ಹೊಸ ಹೊಸ ತಂತ್ರಜ್ಞಾನ ಅಭಿವೃದ್ಧಿಯಾದಂತೆ ಹಳೇ ತಂತ್ರಜ್ಞಾನದ ಬಳಕೆ ಕಡಿಮೆಯಾಗುತ್ತಿದೆ.ಹೀಗಾಗಿ ಇಲ್ಲಿ ಕೆಲವು ಸದ್ಯ ವಿಶ್ವದೆಲ್ಲೆಡೆ ಬಳಕೆಯಾಗುತ್ತಿರುವ ಮುಂದಿನ ದಿನದಲ್ಲಿ ಮೂಲೆಗುಂಪಾಗಲಿರುವ ಕೆಲವೊಂದು ಟೆಕ್ ಉತ್ಪನ್ನಗಳ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. #13; ಆಪಲ್ ಐಓಎಸ್ ಆಧಾರಿತ,ಗೂಗಲ್ ಆಂಡ್ರಾಯ್ಡ್ ಆಧಾರಿತ ಕಾರುಗಳ ನಿರ್ಮಾಣಕ್ಕೆ ಕೈ ಹಾಕಿದ್ದು ಕೆಲವೊಂದು ಕಂಪೆನಿಗಳ ಜೊತೆಗೆ ಮಾತುಕತೆ ನಡೆಸಿದೆ.ಕಾರು ಕೀ ಬದಲಾಗಿ ಪಾಸ್ ವರ್ಡ್ ಆಧಾರಿತ ಲಾಕ್ ,ಅನ್ ಲಾಕ್ ವ್ಯವಸ್ಥೆಯನ್ನು ಅಳವಡಿಸುವ ಬಗ್ಗೆ ಸಂಶೋಧನೆ ನಡೆಯುತ್ತದೆ. ಸ್ಮಾರ್ಟ್ ಫೋನ್ ಬಂದ ಮೇಲೆ ಕಡಿಮೆ ಬೆಲೆಯ ಪಾಯಿಂಟ್ ಆಂಡ್ ಶೂಟ್ ಕ್ಯಾಮೆರಾಗಳನ್ನುಕೊಳ್ಳವ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. 16,20,41 ಮೆಗಾಪಿಕ್ಸಲ್ ಇರುವ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನು ಮುಂದೆ ಕಾರಿನಲ್ಲೇ ಪ್ರತ್ಯೇಕ ಜಿಪಿಎಸ್ ಸಾಧನಗಳನ್ನು ಅಳವಡಿಸಬೇಕಾಗಿಲ್ಲ.ಕಾರು ತಯಾರಿಸುವ ಕೆಲವು ಕಂಪೆನಿಗಳು ಈಗಾಗಲೇ ಗೂಗಲ್ ,ಆಪಲ್ ಜೊತೆ ಮಾತುಕತೆ ನಡೆಸಿದ್ದು ಕಾರಿನ ಡ್ಯಾಶ್ ಬೋರ್ಡ್ ವಿಶೇಷತೆ ಬದಲಾಗಲಿದೆ. ಈ ಹಿಂದೆ ಡೇಟಾಗಳನ್ನು ಸಂಗ್ರಹಿಸಲು ಬ್ಲೂ ರೇ, ಡಿವಿಡಿ ಹೆಚ್ಚಾಗಿ ಬಳಕೆಯಾಗುತ್ತಿತ್ತು. ಆದರೆ ಈಗ ಎಕ್ಸಟರ್ನಲ್ ಹಾರ್ಡ್ ಡಿಸ್ಕ್ , ಕ್ಲೌಡ್ ಸ್ಟೋರೆಜ್ ಬಂದ ಮೇಲೆ ಇವುಗಳ ಬಳಕೆ ಕಡಿಮೆಯಾಗಿದೆ. #13; #13;