'ಹಾನರ್ ಪ್ಲೇ' ಸ್ಮಾರ್ಟ್‌ಫೋನ್ ಖರೀದಿಸಲು ಇರುವ 5 ಕಾರಣಗಳು!!
ಭಾರತದ ಮೊಬೈಲ್ ಮಾರುಕಟ್ಟೆಗೆ ವಿಶ್ವದ ಎರಡನೇ ಅತಿ ದೊಡ್ಡ ಮೊಬೈಲ್ ಉತ್ಪಾದಕ ಕಂಪೆನಿ ಹುವಾವೆ 'ಹಾನರ್ ಪ್ಲೇ' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿರುವ ವಿಷಯ ನಿಮಗೆ ತಿಳಿದಿದೆಯೋ ಇಲ್ಲವೋ. ಆದರೆ, ಮಧ್ಯಮವರ್ಗದ ಜನರಿಗೆ ಹೇಳಿ ಮಾಡಿಸಿರುವಂತೆ ತಯಾರಾಗಿರುವ ಈ ಸ್ಮಾರ್ಟ್‌ಪೋನ್ ಈಗ ಭಾರತದಲ್ಲಿ ಹಾಟ್‌ಕೇಕ್‌ನಂತೆ ಬೀಕರಿಯಾಗುತ್ತಿದೆ.
ಹೌದು, ಭಾರತೀಯರ ನಾಡಿಮಿಡಿತವನ್ನು ಈಗ ಅರಿತುಕೊಳ್ಳುತ್ತಿರುವ ಚೀನಾದ ಪ್ರಖ್ಯಾತ ಮೊಬೈಲ್ ಸಂಸ್ಥೆ ಹುವಾವೇ, ಭಾರತದ ಮೊಬೈಲ್ ಮಾರುಕಟ್ಟೆಗೆ ಮತ್ತೊಂದು ಅದ್ಬುತ ಎಂಬಂತಹ 'ಹಾನರ್ ಪ್ಲೇ' ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಅತ್ಯಂತ ಕಡಿಮೆ ಬೆಲೆಗೆ ಅತಿ ಹೆಚ್ಚು ಫೀಚರ್ಸ್ ಮತ್ತು ವಿಶೇಷತೆಗಳನ್ನು ಹೊಂದಿರುವ ಸ್ಮಾರ್ಟ್‌ಪೋನ್ ಇದಾಗಿದೆ.

4GB RAM ಮತ್ತು 64GB ಆಂತರಿಕ ಮೆಮೊರಿ ವೆರಿಯಂಟ್ ಹಾನರ್ ಪ್ಲೇ' ಸ್ಮಾರ್ಟ್‌ಫೋನ್ ಬೆಲೆ 19,999ರೂಪಾಯಿಗಳಿಂದ ಆರಂಭವಾಗಿದ್ದರೆ, 6GB RAM ಮತ್ತು 64GB ಆಂತರಿಕ ಮೆಮೊರಿ ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆ ಕೇವಲ 23,999 ರೂ.ಗಳಾಗಿವೆ. ಹಾಗಾದರೆ, ಹಾನರ್ ಪ್ಲೇ ಫೋನ್ ಖರೀದಿಸಲು ಇರುವ 5 ಕಾರಣಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಸ್ಮಾರ್ಟ್‌ಫೋನ್ ಡಿಸ್‌ಪ್ಲೇ!
ಮಧ್ಯಮ ಬೆಲೆಯಲ್ಲಿ 'ಹಾನರ್ ಪ್ಲೇ' ಸ್ಮಾರ್ಟ್‌ಫೋನ್ ವಿನ್ಯಾಸ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಸಹ ನಾಚಿಸುವಂತಿದೆ. 6.3-ಇಂಚಿನ ಫುಲ್-HD+ (1080x2340 ಪಿಕ್ಸಲ್ಸ್) ಜೊತೆಗೆ 85 ಶೇಕಡಾ NTSC colour gamut ಇರುವ ಡಿಸ್‌ಪ್ಲೇ ಅತ್ಯುತ್ತಮ ಅನುಭವವನ್ನು ನೀಡಲಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಈ ಫೋನ್ ಹೊಂದಿದೆ. ಮಲ್ಟಿಮೀಡಿಯಾ ಮತ್ತು ಗೇಮಿಂಗ್ ಪ್ರಿಯರಿಗೆ ಅತ್ಯುತ್ತಮವಾದ ಒಂದು ಸ್ಮಾರ್ಟ್‌ಪೋನ್ ಇದಾಗಿದೆ.

ಪ್ರೊಸೆಸರ್ ಮತ್ತು ಕಾರ್ಯನಿರ್ವಹಣೆ
ಹುವಾವೆ ಸ್ವತಃ ಅಭಿವೃದ್ದಿಪಡಿಸಿರುವ ಅಕ್ಟಾ-ಕೋರ್-ಹುವಾವೆ HiSilicon Kirin 970 ಸಾಕೆಟ್ ಪ್ರಸ್ತುತ ಇರುವ ಅತ್ಯಂತ ಶಕ್ತಿಯುತ ಪ್ರೊಸೆಸರ್‌ಗಳಲ್ಲಿ ಒಂದಾಗಿದೆ. , Mali-G72 GPU ಜೊತೆಗೆ ಮತ್ತು NPU( ನ್ಯೂಟ್ರಲ್ ಪ್ರೊಸೆಸಿಂಗ್ ಯುನಿಟ್) ಬಿಲ್ಟ್ ಇನ್ ಆದ ಪ್ರೊಸೆಸರ್ ಶಕ್ತಿ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಯ ಹೊಣೆ ಹೊತ್ತಿದೆ. ಬ್ಯಾಟರಿ ಹೀರುವಿಕೆಯನ್ನು ಶೇ. 30 ರಷ್ಟು ಇಳಿಕೆ ಮಾಡಿರುವ ಈ ಪ್ರೊಸೆಸರ್, ಕಾರ್ಯನಿರ್ವಹಣೆಯನ್ನು ಶೇ. 60 ಪರ್ಸೆಂಟ್ ಹೆಚ್ಚಿಸಿದೆ.

ಕ್ಯಾಮೆರಾ ಸಾಮರ್ಥ್ಯ !
'ಹಾನರ್ ಪ್ಲೇ' ಡ್ಯುಯಲ್ ರಿಯರ್ ಕ್ಯಾಮೆರಾ ಡ್ಯುಯಲ್ ಕ್ಯಾಮರಾ ಸೆಟ್‌ಅಪ್ ಅನ್ನು ಹೊಂದಿರುವುದು ಇದರ ವಿಶೇಷತೆಯೇ ಅಲ್ಲ. ಆದರೆ, ಒಂದು ಕ್ಯಾಮೆರಾ 16 ಮೆಗಾಪಿಕ್ಸಲ್ ಪ್ರೈಮರಿ ಲೆನ್ಸ್ f/2.2 ದ್ಯುತಿರಂದ್ರ ಮತ್ತು PDAF ಸಾಮರ್ಥ್ಯದ್ದಾಗಿದ್ದರೆ, ಮತ್ತೊಂದು 2 ಮೆಗಾಪಿಕ್ಸಲ್ ಸೆಂಕೆಂಡರಿ ಲೆನ್ಸ್ ಜೊತೆಗೆ f/2.4 ದ್ಯುತಿರಂದ್ರವನ್ನು ಹೊಂದಿದೆ. ಮುಂಭಾಗದಲ್ಲಿ 16 ಮೆಗಾಪಿಕ್ಸಲ್ ನ ಕ್ಯಾಮರಾವು f/2.0 ದ್ಯುತಿರಂದ್ರವನ್ನು ಹೊಂದಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನದಲ್ಲಿ ಕ್ಯಾಮೆರಾವು ಕಾರ್ಯನಿರ್ವಹಣೆ ನೀಡುವುದು ಇದರ ವಿಶೇಷತೆಗಳಲ್ಲಿ ಒಂದು.

ಫೇಸ್‌ಲಾಕ್ ಮತ್ತು ಬ್ಯಾಟರಿ ಸಾಮರ್ಥ್ಯ!
ಬುದ್ದಿಮತ್ತೆ ತಂತ್ರಜ್ಞಾನದಲ್ಲಿ ಮುಖ ಗುರುತುವಿಸುವಿಕೆ ತಂತ್ರಜ್ಞಾನವನ್ನು ಹೊಂದಿರುವ ಹಾನರ್ ಪ್ಲೇ' ಸ್ಮಾರ್ಟ್‌ಫೋನ್ ಬಳಕೆದಾರರ ನೆಚ್ಚಿನ ಫೀಚರ್ ಸಹ ಆಗಬಹುದಾಗಿದೆ. ಇನ್ನು 3750 mAh ಬ್ಯಾಟರಿ ಶಕ್ತಿಯನ್ನು ಹೊಂದಿರುವ ಸ್ಮಾರ್ಟ್‌ಫೋನ್, ಒಂದೇ ಚಾರ್ಜ್‌ನಲ್ಲಿ ಸಂಪೂರ್ಣ ಒಂದು ದಿನ ಅನಿಯಮಿತ ಬ್ಯಾಟರಿ ಬಳಕೆಯನ್ನು ನೀಡಲಿದೆ. HiSilicon Kirin 970 ಪ್ರೊಸೆಸರ್ ಮತ್ತು ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಣೆ ನೀಡುವ ಸ್ಮಾರ್ಟ್‌ಫೋನಿನಿಂದ ಹೆಚ್ಚು ಬ್ಯಾಟರಿ ಬಾಳಿಕೆಯನ್ನು ನಿರೀಕ್ಷೆ ಮಾಡಬಹುದಾಗಿದೆ.

ಇತರೆ ಏನೆಲ್ಲಾ ಫೀಚರ್ಸ್ ಹೊಂದಿದೆ?
4G VoLTE, ವೈ-ಫೈ 802.11ac, ಬ್ಲೂಟೂತ್ 4.2, ಜಿಪಿಎಸ್, ಮತ್ತು USB ಟೈಪ್-C ಮತ್ತು ಕ್ಸೆಲೋಮೀಟರ್, ಏಂಬಿಯಂಟ್ ಲೈಟ್ ಸೆನ್ಸಾರ್, gyroscope ಮತ್ತು ಪ್ರಾಕ್ಸಿಮಿಟಿ ಸೆನ್ಸರ್ ಗಳನ್ನು ಒಳಗೊಂಡಿರುವ ಹಾನರ್ ಪ್ಲೇ' ಸ್ಮಾರ್ಟ್‌ಫೋನ್ ಎಸ್‌ಡಿ ಕಾರ್ಡ್ ಸಹಾಯದಿಂದ 256 ಜಿಬಿವರೆಗೂ ಮೆಮೊರಿಯನ್ನು ಹಿಗ್ಗಿಸಿಕೊಳ್ಳುವ ಅವಕಾಶವನ್ನು ಹೊಂದಿದೆ. ಇನ್ನು ಮೊದಲೇ ಹೇಳಿದಂತೆ 4GB RAM ಮತ್ತು 64GB ಹಾಗೂ 6GB RAM ಮತ್ತು 64GB ಆಂತರಿಕ ಮೆಮೊರಿಯ ಎರಡು ವೆರಿಯಂಟ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.


Click it and Unblock the Notifications