ಗೂಗಲ್ ಗೆ ಪ್ರಶ್ನೆ ಕೇಳಿ ಸಾಧನೆ ಮಾಡಿದ 4 ಕನ್ನಡಿಗರು

By Varun
|
ಗೂಗಲ್ ಗೆ ಪ್ರಶ್ನೆ ಕೇಳಿ ಸಾಧನೆ ಮಾಡಿದ 4 ಕನ್ನಡಿಗರು

ಗೂಗಲ್ ಎಂದರೆ ಸರ್ಚ್, ಸರ್ಚ್ ಎಂದರೆ ಗೂಗಲ್. ಯಾರಾದರೂ ನಿಮ್ಮನ್ನು ಪ್ರಶ್ನೆ ಕೇಳಿ ಅದಕ್ಕೆ ಉತ್ತರ ಗೊತ್ತಿಲ್ಲದಿದ್ದರೆ ನೀವು ಅವರಿಗೆ "ಗೂಗಲ್ ಸರ್ಚ್ ಮಾಡು ಸಿಗುತ್ತೆ " ಅಂತ ಹೇಳ್ತೀರಾ ತಾನೇ. ಅದೇ ಥರ ನಿಮ್ಮ ತಲೆಗೆ ಪ್ರಶ್ನೆಯೊಂದು ಹೊಳೆದರೆ ಸೀದಾ ಗೂಗಲ್ ಸರ್ಚ್ ಮಾಡುತ್ತೀರಾ ಅಲ್ವಾ.

ನಿಮ್ಮ ಮನೆಯಲ್ಲಿ ಮಕ್ಕಳಿದ್ದರಂತೂ ಮುಗಿದೇ ಹೋಯಿತು. ಅವರ ಪ್ರಶ್ನೆಗಳನ್ನು ಎದುರಿಸಲಿಕ್ಕೇ ಆಗುವುದಿಲ್ಲ. ಅಂಥಹ ಬ್ರಿಲಿಯಂಟ್ ಪ್ರಶ್ನೆಗಳನ್ನು ಕೇಳುತ್ತಾರೆ, ಐಡಿಯಾ ಕೊಡುತ್ತಾರೆ. ಮಕ್ಕಳು ಅಂತ ignore ಮಾಡದೆ ಅವರ ಪ್ರಶ್ನೆಗೆ ಕಿವಿಗೊಟ್ಟು ಕೇಳಿದರೆ ಎಷ್ಟೋ ಬದಲಾವಣೆಗಳು ಆಗುತ್ತವೆ ನಮ್ಮಲ್ಲಿ.

ನಿಮ್ಮಲ್ಲಿ ಆಗುತ್ತೋ ಇಲ್ಲವೋ, ಆದರೆ ಗೂಗಲ್ ಮಾತ್ರ ಪ್ರತಿ ವರ್ಷ ತನ್ನ "ಗೂಗಲ್ ಸೈನ್ಸ್ ಫೇರ್ " ಮೂಲಕ ಮಕ್ಕಳನ್ನು ಪ್ರಶ್ನೆ ಕೇಳಲು ಉತ್ತೇಜಿಸುತ್ತದೆ ಹಾಗು ಮಕ್ಕಳಲ್ಲಿನ ವೈಜ್ಞಾನಿಕ ಕುತೂಹಲವನ್ನು ಹೊರತರಲು ಹಾಗು ತಮಗೆ ಐಡಿಯಾ ಸೂಚಿಸುವಂತೆ ಕೊಡಲು ವಿಶ್ವದಾದ್ಯಂತ ಇರುವ 13-18 ವರ್ಷದ ಮಕ್ಕಳಿಗೆ ಸ್ಪರ್ಧೆ ಏರ್ಪಡಿಸುತ್ತದೆ. ಇದರಲ್ಲಿ ಗೆದ್ದವರಿಗೆ ತನ್ನ ಕ್ಯಾಲಿಫೋರ್ನಿಯಾ ಆಫೀಸಿನಲ್ಲಿ ಬಹುಮಾನ ಕೂಡಾ ಕೊಡುತ್ತದೆ.

ಇಂತಹ ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಜಗತ್ತಿನಾದ್ಯಂತ 90 ಮಕ್ಕಳು ಆಯ್ಕೆಯಾಗಿದ್ದು, ಭಾರತದ 16 ಮಕ್ಕಳು ಸೇರಿದ್ದಾರೆ.ವಿಶೇಷವೇನೆಂದರೆ ಆ 16 ಮಕ್ಕಳಲ್ಲಿ 4 ಮಕ್ಕಳು ಕರ್ನಾಟಕದವರೇ ಆಗಿದ್ದಾರೆ!

13-14ವರ್ಷದ ಕ್ಯಾಟಗರಿಯಲ್ಲಿ ಸದಾನಂದ್ ಪಾಟಿಲ್ (ಹುಬ್ಬಳ್ಳಿ) ಹಾಗು ಅಂಜನ್ ವೆಂಕಟೇಶ್ (ಬೆಂಗಳೂರು) ಆಯ್ಕೆಯಾಗಿದ್ದರೆ, 15-16 ವರ್ಷದ ಕ್ಯಾಟಗರಿಯಲ್ಲಿ ರೋಹಿತ್ ಫೆನ್ (ಬೆಂಗಳೂರು) ಹಾಗು 17-18 ವರ್ಷದ ಕ್ಯಾಟಗರಿಯಲ್ಲಿ ರಾಘವೇಂದ್ರ ರಾಮಚಂದ್ರನ್ (ಬೆಂಗಳೂರು) ಎಂಬುವವರೇ ಆಯ್ಕೆಯಾದಆ 4 ಕನ್ನಡಿಗರು.

ಒಟ್ಟಾರೆ 16 ಭಾರತೀಯರು ಆಯ್ಕೆಯಾಗಿರುವ ಈ ಸ್ಪರ್ಧೆಯಲ್ಲಿ ಗೆದ್ದವರ ಹೆಸರನ್ನು ಜೂನ್ 6 ಕ್ಕೆ ಪ್ರಕಟಿಸಲಿರುವ ಗೂಗಲ್, ಜುಲೈ 23 ರಂದು ತನ್ನ ಗೂಗಲ್ ಕಛೇರಿಯಲ್ಲಿ ಸನ್ಮಾನಿಸಲಿದೆ.

ಫೈನಲ್ ಗೆ ಆಯ್ಕೆಯಾಗಿರುವ ಎಲ್ಲ ಕನ್ನಡಿಗರಿಗೆ ಶುಭಾಷಯ ತಿಳಿಸಿ ಹಾಗು ನಿಮ್ಮ ಮನೆಯಲ್ಲೂ ಪ್ರಶ್ನೆ ಕೇಳುವ ಮಕ್ಕಳಿದ್ದರೆ ಅವರನ್ನು ಗೂಗಲ್ ಸೈನ್ಸ್ ಫೇರ್ ಗೆ ಕಳುಹಿಸಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X