2018 ರಲ್ಲಿ ಉದ್ಯೋಗಿಗಳಿಗೆ ಉತ್ತಮ ಅವಕಾಶ ನೀಡಿದ ಬೆಸ್ಟ್ ಟೆಕ್ನಾಲಜಿ ಸಂಸ್ಥೆಗಳು

|

ಒಬ್ಬ ಕೆಲಸ ಹುಡುಕುವ ವ್ಯಕ್ತಿ ತನಗೆ ಕೆಲಸ ಕೊಡುವ ಕಂಪೆನಿಯಿಂದ ಏನನ್ನು ನಿರೀಕ್ಷಿಸುತ್ತಾನೆ ಹೇಳಿ? ಅವರು ತಮ್ಮ ಉತ್ತಮ ಸಂಬಳ, ಬೆನಿಫಿಟ್ಸ್ ಗಳು ಮತ್ತು ಅಭಿವೃದ್ಧಿಯನ್ನು ನೀಡುವ ಬೆಸ್ಟ್ ಕಂಪೆನಿಗಳನ್ನು ಆಯ್ಕೆ ಮಾಡಿಕೊಳ್ಳಲು ಇಚ್ಛಿಸುತ್ತಾರೆ. ಒಟ್ಟಾರೆಯಾಗಿ ಅವರು ಕೆಲಸ ಮಾಡುವ ಸಂಸ್ಥೆ ಉತ್ತಮ ಹೆಸರು ಮಾಡಿರಬೇಕು, ಕೆಲಸ ಮಾಡಲು ಒಳ್ಳೆಯ ವಾತಾವರಣ ನೀಡಬೇಕು ಎಂದು ಬಯಸುತ್ತಾರೆ.

2018 ರಲ್ಲಿ ಉದ್ಯೋಗಿಗಳಿಗೆ ಉತ್ತಮ ಅವಕಾಶ ನೀಡಿದ ಬೆಸ್ಟ್ ಟೆಕ್ನಾಲಜಿ ಸಂಸ್ಥೆಗಳು

ಎಕನಾಮಿಕ್ ಟೈಮ್ಸ್ ಈ ಬಾರಿ 100 ಕಂಪೆನಿಗಳ ಪಟ್ಟಿಯನ್ನು ತಯಾರಿಸಿ ಅದರಲ್ಲಿ 2018 ರಲ್ಲಿ ಕೆಲಸ ಮಾಡಲು ಬೆಸ್ಟ್ ಅನ್ನಿಸಿದ ಕಂಪೆನಿಗಳ ಪಟ್ಟಿಯನ್ನು ತಯಾರಿಸಿದೆ. ಆ ಪಟ್ಟಿಯ ಅನುಸಾರ ಯಾವ್ಯಾವ ಕಂಪೆನಿಗಳು ಬೆಸ್ಟ್ ಕಂಪೆನಿಗಳು ಎನ್ನಿಸಿಕೊಂಡಿದೆ ಎಂಬುದನ್ನು ನಾವಿಲ್ಲಿ ವಿವರಿಸುತ್ತಿದ್ದೇವೆ. ನಾವಿಲ್ಲಿ 25 ಕಂಪೆನಿಗಳ ಲಿಸ್ಟ್ ನ್ನು ನೀಡುತ್ತಿದ್ದೇವೆ. ಇವು 2018 ರಲ್ಲಿ ಬೆಸ್ಟ್ ಎನ್ನಿಸಿಕೊಂಡಿರುವ ಟೆಕ್ನಾಲಜಿ ಸಂಸ್ಥೆಗಳಾಗಿದೆ.

SAP ಲ್ಯಾಬ್ಸ್: ಸ್ಥಾನ 1

SAP ಲ್ಯಾಬ್ಸ್: ಸ್ಥಾನ 1

ಈ ಲಿಸ್ಟ್ ನಲ್ಲಿ ಮೊದಲ ಕಂಪೆನಿ ಸ್ಯಾಬ್ ಲ್ಯಾಬ್ಸ್. ಕಂಪೆನಿಯಲ್ಲಿ ಉತ್ತಮ ಸಬಲೀಕರಣ ಯೋಜನೆ ಮತ್ತು ನೀತಿಯನ್ನು ಕಂಪೆನಿಯಲ್ಲಿ ಅಳವಡಿಸಲಾಗಿದೆ.

ಇನ್ಟ್ಯೂಟ್ ಇಂಡಿಯಾ: ಸ್ಥಾನ 2

ಇನ್ಟ್ಯೂಟ್ ಇಂಡಿಯಾ: ಸ್ಥಾನ 2

ಇನ್ಟ್ಯೂಟ್ ಇಂಡಿಯಾದಲ್ಲಿ ಕಾರ್ಮಿಕರಿಗೆ ಫ್ಲೆಕ್ಸಿಬಲ್ ಆಗಿ ಕೆಲಸ ನಿರ್ವಹಿಸಲು ಅವಕಾಶವಿದೆ. ವೆಲ್ ನೆಸ್ ಬೆನಿಫಿಟ್ ಮತ್ತು ಫೋಷಕರ ಜೊತೆಗೆ ಉತ್ತಮ ಸೌಕರ್ಯದೊಂದಿಗೆ ಇರಲು ಅವಕಾಶ ನೀಡುತ್ತದೆ.

ಅಡೋಬ್ ಸಿಸ್ಟಮ್ಸ್: ಸ್ಥಾನ 4

ಅಡೋಬ್ ಸಿಸ್ಟಮ್ಸ್: ಸ್ಥಾನ 4

ಉದ್ಯೋಗದ ವೈವಿಧ್ಯತೆಯಲ್ಲಿ ಅಡೋಬ್ ಉತ್ತಮ ಸ್ಥಾನವನ್ನು ಪಡೆಯುತ್ತದೆ. ಮಹಿಳಾ ಉದ್ಯೋಗಿಗಳಿಗಾಗಿ ಉತ್ತಮ ಟ್ರೈನಿಂಗ್ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ವಿದ್ಯಾಭ್ಯಾಸ ಮತ್ತು ಆರೋಗ್ಯದ ಬೆನಿಫಿಟ್ ಗಳನ್ನು ಇದು ನೀಡುತ್ತದೆ.

ಇಂಧೂಸ್ ಟವರ್ಸ್: ಸ್ಥಾನ 11

ಇಂಧೂಸ್ ಟವರ್ಸ್: ಸ್ಥಾನ 11

ಈ ಕಂಪೆನಿಯು ದೇಶದಾದ್ಯಂತ ಸುಮಾರು 1.2 ಲಕ್ಷಕ್ಕೂ ಅಧಿಕ ಟೆಲಿಕಾಂ ಟವರ್ ಗಳನ್ನು ಇನ್ಸ್ಟಾಲ್ ಮಾಡಿದೆ. 100 ಕಂಪೆನಿಗಳ ಪಟ್ಟಿಯಲ್ಲಿ ಇದಕ್ಕೆ 11ನೇ ಸ್ಥಾನ.

ವಡಾಫೋನ್ ಇಂಡಿಯಾ: ಸ್ಥಾನ 13

ವಡಾಫೋನ್ ಇಂಡಿಯಾ: ಸ್ಥಾನ 13

ವರದಿಯ ಪ್ರಕಾರ ವಡಾಫೋನ್ ಇಂಡಿಯಾ ಗ್ರಾಹಕರಿಗೆ ರಿವಾರ್ಡ್ಸ್ ಗಳನ್ನು ನೀಡುವ ನಿಟ್ಟಿನಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಪಿಟ್ನಿ ಬೋವೆಸ್ ಸಾಫ್ಟ್ ವೇರ್ ಇಂಡಿಯಾ: ಸ್ಥಾನ 20

ಪಿಟ್ನಿ ಬೋವೆಸ್ ಸಾಫ್ಟ್ ವೇರ್ ಇಂಡಿಯಾ: ಸ್ಥಾನ 20

ನೋಯ್ಡಾ ಮೂಲದ ಈ ಸಾಫ್ಟ್ ವೇರ್ ಕಂಪೆನಿಯು ಕೆಲಸಕ್ಕೆ ಹೇಳಿ ಮಾಡಿಸಿದ ಸಂಸ್ಕೃತಿಯನ್ನು ರೂಢಿಸಿದೆ.ತನ್ನ ಕಾರ್ಮಿಕರಗೆ ಉನ್ನತ ಶಿಕ್ಷಣದ ಅನುಕೂಲಗಳನ್ನು ಮಾಡಿಕೊಡುತ್ತದೆ.

ಕಾಂತಾರ್ಸ್ ಗ್ಲೋಬಲ್ ಡೆಲಿವರಿ ಸೆಂಟರ್ : ಸ್ಥಾನ 22

ಕಾಂತಾರ್ಸ್ ಗ್ಲೋಬಲ್ ಡೆಲಿವರಿ ಸೆಂಟರ್ : ಸ್ಥಾನ 22

ಕಾರ್ಮಿಕರ ಅಭಿವೃದ್ಧಿಯ ಯೋಜನೆಗಳು ಮತ್ತು ತರಬೇತಿ ಕಾರ್ಯಕ್ರಮಗಳು ಈ ಸಂಸ್ಥೆ ಈ ಪಟ್ಟಿಯಲ್ಲಿ ಸ್ಥಾನ ಪಡೆಯುವುದಕ್ಕೆ ಪ್ರಮುಖ ಕಾರಣವಾಗಿದೆ.

ಪೇಪಾಲ್ ಇಂಡಿಯಾ: ಸ್ಥಾನ 24

ಪೇಪಾಲ್ ಇಂಡಿಯಾ: ಸ್ಥಾನ 24

ಕಾರ್ಮಿಕ ಸ್ನೇಹಿ ವಾತಾವರಣ ಮತ್ತು ಕರಿಯರ್ ಗೆ ಉತ್ತಮ ಅಭಿವೃದ್ಧಿ ನೀಡುವ ಅವಕಾಶಗಳನ್ನು ಈ ಸಂಸ್ಥೆ ನೀಡುತ್ತದೆ.

ಜಾನ್ ಡೀರೆ ಟೆಕ್ನಾಲಜಿ ಸೆಂಟರ್: ಸ್ಥಾನ 27

ಜಾನ್ ಡೀರೆ ಟೆಕ್ನಾಲಜಿ ಸೆಂಟರ್: ಸ್ಥಾನ 27

ಪುಣೆ ಮೂಲದ ಈ ಸಂಸ್ಥೆ, ವಿಶ್ವ ಮಾನ್ಯ ವಾತಾವರಣವನ್ನು ಕೆಲಸಕ್ಕೆ ನೀಡುತ್ತದೆ ಮತ್ತು ಜನಸ್ನೇಹಿತ ನೀತಿಗಳನ್ನು ಸಂಸ್ಥೆಯಲ್ಲಿ ಅಳವಡಿಸಲಾಗಿದೆ.

ಕ್ಯಾಡೆನ್ಸ್ ಡಿಸೈನ್ ಸಿಸ್ಟಮ್: ಸ್ಥಾನ 28

ಕ್ಯಾಡೆನ್ಸ್ ಡಿಸೈನ್ ಸಿಸ್ಟಮ್: ಸ್ಥಾನ 28

ಕಾರ್ಮಿಕರ ಅಗತ್ಯತೆಗಳಿಗೆ ಅನುಸಾರವಾಗಿ ವಿಭಿನ್ನ ಹೆಚ್ ಆರ್ ನೀತಿಗಳನ್ನು ಅಳವಡಿಸಲಾಗಿದ್ದು ಇದು ಕಾರ್ಮಿಕರಿಗೆ ಅನುಕೂಲವನ್ನು ಮಾಡಿಕೊಡುತ್ತದೆ.

BMC ಸಾಫ್ಟವೇರ್: ಸ್ಥಾನ 31

BMC ಸಾಫ್ಟವೇರ್: ಸ್ಥಾನ 31

ಕಂಪೆನಿಯು ಉದ್ಯೋಗಿಗಳನ್ನು ರೆಫರಲ್ ಕಾರ್ಯಕ್ರಮದ ಮೂಲಕ ರಾಯಭಾರಿಗಳನ್ನಾಗಿ ಮಾಡುವ ಕಂಪೆನಿ ಇದು. ನೌಕರರಿಗೆ ಕೆಲಸದ ವಾತಾವರಣವನ್ನು ಹೆಚ್ಚಿಸುವುದಕ್ಕೆ ನಿಯಮಿತ ಪ್ರತಿಕ್ರಿಯೆಗಳನ್ನು ಪಡೆಯಲಾಗುತ್ತದೆ.

ಆಸ್ಪೈರ್ ಸಿಸ್ಟಮ್ಸ್: ಸ್ಥಾನ 35

ಆಸ್ಪೈರ್ ಸಿಸ್ಟಮ್ಸ್: ಸ್ಥಾನ 35

ಉತ್ತಮ ರೀತಿಯಲ್ಲಿ ಕೆಲಸದ ಜೀವನವನ್ನು ಕೌಟುಂಬಿಕ ಜೀವನದೊಂದಿಗೆ ಬ್ಯಾಲೆನ್ಸ್ ಮಾಡುವುದಕ್ಕೆ ಕಂಪೆನಿ ಅವಕಾಶ ನೀಡುತ್ತದೆ. ಉತ್ತಮ ಲಾಭದಾಯಕ ಯೋಜನೆಗಳನ್ನು ಕಾರ್ಮಿಕರಿಗಾಗಿ ರೂಪಿಸಲಾಗಿದೆ.

ಅಟ್ರಿಯಾ ಕನ್ವರ್ಜೆನ್ಸ್ ಟೆಕ್ನಾಲಜೀಸ್: ಸ್ಥಾನ 38

ಅಟ್ರಿಯಾ ಕನ್ವರ್ಜೆನ್ಸ್ ಟೆಕ್ನಾಲಜೀಸ್: ಸ್ಥಾನ 38

ಕೇವಲ ನೌಕರರಿಗೆ ಮಾತ್ರವಲ್ಲದೆ ಅವರ ಮಕ್ಕಳಿಗೂ ಕೂಡ ಉತ್ತಮ ಕಾರ್ಯಕ್ರಮಗಳನ್ನು ಈ ಸಂಸ್ಥೆ ಆಯೋಜಿಸುತ್ತದೆ.

ಸೇಲ್ ಫೋರ್ಸ್.ಕಾಮ್: ಸ್ಥಾನ 39

ಸೇಲ್ ಫೋರ್ಸ್.ಕಾಮ್: ಸ್ಥಾನ 39

ಉತ್ತಮ ಆರೋಗ್ಯದ ವಾತಾವರಣಕ್ಕಾಗಿ ಈ ಕಂಪೆನಿಯು ಓಹನಾ ಕಲ್ಚರ್ ಎಂದು ಕರೆಯಲ್ಪಡುವ ಕಾರ್ಯಕ್ರಮವನ್ನು ಮಾಡುತ್ತದೆ. ಇದರ ಅಡಿಯಲ್ಲಿ ಕಾರ್ಮಿಕರು ಒಬ್ಬರಿಗೆ ಒಬ್ಬರು ಜವಾಬ್ದಾರರಾಗಿರುತ್ತಾರೆ ಮತ್ತು ಇದು ಪ್ರೇರಕ ಸಂಸ್ಕೃತಿಯನ್ನು ಇದು ಉತ್ತೇಜಿಸುತ್ತದೆ.

ಕ್ರೋನಸ್ ಇನ್ ಕಾರ್ಪೋರೇಟೆಡ್: ಸ್ಥಾನ 44

ಕ್ರೋನಸ್ ಇನ್ ಕಾರ್ಪೋರೇಟೆಡ್: ಸ್ಥಾನ 44

ಈ ಸಂಸ್ಥೆಯು ನೀಡುವ ಪ್ರಯೋಜನಗಳು ಮಕ್ಕಳ ಶಿಕ್ಷಣ ಮತ್ತು ವಿಸ್ತೃತ ಪಿತೃತ್ವ ರಜೆಗೆ ನೆರವು ನೀಡುತ್ತದೆ.

ಹೆಚ್ಇಆರ್ ಇ ಸಲ್ಯೂಷನ್ಸ್: ಸ್ಥಾನ 45

ಹೆಚ್ಇಆರ್ ಇ ಸಲ್ಯೂಷನ್ಸ್: ಸ್ಥಾನ 45

ಜನಸ್ನೇಹಿ ನಿಯಮಗಳು ಮತ್ತು ಇತರೆ ಹಲವು ಬೆನಿಫಿಟ್ ಗಳು ಈ ಸಂಸ್ಥೆಯನ್ನು ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದೆ.

ಶ್ರೀರಾಮ್ ವ್ಯಾಲ್ಯೂ ಸರ್ವೀಸ್: ಸ್ಥಾನ 48

ಶ್ರೀರಾಮ್ ವ್ಯಾಲ್ಯೂ ಸರ್ವೀಸ್: ಸ್ಥಾನ 48

ಈ ಕಂಪೆನಿಯು ತನ್ನ ಉದ್ಯೋಗಿಗಳಿಗೆ ಮನೆ ಮತ್ತು ಆಫೀಸ್ ಎರಡನ್ನೂ ಸಮತೋಲನದಲ್ಲಿ ನಿರ್ವಹಿಸುವುದಕ್ಕೆ ಸಾಧ್ಯವಾಗುವಂತೆ ಮಾಡುತ್ತದೆ.

ಯಶ್ ಟೆಕ್ನಾಲಜೀಸ್: ಸ್ಥಾನ 54

ಯಶ್ ಟೆಕ್ನಾಲಜೀಸ್: ಸ್ಥಾನ 54

ಜನಕೇಂದ್ರಿಯ ಸಂಸ್ಕೃತಿ ಮತ್ತು ಹೆಚ್ಚು ನೌಕರರಿಗೆ ಅಭಿವೃದ್ಧಿಗೆ ಅವಕಾಶವನ್ನು ಈ ಸಂಸ್ಥೆ ನೀಡುತ್ತದೆ.

ಇಂಪೆಟಸ್ ಇನ್ಫೋಟೆಕ್: ಸ್ಥಾನ 63

ಇಂಪೆಟಸ್ ಇನ್ಫೋಟೆಕ್: ಸ್ಥಾನ 63

ಸಾವಯವ ಊಟ, ಸಹಾಯ ಸೇವೆಗಳು, ಸಾರಿಗೆ ಸೌಲಭ್ಯಗಳು ಮತ್ತು ಆರೋಗ್ಯ ಕಾರ್ಯಕ್ರಮಗಳು ಇತ್ಯಾದಿಗಳು ಈ ಕಂಪೆನಿಯು ಉತ್ತುಂಗದ ಸ್ಥಾನದಲ್ಲಿ ಸೇರಿಸಿದೆ.

ಎರಿಕ್ಸನ್ ಇಂಡಿಯಾ: ಸ್ಥಾನ 74

ಎರಿಕ್ಸನ್ ಇಂಡಿಯಾ: ಸ್ಥಾನ 74

ಇತರೆ ಹಲವು ಕಂಪೆನಿಗಳಂತೆ ಇದೂ ಕೂಡ ವರ್ಕ್-ಲೈಫ್ ಬ್ಯಾಲೆನ್ಸ್ ಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತದೆ ಹಾಗಾಗಿ ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದೆ.

ಟಾಟಾ ಕಮ್ಯುನಿಕೇಷನ್ ಲಿಮಿಟೆಡ್: ಸ್ಥಾನ 78

ಟಾಟಾ ಕಮ್ಯುನಿಕೇಷನ್ ಲಿಮಿಟೆಡ್: ಸ್ಥಾನ 78

ಟಾಟಾ ಗ್ರೂಪ್ ಕೆಲಸ ಮಾಡಲು ಒಂದು ಉತ್ತಮ ಸ್ಥಳವಾಗಿದೆ. ಟಾಟಾ ಕಮ್ಯುನಿಕೇಷನ್ ಟಾಟಾ ಸಂಸ್ಥೆಗಳ ಒಂದು ಭಾಗವಾಗಿದೆ.

ಹೆಚ್ ಪಿ: ಸ್ಥಾನ 88

ಹೆಚ್ ಪಿ: ಸ್ಥಾನ 88

ನೌಕರರಿಗೆ ಹಲವು ಬೆನಿಫಿಟ್ ಗಳನ್ನು ನೀಡುವ ಹಲವು ಕಂಪೆನಿಗಳ ಲಿಸ್ಟ್ ನಲ್ಲಿ ಹೆಚ್ ಪಿ ಕೂಡ ಇದ್ದು 2018 ರಲ್ಲೂ ಉತ್ತಮ ಕಂಪೆನಿ ಎನ್ನಿಸಿಕೊಂಡಿದೆ.

ಹಿಟಾಚಿ ಕನ್ಸಲಿಂಗ್ ಸಾಫ್ಟ್ ವೇರ್ ಸರ್ವೀಸ್: ಸ್ಥಾನ 90

ಹಿಟಾಚಿ ಕನ್ಸಲಿಂಗ್ ಸಾಫ್ಟ್ ವೇರ್ ಸರ್ವೀಸ್: ಸ್ಥಾನ 90

ಟೆಕ್ನಾಲಜಿ ಸೆಲ್ಯೂಷನ್ ಮತ್ತು IoT ಮಾತ್ರವೇ ಈ ಕನ್ಸಲಿಂಟ್ ಫರ್ಮ್ಆಫರ್ ಮಾಡುವುದಿಲ್ಲ. ಅದೇ ಕಾರಣಕ್ಕೆ ಇದು ಭಾರತದಲ್ಲಿ ಕೆಲಸ ಮಾಡಲು ಯೋಗ್ಯವಾಗಿರುವ ಒಂದು ಅತ್ಯುತ್ತಮ ಕಂಪೆನಿ ಆಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇನ್ಫೋಸ್ಟ್ರೆಚ್ ಕಾರ್ಪೋರೇಷನ್: ಸ್ಥಾನ 98

ಇನ್ಫೋಸ್ಟ್ರೆಚ್ ಕಾರ್ಪೋರೇಷನ್: ಸ್ಥಾನ 98

ಇನ್ಫೋಸ್ಟ್ರೆಚ್ ಕಾರ್ಪೋರೇಷನ್ ಲಿಸ್ಟ್ ನಲ್ಲಿ 98 ನೇ ಸ್ಥಾನವನ್ನು ಪಡೆದುಕೊಂಡಿದೆ.

ಇಂಟೆಲೆನೆಟ್ ಗ್ಲೋಬಲ್ ಸರ್ವೀಸಸ್: ಸ್ಥಾನ 99

ಇಂಟೆಲೆನೆಟ್ ಗ್ಲೋಬಲ್ ಸರ್ವೀಸಸ್: ಸ್ಥಾನ 99

ಇಂಟೆಲ್ ನೆಟ್ ಒಂದು ಜಾಗತಿಕವಾಗಿ ವ್ಯವಹಾರ ಪ್ರಕ್ರಿಯೆಯನ್ನು ನಡೆಸುವ ಹೊರಗುತ್ತಿಗೆ ಸಂಸ್ಥೆಯಾಗಿದೆ.

Best Mobiles in India

Read more about:
English summary
2018’s 25 best technology companies to work in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X