15 ನಿಮಿಷದಲ್ಲಿ 35,೦೦೦ 'ಲೆನೊವೋ ಕೆ6 ಪವರ್' ಫೋನ್‌ಗಳು ಸೋಲ್ಡ್ ಔಟ್‌..!

By Suneel
|

ಇ-ಕಾಮರ್ಸ್ ವೇದಿಕೆ ಫ್ಲಿಪ್‌ಕಾರ್ಟ್, ಲೆನೊವೋದ ಲೇಟೆಸ್ಟ್ ಕೆ ಸೀರೀಸ್ 'ಲೆನೊವೋ ಕೆ6 ಪವರ್' ಸ್ಮಾರ್ಟ್‌ಫೋನ್‌ ಅನ್ನು 15 ನಿಮಿಷದಲ್ಲಿ 35,000 ಯುನಿಟ್‌ಗಳನ್ನು ಮಾರಾಟ ಮಾಡಿರುವ ಬಗ್ಗೆ ಮಂಗಳವಾರ ಪ್ರಕಟಣೆ ನೀಡಿದೆ. ಫ್ಲಿಪ್‌ಕಾರ್ಟ್ 'ಲೆನೊವೋ ಕೆ6 ಪವರ್' ಮಾರಾಟ ಓಪನ್‌ ಮಾಡಿದ 15 ನಿಮಿಷದಲ್ಲಿ ಇಷ್ಟೂ ಯುನಿಟ್‌ಗಳನ್ನು ಮಾರಾಟ ಮಾಡಿರುವ ಬಗ್ಗೆ ಹೇಳಿದೆ.

15 ನಿಮಿಷದಲ್ಲಿ 35,೦೦೦ 'ಲೆನೊವೋ ಕೆ6 ಪವರ್' ಫೋನ್‌ಗಳು ಸೋಲ್ಡ್ ಔಟ್‌..!

ಲೆನೊವೋ ಕೆ6 ಪವರ್ ಲಾಂಚ್ ಮಾಡಿದ ಕೇವಲ 7 ದಿನಗಳಲ್ಲಿ 1.7 ದಶಲಕ್ಷ ಜನರು ಈ ಡಿವೈಸ್ ಖರೀದಿಸಲು ಆಸಕ್ತಿ ತೋರಿಸಿದ್ದಾರೆ ಎಂದು ಕಂಪನಿ ಹೇಳಿದೆ.

ಲೆನೊವೋ ಕೆ6 ಪವರ್ ಖರೀದಿ ಬೆಲೆ ರೂ.9,999 ಆಗಿದ್ದು, 5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ, 1.4GHz ಆಕ್ಟಾ ಕೋರ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ 430 ಪ್ರೊಸೆಸರ್, ಅಡ್ರೆನೊ 505 ಗ್ರಾಫಿಕ್ಸ್, ಫಿಂಗರ್‌ಪ್ರಿಂಟ್ ಸೆನ್ಸಾರ್, 3GB RAM ಫೀಚರ್ ಹೊಂದಿದೆ. ಡಿವೈಸ್ ಲೆನೊವೋ ಪ್ಯೂರ್ UI ಅನ್ನು ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್ ಟಾಪ್‌ನಲ್ಲಿ ಚಾಲಿತವಾಗಲಿದೆ.

ಫ್ಲಿಪ್‌ಕಾರ್ಟ್‌ ಮೂರನೇ ಮಾರಾಟ ಆಯೋಜನೆಯನ್ನು ಇದೇ ಡಿಸೆಂಬರ್ 18 ರಿಂದ 21 ರವರೆಗೆ ಏರ್ಪಡಿಸಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
35,000 Lenovo K6 Power devices sold in 15 minutes.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X