ಆಪಲ್ ಕೊಡಮಾಡುವ WWDC ಸ್ಕಾಲರ್ ಶಿಪ್ ಗೆದ್ದ ಹೆಮ್ಮೆಯ ಮೂವರು ಭಾರತೀಯರು..!
ಆಪಲ್ ನ ಸಿಇಓ ಟಿಮ್ ಕುಕ್ ಟ್ಟೀಟರ್ ನಲ್ಲಿ ಈ ವರ್ಷದ 530 ಕ್ಕೂ ಹೆಚ್ಚು WWDC ಸ್ಕಾಲರ್ ಶಿಪ್ ವಿಜೇತರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇವರಲ್ಲಿ ಭಾರತೀಯರು ಮೂವರು ಸೇರಿದ್ದಾರೆ ಎಂಬುದು ಹೆಮ್ಮೆ., ಆಶ್ಮಾ ನರೂಲಾ,ಸುದರ್ಶನ್ ಶ್ರೀರಾಮ್ ಮತ್ತು ಅಜಯ್ ಮಂದನಿ ಭಾರತದ ಹೆಮ್ಮೆ ಹೆಚ್ಚಿಸಿದ ಡೆವಲಪರ್ ಗಳಾಗಿದ್ದಾರೆ.

ಇವರಲ್ಲಿ ಸುದರ್ಶನ್ ಶ್ರೀರಾಮ್ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯಾಗಿದ್ದು, ಆತ ಟಿಕ್- ಟ್ಯಾಕ್- ಟೋ (Tic Tac Toe) ಅನ್ನೋ ಇಬ್ಬರು ಆಟವಾಡುವ ಆಟವೊಂದರ ಇಂಟರ್ಯಾಕ್ಟೀವ್ ವರ್ಷನ್ ಒಂದನ್ನು ಸೃಷ್ಟಿಸಿದ್ದಾನೆ.
ಕಂಪ್ಯೂಟರ್ ಸೈನ್ಸ್ ಪದವಿ ಪಡೆದ ಆಶ್ನಾ ನರೂಲಾ'Let's Shapify' ಅನ್ನೋ ಆಪ್ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದು ಕಲಿಕೆಯ ಸಮಸ್ಯೆ ಇರುವ ವಿದ್ಯಾರ್ಥಿಗಳ ನೆರವಿಗೆ ಬರುವ ಉದ್ದೇಶವಿರುವ ಆಪ್ ಆಗಿದೆ.
ಮೂರನೇ ಭಾರತೀಯ ವಿಜೇತರು ಅಜಯ್ ಮಂದನಿ. ಇವರು iOS ನ Apple Swift ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಆಪನ್ ನ ಸಿಇಓ ವೀಡಿಯೋ ಒಂದರಲ್ಲಿ ಮಾತನಾಡುತ್ತಾ WWDC 2018 ರ ಸ್ಕಾಲರ್ ಶಿಪ್ ವಿಜೇತರ ಮತ್ತು ಅವರ ಆಪ್ ಗಳ ಪ್ರಸ್ತಾಪಿಸುತ್ತಾರೆ. ಆ ವಿಡೋದಲ್ಲಿ ನರೂಲಾ ತಯಾರಿಸುವ ಆಪ್ ಬಗ್ಗೆ ಅವರು ಮಾತನಾಡುತ್ತಾರೆ.
ಕುಕ್ ಟ್ವೀಟ್ ನಲ್ಲಿ ಏನಿದೆ ಗೊತ್ತಾ?
ಎಂದಿದ್ದಾರೆ. ಅಂದರೆ “ಹೊಸ ಆಲೋಚನೆಗಳು ಯಾವಾಗಲೂ ನಮ್ಮನ್ನು ಪ್ರಭಾವಿತಗೊಳಿಸುತ್ತವೆ. 350+ ಬುದ್ಧಿವಂತರನ್ನು ಭೇಟಿ ಮಾಡಿ..ಇವರುwwdc 18 ವಿದ್ಯಾರ್ಥಿ ನಿಧಿ ವಿಜೇತರಾಗಿರುತ್ತಾರೆ” ಎಂದಿದ್ದಾರೆ.
ಪ್ರತಿ ವರ್ಷವೂ ಆಪಲ್ ಸಂಸ್ಥೆ WWDC ಸ್ಕಾಲರ್ ಶಿಪ್ ನ್ನು ವಿದ್ಯಾರ್ಥಿಗಳಿಗೆ ನೀಡುತ್ತೆ ಮತ್ತು STEM ಸಂಸ್ಥೆಯು ಕಂಪೆನಿಯ ವಾರ್ಷಿಕ ಡೆವಲಪರ್ ಗಳ ಸಮಾವೇಶಕ್ಕೆ ಬರಲು ಟಿಕೆಟ್ ವ್ಯವಸ್ಥೆಗಾಗಿ ನಿಧಿಯನ್ನು ಸಂಗ್ರಹಿಸಿ ನೀಡುತ್ತೆ. ಅಷ್ಟೇ ಅಲ್ಲ, ಸೆಲೆಕ್ಟ್ ಆಗಿರುವ ಡೆಲವಪರ್ ಗಳಿಗೆ ಉಳಿದುಕೊಳ್ಳಲು ಲಾಡ್ಜ್ ವ್ಯವಸ್ಥೆಯನ್ನೂ ಮಾಡಲಾಗುತ್ತೆ. ಇನ್ನು ಅವರಿಗೆ ಒಂದು ವರ್ಷದ ಮೆಂಬರ್ ಶಿಪ್ ಕೂಡ ಸಿಗಲಿದ್ದು, ಆಪಲ್ ಡೆವಲಪರ್ ಕಾರ್ಯಕ್ರಮದಲ್ಲಿ ಫ್ರೀ ಆಗಿ ಭಾಗವಹಿಸಬಹುದಾಗಿರುತ್ತೆ.
• ಯಾರು ಇದಕ್ಕೆ ಅರ್ಹರು?
1. 13 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು
2. ಫ್ರೀ ಆಗಿ ಆಪಲ್ ಡೆವಲಪರ್ ಆಗಿ ರಿಜಿಸ್ಟ್ರರ್ ಆದವರು, ಅಥವಾ ಹಣ ಪಾವತಿಸಿ ಆಪಲ್ ಡೆವಲಪರ್ ಪ್ರೊಗ್ರಾಮ್ ನ ಸದಸ್ಯರಾದವರು.
3. ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ Stem ಸಂಸ್ಯೆಯ ಸದಸ್ಯರಾಗಿರುವವರು, STEM ಸಂಸ್ಥೆ ಯಾವುದೂ ಕೂಡ ಆಗಿರಬಹುದು.ಸೈನ್ಸ್,ಟೆಕ್ನಾಲಜಿ, ಇಂಜಿನಿಯರಿಂಗ್, ಅಥವಾ ಮಾಮೂಲಿ ಶಾಲಾ ಗಣಿತ ತಜ್ಞ ಹೇಗೂ ಆಗಿರಬಹುದು.ಉದಾಹರಣೆಗೆ Code.org, girls in tech, and ಟೆಕ್ನೋವೇಷನ್ ಇತ್ಯಾದಿ.
ಆಪಲ್ ಸಂಸ್ಥೆ 2018 ವಾರ್ಷಿಕ ಡೆಲವಪರ್ ಸಮಾವೇಶವನ್ನು ಇವತ್ತು ಸ್ಯಾನ್ ಜೋಸ್, ಕ್ಯಾಲಿಫೋರ್ನಿಯಾದಲ್ಲಿರುವ McEnery Convention Center ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ 10.30pmಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ.


Click it and Unblock the Notifications








