ಮ್ಯಾಗಜಿನ್‌ಗಳ ಮುಖಪುಟದಲ್ಲಿ ಸ್ಟೀವ್‌ ಜಾಬ್ಸ್‌

By Super
|
ಮ್ಯಾಗಜಿನ್‌ಗಳ ಮುಖಪುಟದಲ್ಲಿ ಸ್ಟೀವ್‌ ಜಾಬ್ಸ್‌

ಐ ಪ್ಯಾಡ್‌,ಐ ಟ್ಯೂನ್ಸ್‌,ಐ ಫೋನ್‌ಗಳನ್ನು ಜಗತ್ತಿಗೆ ನೀಡಿದ ಸ್ಟೀವ್‌ ಜಾಬ್ಸ್‌ ಇಂದು ನಮ್ಮೊಂದಿಗೆ ಇಲ್ಲ. ಆದರೆ ಈ ಸ್ಟೀವ್‌ ಜಾಬ್ಸ್‌ ಕಥೆ ಪ್ರತಿಯೊಬ್ಬರಿಗೂ ರೋಮಾಂಚನ ಉಂಟುಮಾಡುವಂತಹದ್ದು..ಅತೀ ಸಣ್ಣ ವಯಸ್ಸಿನಲ್ಲೇ ಸಾಧನೆಯ ಮೆಟ್ಟಿಲ್ಲನ್ನು ಏರಿದ ವ್ಯಕ್ತಿ ಸ್ಟೀವ್‌ ಜಾಬ್ಸ್.

ಸ್ಟೀವ್‌ ಜಾಬ್ಸ್‌ ಮತ್ತು ಸ್ನೇಹಿತ ವೋಝ್ನಿಯಾಕ್‌ ಆಪಲ್‌ ಕಂಪೆನಿಯನ್ನಿ ಆರಂಭಿಸಿದ್ದು ಒಂದು ಗ್ಯಾರೇಜ್‌ನಲ್ಲಿ. ಆಗ ಸ್ಟೀವ್‌ ಜಾಬ್ಸ್‌ಗೆ ಇಪ್ಪತ್ತು ವರ್ಷ. ಕಷ್ಟಪಟ್ಟು ದುಡಿದ ಫಲವಾಗಿ ಮ್ಯಾಕಿಂತೋಷ್‌ ಕಂಪ್ಯೂಟರ್‌ನ್ನು ಬಿಡುಗಡೆ ಮಾಡಿದ್ದರು. ಆದರೆ ದುರದೃಷ್ಟವಶಾತ್‌ ಸ್ಟೀವ್‌ ಆರಂಭ ಮಾಡಿದ ಕಂಪೆನಿ ಅವನನ್ನು ಕಿತ್ತೊಗೆಯಿತು. ಸ್ಟೀವ್‌ ಪ್ರತಿಭಾನ್ವಿತ ಎಂದು ಒಬ್ಬ ವ್ಯಕ್ತಿಯನ್ನು ಕರೆತಂದಿದ್ದ. ಆವನೇ ಇವನ ಕೆಲಸವನ್ನ್ನು ವಿರೋಧಿಸಿ ಸ್ಟೀವ್‌ ಕೆಲಸಕ್ಕೆ ಕುತ್ತು ತಂದು ಹಾಕಿದ.

ಕೆಲಸದಿಂದ ಕಿತ್ತುಹಾಕಿದ್ರೂ ಧೃತಿಗೆಡದ ಸ್ಟೀವ್‌ ಮತ್ತೆ ತನ್ನ ಕೆಲಸಕ್ಕೆ ತೊಡಗಿಕೊಂಡ. 5 ವರ್ಷಗಳಲ್ಲಿ ನೆಕ್ಸ್ಟ್‌ ಮತ್ತು ಪಿಕ್ಸರ್‌ ಕಂಪೆನಿಯನ್ನು ಆರಂಭಿಸಿದ. ಈ ಪಿಕ್ಸರ್‌ ಕಂಪೆನಿ ಮೂಲಕ ಜಗತ್ತಿನ ಪ್ರಥಮ ಕಂಪ್ಯೂಟರ್‌ ರೂಪಿತ ಆನಿಮೇಷನ್‌ ಚಿತ್ರ ನಿರ್ಮಾಣ ಮಾಡಿದ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಆಪಲ್‌ ಕಂಪೆನಿ ಸ್ಟೀವ್‌ನ ನೆಕ್ಟ್‌ ಕಂಪೆನಿಯನ್ನು ಖರೀದಿ ಮಾಡಿತು. ಕೊನೆಗೆ ನೆಕ್ಸ್ಟ್‌ ರೂಪಿಸಿದ್ದ ತಂತ್ರಜ್ಞಾನವೇ ಆಪಲ್‌ ಕಂಪೆನಿಯನ್ನು ಕಾಪಾಡಿತು.ಒಟ್ಟಿನಲ್ಲಿ ಯಾವ ಕಂಪೆನಿ ಸ್ಟೀವ್‌ ಜಾಬ್ಸ್‌ ಹೊರಹಾಕಿತೋ ಅದೇ ಕಂಪೆನಿಯಲ್ಲಿ ಜಾಬ್ಸ್‌ ಮತ್ತೆ ಸೇರಿಕೊಂಡ.

ನಂತರ ನಡೆದ್ದು ಇತಿಹಾಸ 1998 ರಲ್ಲಿ ಐ ಮ್ಯಾಕ್‌ ಪರ್ಸನಲ್‌ ಕಂಪ್ಯೂಟರ್‌, 2001ರಲ್ಲಿ ಐಪಾಡ್‌, 2005 ರಲ್ಲಿ ಐ ಪೋನ್‌ಗಳನ್ನು ಆಪಲ್‌ ಕಂಪೆನಿ ತಯಾರಿಸಿತು. ಈ ಎಲ್ಲಾ ಉತ್ಪನ್ನಗಳ ಹಿಂದೆ ಸ್ಟೀವ್‌ ಜಾಬ್ಸ್‌ನ ಶ್ರಮವಿತ್ತು.

56 ವರ್ಷ ಬದುಕ್ಕಿದ್ದರೂ ತಾನು ಏನು ಎಂಬುದನ್ನು ಜಗತ್ತಿಗೆ ತಿಳಿಸಿದ್ದಾನೆ ಸ್ಟೀವ್‌ ಜಾಬ್ಸ್‌ .ಈ ಸ್ಟೀವ್‌ ಜಾಬ್ಸ್‌ ಸಾಧನೆಯನ್ನು ಗುರುತಿಸಿ ಪ್ರಪಂಚದ ಅನೇಕ ಮ್ಯಾಗಜೀನ್‌ಗಳು ತನ್ನ ಮುಖಪುಟದಲ್ಲಿ ಸ್ಟೀವ್‌ ಚಿತ್ರವನ್ನು ಹಾಕಿ ಗೌರವವನ್ನು ಸೂಚಿಸಿವೆ. ಪ್ರಪಂಚದ 25 ಟಾಪ್‌ ಮ್ಯಾಗಜಿನ್‌ಗಳು ಆಪಲ್‌ ತನ್ನ ಉತ್ಪನ್ನವನ್ನು ಬಿಡುಗಡೆ ಮಾಡಿದಾಗ ಸ್ಟೀವ್‌ ಜಾಬ್ಸ್‌ ಭಾವಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಿವೆ.

ಹಾಗಾಗಿ 1981 ರಿಂದ 2011 ರವೆಗೆ ಮ್ಯಾಗಜಿನ್‌ನಗಳು ಪ್ರಕಟಿಸಿದ ಸ್ಟೀವ್‌ ಜಾಬ್ಸ್‌ ಮುಖಪುಟವನ್ನು ಗಿಜ್ಬಾಟ್‌ ನಿಮಾಗಾಗಿ ತಂದಿದೆ. ಕಳಗಡೆ ಇರುವ ಚಿತ್ರವನ್ನು ನೋಡಿಕೊಂಡು ಹೋಗಿ. ಹೇಗಿದ್ದ ಸ್ಟೀವ್‌ ಹೇಗೆ ಬದಲಾದ ಎಂಬುದನ್ನು ನೀವು ನೋಡಲಿದ್ದೀರಿ.

[gallery link="file"]

ಮಾರುಕಟ್ಟೆಗೆ ಬರಲಿದೆ ವಕ್ರ ಟಿವಿ..ಮಾರುಕಟ್ಟೆಗೆ ಬರಲಿದೆ ವಕ್ರ ಟಿವಿ..

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X