ಮತ್ತಷ್ಟು ಕಡಿಮೆ ಬೆಲೆಯಲ್ಲಿ ಜಿಯೋ ಆಫರ್!?..ಟೆಲಿಕಾಂಗೆ ಮತ್ತೆ ಟಾಂಗ್ ನೀಡಿದ ಅಂಬಾನಿ!!
ಡೇಟಾ ಡಿಜಿಟಲ್ ಆರ್ಥಿಕತೆಯ ಆಮ್ಲಜನಕ ಇದ್ದಂತೆ. ಈ ಸುಸ್ಥಿರ ಸಂಪನ್ಮೂಲದಿಂದ ಭಾರತೀಯರು ವಂಚಿತರಾಗುವಂತೆ ಮಾಡಲು ಸಾಧ್ಯವಿಲ್ಲ.
ಡೇಟಾ ಡಿಜಿಟಲ್ ಆರ್ಥಿಕತೆಯ ಆಮ್ಲಜನಕ ಇದ್ದಂತೆ. ಈ ಸುಸ್ಥಿರ ಸಂಪನ್ಮೂಲದಿಂದ ಭಾರತೀಯರು ವಂಚಿತರಾಗುವಂತೆ ಮಾಡಲು ಸಾಧ್ಯವಿಲ್ಲ. ಗರಿಷ್ಠ ವೇಗದ ದತ್ತಾಂಶವನ್ನು ಕೈಗೆಟುಕುವ ಬೆಲೆಗೆ ಒದಗಿಸಬೇಕಾಗಿದೆ ಎಂದು ಪರೋಕ್ಷವಾಗಿ ಇತರ ಟೆಲಿಕಾಂ ಕಂಪೆನಿಗಳಿಗೆ ಜಿಯೋ ಮುಖ್ಯಸ್ಥ ಅಂಬಾನಿ ಟಾಂಗ್ ನೀಡಿದ್ದಾರೆ.!!
ಬುಧವಾರ ನಡೆದ ಇಂಡಿಯನ್ ಮೊಬೈಲ್ ಸಮ್ಮೇಳನದಲ್ಲಿ ಮಾತನಾಡಿದ ಅಂಬಾನಿ, ಜಿಯೋ ಮೂಲಕ ಅತ್ಯಂತ ಕಡಿಮೆ ಬೆಲೆಯಲ್ಲಿ ಜನರಿಗೆ ಡೇಟಾವನ್ನು ಹಂಚಿಸುವ ಕಾರ್ಯವಾಗುತ್ತಿದೆ.ಇದನ್ನು ಯಾರು ಕೂಡ ತಡೆಯಲು ಸಾಧ್ಯವಾಗದು ಎಂಬರ್ಥದಲ್ಲಿ ಅವರು ಹೇಳಿದ್ದು, ಭವಿಷ್ಯದಲ್ಲಿ ಜಿಯೋ ಡೇಟಾ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ ಎನ್ನುವ ಸೂಚನೆ ನೀಡಿದ್ದಾರೆ.!!
ಇನ್ನು ಜಿಯೋ ಫೋನ್ ಮತ್ತು ಭಾರತದ ಆರ್ಥಿಕತೆಯ ಭವಿಷ್ಯದ ಬಗ್ಗೆ ಮಾತನಾಡಿದ ಅಂಬಾನಿ ಭವಿಷ್ಯದ ಭಾರತ ವಿಶ್ವದ ಮುಂಚೂಣಿ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದಿದ್ದು, ಅವರು ಹೇಳಿದ ಇನ್ನಿತರ ಪ್ರಮುಖ ಅಂಶಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

2Gಯನ್ನು ಹಿಂದಿಕ್ಕಲಿದೆ 4G!
ಭಾರತದಲ್ಲಿ 4G ಬಳಕೆದಾರರ ಸಂಖ್ಯೆ ಬಹುಬೇಗ ಹೆಚ್ಚಾಗುತ್ತಿದೆ. ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಸದ್ಯಕ್ಕೆ ದತ್ತಾಂಶದ ಪ್ರವಾಹ ಕಂಡು ಬರುತ್ತಿದೆ. ಒಂದು ವರ್ಷದ ಒಳಗೆ 4G ಸೇವೆಯು 2G ಸೇವಾ ವ್ಯಾಪ್ತಿಯನ್ನು ಹಿಂದಿಕ್ಕಲಿದೆ. ಜಿಯೋ ಮೂಲಕ ಅತ್ಯಂತ ವೇಗವಾಗಿ ಡೇಟಾವನ್ನು ಜನರಿಗೆ ಮುಟ್ಟಿಸುವ ಕಾರ್ಯವಾಗುತ್ತಿದೆ ಎಂದು ಹೇಳಿದ್ದಾರೆ.!!

ಜಿಯೋ ಫೋನ್ ಭವಿಷ್ಯ!!
ಪ್ರತಿಯೊಬ್ಬ ಭಾರತೀಯನು ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್ ಹೊಂದುವಂತೆ ಮಾಡಬೇಕಾಗಿದೆ .ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ನಿಂದ ಅಗಣಿತ ಜ್ಞಾನ ಮತ್ತು ಇಂಟರ್‌ನೆಟ್‌ನ ಸಕಲ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಜಿಯೋ ಫೋನ್ ಬಗ್ಗೆ ಹೇಳಿದ್ದಾರೆ.!!

ವಿಶ್ವದ ಮುಂಚೂಣಿ ಆರ್ಥಿಕತೆಗಳಲ್ಲಿ ಒಂದು!!
ಭಾರತವು ಮುಂದಿನ ಕೇವಲ 10 ವರ್ಷಗಳಲ್ಲಿ 162 ಲಕ್ಷ ಕೋಟಿ ಆರ್ಥಿಕತೆಯಿಂದ 455 ಲಕ್ಷ ಕೋಟಿಗಳ ಅರ್ಥವ್ಯವಸ್ಥೆಯಾಗಿ ಬೆಳೆಯಲಿದೆ. ಈ ಮೂಲಕ ವಿಶ್ವದ ಮುಂಚೂಣಿ ಮೂರು ಆರ್ಥಿಕತೆಗಳಲ್ಲಿ ಭಾರತವು ಕೂಡ ಒಂದಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.!!

ಮುಂಚೂಣಿಯಲ್ಲಿ ಇರುವ ಅವಕಾಶ!!
ವಿಶ್ವದ ಮೊದಲ ಮೂರು ಕೈಗಾರಿಕಾ ಕ್ರಾಂತಿಗಳಾದ ಯಾಂತ್ರೀಕರಣ, ಸಮೂಹ ಉತ್ಪಾದನೆ ಮತ್ತು ಸ್ವಯಂಚಾಲನೆಯನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಭಾರತ ಹಿಂದೆ ಬಿದ್ದಿತ್ತು. ದತ್ತಾಂಶ, ಸಂವಹನ ಮತ್ತು ಕೃತಕ ಬುದ್ಧಿಮತ್ತೆಯ ಕೈಗಾರಿಕಾ ಕ್ರಾಂತಿಯ ಮುಂಚೂಣಿಯಲ್ಲಿ ಇರುವ ಅವಕಾಶ ಭಾರತಕ್ಕೆ ಇದೆ ಎಂದು ಅವರು ಹೇಳಿದ್ದಾರೆ.!!


Click it and Unblock the Notifications








