ಶಿಯೋಮಿ ಬಳಕೆದಾರರಿಗೆ ಇದೀಗ ಮತ್ತೊಂದು ಭರ್ಜರಿ ಸಿಹಿಸುದ್ದಿ!

|

ಶಿಯೋಮಿ ಬಳಕೆದಾರರಿಗೆ ಇದೀಗ ಮತ್ತೊಂದು ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಡೈನಾಮಿಕ್ ಫಾಂಟ್ ಸ್ಕೇಲಿಂಗ್, ಹೊಸ ಆಲ್ವೇಸ್-ಆನ್ ಡಿಸ್ಪ್ಲೇ, ಡೈನಾಮಿಕ್ ಸ್ಪೀಕರ್‌ಗಳು ಮತ್ತು ಇಂತಹ ಹೆಚ್ಚಿನ ಫೀಚರ್ಸ್ ಹೊಂದಿರುವ 'ಎಂಐಯುಐ 11' ಅಪ್‌ಡೇಟ್ ಬಿಡುಗಡೆಯಾಗಿದೆ. ಮರುವಿನ್ಯಾಸಗೊಳಿಸಲಾದ ಹೊಸ ಎಂಐಯುಐ 11 ಇಂಟರ್ಫೇಸ್ ಜೊತೆಗೆ ಶಿಯೋಮಿ ಎಂಟ್ರಿ ನೀಡಿದ್ದು, ಶೀಘ್ರದಲ್ಲೇ ತನ್ನೆಲ್ಲಾ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಶೀಘ್ರದಲ್ಲೇ 'ಎಂಐಯುಐ 11' ಅಪ್‌ಗ್ರೇಡ್ ನೀಡುತ್ತಿದೆ ಮತ್ತು ಅಪ್‌ಡೇಟ್ ಆಗುವ ಫೋನ್‌ಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.

ಶಿಯೋಮಿ ಬಳಕೆದಾರರಿಗೆ ಇದೀಗ ಮತ್ತೊಂದು ಭರ್ಜರಿ ಸಿಹಿಸುದ್ದಿ!

ಹೌದು, ಶಿಯೋಮಿ ತನ್ನ ಕಸ್ಟಮ್ ಫರ್ಮ್‌ವೇರ್‌ನ ಇತ್ತೀಚಿನ ಆವೃತ್ತಿಯಾದ ಎಂಐಯುಐ 11 ಅಪ್‌ಡೇಟ್ ಪಡೆಯುವ ಸಂಪೂರ್ಣ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಪ್ರಕಟಿಸಿದೆ. ಶಿಯೋಮಿ ಒಟ್ಟು 28 ಸಾಧನಗಳಿಗೆ MIUI 11 ಗ್ಲೋಬಲ್ ಸ್ಟೇಬಲ್ ROM ಅನ್ನು ಬಿಡುಗಡೆ ಮಾಡಲಿದ್ದು, ಮೊದಲ ಬ್ಯಾಚ್‌ನ ರೋಲ್‌ ಔಟ್ ಅಕ್ಟೋಬರ್ 22 ರಿಂದ ಪ್ರಾರಂಭವಾಗುತ್ತದೆ. ಅಪ್‌ಡೇಟ್ ರೋಲ್‌ಔಟ್ ಟೈಮ್ ಟೇಬಲ್‌ನೊಂದಿಗೆ ಕೆಳಗಿನ ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಿ ನಿಮ್ಮ ಶಿಯೋಮಿ ಸ್ಮಾರ್ಟ್‌ಫೋನ್‌ ಅನ್ನು ಹೊಸ ಇಂಟರ್‌ಫೇಸ್‌ಗೆ ಅಪ್‌ಡೇಟ್ ಮಾಡಬಹುದು.

ಮರುವಿನ್ಯಾಸಗೊಳಿಸಲಾದ ಎಂಐಯುಐ 11 ಅಪ್‌ಡೇಟ್ ಅನ್ನು ನಾಲ್ಕು ಹಂತಗಳಲ್ಲಿ ನೀಡಲು ಶಿಯೋಮಿ ಸಮಯ ನಿಗದಿಪಡಿಸಲಾಗಿದ್ದು, ಮೊದಲ ಹಂತದ ಎಲ್ಲಾ ನವೀಕರಣಗಳನ್ನು ಅಕ್ಟೋಬರ್ 22 ಮತ್ತು 31 ರ ನಡುವೆ ನೀಡಲಾಗುತ್ತಿದೆ ಎಂದು ತಿಳಿಸಿದೆ. ಈ ಪಟ್ಟಿಯಲ್ಲಿ ರೆಡ್ಮಿ 7, ರೆಡ್ಮಿ ವೈ 3, ರೆಡ್ಮಿ ನೋಟ್ 7, ರೆಡ್ಮಿ ನೋಟ್ 7 ಸೆ, ರೆಡ್ಮಿ ನೋಟ್ 7 ಪ್ರೊ, ರೆಡ್ಮಿ ಕೆ 20 ಮತ್ತು ಪೊಕೊ ಎಫ್ 1 ಫೋನ್‌ಗಳು ಅಪ್‌ಡೇಟ್ ಪಡೆದುಕೊಳ್ಳುತ್ತಿವೆ. ಈ ಸಮಯದಲ್ಲಿ ಹೆಚ್ಚಿನ ಶಿಯೋಮಿ ಫೋನ್ ಬಳಕೆದಾರರು ಅಪ್‌ಡೇಟ್ ಪಡೆಯಲಿದ್ದಾರೆ ಎಂದು ಕಂಪೆನಿ ಹೇಳಿದೆ.

ಜಸ್ಟ್ ಡಯಲ್‌ ಆಪ್‌ ಬಳಕೆದಾರರಿಗೆ ಬಿಗ್ ಶಾಕ್!..ನಿಮ್ಮ ಖಾತೆ ಅಪಾಯದಲ್ಲಿದೆ!ಜಸ್ಟ್ ಡಯಲ್‌ ಆಪ್‌ ಬಳಕೆದಾರರಿಗೆ ಬಿಗ್ ಶಾಕ್!..ನಿಮ್ಮ ಖಾತೆ ಅಪಾಯದಲ್ಲಿದೆ!

ಇನ್ನು ಎರಡನೇ ಹಂತದ ಎಂಐಯುಐ 11 ನವೀಕರಣಗಳು ನವೆಂಬರ್ 4 ಮತ್ತು 12 ರ ನಡುವೆ ಬಿಡುಗಡೆಯಾಗಲಿವೆ. ಈ ಪಟ್ಟಿಯಲ್ಲಿರು ರೆಡ್ಮಿ ಕೆ 20 ಪ್ರೊ, ರೆಡ್ಮಿ 4, ರೆಡ್ಮಿ 5/5 ಎ, ರೆಡ್ಮಿ 6/6 ಎ / 6 ಪ್ರೊ, ರೆಡ್ಮಿ ನೋಟ್ 4, ರೆಡ್ಮಿ ನೋಟ್ 5 / 5 ಪ್ರೊ, ರೆಡ್ಮಿ ವೈ 1 / ವೈ 1 ಲೈಟ್, ಮಿ ಮಿಕ್ಸ್ 2 ಮತ್ತು ಮಿ ಮ್ಯಾಕ್ಸ್ 2 ಸ್ಮಾರ್ಟ್‌ಫೋನ್‌ಗಳು ಅಪ್‌ಡೇಟ್ ಪಡೆದುಕೊಳ್ಳುತ್ತಿದ್ದರೆ, ವೆಂಬರ್ 13 ರಿಂದ 29 ರವರೆಗಿನ ಮೂರನೇ ಹಂತವುದಲ್ಲಿ ರೆಡ್‌ಮಿ 7 ಎ, ರೆಡ್‌ಮಿ 8/8 ಎ, ರೆಡ್‌ಮಿ ನೋಟ್ 6 ಪ್ರೊ ಮತ್ತು ರೆಡ್‌ಮಿ ನೋಟ್ 8 ಅಪ್‌ಡೇಟ್ ಪಡೆಯುತ್ತಿವೆ.

MIUI 11 ನವೀಕರಣಗಳ ಅಂತಿಮ ಹಂತ, 4ನೇ ಹಂತದಲ್ಲಿ ಕೇವಲ ರೆಡ್‌ಮಿ ನೋಟ್ 8 ಪ್ರೊ ಪಟ್ಟಿಯಲ್ಲಿದೆ. ಇದು ಡಿಸೆಂಬರ್ 18 ಮತ್ತು 26 ರ ನಡುವೆ ದೀರ್ಘ ಕಾಯುವಿಕೆ ಹೊಂದಿದೆ ಎಂದು ಶಿಯೋಮಿ ತಿಳಿಸಿದೆ. ಆದಾಗ್ಯೂ, MIUI 11 ನವೀಕರಣಗಳ ದಿನಾಂಕಗಳು ಬದಲಾವಣೆಗೆ ಒಳಪಟ್ಟಿರಬಹುದು, ಏಕೆಂದರೆ ಈ ನವೀಕರಣ ಪಟ್ಟಿ ಬದಲಾಗಬಹುದು. ಅಂತಿಮ ನೆಟ್‌ವರ್ಕ್ ಮತ್ತು ಸಾಧನ ಪರೀಕ್ಷಾ ವಿಭಿನ್ನ ಆಂಡ್ರಾಯ್ಡ್ ಅನುಭವವನ್ನು ನೀಡುವ ಪ್ರಯತ್ನದಲ್ಲಿ ಶಿಯೋಮಿ ಸ್ವತಃ ಸಾಕಷ್ಟು ಕಸ್ಟಮೈಸ್ ಮಾಡುತ್ತದೆ ಎಂದು ಹೇಳಲಾಗಿದೆ.

Best Mobiles in India

English summary
Here's a list of Xiaomi devices getting MIUI 11 Global Stable ROM, rollout begins October 22. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X