ಆಪಲ್-ಸ್ಯಾಮ್‌ಸಂಗ್ ಹಿಂದಿಕ್ಕಿ, ನಂ.1 ಸ್ಥಾನಕ್ಕಾಗಿ ಒನ್‌ಪ್ಲಸ್ ಹೂಡಿದ ತಂತ್ರ..!
ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಭಾರೀ ಪ್ರಮಾಣದ ಬದಲಾವಣೆಯನ್ನು ಕಾಣಬಹುದಾಗಿದೆ. ಬಳಕೆದಾರರಿಗೆ ಕಡಿಮೆ ಬೆಲೆಗೆ ಟೆಲಿಕಾಂ ಸೇವೆಗಳು ಲಭ್ಯವಿರುವ ಕಾರಣ ಮತ್ತು 4G ಸ್ಮಾರ್ಟ್‌ಫೋನ್‌ಗಳಿಗೆ ಬದಲಾಗಬೇಕಾದ ಅನಿವಾರ್ಯತೆ ಸೃಷ್ಠಿಯಾದ ಸಲುವಾಗಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಮತ್ತು ದೊಡ್ಡ ಮಟ್ಟದ ಬೆಳವಣಿಗೆಯನ್ನು ಗುರುತಿಸಬಹುದಾಗಿದೆ. ಇದರಿಂದಾಗಿ ಸ್ಮಾರ್ಟ್‌ಫೋನ್ ಅನ್ನು ಒಂದು ವರ್ಷದ ಒಳಗೆ ಬದಲಾಯಿಸುವ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸ್ಮಾರ್ಟ್‌ಫೋನ್ ಮೇಲೆ ಹೂಡಿಕೆ ಮಾಡುವ ಮನಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನಲೆಯಲ್ಲಿ ಪ್ರೀಮಿಯಮ್ ಬೆಲೆಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಒನ್‌ಪ್ಲಸ್ ಬೇಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೃಷ್ಠಿಸಿಕೊಂಡಿದೆ. ಇದರಿಂದಾಗಿಯೇ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೈತ್ಯ ಸ್ಯಾಮ್‌ಸಂಗ್ ಅನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ಅಲಂಕರಿಸಿದೆ. ಇದು ಆಪಲ್ ಸೇರಿದಂತೆ ಹಲವು ಕಂಪನಿಗಳಿಗೆ ಶಾಕ್ ನೀಡಿದೆ. ಇದಕ್ಕೆ ಕಾರಣವಾಗಿರುವುದು ಸದ್ಯ ಒನ್‌ಪ್ಲಸ್ ಲಾಂಚ್ ಮಾಡಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಮತ್ತು ಗ್ರಾಹಕ ಓಲೈಕೆಯ ತಂತ್ರ.
ಒನ್‌ಪ್ಲಸ್ ಲಾಂಚ್ ಮಾಡಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಕಂಪನಿಗೆ ಶೇ.284 ರಷ್ಟು ಬೆಳವಣಿಗೆಯನ್ನು ಸಾಧಿಸಲು ಸಹಾಯ ಮಾಡಿದೆ ಎಂದರೆ ನೀವು ನಂಬಲೇ ಬೇಕು. ಕೇವಲ ಭಾರತೀಯ ಮಾರುಕಟ್ಟೆಯಲ್ಲಿ ಕಾಲಿಟ್ಟು ನಾಲ್ಕು ವರ್ಷಗಳು ಕಳೆಯುವದರ ಒಳಗೆ ಪ್ರೀಮಿಯಮ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿರುವುದು ಒನ್‌ಪ್ಲಸ್ ಕಂಪನಿಯ ಜನಪ್ರಿಯತೆಗೆ ಹಿಡಿದ ಕೈ ಗನ್ನಡಿಯಾಗಿದೆ.

ಒಂದೇ ದಿನದಲ್ಲಿ ಸಾಧಿಸಿದಲ್ಲ;
ಒನ್‌ಪ್ಲಸ್ ಕಂಪನಿಯೂ ಒಂದೇ ದಿನದಲ್ಲಿ ಇಷ್ಟು ದೊಡ್ಡ ಮಟ್ಟದ ಸಾಧನೆಯನ್ನು ಮಾಡಿಲ್ಲ. ಇದಕ್ಕಾಗಿ ಹಲವು ದಿನಗಳ ಶ್ರಮವಿದೆ. ಬಳಕೆದಾರರಲ್ಲಿ ನಂಬಿಕೆಯನ್ನು ಗಳಿಸಿಕೊಳ್ಳುವ ಸಲುವಾಗಿ, ಪಡೆದ ಬೆಲೆಗೆ ಬೆಸ್ಟ್ ಸ್ಮಾರ್ಟ್‌ಫೋನ್ ಅನ್ನು ನೀಡುತ್ತ ಬಂದಿದೆ. ಯಾವುದೇ ರೀತಿಯಲ್ಲಿಯೂ ಬಳಕೆದಾರರಿಗೆ ನಷ್ಟವನ್ನು ಉಂಟು ಮಾಡದೆ ಅವರ ವಿಶ್ವಾಸವನ್ನು ಗಳಿಸಿಕೊಂಡು ಮಾರುಕಟ್ಟೆಯಲ್ಲಿ ಇಂದು ನಂಬರ್ ಒನ್ ಆಗಿದೆ.

ಗ್ರಾಹಕರ ಕೇಂದ್ರಿತ ವ್ಯಾಪಾರ:
ಒನ್‌ಪ್ಲಸ್ ಆರಂಭದಿಂದಲೂ ಗ್ರಾಹಕರ ಕೇಂದ್ರಿತ ಸೇವೆಯನ್ನು ನೀಡುತ್ತಲೇ ಬಂದಿದೆ. ಗ್ರಾಹಕರನ್ನು ತೃಪ್ತಿಪಡಿಸಿದರೆ ಮಾತ್ರವೇ ಮಾರುಕಟ್ಟೆಯಲ್ಲಿ ಉಳಿದುಕೊಳ್ಳಲು ಸಾಧ್ಯ ಎಂಬುದನ್ನು ತಿಳಿದುಕೊಂಡಿರುವ ಕಂಪನಿಯೂ, ಅವರನ್ನು ಖುಷಿ ಪಡಿಸಿಲು ಎಲ್ಲಾ ರೀತಿಯಲ್ಲಿಯೂ ಪ್ರಯತ್ನಿಸುತ್ತಲೇ ಬಂದಿದೆ. ಇದಕ್ಕಾಗಿಯೇ ಮಾರುಕಟ್ಟೆಯಲ್ಲಿ ನೀವು ಒನ್‌ಪ್ಲಸ್ ಫ್ಯಾನ್‌ಗಳನ್ನು ಕಾಣಬಹುದಾಗಿದೆ.

ಗ್ರಾಹಕರೊಂದಿಗೆ ನಿರಂತ ಸಂಪರ್ಕ:
ಒನ್‌ಪ್ಲಸ್ ಬೆಳವಣಿಯಲ್ಲಿ ಗ್ರಾಹಕರ ಪಾತ್ರವೂ ತುಂಬ ದೊಡ್ಡದಾಗಿದೆ. ಇದರಿಂದಾಗಿ ಒನ್‌ಪ್ಲಸ್ ಗ್ರಾಹಕರೊಂದಿಗೆ ಟೂ ವೇ ಕಮ್ಯೂನುಕೇಷನ್ ಅನ್ನು ಜಾರಿಯಲ್ಲಿ ಇಟ್ಟುಕೊಂಡಿದೆ. ಗ್ರಾಹಕರು ನೀಡಿದ ಫೀಡ್‌ಬ್ಯಾಕ್ ಅನ್ನು ಸ್ವೀಕರಿಸಿ ಅದಕ್ಕೆ ತಕ್ಕಂತೆ ಬದಲಾವಣೆಯನ್ನು ಮಾಡಲು ಸದಾ ಸಿದ್ಧವಾಗಿದೆ. ಇದರಿಂದಾಗಿ ಒನ್‌ಪ್ಲಸ್ ಬಳಕೆದಾರರಿಗೆ ಬೇಕಾಗಿರುವ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿದೆ.

ಗ್ರಾಹಕರಿಗಾಗಿಯೇ ಕಾರ್ಯಕ್ರಮ:
ಒನ್‌ಪ್ಲಸ್ ನೂತನ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದನ್ನೇ ಕಾಯುತ್ತಿರುವ ಅಭಿಮಾನಿಗಾಗಿಯೇ ದೇಶದ ವಿವಿಧ ಭಾಗಗಳಲ್ಲಿ ಒನ್‌ಪ್ಲಸ್ ಗ್ರಾಹಕರಿಗಾಗಿ ಪಾಪ್ ಆಪ್ ಇವೆಂಟ್ ಗಳನ್ನು ಆಯೋಜನೆ ಮಾಡುತ್ತದೆ. ಇದರಿಂದಾಗಿ ಅಭಿಮಾನಿಗಳು ಕಂಪನಿಯೊಂದಿಗೆ ನೇರವಾಗಿ ಸಂಪರ್ಕವನ್ನು ಸಾಧಿಸಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೂ ಹೊಸ ಫೋನ್‌ಗಳನ್ನು ಬಳಸುವ ಅವಕಾಶವು ದೊರೆಯಲಿದೆ.

ಲಾಂಚ್ ಇವೆಂಟ್:
ಇದಲ್ಲದೇ ಒನ್‌ಪ್ಲಸ್ ಬೇರೆ ಕಂಪನಿಗಳಿಗಿಂತ ಭಿನ್ನವಾಗಿ ತನ್ನ ಫ್ಯಾನ್‌ಗಳನ್ನು ಸ್ಮಾರ್ಟ್‌ಫೋನ್ ಇವೆಂಟ್ ಗಳಿಗೆ ಆಹ್ವಾನವನ್ನು ನೀಡಲಿದೆ. ಇದರಿಂದಾಗಿ ಅಭಿಮಾನಿಗಳಿಗೂ ಹೊಸ ಫೋನ್ ಲಾಂಚ್ಗೆ ಸಾಕ್ಷಿಯಾಗುವ ಅವಕಾಶ ದೊರೆಯಲಿದೆ ಮತ್ತು ಸಾಮಾನ್ಯ ಲಾಂಚ್‌ಗೂ ಮುನ್ನವೇ ಡಿವೈಸ್ ಬಗ್ಗೆ ನೇರವಾಗಿ ತಿಳಿದುಕೊಳ್ಳುವ ಅವಕಾಶವನ್ನು ಮಾಡಕೊಡುತ್ತಿದೆ.

ಇದಲ್ಲದೇ ಇನ್ನು ಹಲವು:
ಗ್ರಾಹಕರಿಗಾಗಿಯೇ ಹಲವು ಮಾದರಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಒನ್‌ಪ್ಲಸ್ ತನ್ನ ಫ್ಯಾನ್ಸ್‌ಗಳಿಗೆ ಆಗ ತಾನೆ ಬಿಡುಗಡೆಯಾಗಿರುವ ಬಿಗ್ ಸಿನಿಮಾಗಳನ್ನು ನೋಡುವ ಅವಕಾಶವನ್ನು ಮಾಡಿಕೊಡಲಿದೆ. ಇದಲ್ಲದೇ ಆದೇ ಆವೃತ್ತಿಯ ಸ್ಮಾರ್ಟ್‌ಫೋನ್ ಗಳನ್ನು ಲಾಂಚ್ ಮಾಡಿ ಅಭಿಮಾನಿಗಳನ್ನು ಖುಷಿಪಡಿಸುವ ಕಾರ್ಯವನ್ನು ಮಾಡುತ್ತಿದೆ.

ಗುಣಮಟ್ಟ:
ಕಡಿಮೆ ಬೆಲೆಗೆ ಫೋನ್ ಮಾರಾಟ ಮಾಡಲು ಹೋಗಿ ಗ್ರಾಹಕರಿಗೆ ಕಳಪೆ ಗುಣಮಟ್ಟದ ಫೋನ್‌ಗಳನ್ನು ನೀಡುವ ಕಾರ್ಯಕ್ಕೆ ಒನ್‌ಪ್ಲಸ್ ಎಂದು ಮುಂದಾಗಿಲ್ಲ. ಉತ್ತಮ ಬೆಲೆಗೆ ಉತ್ತಮ ಗುಣಮಟ್ಟದೊಂದಿಗೆ ಬೆಸ್ಟ್ ಫೋನ್‌ಗಳನ್ನು ಬಳಕೆದಾರರಿಗೆ ನೀಡುತ್ತಿರುವುದೇ ಒನ್‌ಪ್ಲಸ್ ಗೆಲುವಿಗೆ ಕಾರಣವಾಗುತ್ತಿದೆ. ಇದರಿಂದಾಗಿಯೇ ಗ್ರಾಹಕರು ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಅನ್ನು ಕಣ್ಣು ಮುಚ್ಚಿ ನಂಬುತ್ತಿದ್ದಾರೆ.


Click it and Unblock the Notifications








