2014 ರ ಬಳಸಲು ಯೋಗ್ಯವಲ್ಲದ ಪಾಸ್‌ವರ್ಡ್‌ಗಳು

Written By:

ಪಾಸ್‌ವರ್ಡ್ ರಚನೆ ಮಾಡುವುದು ಭದ್ರತೆ ವಿಷಯದಲ್ಲಿ ತುಂಬಾ ಕಾಳಜಿಯಿಂದ ಮಾಡಬೇಕಾಗಿರುವ ಕೆಲಸವಾಗಿದೆ. ನಿಮ್ಮ ಪಾಸ್‌ವರ್ಡ್ ನಿಮಗೆ ನೆನಪಿಡಲು ಸುಲಭವಾಗಿರಬೇಕು ಇತರರಿಗೆ ಕ್ಲಿಷ್ಟವಾಗಿರಬೇಕು. ಅಂದರೆ ನೀವು ಸಂಖ್ಯೆಗಳು, ಅಕ್ಷರಗಳು ಮತ್ತು ಚಿಹ್ನೆಗಳನ್ನು ಒಳಗೊಂಡ ಪಾಸ್‌ವರ್ಡ್ ರಚನೆಯನ್ನು ಮಾಡಬೇಕಾಗುತ್ತದೆ.

2014 ರ ಬಳಸಲು ಯೋಗ್ಯವಲ್ಲದ ಪಾಸ್‌ವರ್ಡ್‌ಗಳು

ಅದಾಗ್ಯೂ ಕೆಲವೊಂದು ವೆಬ್‌ಸೈಟ್‌ಗಳು ಒಂದೇ ರೀತಿಯ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಅನ್ನು ಬಳಸುತ್ತಿರುವುದು ಗಮನಕ್ಕೆ ಬಂದಿದ್ದು ಇದು ಹೆಚ್ಚಿನ ಅಪಾಯವನ್ನು ತಂದೊಡ್ಡಬಹುದಾಗಿದೆ. ನಿಮ್ಮ ಈ ಅಸುರಕ್ಷಿತ ಪಾಸ್‌ವರ್ಡ್ ನಿರ್ಮಾಣವು ನಿಮ್ ಖಾತೆಯನ್ನು ದೋಚುವವರಿಗೆ ದಾರಿಮಾಡಿಕೊಟ್ಟಂತೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಪಾಸ್‌ವರ್ಡ್‌ಗಳು ಹೇಗಿರಬೇಕು ಎಂಬುದನ್ನು ಕುರಿತು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. ನಂಬರ್ ಒನ್ ಸ್ಥಾನದಲ್ಲಿರುವ ಪಾಸ್‌ವರ್ಡ್‌ಗಳು ಇದಾಗಿದ್ದು ಇವುಗಳು ಹೆಚ್ಚು ಸುರಕ್ಷಿತವಾಗಿವೆ.

2014 ರ ಬಳಸಲು ಯೋಗ್ಯವಲ್ಲದ ಪಾಸ್‌ವರ್ಡ್‌ಗಳು

ಇನ್ನು ಭದ್ರತಾ ವ್ಯವಸ್ಥೆಗಾಗಿ ಅಪ್ಲಿಕೇಶನ್‌ಗಳನ್ನು ಮತ್ತು ಸೇವೆಗಳನ್ನು ಒದಗಿಸುವ ಕಂಪೆನಿ ಸ್ಪಾಲ್ಯಾಶ್ ಡೇಟಾ ಅತಿ ಕೆಟ್ಟ ಪಾಸ್‌ವರ್ಡ್ ಎಂಬ ಪಟ್ಟಿಗೆ ಒಳಪಡುವ ಪ್ರಕಟಣೆಯನ್ನು ಹೊರತಂದಿದೆ.
ರಾಂಕ್ ಪಾಸ್‌ವರ್ಡ್ 2013 ರಿಂದ ಬದಲಾಗಿರುವುದು
1 123456 No Change
2 password No Change
3 12345 Up 17
4 12345678 Down 1
5 qwerty Down 1
6 123456789 No Change
7 1234 Up 9
8 baseball New
9 dragon New
10 football New
11 1234567 Down 4
12 monkey Up 5
13 letmein Up 1
14 abc123 Down 9
15 111111 Down 8
16 mustang New
17 access New
18 shadow Unchanged
19 master New
20 michael New
21 superman New
22 696969 New
23 123123 Down 12
24 batman New
25 trustno1 Down 1

2014 ರ ಬಳಸಲು ಯೋಗ್ಯವಲ್ಲದ ಪಾಸ್‌ವರ್ಡ್‌ಗಳು

ಮೇಲ್ಕಾಣಿಸಿದ ಪಾಸ್‌ವರ್ಡ್ ಪಟ್ಟಿಯು ನಿಮ್ಮ ಭದ್ರತೆಗೆ ಧಕ್ಕೆಯನ್ನುಂಟುಮಾಡುವುದು ಖಂಡಿತ. ಬೇರೆಲ್ಲಾ ಸೈಟ್‌ಗಳು ಕೇವಲ 10 ಪಾಸ್‌ವರ್ಡ್‌ಗಳನ್ನು ಮಾತ್ರ ನೀಡಿದ್ದು ಇಲ್ಲಿ 25 ಪಾಸ್‌ವರ್ಡ್‌ಗಳನ್ನು ನಾವು ನಿಮಗೆ ನೀಡುತ್ತಿದ್ದೇವೆ. ಇನ್ನು ಬ್ಯಾಟ್‌ಮೆನ್, 696969 ಮೊದಲಾದ ಪಾಸ್‌ವರ್ಡ್‌ಗಳು ಸುರಕ್ಷಿತ ಪಾಸ್‌ವರ್ಡ್‌ಗಳಲ್ಲ ಎಂಬುದು ಇಲ್ಲಿ ಮನದಟ್ಟಾಗುತ್ತದೆ. ಆದ್ದರಿಂದ ಇಂತಹ ಪಾಸ್‌ವರ್ಡ್‌ಗಳನ್ನು ಬಳಸುವುದು ನಿಮ್ಮ ಜೀವನವನ್ನು ಅಪಾಯಕ್ಕೆ ನೂಕಬಹುದು.

English summary
This article tells about 2014's Top 25 worst passwords.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot