Home
ಸುದ್ದಿಜಾಲ

ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ಈ ಎಲ್ಲಾ 4K ಟಿವಿಗಳಿಗೆ ಭರ್ಜರಿ ರಿಯಾಯಿತಿ!

ರಿಪಬ್ಲಿಕ್ ಡೇ ಸೇಲ್ ಫ್ಲಿಪ್ ಕಾರ್ಟ್ ನಲ್ಲಿ ನಡೆಯುತ್ತಿದೆ. ಬೇರೆಬೇರೆ ಕೆಟಗರಿಯ ವಿಭಿನ್ನ ಪ್ರೊಡಕ್ಟ್ ಗಳು ದೊಡ್ಡ ಮಟ್ಟದ ಬೆಲೆ ಇಳಿಕೆಯಲ್ಲಿ ಲಭ್ಯವಿದೆ. ಸ್ಮಾರ್ಟ್ ಟಿವಿ ಸೆಗ್ಮೆಂಟ್ ನಲ್ಲಿ ಬಹಳಷ್ಟು ಟಿವಿ ಮಾಡೆಲ್ ಗಳು ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ರಿಪಬ್ಲಿಕ್ ಡೇ ಸೇಲ್ ನಲ್ಲಿ ಈ ಎಲ್ಲಾ 4K ಟಿವಿಗಳಿಗೆ ಭರ್ಜರಿ ರಿಯಾಯಿತಿ!

ಆದರೆ 4K ಟಿವಿಗಳು ಆಶ್ಚರ್ಯಕರ ರೀತಿಯಲ್ಲಿ ಬೆಲೆ ಇಳಿಕೆ ಕಂಡಿದ್ದು ನೀವೇನಾದರೂ ನಿಮ್ಮ ಟಿವಿಯನ್ನು 4K ಟಿವಿಗೆ ಅಪ್ ಗ್ರೇಡ್ ಮಾಡಲು ಬಯಸುತ್ತಿದ್ದಲ್ಲಿ ಖಂಡಿತ ಇದು ಸುಸಮಯವಾಗಿದೆ. ರಿಪಬ್ಲಿಕ್ ಡೇ ಸೇಲ್ ನಲ್ಲಿ ಪ್ರಸಿದ್ಧ 4K ಟಿವಿ ಮಾಡೆಲ್ ಗಳಿಗೆ ಭರ್ಜರಿ ರಿಯಾಯಿತಿಯನ್ನು ನೀಡಲಾಗುತ್ತಿದ್ದು ಕನಿಷ್ಠ ಬೆಲೆಯಲ್ಲಿ ಖರೀದಿಸಬಹುದಾದ ಅವಕಾಶ ಗ್ರಾಹಕರಿಗೆ ಲಭ್ಯವಿದೆ.

ಬೇರೆಬೇರೆ ಬ್ರಾಂಡ್ ನ ಟಿವಿಗಳು ಉದಾಹರಣೆಗೆ iFFALCON, ಶಿಯೋಮಿ, Vu ಮತ್ತು ಕ್ಲೌಡ್ ವಾಕರ್ ಗಳು ಅತ್ಯಧಿಕ ಬೆಲೆ ಕಡಿತವನ್ನು ನೀಡುತ್ತಿದೆ.ಈ ಲಿಸ್ಟ್ ನಲ್ಲಿರುವ ಹೆಚ್ಚಿನ ಆಯ್ಕೆಗಳು ಸ್ಮಾರ್ಟ್ ಟಿವಿಗಳಾಗಿದೆ ಮತ್ತು ಅವುಗಳಲ್ಲಿ ಕೆಲವು ಗೂಗಲ್ ಸರ್ಟಿಫಿಕೇಟ್ ಇರುವ ಆಂಡ್ರಾಯ್ಡ್ ಟಿವಿ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗುತ್ತದೆ.

ಶಿಯೋಮಿ ಎಂಐ LED ಟಿವಿ 4X ಪ್ರೋ ಶಿಯೋಮಿಯ ಹೊಸ ಪ್ಯಾಚ್ ವಾಲ್ ಇಂಟರ್ಫೇಸ್ ನೊಂದಿಗೆ ಬರುತ್ತದೆ. ಇದು ಕಟೆಂಟ್ ಗೆ ಹೆಚ್ಚಿನ ಫೋಕಸ್ ನ್ನು ನೀಡುತ್ತದೆ. ಕನಿಷ್ಟ ಪೆನಲ್ ಸೈಜ್ 4K TV ಆರಂಭಿಕವಾಗಿ 43-ಇಂಚು ಮತ್ತು 55- ಇಂಚಿನವರೆಗೂ ಸಾಗುತ್ತದೆ.

Vu Iconium 43-ಇಂಚಿನ 4K LED ಸ್ಮಾರ್ಟ್ ಟಿವಿ (ಆರಂಭಿಕ ಬೆಲೆ Rs 23,999)

Vu Iconium 43-ಇಂಚಿನ 4K LED ಸ್ಮಾರ್ಟ್ ಟಿವಿ (ಆರಂಭಿಕ ಬೆಲೆ Rs 23,999)

ಈ ಟಿವಿಯು 43-ಇಂಚಿನ ಪೆನಲ್ ಹೊಂದಿದ್ದು ಅದು 4K ರೆಸಲ್ಯೂಷನ್ ಗೆ ಬೆಂಬಲ ನೀಡುತ್ತದೆ. ಇದು ಸ್ಮಾರ್ಟ್ ಟಿವಿ ಇಂಟರ್ಫೇಸ್ ಆಧಾರಿತ ಆಂಡ್ರಾಯ್ಡ್ 7.0ನೊಂದಿಗೆ ಬರುತ್ತದೆ. ಗ್ರಾಹಕರು 23,999 ರುಪಾಯಿಗೆ ಇದನ್ನು ಖರೀದಿಸಬಹುದಾಗಿದ್ದು ನೋ ಕಾಸ್ಟ್ ಇಎಂಐ ಆಯ್ಕೆ ಕೂಡ ಲಭ್ಯವಿದ್ದು. ಮಾಸಿಕ 4000 ರುಪಾಯಿ ಪಾವತಿಯಂತೆ ಖರೀದಿಸಬಹುದು. 8,000 ರುಪಾಯಿ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದೆ.

ಕ್ಲೌಡ್ ವಾಕರ್ 55-ಇಂಚಿನ 4K LED ಸ್ಮಾರ್ಟ್ ಟಿವಿ (ಆರಂಭಿಕ ಬೆಲೆ Rs 35,999)

ಕ್ಲೌಡ್ ವಾಕರ್ 55-ಇಂಚಿನ 4K LED ಸ್ಮಾರ್ಟ್ ಟಿವಿ (ಆರಂಭಿಕ ಬೆಲೆ Rs 35,999)

ಫ್ಲಿಪ್ ಕಾರ್ಟ್ ನಲ್ಲಿ 41% ಬೆಲೆ ಇಳಿಕೆಯಲ್ಲಿ ಈ ಟಿವಿ ನಿಮಗೆ ಲಭ್ಯವಾಗುತ್ತದೆ. ಗ್ರಾಹಕರು ಇದನ್ನು 6000 ರುಪಾಯಿ ತಿಂಗಳ ಪಾವತಿಯಂತೆ ಇಎಂಐ ಆಯ್ಕೆಯಲ್ಲಿ ಖರೀದಿಸಬಹುದು.ಎಕ್ಸ್ ಚೇಂಜ್ ಆಫರ್ ಕೂಡ ಇದ್ದು 15,000 ರುಪಾಯಿ ವರೆಗೆ ಎಕ್ಸ್ ಚೇಂಜ್ ಆಫರ್ ಇದೆ.ಈ ಟಿವಿಯು ಡುಯಲ್ ಬ್ಯಾಂಡ್ ವೈ-ಫೈ ಮತ್ತು ಆಂಡ್ರಾಯ್ಡ್ ವರ್ಷನ್ ನಲ್ಲಿ ರನ್ ಆಗುತ್ತದೆ.

iFFALCON 55-ಇಂಚಿನ 4K LED ಸ್ಮಾರ್ಟ್ ಟಿವಿ (ಆರಂಭಿಕ ಬೆಲೆ Rs 37,999)

iFFALCON 55-ಇಂಚಿನ 4K LED ಸ್ಮಾರ್ಟ್ ಟಿವಿ (ಆರಂಭಿಕ ಬೆಲೆ Rs 37,999)

iFFALCON 55-ಇಂಚಿನ ಸ್ಮಾರ್ಟ್ ಟಿವಿಗೆ 8,000 ರುಪಾಯಿ ರಿಯಾಯಿತಿ ಇದೆ. 4,222 ರುಪಾಯಿ ತಿಂಗಳ ಪಾವತಿಯ ಇಎಂಐ ಆಯ್ಕೆ ಕೂಡ ಪಡೆಯಬಹುದು. ಅಥವಾ 17,500 ರುಪಾಯಿ ಎಕ್ಸ್ ಚೇಂಜ್ ಆಫರ್ ಕೂಡ ಈ ಟಿವಿಗೆ ಲಭ್ಯವಿದೆ. 55- ಇಂಚಿನ ಸ್ಮಾರ್ಟ್ ಟಿವಿಯು ಸರ್ಟಿಫೈಡ್ ಆಂಡ್ರಾಯ್ಡ್ ಟಿವಿ ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗುತ್ತದೆ ಮತ್ತು ನೆಟ್ ಫ್ಲಿಕ್ಸ್ ಗೆ ಬೆಂಬಲ ನೀಡುತ್ತದೆ.

ಶಿಯೋಮಿ ಎಂಐ LED ಟಿವಿ 4 ಪ್ರೋ 55-ಇಂಚಿನ 4K ಸ್ಮಾರ್ಟ್ ಟಿವಿ (ಆರಂಭಿಕ ಬೆಲೆ Rs 49,999)

ಶಿಯೋಮಿ ಎಂಐ LED ಟಿವಿ 4 ಪ್ರೋ 55-ಇಂಚಿನ 4K ಸ್ಮಾರ್ಟ್ ಟಿವಿ (ಆರಂಭಿಕ ಬೆಲೆ Rs 49,999)

ಎಂಐ LED ಟಿವಿ 4 ಪ್ರೋ 5,000 ರುಪಾಯಿ ರಿಯಾಯಿತಿಯಲ್ಲಿ ಅಂದರೆ 49,999 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ. ಎಂಐ LED ಟಿವಿ 4 ಪ್ರೋ 55-ಇಂಚಿನ ಸ್ಲಿಮ್ ಆಗಿರುವ 4K ಪೆನಲ್ ನ ಟಿವಿ ಇದಾಗಿದೆ ಮತ್ತು ಆಂಡ್ರಾಯ್ಡ್

ಟಿವಿ 8.0 ನಲ್ಲಿ ರನ್ ಆಗುತ್ತದೆ. ಶಿಯೋಮಿ ಪ್ಯಾಚ್ ವಾಲ್ ಇಂಟರ್ ಫೇಸ್ ನ್ನು ಇದು ಹೊಂದಿದೆ.

ಒನಿಡಾ ಗೂಗಲ್ ಸರ್ಟಿಫೈಡ್ 58-ಇಂಚಿನ 4K LED ಸ್ಮಾರ್ಟ್ ಟಿವಿ (ಆರಂಭಿಕ ಬೆಲೆ Rs 49,499)

ಒನಿಡಾ ಗೂಗಲ್ ಸರ್ಟಿಫೈಡ್ 58-ಇಂಚಿನ 4K LED ಸ್ಮಾರ್ಟ್ ಟಿವಿ (ಆರಂಭಿಕ ಬೆಲೆ Rs 49,499)

ಒನಿಡಾದ 4K ಟಿವಿಯು 50,000 ರುಪಾಯಿ ಬೆಲೆ ಸಿಗುತ್ತದೆ. ಫ್ಲಿಪ್ ಕಾರ್ಟ್ ನ ಈ ಸೇಲ್ ನಲ್ಲಿ 5,500 ರುಪಾಯಿ ವರೆಗಿನ ರಿಯಾಯಿತಿ ಬೆಲೆ ಸಿಗುತ್ತಿದೆ. ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದ್ದು 22,000 ರುಪಾಯಿ ವರೆಗೆ ಎಕ್ಸ್ ಚೇಂಜ್ ಆಫರ್ ಇದೆ. ನೋ ಕಾಸ್ಟ್ ಇಎಂಐ ಆಯ್ಕೆ ಕೂಡ ಸಿಗುತ್ತಿದ್ದು 8,250 ರುಪಾಯಿ ಪ್ರತಿ ತಿಂಗಳು ಪಾವತಿಸಿ ಖರೀದಿಸಬಹುದು. ಈ ಟಿವಿಯು ಆಂಡ್ರಾಯ್ಡ್ ಟಿವಿ 8.0 ಮತ್ತು ನೂತನ ಅಪ್ ಡೇಟ್ ನ್ನು ಕೂಡ ಪಡೆಯಲಿದೆ.

Best Mobiles in India

English summary
4K TVs selling from Rs 23,999 on Flipkart right now, here are the top deals
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+