ಫೈರ್‌ಟಿವಿ ಸ್ಟಿಕ್‌ನಲ್ಲಿರುವ ಈ 4 ವಿಷಯಗಳ ಬಗ್ಗೆ ನಿಮಗೆ ತಿಳಿದೇ ಇಲ್ಲ!

|

ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿ ಸಾಕಷ್ಟು ಮುಂದುವರೆದಿದೆ. ಟೆಕ್ನಾಲಜಿ ಮುಂದುವರೆದಂತೆ ಟೆಕ್‌ ಜಗತ್ತು ಕೂಡ ಸಾಕಷ್ಟು ವಿಸ್ತಾರಗೊಂಡಿದ್ದು,ಎಲ್ಲವೂ ಸ್ಮಾರ್ಟ್‌ ಆಗಿ ಬದಲಾಗುತ್ತಿದೆ. ನಿಮಗೆಲ್ಲಾ ತಿಳಿದಿರುವಂತೆ ಸ್ಮಾರ್ಟ್‌ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ, ಸೇರಿದಂತೆ ಎಲ್ಲವೂ ಸ್ಮಾರ್ಟ್‌ ಆಗಿ ದೊರೆಯುತ್ತಿವೆ. ಇವುಗಳಲ್ಲಿ ಸ್ಮಾರ್ಟ್‌ಟಿವಿ ಮಾರುಕಟ್ಟೆ ಕೂಡ ಸಾಕಷ್ಟು ಮುಂದುವರೆದಿದ್ದು, ವಿವಿಧ ಮಾದರಿಯ ಸ್ಮಾರ್ಟ್‌ಟಿವಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಸ್ಮಾರ್ಟ್‌ಟಿವಿ

ಹೌದು, ಸ್ಮಾರ್ಟ್‌ಟಿವಿ ಮಾರುಕಟ್ಟೆ ಸಾಕಷ್ಟು ವಿಸ್ತಾರವಾಗಿದ್ದು, ಈಗೀಗ ಸ್ಮಾರ್ಟ್‌ಟಿವಿಗಳ ಜೊತೆಗೆ ಹೆಚ್ಚಿನವರು ಸ್ಮಾರ್ಟ್ ಟಿವಿಗಳಿಗಾಗಿ ಫೈರ್ ಟಿವಿ ಸ್ಟಿಕ್ ಅಥವಾ ಕ್ರೋಮ್‌ಕಾಸ್ಟ್ ಅನ್ನು ಬಳಸುತ್ತಾರೆ ಮತ್ತು ಈ ಸ್ಮಾರ್ಟ್ ಟಿವಿ ಸ್ಟಿಕ್‌ಗಳು ಮಾಡಬಹುದಾದ ವಿಷಯಗಳ ಬಗ್ಗೆ ಬಳಕೆದಾರರಿಗೆ ಇನ್ನು ಕೆಲವು ವಿಚಾರಗಳ ಬಗ್ಗೆ ತಿಳಿದಿರುವುದಿಲ್ಲ. ಆದಾಗ್ಯೂ, ಫೈರ್ ಟಿವಿ ಸ್ಟಿಕ್ ಮಾಡಬಹುದಾದ ಬಳಕೆದಾರರಿಗೆ ತಿಳಿದಿಲ್ಲದ 4 ಕೆಲಸಗಳ ಬಗ್ಗೆ ಮಾಹಿತಿಯನ್ನ ತಿಳಿಸಿಕೊಡ್ತೀವಿ ಈ ಲೇಖನವನ್ನ ಓದಿ.

ಫೈರ್ ಟಿವಿ ಸ್ಟಿಕ್‌

ಫೈರ್ ಟಿವಿ ಸ್ಟಿಕ್‌

ಇನ್ನು ನೀವು ಎಲ್ಲಿಗಾದರೂ ಪ್ರಯಾಣಿಸಲು ಇಷ್ಟಪಟ್ಟರೆ ಅ ಪ್ರದೇಶಕ್ಕೆ ಹೊಂದಿಕೆಯಾಗುವ ಮತ್ತೊಂದು ಫೈರ್ ಟಿವಿ ಡಿವೈಸ್‌ ಅನ್ನು ಖರೀದಿಸುವ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ಅಮೆಜಾನ್ ಫೈರ್ ಟಿವಿ ಸ್ಟಿಕ್ ಮತ್ತು ಫೈರ್ ಟಿವಿ ಸ್ಟಿಕ್ 4 ಕೆ 80 ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸಲಿವೆ. ಇವುಗಳನ್ನ ಬಳಸುವಾಗ ನಿಮ್ಮ ಪ್ರಸ್ತುತ ದೇಶದ ಪಕ್ಕದಲ್ಲಿ ಬದಲಾವಣೆ ಆಯ್ಕೆಮಾಡಿ ನಂತರ ನಿಮ್ಮ ಹೊಸ ವಿಳಾಸವನ್ನು ನಮೂದಿಸಿ ಮತ್ತು ನಿಮ್ಮ ಹೊಸ ದೇಶವನ್ನು ಆರಿಸಿದ ನಂತರ ಆಪ್ಡೇಟ್‌ ಕೊಟ್ಟರೆ ಕಾರ್ಯನಿರ್ವಹಿಸಲಿದೆ. ಈ ಮೂಲಕ ನಿಮ್ಮ ಫೈರ್‌ಸ್ಟಿಕ್‌ ಹೊರದೇಶದಲ್ಲೂ ಉಪಯೋಗಕ್ಕೆ ಬರಲಿದೆ.

ರಿಮೋಟ್ ಕಳೆದುಹೋದಾಗ

ರಿಮೋಟ್ ಕಳೆದುಹೋದಾಗ

ಇನ್ನು ನಿಮ್ಮ ಟಿವಿ ರಿಮೋಟ್‌ ಕಳೆದು ಹೋದಾಗ ನಿಮ್ಮ ಮೊಬೈಲ್‌ ಅನ್ನು ಫೈರ್‌ಟಿವಿ ಸ್ಟಿಕ್‌ ರಿಮೋಟ್‌ ಆಗಿ ಬಳಸಬಹುದಾಗಿದೆ. ಫೈರ್ ಟಿವಿ ಡಿವೈಸ್‌ನಂತೆಯೆ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಅದೇ ವೈ-ಫೈ ನೆಟ್‌ವರ್ಕ್‌ಗೆ ಸಂಪರ್ಕಪಡಿಸಿ ನಂತರ ಫೈರ್ ಟಿವಿ ಅಪ್ಲಿಕೇಶನ್ ತೆರೆಯಿರಿ ಮತ್ತು ಡಿಸ್‌ಪ್ಲೇ ಯಲ್ಲಿ ಲಬ್ಯವಿರುವ ಆಯ್ಕೆಯನ್ನ ತೆರೆಯಿರಿ. ನಂತರ ಆನ್-ಸ್ಕ್ರೀನ್ ಪ್ರಾಂಪ್ಟ್ ಅನ್ನು ಅನುಸರಿಸಿ ಮತ್ತು ಫೈರ್ ಟಿವಿ ಸ್ಟಿಕ್ ಅನ್ನು ನಿಯಂತ್ರಿಸಲು ಆನ್-ಸ್ಕ್ರೀನ್ ನ್ಯಾವಿಗೇಷನ್, ಕೀಬೋರ್ಡ್ ಮತ್ತು ಇತರ ಮೆನು ಆಯ್ಕೆಗಳನ್ನು ಬಳಸಬಹುದಾಗಿದೆ.

ಗೇಮ್‌ಗಳನ್ನ ಆಡುವಾಗ

ಗೇಮ್‌ಗಳನ್ನ ಆಡುವಾಗ

ಇದಲ್ಲದೆ ನಿಮ್ಮ ಫೈರ್ ಟಿವಿ ಸ್ಟಿಕ್‌ನಲ್ಲಿ ಮಹ್ಜಾಂಗ್, ಬಾಸ್ಕೆಟ್‌ಬಾಲ್ ಹೂಪ್ ಟಾಸ್ ಅಥವಾ ವಾಲಿಬಾಲ್ 3D ಯಂತಹ ಆಟಗಳನ್ನು ನೀವು ಆಡಬಹುದು. ಇದಕ್ಕಾಗಿ ನೀವು ಫೈರ್‌ ಸ್ಟಿಕ್‌ ಆಪ್‌ನಲ್ಲಿ ಹೋಗಿ ಮೆನ್‌ ಮೆನುವಿನಲ್ಲಿ ಗೇಮ್‌ಗಳೂ ಅಥವಾ ನಿಮ್ಮ ಫೈರ್ ಟಿವಿ ರಿಮೋಟ್‌ನಲ್ಲಿ ಮೈಕ್ ಬಟನ್ ಒತ್ತಿ ಮತ್ತು "ಗೇಮ್ ಅಪ್ಲಿಕೇಶನ್‌ ಸರ್ಚ್‌ ಮಾಡಿದರೆ ನೀವು ಆಯ್ಕೆ ಮಾಡಿದ ಗೇಮ್‌ಗಳನ್ನ ಆಡಬಹುದಾಗಿದೆ.

ಡಿವೈಸ್‌ ಅನ್ನು ನಿರ್ವಹಿಸಲು

ಡಿವೈಸ್‌ ಅನ್ನು ನಿರ್ವಹಿಸಲು

ಇನ್ನು ನಿಮ್ಮ ಸ್ಮಾರ್ಟ್‌ಫೋನ್‌ ಡಿವೈಸ್‌ನಲ್ಲಿ ಶೇಖರಣೆ ಆದ ಮಾಹಿತಿ ಹಾಗೂ ಸೆಟ್ಟಿಗ್ಸ್‌ಗಳನ್ನ ನಿರ್ವಹಿಸಲು ಸಹ ಫೈರ್‌ಸ್ಟಿಕ್‌ ಅನ್ನು ಬಳಸಬಹುದಾಗಿದೆ. ಇದಕ್ಕಾಗಿ ಫೈರ್‌ಸ್ಟಿಕ್‌ನಲ್ಲಿ ಸೆಟ್ಟಿಂಗ್‌ಗಳ ಟ್ಯಾಬ್ ತೆರೆಯಬೇಕು. ನಂತರ
ಕಂಟ್ರಿ ಸೆಟ್ಟಿಂಗ್ಸ್ ವಿಭಾಗಕ್ಕೆ ಹೋಗಿ, ನಿಮ್ಮ ಫೋನ್ ಅನ್ನು ನಿಮ್ಮ ಫೈರ್ ಟಿವಿ ಸ್ಟಿಕ್‌ನಲ್ಲಿ ಕಾಣುವಂತೆ ಮಾಡಿದರೆ ನಿಮ್ಮ ಫೋನ್‌ನಲ್ಲಿ ನೀವು ಚಿತ್ರೀಕರಿಸಿದ ವೀಡಿಯೊವನ್ನು ದೊಡ್ಡ ಪರದೆಯಲ್ಲಿ ನೀವು ಪ್ರತಿಬಿಂಬಿಸಬಹುದು. ಅಲ್ಲದೆ ಇದಕ್ಕಾಗಿ ನೀವು ಮಾಡಬೇಕಾಗಿರುವುದು ಎರಡೂ ಡಿವೈಸ್‌ಗಳು ಸಹ ಒಂದೇ ವೈ-ಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಆಗಿರಬೇಕಾಗಿರುತ್ತದೆ. ಜೊತೆಗೆ ಈ ಎರಡು ಡಿವೈಸ್‌ಗಳು ಒಂದಕ್ಕೊಂದು 30 ಅಡಿ ವ್ಯಾಪ್ತಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಫೋನ್ ಅನ್ನು ಪರದೆಯ ಮೇಲೆ ಪ್ರತಿಬಿಂಬಿಸಲು ಮಿರರಿಂಗ್ ಐಕಾನ್ ಆಯ್ಕೆಮಾಡಬೇಕಾಗಿರುತ್ತದೆ.

Best Mobiles in India

English summary
4 things you didn’t know your Fire TV Stick could do.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X