Subscribe to Gizbot

2015 ವೇಳೆಗೆ ಮನೆ ಮನೆಯಲ್ಲಿ ಕನೆಕ್ಟ್ ಟೀ.ವಿ

Posted By: Super
2015 ವೇಳೆಗೆ ಮನೆ ಮನೆಯಲ್ಲಿ ಕನೆಕ್ಟ್ ಟೀ.ವಿ

 

ನಿಮ್ಮ ಕಂಪ್ಯೂಟರ್ ನಲ್ಲಿ ಟೀ. ವಿ ನೋಡುವ ತಂತ್ರಜ್ಞಾನ ಈಗಾಗಲೇ ಸಾಮಾನ್ಯವಾಗಿದೆ. ಆದರೆ ಕಂಪ್ಯೂಟರ್ ನಂತೆ ಇಂಟರ್ನೆಟ್ ಜಾಲಾಡಬಹುದಾದ ಟೀ.ವಿ ಗಳು ಇನ್ನು ಮುಂದೆ ಭಾರತಕ್ಕೂ ಲಗ್ಗೆ ಇಡಲಿವೆ ಎಂದು ಫ್ಯೂಚರ್ ಸೊರ್ಸ್ ಕನ್ಸಲ್ಟಿಂಗ್ ನ ಸಮೀಕ್ಷೆ ತಿಳಿಸಿದೆ.

ಅಮೆರಿಕ ಮತ್ತು ಚೀನಾ ದೇಶದಲ್ಲಿ 29% ಜನರು ಕನೆಕ್ಟ್ ಟೀ.ವಿ ಗೆ ಮೊರೆ ಹೋಗಿದ್ದು ಜಪಾನ್ ನಲ್ಲಿ ಈಗಾಗಲೇ ಅದರ ವ್ಯಾಪ್ತಿ 60% ದಾಟಿದ್ದು, ಇಂಟರ್ನೆಟ್ ಸಂಪರ್ಕಕ್ಕೆ ಹೊಂದಾಣಿಕೆಯಾಗುವ ಈ ಕನೆಕ್ಟ್ ಟೀ.ವಿಗಳ ಬೇಡಿಕೆಯಿಂದ ಉತ್ತೇಜಿತರಾಗಿರುವ ಉತ್ಪಾದಕರು 2012 ರ ಕೊನೆಗೆ ವೈ-ಫೈ ತಂತ್ರಜ್ಞಾನ ಕೂಡ ಜೋಡಿಸಲು ಯೋಚಿಸಿದ್ದಾರೆನ್ನಲಾಗಿದೆ.

ಒಟ್ಟಿನಲ್ಲಿ ಶರವೇಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದ ಜೊತೆ ಜನರ ಬೇಡಿಕೆಗಳೂ ಹೆಚ್ಚಿತ್ತಿರುವುದರಿಂದ ಯಾವ್ಯಾವ ತರಹದ ಟೀ.ವಿಗಳು ಬರಲಿದೆಯೋ ಕಾದು ನೋಡಬೇಕಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot