌ಕರೆಂಟ್ ಪ್ರೊಟೆಕ್ಷನ್, o ಓವರ್‌ವೋಲ್ಟೇಜ್ ಪ್ರೊಟೆಕ್ಷನ್, ಓವರ್‌ಚಾರ್ಜ್ ಮತ್ತು ಓವರ್-ಡಿಸ್ಚಾರ್ಜ್ ಪ್ರೊಟೆಕ್ಷನ್ ಮತ್ತು ಪಿಟಿಸಿ ಪ್ರೊಟೆಕ್ಟಿವ್ ಇದರ ವಿಶೇಷತೆಗಳಾಗಿವೆ.

Best Mobiles in India

English summary
20000mAh Mi Power Bank 2i With Dual USB Ports Launched in India at Rs. 1,499. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X