2ಜಿ ಹಗರಣದ ಕೇಸ್ ಖುಲಾಸೆ!..ಮತ್ತೆ ಟೆಲಿಕಾಂ ಇತಿಹಾಸವನ್ನು ನೆನಪಿಸಿದ ತೀರ್ಪು!!

ಭಾರತ ಇನ್ನೇನು 5G ಯುಗಕ್ಕೆ ಕಾಲಿಡಲಿದೆ ಎನ್ನುವಾಗ ಬಹುತೇಕ ಮುಗಿದಂತಾಗಿದ್ದು, ಈ ಪ್ರಕರಣದ ತೀರ್ಪು ಮತ್ತೆ ಟೆಲಿಕಾಂ ಇತಿಹಾಸವನ್ನು ನೆನಪಿಸುವಂತೆ ಮಾಡಿದೆ.!

|

ಸ್ವಾತಂತ್ರ್ಯಾನಂತರದ ಅತಿ ದೊಡ್ಡ ಹಗರಣ ಎಂದು ಹೇಳಲಾಗಿದ್ದ 2ಜಿ ತರಂಗಾಂತರ ಹಂಚಿಕೆ ಪ್ರಕರಣ ಆರೋಪಿಗಳು ನಿಟ್ಟುಸಿರುಬಿಟ್ಟಿದ್ದಾರೆ.! 2ಜಿ ತರಂಗಾಂತರ ಹಂಚಿಕೆ ಪ್ರಕರಣದ ಆರೋಪಿಗಳಾದ ಕೇಂದ್ರ ದೂರಸಂಪರ್ಕ ಖಾತೆಯ ಮಾಜಿ ಸಚಿವ ಎ.ರಾಜಾ ಸೇರಿ ಒಟ್ಟು 17 ಆರೋಪಿಗಳನ್ನು ವಿಶೇಷ ಸಿಬಿಐ ನ್ಯಾಯಾಲಯ ಖುಲಾಸೆ ಮಾಡಿದೆ.!!

2ಜಿ ಹಗರಣದ ಕೇಸ್ ಖುಲಾಸೆ!..ಮತ್ತೆ ಟೆಲಿಕಾಂ ಇತಿಹಾಸವನ್ನು ನೆನಪಿಸಿದ ತೀರ್ಪು!!

ಭಾರತ ಇನ್ನೇನು 5G ಯುಗಕ್ಕೆ ಕಾಲಿಡಲಿದೆ ಎನ್ನುವಾಗ, ಸರಿಸುಮಾರು 10 ವರ್ಷಗಳ ಹಿಂದೆ ನಡೆದಿದೆ ಎನ್ನಲಾಗಿದ್ದ ಈ ಪ್ರಕರಣ ಬಹುತೇಕ ಮುಗಿದಂತಾಗಿದ್ದು, ಈ ಪ್ರಕರಣದ ತೀರ್ಪು ಮತ್ತೆ ಟೆಲಿಕಾಂ ಇತಿಹಾಸವನ್ನು ನೆನಪಿಸುವಂತೆ ಮಾಡಿದೆ.! ಹಾಗಾದರೆ, ಏನಿದು 2ಜಿ ಹಗರಣ? ಟೆಲಿಕಾಂನಲ್ಲಿ ಆಗ ಆದ ಬದಲಾವಣೆಗಳೇನು? ಎಂಬೆಲ್ಲಾ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

2ಜಿ ತರಂಗಾಂತರ ಹಂಚಿಕೆ!!

2ಜಿ ತರಂಗಾಂತರ ಹಂಚಿಕೆ!!

2007 ಆಗಸ್ಟ್ ತಿಂಗಳು, ಭಾರತದ ಟೆಲಿಕಾಂ ಪ್ರಪಂಚ ಆಗಷ್ಟೆ ಬೆಳೆಯುತ್ತಿತ್ತು. ನೋಕಿಯಾದ ಬೇಸಿಕ್ ಕಂಪೆನಿ ಮೊಬೈಲ್‌ಗಳು ಕೂಡ ಆಗಷ್ಟೇ ಹೆಸರು ಮಾಡಿದ್ದ ಕಾಲದಲ್ಲಿ 2ನೇ ತಲೆಮಾರಿನ (2ಜಿ) ತರಂಗಾಂತರ ಮತ್ತು ಏಕೀಕೃತ ಸೇವಾ ಲಭ್ಯತಾ ಪರವಾನಗಿ ಹಂಚಿಕೆಗೆ ದೂರಸಂಪರ್ಕ ಇಲಾಖೆ ಚಾಲನೆ ನೀಡಿತ್ತು.!!

ನೆಟ್‌ವರ್ಕ್ ಚಿನ್ನ ಈ 2ಜಿ!!

ನೆಟ್‌ವರ್ಕ್ ಚಿನ್ನ ಈ 2ಜಿ!!

2007 ನೇ ವರ್ಷದಲ್ಲಿ ಶುರುವಾದ ಟೆಲಿಕಾಂ ಕಂಪೆನಿಗಳು ಇಂದು ಲಕ್ಷಾಂತರ ರೂಪಾಯಿಗಳ ವ್ಯವಹಾರ ನಡೆಸುತ್ತಿವೆ. ಅಂದು ಸಾಮಾನ್ಯ ಜನರಿಗೆ ತಿಳಿಯದ ಮೊಬೈಲ್ ಬಳಕೆ ಇಂದು ಎಷ್ಟು ಬೃಹದ್ದಾಕಾರವಾಗಿ ಬೆಳೆಯಬಹುದು ಎಂದು ಆಗಲೇ ಊಹೆ ಮಾಡಿದ್ದ ಹಲವರು 2ಜಿ ಎಂಬ ನೆಟ್‌ವರ್ಕ್ ಚಿನ್ನ ಪಡೆಯಲು ಕಾದುಕುಳಿತಿದ್ದರು.!!

ಡ್ರಾಫ್ಟ್‌ ಸಲ್ಲಿಕೆಗೆ ಕೇವಲ 45 ನಿಮಿಷ!!

ಡ್ರಾಫ್ಟ್‌ ಸಲ್ಲಿಕೆಗೆ ಕೇವಲ 45 ನಿಮಿಷ!!

ಅರ್ಜಿ ಸಲ್ಲಿಸಿದ ಕಂಪೆನಿಗಳಿಗೆ ಬ್ಯಾಂಕ್‌ ಡ್ರಾಫ್ಟ್‌ಗಳನ್ನು ಪಡೆದು ಅವನ್ನು ಸಂಚಾರ ಭವನಕ್ಕೆ ಸಲ್ಲಿಸಲು ಕೇವಲ 45 ನಿಮಿಷ ಕಾಲಾವಕಾಶವನ್ನುದೃಸಂಪರ್ಕ ಇಲಾಖೆ ನೀಡಿತು. ಹಾಗಾಗಿ, ಅವರು ನೀಡಿದ ಅವಧಿ ಮುಗಿಯುವಷ್ಟರಲ್ಲಿ ಕೇವಲ ಕಂಪೆನಿಗಳು 122 ಪರವಾನಗಿಗಳನ್ನು ಪಡೆಯಲಷ್ಟೇ ಸಫಲವಾದವು.! ಇವೆಲ್ಲವನ್ನು ಗಮನಿಸಿ 2ಜಿ ತರಂಗಾಂತರ ಹಂಚಿಕೆಯಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಎಂದು ಸಿಬಿಐಗೆ ನಿರ್ದೇಶನ ನೀಡಿದ ಕೇಂದ್ರ ಜಾಗೃತ ಆಯೋಗ ಮನವಿ ಮಾಡಿತು.!!

1.76 ಲಕ್ಷ ಕೋಟಿ ಅಕ್ರಮ!?

1.76 ಲಕ್ಷ ಕೋಟಿ ಅಕ್ರಮ!?

ಎಸ್ಸಾರ್‌ ಸಂಸ್ಥೆ, ಲೂಪ್‌ ಟೆಲಿಕಾಂ ಹಾಗೂ ಸರಾಫ್‌ ಸಂಸ್ಥೆಗೆ ನಿಯಮಗಳನ್ನು ಗಾಳಿಗೆ ತೂರಿ ತರಂಗಗುಚ್ಛ ಹಂಚಿಕೆ ಮಾಡಲಾಗಿದೆ ಎನ್ನಲಾಗಿತ್ತು. ಹಾಗಾಗಿ, ಲೈಸೆನ್ಸ್ ನೀಡಲು ಮತ್ತು 2ಜಿ ತರಂಗಗುಚ್ಛ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಸಿಬಿಐ ಪ್ರಕರಣವನ್ನು ಕೈಗೆತ್ತಿಕೊಂಡಿತು. 2008ರಲ್ಲಿಯೇ ಈ ಪ್ರಕರಣದ ಬಗ್ಗೆ ಬಯಲಾದರೂ ಸಹ ಮಾಜಿ ಮಹಾ ಲೆಕ್ಕ ಪರಿಶೋಧಕ ವಿನೋದ್ ರೈ ನೀಡಿದ ವರದಿಯಲ್ಲಿ 1.76 ಲಕ್ಷ ಕೋಟಿ ಅಕ್ರಮ ಹಣದ ಬಗ್ಗೆ ಮಾಹಿತಿ ಹೊರಬಿದ್ದ ನಂತರ ಈ ಪ್ರಕರಣ ಬೃಹದಾಕಾರ ಪಡೆದುಕೊಂಡಿತ್ತು .!!

ಇದೀಗ 2G ನಿರಾಳ!!

ಇದೀಗ 2G ನಿರಾಳ!!

2ಜಿ ಹಗರಣದ ತೀರ್ಪು ಈಗ ಹೊರಬಂದಿದ್ದು, ಎಲ್ಲ ಆರೋಪಿಗಳನ್ನು ಖುಲಾಸೆ ಮಾಡಲಾಗಿದೆ. ಆರೋಪವನ್ನು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಹಾಗಾಗಿ ಆರೋಪಿಗಳು ಖುಲಾಸೆಗೊಳ್ಳಲು ಅರ್ಹರು ಮತ್ತು ಹಾಗಾಗಿ ಅವರನ್ನು ಖುಲಾಸೆ ಮಾಡಲಾಗಿದೆ' ಎಂದು ನ್ಯಾಯಾದೀಶ ಶೈನಿ ಹೇಳಿದ್ದಾರೆ.!! ಹಾಗಾಗಿ, 2G ಹಗರಣಕ್ಕಿಂದು ಭಾಗಶಃ ಫುಲ್‌ಸ್ಟಾಪ್ ಇಟ್ಟಂತಾಗಿದೆ.!!

ನೂತನ ಐಫೋನ್ ಖರೀದಿಗೆ ಪ್ರೇರೇಪಿಸಲು ಆಪಲ್‌ನಿಂದ ಮೋಸ!!..ಆಪಲ್ ಹೇಳಿದ್ದು ಹೀಗೆ!!ನೂತನ ಐಫೋನ್ ಖರೀದಿಗೆ ಪ್ರೇರೇಪಿಸಲು ಆಪಲ್‌ನಿಂದ ಮೋಸ!!..ಆಪಲ್ ಹೇಳಿದ್ದು ಹೀಗೆ!!

Best Mobiles in India

English summary
Holding that the 2G spectrum scam of 2008 was "conjectured" by some people.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X