Home
ಸುದ್ದಿಜಾಲ

ಇನ್ಮುಂದೆ ಗೂಗಲ್‌ ಫೋಟೋಸ್‌ ಬದಲಿಗೆ ಈ ಅಪ್ಲಿಕೇಶನ್‌ಗಳನ್ನು ಬಳಸಬಹುದು!

ಜನಪ್ರಿಯ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್ ತನ್ನ ಜನಪ್ರಿಯ ಗೂಗಲ್ ಫೋಟೋಸ್‌ ನಲ್ಲಿ ಉಚಿತ ಸ್ಥಳಾವಕಾಶಕ್ಕೆ ಕತ್ತರಿ ಹಾಕಿದೆ. ಜೂನ್‌ 1 ರಿಂದ ತನ್ನ ಗೂಗಲ್ ಫೋಟೋಸ್‌ ನಲ್ಲಿ ಅನಿಯಮಿತ ಉಚಿತ ಸ್ಟೋರೇಜ್ ಸ್ಥಳಾವಕಾಶ ನಿಲ್ಲಿಸಲಿದೆ. ಉತ್ತಮ ಗುಣಮಟ್ಟದ ಫೋಟೊ, ವಿಡಿಯೊಗಳಿಗೆ ಉಚಿತ ಸ್ಟೋರೇಜ್ ಸ್ಥಳಾವಕಾಶ ನೀಡಿ ಗ್ರಾಹಕರ ಗಮನ ಸೆಳೆದಿದ್ದ ಈ ಫೀಚರ್ಸ್‌ ಇಂದಿನಿಂದ ತನ್ನ ಕಾರ್ಯವನ್ನು ನಿಲ್ಲಿಸಲಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಗೂಗಲ್‌ ಫೋಟೋಸ್‌ನಲ್ಲಿ ನೀಡಿದ ಅನಿಯಮಿತ ಸ್ಟೋರೇಜ್‌ ಅವಕಾಶವನ್ನು ಜೂನ್‌ 1 ರಿಂದ ಸ್ಟಾಪ್‌ ಮಾಡಲಿದೆ. ಜೂನ್ 1, 2021 ರಿಂದ ಗೂಗಲ್ ಫೋಟೋಗಳಿಗೆ ಅಪ್‌ಲೋಡ್ ಮಾಡಲಾದ ಎಲ್ಲಾ ಹೊಸ ಮೀಡಿಯಾಗಳು ಪ್ರತಿ ಗೂಗಲ್ ಖಾತೆ ಬಳಕೆದಾರರಿಗೆ ನೀಡಲಾಗುವ 15 ಜಿಬಿ ಉಚಿತ ಸಂಗ್ರಹಣೆಯ ಒಂದು ಭಾಗವಾಗಿರುತ್ತದೆ. ನೀವು ಚಂದಾದಾರರಾಗಿರುವ ಯಾವುದೇ Google One ಚಂದಾದಾರಿಕೆಗೂ ಇದು ಅನ್ವಯಿಸುತ್ತದೆ. ಹಾಗಾದ್ರೆ ಗೂಗಲ್‌ ಫೋಟೋಸ್‌ಗೆ ಬದಲಿಯಾಗಿ ನೀವು ಬಳಸಬಹುದಾದ ಇತರೆ ಅಪ್ಲಿಕೇಶನ್‌ ಸೇವೆಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೈಕ್ರೋಸಾಫ್ಟ್ ಒನ್‌ಡ್ರೈವ್

ಮೈಕ್ರೋಸಾಫ್ಟ್ ಒನ್‌ಡ್ರೈವ್

ನೀವು ಗೂಗಲ್ ಫೋಟೋಸ್‌ ಬದಲಿಗೆ ಬೇರೆ ಆಯ್ಕೆಯನ್ನು ನೋಡುವುದಾದರೆ ಮೈಕ್ರೋಸಾಫ್ಟ್‌ ಒನ್‌ಡ್ರೈವ್ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಫೋಟೋ ಸ್ಟೋರೇಜ್‌ಗಾಗಿ ಗ್ಯಾಲರಿ ವೀಕ್ಷಣೆ ಇದೆ. ಅಲ್ಲದೆ ಆಟೋಮ್ಯಾಟಿಕ್‌ ಇಮೇಜ್ ಟ್ಯಾಗಿಂಗ್‌ಗಾಗಿ ಒಂದು ಫೀಚರ್ಸ್‌ ಕೂಡ ಲಭ್ಯವಿದೆ. ಜೊತೆಗೆ ನೀವು ಇತರ ಮೈಕ್ರೋಸಾಫ್ಟ್ ಸೇವೆಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇನ್ನು ಮೈಕ್ರೋಸಾಫ್ಟ್‌ ಒನ್‌ ಡ್ರೈವ್‌ ನಲ್ಲಿ 100GBಸ್ಟೋರೇಜ್‌ ಪ್ಲಾನ್‌ ಪಡೆದಯಲು ತಿಂಗಳಿಗೆ 140 ರೂ. ನೀಡಬೇಕಾಗುತ್ತದೆ. ಅಲ್ಲದೆ 365 ದಿನಗಳ ವೈಯಕ್ತಿಕ ಯೋಜನೆಗೆ ತಿಂಗಳಿಗೆ 489 ರೂ. ನೀಡಬೇಕಾಗುತ್ತದೆ

ಆಪಲ್ ಐಕ್ಲೌಡ್ ಮತ್ತು ಆಪಲ್ ಒನ್

ಆಪಲ್ ಐಕ್ಲೌಡ್ ಮತ್ತು ಆಪಲ್ ಒನ್

ನೀವು ಆಪಲ್ ಎಕೋ ಸಿಸ್ಟಂ ಬಳಸುತ್ತಿದ್ದರೆ, ನೀವು ಎರಡು ಆಯ್ಕೆಗಳನ್ನು ಮಾಡಬೇಕಾಗುತ್ತದೆ. ನೀವು ಐಕ್ಲೌಡ್ ಯೋಜನೆಗಳಿಗಾಗಿ ಅಥವಾ ಆಪಲ್ ಒನ್ ಎಂದು ಕರೆಯಲ್ಪಡುವ ಬಂಡಲ್‌ಗಳ ಚಂದಾದಾರಿಕೆ ಸೇವೆಗಳಿಗೆ ಹೋಗಬಹುದು. ಆಪಲ್ ಒನ್ ನಿಮಗೆ ಐಕ್ಲೌಡ್ ಸಂಗ್ರಹಣೆ ಮತ್ತು ಆಪಲ್ ಆರ್ಕೇಡ್, ಟಿವಿ + ಮತ್ತು ಸಂಗೀತಕ್ಕೆ ಪ್ರವೇಶವನ್ನು ನೀಡುತ್ತದೆ.
ಇದರಲ್ಲಿ ಐಕ್ಲೌಡ್ ಸ್ಟೋರೇಜ್‌ ಪ್ಲ್ಯಾನ್‌ 50GBಗೆ 75 ರೂ, 200GBಗೆ 219 ರೂ ಮತ್ತು 2TB ಶೇಖರಣೆಗೆ 749 ರೂ.ಆಗಲಿದೆ. ಇನ್ನು ಆಪಲ್ ಒನ್ ಪ್ಲಾನ್ ತಿಂಗಳಿಗೆ 195 ರೂ. ಮತ್ತು 50 ಜಿಬಿ ಐಕ್ಲೌಡ್ ಸಂಗ್ರಹವನ್ನು ನೀಡುತ್ತದೆ. ತಿಂಗಳಿಗೆ 365 ರೂ ಯೋಜನೆಯು 200GB ಐಕ್ಲೌಡ್ ಸ್ಟೋರೇಜ್‌ ನೀಡುತ್ತದೆ.

ಅಮೆಜಾನ್ ಫೋಟೋಸ್‌

ಅಮೆಜಾನ್ ಫೋಟೋಸ್‌

ಗೂಗಲ್ ಫೋಟೋಸ್‌ಗೆ ಪರ್ಯಾಯ ಆಯ್ಕೆ ಹುಡುಕುತ್ತಿರುವವರಿಗೆ ಅಮೆಜಾನ್ ಫೋಟೋಸ್‌ ಮತ್ತೊಂದು ಉತ್ತಮ ಆಯ್ಕೆಯಾಗಿದೆ. ಇದು ಎಡಿಟ್‌, ಶೇರ್‌ ಮುಂತಾದ ಫೀಚರ್ಸ್‌ಗಳನ್ನು ಹೊಂದಿದೆ. ಅಲ್ಲದೆ ಬಳಕೆದಾರರಿಗೆ 5 ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡುತ್ತದೆ. ಅಮೆಜಾನ್‌ ಫೋಟೋಸ್‌, ಅಮೆಜಾನ್ ಪ್ರೈಮ್ ಸದಸ್ಯತ್ವದೊಂದಿಗೆ ಸೇರಿಕೊಳ್ಳುತ್ತದೆ. ಇದರ ಅವಿಭಾಜ್ಯ ಸದಸ್ಯರಿಗೆ, 100GB ಸ್ಟೋರೇಜ್‌ಗೆ ತಿಂಗಳಿಗೆ $1.99 (ಸರಿಸುಮಾರು 150 ರೂ) ಖರ್ಚಾಗುತ್ತದೆ.

ಡಿಜಿಬಾಕ್ಸ್

ಡಿಜಿಬಾಕ್ಸ್

ಹೋಂಗ್ರೋನ್ ಕ್ಲೌಡ್ ಸ್ಟೋರೇಜ್ ಪ್ಲಾಟ್‌ಫಾರ್ಮ್, ಡಿಜಿಬಾಕ್ಸ್ 20GB ಸ್ಟೋರೇಜ್‌ ಸ್ಪೇಸ್‌ ಅನ್ನು ಉಚಿತವಾಗಿ ನೀಡುತ್ತದೆ. ಇದು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ನಂತಹ ಫೀಚರ್ಸ್‌ಗಳನ್ನು ಹೊಂದಿದೆ ಮತ್ತು ಜಿಮೇಲ್ ಏಕೀಕರಣವನ್ನು ಸಹ ಬೆಂಬಲಿಸುತ್ತದೆ. ಇನ್ನು ಡಿಜಿಬಾಕ್ಸ್‌ನಲ್ಲಿ 100GB ಶೇಖರಣಾ ಯೋಜನೆಗೆ ತಿಂಗಳಿಗೆ 30 ರೂ., ವಾರ್ಷಿಕ ಯೋಜನೆಯು 5TB ಸಂಗ್ರಹಕ್ಕೆ 360 ರೂ. ಖರ್ಚಾಗಲಿದೆ.

ಡ್ರಾಪ್‌ಬಾಕ್ಸ್

ಡ್ರಾಪ್‌ಬಾಕ್ಸ್

ಡ್ರಾಪ್‌ಬಾಕ್ಸ್ ಫೈಲ್ ಶೇರ್‌ ವೇದಿಕೆಯಾಗಿದೆ. ಇದು ಕ್ಲೌಡ್ ಸ್ಟೋರೇಜ್ ಪ್ಲಾಟ್‌ಫಾರ್ಮ್ ಆಗಿದೆ ಮತ್ತು ಡ್ರಾಪ್‌ಬಾಕ್ಸ್ ಪಾಸ್‌ವರ್ಡ್‌ಗಳು ಮತ್ತು ಡ್ರಾಪ್‌ಬಾಕ್ಸ್ ವರ್ಗಾವಣೆಗಳಂತಹ ಫೀಚರ್ಸ್‌ಗಳನ್ನು ಸಹ ಹೊಂದಿದೆ. ಇದರ ಉಚಿತ ಸಂಗ್ರಹಣೆ ಕೇವಲ 2GBಆಗಿದೆ. ಆದರೆ ಚಂದಾದರಿಕೆಯ ಮೂಲಕ ಹೆಚ್ಚಿನ ಸ್ಟೋರೇಜ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ಇದರ ಪ್ರಯೋಜನಗಳ ಯೋಜನೆ $ 9.99 ರಿಂದ ಪ್ರಾರಂಭವಾಗುತ್ತದೆ (ಸರಿಸುಮಾರು 730 ರೂ.).

Best Mobiles in India

English summary
Google is ending its ‘unlimited’ storage feature for Google Photos app.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+