ಇಂಟರ್ನೆಟ್ ಬ್ರೌಸಿಂಗ್ ಸಂದರ್ಭದಲ್ಲಿ ಈ ಅಂಶಗಳ ಬಗ್ಗೆ ಗಮನ ನೀಡುವುದು ಅಗತ್ಯ..!
ಇಂದಿನ ದಿನದಲ್ಲಿ ಇಂಟರ್ನೆಟ್ ಬ್ರೌಸಿಂಗ್ ಎನ್ನುವುದು ಸಾಮಾನ್ಯ ಸಂಗತಿಯಾಗಿದ್ದು, ನಿತ್ಯದ ಅಗತ್ಯತೆಗಳಲ್ಲಿ ಇದು ಸಹ ಒಂದಾಗಿದೆ. ಈ ಹಿನ್ನಲೆಯಲ್ಲಿ ಇಂಟರ್ನೆಟ್ ಬ್ರೌಸಿಂಗ್ ಸಂದರ್ಭದಲ್ಲಿ ಬಳಕೆದಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ವೈರಸ್ ದಾಳಿ, ಮಾಲ್ವೇರ್ ಗಳು, ಆಡ್ ವೇರ್ ಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತಿವೆ, ಈ ಹಿನ್ನಲೆಯಲ್ಲಿ ಕೇಲವು ಸಂದರ್ಭದಲ್ಲಿ ನಿಮ್ಮ ಬ್ರೌಸರ್ ಗಳು ನಿಮಗೆ ಎಚ್ಚರಿಕೆಯನ್ನು ನೀಡುತ್ತವೆ, ನೀವು ಅವುಗಳನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ.

1 ಸೈಟ್ ನಲ್ಲಿ ಮಾಲ್ವೇರ್ ಇದೆ.
2 ವಿಂಡೋಸ್ ಫೈರ್ ವಾಲ್ ಈ ಆಪ್ ಅನ ಕೆಲವು ಆಯ್ಕೆಗಳನ್ನು ಬ್ಲಾಕ್ ಮಾಡಿದೆ.
3 ಈ ವೈಬ್ ಸೈಟಿನ ಸೆಕ್ಯೂರಿಟಿ ಸರ್ಟಿಫಿಕೇಟ್ ನಲ್ಲಿ ತೊಂದರೆ ಇದೆ.
4 ವೈರಸ್ ಸುಕ್ಷತೆಯನ್ನು ಆನ್ ಮಾಡಿಕೊಳ್ಳಿ.
ಈ ಮಾದರಿಯ ಆಲರ್ಟ್ ಗಳು ಕಾಣಿಸಿಕೊಂಡ ಸಂದರ್ಭದಲ್ಲಿ ನೀವು ಆ ವೆಬ್ ಸೈಟ್ ಗಳಿಗೆ ಹೋಗದೆ ಇರುವುದೇ ಉತ್ತಮ

ಸೈಟ್ ನಲ್ಲಿ ಮಾಲ್ವೇರ್ ಇದೆ
ಈ ಸೈಟಿಗೆ ಭೇಟಿ ನೀಡಿದರೆ ಮಾಲ್ವೇರ್ ದಾಳಿಗೆ ತುತ್ತಾಗುವುದು ಖಂಡಿತ ಎನ್ನುವ ವಾರ್ನಿಂಗ್ ಇದಾಗಿದ್ದು, ಇದನ್ನು ಮೀರಿ ಬ್ರೌಸ್ ಮಾಡಿ ಸಂದರ್ಭದಲ್ಲಿ ನೀವು ಮಾಲ್ವೇರ್ ದಾಳಿಗೆ ಸಿಲುಕಿಕೊಳ್ಳುವಿರಿ ಎನ್ನಲಾಗಿದೆ.

ವಿಂಡೋಸ್ ಫೈರ್ ವಾಲ್ ಈ ಆಪ್ ಅನ ಕೆಲವು ಆಯ್ಕೆಗಳನ್ನು ಬ್ಲಾಕ್ ಮಾಡಿದೆ.
ಇದಲ್ಲದೇ ಕೆಲವು ಆಯ್ಕೆಗಳು ನಿಮ್ಮ ಕಂಪ್ಯೂಟರ್ ರಿಗೆ ಹಾನಿಯನ್ನು ಉಂಟು ಮಾಡುವ ಹಿನ್ನಲೆಯಲ್ಲಿ ಅವುಗಳಿಂದ ದೂರ ಇರಿ ಎನ್ನುವ ಸಲುವಾಗಿ ವಿಂಡೋಸ್ ಫೈರ್ ವಾಲ್ ಈ ಆಪ್ ಅನ ಕೆಲವು ಆಯ್ಕೆಗಳನ್ನು ಬ್ಲಾಕ್ ಮಾಡಿದೆ ಎಂಬ ಸಂದೇಶವು ತೋರಿಸಲಿದೆ. ಇದನ್ನು ಗಮನಿಸುವುದು ಅಗತ್ಯ

ಈ ವೈಬ್ ಸೈಟಿನ ಸೆಕ್ಯೂರಿಟಿ ಸರ್ಟಿಫಿಕೇಟ್ ನಲ್ಲಿ ತೊಂದರೆ ಇದೆ.
ವೈಬ್ ಸೈಟುಗಳು ಸೆಕ್ಯೂರಿಟಿ ಸರ್ಟಿಫಿಕೇಟ್ ಗಳನ್ನು ಹೊಂದಿರ ಬೇಕಾಗುತ್ತಿದೆ. ಈ ಹಿನ್ನಲೆಯಲ್ಲಿ ನೀವು ನೋಡುವ ವೈಬ್ ಸೈಟಿನ ಸೆಕ್ಯೂರಿಟಿ ಸರ್ಟಿಫಿಕೇಟ್ ನಲ್ಲಿ ತೊಂದರೆ ಇದೆ. ಎಂಬುದನ್ನು ಬ್ರೌಸರ್ ನಿಮಗೆ ತೋರಿಸಲಿದೆ. ಈ ಸಂದರ್ಭದಲ್ಲಿ ನೀವು ಅದನ್ನು ತಳ್ಳಿ ಹಾಕಿದರೆ ತೊಂದರೆಗೆ ಸಿಲುಕುವುದು ಖಂಡಿತ


ವೈರಸ್ ಸುಕ್ಷತೆಯನ್ನು ಆನ್ ಮಾಡಿಕೊಳ್ಳಿ.
ಯಾವುದೇ ಸುರಕ್ಷತೆ ಇಲ್ಲದೇ ಬ್ರೌಸ್ ಮಾಡುವುದು ಅಪಾಯ, ಹೀಗಾಗಿ ಹೆಚ್ಚಿನ ತೊಂದರೆಯೂ ಎದುರಾಗುವ ಸಂದರ್ಭದಲ್ಲಿ ನಿಮ್ಮ ಬ್ರೌಸರ್ ನಿಮಗಾಗಿ ವೈರಸ್ ಸುಕ್ಷತೆಯನ್ನು ಆನ್ ಮಾಡಿಕೊಳ್ಳಿ ಎನ್ನುವ ಸಂದೇಶವನ್ನು ನೀಡಲಿದೆ. ಈ ಸಂದರ್ಭದಲ್ಲಿ ಎಚ್ಚರ ವಹಿಸುವುದು ಅಗತ್ಯ.


Click it and Unblock the Notifications








