'ಐಟಿ' ಕ್ಷೇತ್ರಕ್ಕೆ ಸಿಹಿಸುದ್ದಿ!..2018ನೇ ವರ್ಷದಲ್ಲಿ 2 ಲಕ್ಷಕ್ಕಿಂತ ಹೆಚ್ಚು ಉದ್ಯೋಗಗಳು ಸೃಷ್ಟಿ!!
2017 ರಲ್ಲಿ ಕೇವಲ ಕೆಲಸ ಕಳೆದುಕೊಳ್ಳುವ ಸುದ್ದಿ ಕೇಳುತ್ತಿದ್ದ ಐಟಿ ಉದ್ಯೋಗಿಗಳಿಗೆ ಮಾನವ ಸಂಪನ್ಮೂಲ ನೇಮಕಾತಿ ಕಂಪೆನಿಗಳು ಸಿಹಿಸುದ್ದಿಯನ್ನು ಪ್ರಕಟಿಸಿವೆ.!!
2018ನೇ ವರ್ಷ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮತ್ತು ಉದ್ಯೋಗಿಗಳಿಗೆ ಅತ್ಯುತ್ತಮ ವರ್ಷವಾಗಿರಲಿದೆ ಎನ್ನುವ ಭವಿಷ್ಯವಾಣಿ ಹೊರಬಿದ್ದಿದೆ.! 2017 ರಲ್ಲಿ ಕೇವಲ ಕೆಲಸ ಕಳೆದುಕೊಳ್ಳುವ ಸುದ್ದಿ ಕೇಳುತ್ತಿದ್ದ ಐಟಿ ಉದ್ಯೋಗಿಗಳಿಗೆ ಮಾನವ ಸಂಪನ್ಮೂಲ ನೇಮಕಾತಿ ಕಂಪೆನಿಗಳು ಸಿಹಿಸುದ್ದಿಯನ್ನು ಪ್ರಕಟಿಸಿವೆ.!!
ದೇಶದ ಐಟಿ ಕ್ಷೇತ್ರ ಈ ವರ್ಷ 2 ಲಕ್ಷಕ್ಕಿಂತ ಹೆಚ್ಚು ಉದ್ಯೋಗ ಕಲ್ಪಿಸಲಿದೆ ಎಂದು ಪ್ರಖ್ಯಾತ ಟೀಮ್‌ಲೀಸ್ ಸರ್ವಿಸಸ್ ಕಂಪೆನಿ ಅಂದಾಜು ಮಾಡಿ ಹೇಳಿದೆ.! ಹಾಗಾದರೆ, ತಂತ್ರಜ್ಞಾನ ಕ್ಷೇತ್ರಕ್ಕೆ 2018ನೇ ವರ್ಷ ವರವಾಗಿರುವುದೇಕೆ? ಇಂಜಿನಿಯರಿಂಗ್ ಪದವಿದರರು ಆಯ್ಕೆ ಮಾಡಿಕೊಳ್ಳಬೇಕಾದ ಕ್ಷೇತ್ರಗಳು ಯಾವುವು? ಎಂಬುದನ್ನು ಮುಂದೆ ತಿಳಿಯಿರಿ.!!

ಐಟಿ ಕ್ಷೇತ್ರಕ್ಕೆ ಪೂರಕ ವಾತಾವರಣ!!
ಈಗಾಗಲೇ ಭಾರತದ ಐಟಿ ಆರ್ಥಿಕ ಸೇವಾ ಕ್ಷೇತ್ರ ಸುಧಾರಣೆಯಾಗಿರುವುದು, ಡಿಜಿಟಲ್ ವಹಿವಾಟಿನಲ್ಲಿ ಹೆಚ್ಚಳ, ಡಿಜಿಟಲೀಕರಣ, ಯಾಂತ್ರೀಕರಣ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಹೆಚ್ಚಿರುವುದರಿಂದ ಐಟಿ ಕ್ಷೇತ್ರಕ್ಕೆ ಪೂರಕ ವಾತಾವರಣ ಸಿಕ್ಕಿದೆ. ಹಾಗಾಗಿ, 2018ನೇ ವರ್ಷ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ವರವಾಗಿದೆ.!!

ಡಿಜಿಟಲ್ ತಂತ್ರಜ್ಞಾನಕ್ಕೆ ಬೆಲೆ.!!
ಭಾರತ ಸೇರಿದಂತೆ ಇಡೀ ವಿಶ್ವದ ಎಲ್ಲಾ ಐಟಿ ಕಂಪೆನಿಗಳೂ ಹೊಸ ಹೊಸ ಡಿಜಿಟಲ್ ತಂತ್ರಜ್ಞಾನಗಳನ್ನು ಅಭಿವೃದ್ದಿಪಡಿಸಲು ಮುಂದಾಗಿ ಬಂಡವಾಳ ಹೂಡುತ್ತಿವೆ. ಹಾಗಾಗಿ, ಡಿಜಿಟಲ್ ತಂತ್ರಜ್ಞಾನದಲ್ಲಿ ಪ್ರಾವೀಣ್ಯತೆಯುಳ್ಳ ಶೇ.50 ಕ್ಕೂ ಹೆಚ್ಚು ತಂತ್ರಜ್ಞರ ಅವಶ್ಯಕತೆ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಇದೆ.!!


2 ಲಕ್ಷ ಉದ್ಯೋಗ ಸೃಷ್ಟಿ.!!
ಕೃತಕ ಬುದ್ಧಿಮತ್ತೆ (ಎಐ) ಬಳಕೆಯಲ್ಲಿ ಹೆಚ್ಚಳವಾಗಿರುವುದರಿಂದ ಈ ವರ್ಷ ಐಟಿ ನೇಮಕಾತಿಯಲ್ಲಿ ಹೆಚ್ಚಳವಾಗಲಿದೆ ಎಂದು ಟೀಮ್‌ಲೀಸ್ ಸರ್ವಿಸಸ್ ಕಂಪೆನಿ ಅಂದಾಜಿಸಿದೆ. ಈ ವರ್ಷ ಹೊಸದಾಗಿ ಉದ್ಯೋಗ ಕಲ್ಪಿಸುವ ಕಂಪೆನಿಗಳು ಶೇ.20ರಷ್ಟು ಹೆಚ್ಚಾಗಲಿದ್ದು, 2 ಲಕ್ಷ ಉದ್ಯೋಗವಕಾಶಗಳು ಸಿಗಬಹುದೆಂದು ಅಂದಾಜಿಸಲಾಗಿದೆ.!!

ನವೋದ್ಯಮದಲ್ಲಿ ಅವಕಾಶಗಳು!!
ಸ್ಟಾರ್ಟ್ಆಪ್ ಆಪ್‌ಗಳು, ವೆಬ್ ಡೆವಲಪರರ್ಸ್, ಆರ್ಥಿಕ ಸೇವೆಗಳು, ಇಂಟರ್‌ನೆಟ್, ಫೈನಾನ್ಶಿಯಲ್ ಟೆಕ್ನಾಲಜಿ ಹೀಗೆ ನವೋದ್ಯಮಗಳಲ್ಲಿ ಅವಕಾಶಗಳು ಉತ್ತಮವಾಗಿರುತ್ತವೆ ಹಾಗಾಗಿ, ಇಂತಹ ಕ್ಷೇತ್ರಗಳಲ್ಲಿ ಇಂಜಿನಿಯರಿಂಗ್ ಪದವಿದರರು ಹೆಚ್ಚು ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಟೀಮ್‌ಲೀಸ್ ಸರ್ವಿಸಸ್ ಹೇಳಿದೆ.!!

ಹೊಸ ಕೌಶಲ್ಯಗಳನ್ನು ಕಲಿಯಲೇಬೇಕು.!!
2030ರ ವೇಳೆಗೆ ಅಂತಾರಾಷ್ಟ್ರೀಯ ಕೃತಕ ಬುದ್ಧಿಮತ್ತೆ ಕ್ಷೇತ್ರವೊಂದೇ 23 ಲಕ್ಷ ಉದ್ಯೋಗವಕಾಶಗಳನ್ನು ಕಲ್ಪಿಸಲಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ, ಐಟಿಯಲ್ಲಿ ಕೆಲಸ ಮಾಡುತ್ತಿರುವವರು ಉದ್ಯೋಗ ಉಳಿಸಿಕೊಳ್ಳಬೇಕಾದರೆ ಹೊಸ ಕೌಶಲ್ಯಗಳನ್ನು ಕಲಿಯುವುದು ಕೆಲವು ಉದ್ಯೋಗಿಗಳಿಗೆ ಕಡ್ಡಾಯ ಎಂದು ಟೀಮ್‌ಲೀಸ್ ಸೂಚಿಸಿದೆ.!!


Click it and Unblock the Notifications








