ಐ.ಟಿ ನೌಕರರಿಗೆ ಸಿಹಿಸುದ್ದಿ!..ಕೆಲಸ ಕಳೆದುಕೊಳ್ಳುವ ಭೀತಿ ಇನ್ನಿಲ್ಲ!!

2018ರಲ್ಲಿ ದೇಶಿ ಐ.ಟಿ ವಲಯದ ವಹಿವಾಟು ಕೂಡ ಚೇತರಿಕೆ ಕಾಣಲಿದೆ ಎಂದು ಉದ್ಯಮದ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.!!

|

ಕಳೆದ ಕೆಲ ತಿಂಗಳುಗಳಿಂದ ಐಟಿಯಲ್ಲಿ ಕೆಲಸಕಳೆದುಕೊಳ್ಳುವ ಭೀತಿಯಲ್ಲಿದ್ದ ನೌಕರರಿಗೆ ಸಿಹಿಸುದ್ದಿ ಹೊರೆತಿದೆ.! ಅಮೆರಿಕದ ಆರ್ಥಿಕತೆಯು ಉತ್ತಮ ಸಾಧನೆ ತೋರುತ್ತಿರುವುದರಿಂದ 2018ರಲ್ಲಿ ದೇಶಿ ಐ.ಟಿ ವಲಯದ ವಹಿವಾಟು ಕೂಡ ಚೇತರಿಕೆ ಕಾಣಲಿದೆ ಎಂದು ಉದ್ಯಮದ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.!!

ಅಮೆರಿಕದ ಅರ್ಥವ್ಯವಸ್ಥೆಯು ಚೇತರಿಕೆ ಹಾದಿಯಲ್ಲಿ ಇರುವುದರಿಂದ ಉದ್ದಿಮೆ ಸಂಸ್ಥೆಗಳು ತಂತ್ರಜ್ಞಾನಕ್ಕೆ ಮಾಡುವ ವೆಚ್ಚವು ಗಮನಾರ್ಹವಾಗಿ ಏರಿಕೆಯಾಗಲಿದೆ. ಅಲ್ಲಿನ ಗ್ರಾಹಕರಿಂದ ದೇಶಿ ಸಾಫ್ಟ್‌ವೇರ್‌ ಸೇವಾ ಸಂಸ್ಥೆಗಳಿಗೆ ಬೇಡಿಕೆಯೂ ಹೆಚ್ಚಲಿದೆ ಎಂದು ಇನ್ಫೊಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಿ. ಬಾಲಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.

ಐ.ಟಿ ನೌಕರರಿಗೆ ಸಿಹಿಸುದ್ದಿ!..ಕೆಲಸ ಕಳೆದುಕೊಳ್ಳುವ ಭೀತಿ ಇನ್ನಿಲ್ಲ!!

ಭಾರತದ ಐ.ಟಿ ಸಂಸ್ಥೆಗಳಿಗೆ ಅಮೆರಿಕ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಅಮೆರಿಕದ ಆರ್ಥಿಕತೆಯು ಗಮನಾರ್ಹ ಬೆಳವಣಿಗೆ ದಾಖಲಿಸುತ್ತಿದೆ.ಅಲ್ಲಿನ ಆರ್ಥಿಕ ಬೆಳವಣಿಗೆಯು ಶೇ 2 ರಿಂದ ಶೇ 2.5ರಷ್ಟಿದೆ. ಇದರಿಂದ ಭಾರತದ ಐ.ಟಿ ಸಂಸ್ಥೆಗಳ ವಹಿವಾಟು ಏರಿಕೆ ಕಾಣಲಿದೆ' ಎಂದು ಬಾಲಕೃಷ್ಣನ್‌ ಅಭಿಪ್ರಾಯಪಟ್ಟಿದ್ದಾರೆ.!!

ಐ.ಟಿ ನೌಕರರಿಗೆ ಸಿಹಿಸುದ್ದಿ!..ಕೆಲಸ ಕಳೆದುಕೊಳ್ಳುವ ಭೀತಿ ಇನ್ನಿಲ್ಲ!!

ಕಾರ್ಪೊರೇಟ್ ತೆರಿಗೆ ಕಡಿತದ ಬಗ್ಗೆ ಟ್ರಂಪ್‌ಸುಳಿವು ನೀಡಿದ್ದು, ಅಮೆರಿಕದ ಆರ್ಥಿಕತೆಯ ಪ್ರಗತಿಯ ಹಾದಿಯಲ್ಲಿ ಸಾಗುವವರೆಗೆ ಭಾರತದ ಐ.ಟಿ ಸಂಸ್ಥೆಗಳಿಗೆ ವಹಿವಾಟು ವಿಸ್ತರಿಸಲು ಅವಕಾಶಗಳ ಹೆಬ್ಬಾಗಿಲು ತೆರೆದಿರುತ್ತದೆ. ನಿರುದ್ಯೋಗ ಪ್ರಮಾಣ ಕಡಿಮೆಯಾಗಲಿದೆ ಎಂದು ಅವರು ಹೇಳಿದ್ದಾರೆ.!!

Best Mobiles in India

English summary
2018 will be a better year for Indian IT, say senior industry figures .to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X