ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಲಭ್ಯವಿರುವ ಐದು ಅತ್ಯುತ್ತಮ ಆಪ್‌ಗಳು!
ಇತ್ತಿಚೀನ ದಿನಗಳಲ್ಲಿ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ಎಲ್ಲವೂ ಸಾಧ್ಯ ಅನ್ನುವಷ್ಟರ ಮಟ್ಟಿಗೆ ತಂತ್ರಜ್ಞಾನ ದಿನೇ ದಿನೇ ಮುಂದುವರೆಯುತ್ತಿದೆ. ಇದು ಸ್ಮಾರ್ಟ್‌ಫೋನ್ ವಲಯದಲ್ಲೂ ಮುಂದುವರೆಯುತ್ತಿದೆ. ಅಂಗೈ ಅಗಲದ ಸ್ಮಾರ್ಟ್‌ಫೋನ್ ಇಡೀ ಜಗತ್ತನ್ನೇ ತನ ಒಡಲಲ್ಲಿ ತೋರಿಸುವಷ್ಟರ ಮಟ್ಟಿಗೆ ಇಂದು ಪ್ರಗತಿಯನ್ನ ಸಾದಿಸಲಾಗಿದೆ. ಪ್ರತಿಯೊಂದಕ್ಕೂ ವಿಷಯಕ್ಕೂ, ಕ್ಷೇತ್ರಕ್ಕೂ ಸಂಬಂಧಿಸಿದ ಆಪ್‌ಗಳನ್ನ ಅಭಿವೃದ್ದಿ ಪಡಿಸಲಾಗಿದ್ದು, ಎಲ್ಲವೂ ಆಪ್ ಆಧಾರಿತವಾಗುತ್ತಿದೆ.

ಹೌದು, ನೀವು ನಾವೆಲ್ಲಾ ನೋಡಿರುವಂತೆ ಇಂದು ಎಲ್ಲವೂ ಆಪ್ ಆಧಾರಿತವಾಗುತ್ತಿದೆ. ಆಪ್ ಆಧಾರಿತ ಸೇವೆಗಳು, ಮನರಂಜನೆಯತ್ತೆ ಎಲ್ಲರ ಮನಸ್ಸು ಕೂಡ ಹೊರಳುತ್ತಿದೆ. ಇಂತಹ ಸಂಧರ್ಭದಲ್ಲಿ ಸಹಜವಾಗಿಯೇ ಯಾವ್ಯಾವ ಆಪ್‌ಗಳು ಇಂದು ಲಭ್ಯವಿವೆ ಅನ್ನುವ ಕುತೂಹಲ ಇದ್ದೇ ಇರುತ್ತದೆ. ಆದರಲ್ಲೂ ಅತ್ಯುತ್ತಮವಾದ ಆಪ್‌ಗಳ ಬಗ್ಗೆ ಆಗಾಗ ಚರ್ಚೆ ಕುಡ ನಡೆಯುತ್ತಿರುತ್ತದೆ. ಪ್ರಸ್ತುತ ಲಭ್ಯವಿರುವ ಅತ್ಯುತ್ತಮ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಇಲ್ಲಿವೆ, ಇದರ ಬಗೆಗಿನ ಮಾಹಿತಿ ಈ ಲೇಖನದಲ್ಲಿದ ಓದಿ.

ಟಾಸ್ಕರ್
ಇದು ಸ್ಮಾರ್ಟ್‌ಫೋನ್‌ನ ಕಸ್ಟಮ್ ನೋಟಿಫಿಕೇಶನ್‌ಗಳನ್ನ ಕ್ರಿಯೆಟ್ ಮಾಡುವ ಮತ್ತು ನಂತರ ಅವುಗಳನ್ನು ವಿವಿಧ ಸ್ಥಳಗಳಲ್ಲಿ ಬಳಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಟಾಸ್ಕರ್ ಬೆಂಬಲವನ್ನು ಹೊಂದಿರುವ ಅನೇಕ ಅಪ್ಲಿಕೇಶನ್‌ಗಳು ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದ್ದು, ಎನ್‌ಎಫ್‌ಸಿ ಟ್ಯಾಗ್‌ಗಳಿಗಾಗಿ ಅತ್ಯಂತ ಸಂಕೀರ್ಣವಾದ ಆಜ್ಞೆಗಳನ್ನು ರಚಿಸಲು ನೀವು ಟಾಸ್ಕರ್ ಅನ್ನು ಸಹ ಬಳಸಬಹುದು. ಇದು ಅನೇಕ ಅಪ್ಲಿಕೇಶನ್‌ಗಳ ನಡುವೆ, ನಿಮಗೆ ಆಡ್ ಅನ್ನು ಪ್ಲಗ್‌ಇನ್ ಮಾಡುತ್ತದೆ. ಹಾಗೇ ನೋಡುವುದಾದರೆ ಈ ಆಪ್ ಮಾಡದಿರುವ ಕೆಲಸವೇ ಇಲ್ಲ ಎನ್ನಬಹುದು ಅಷ್ಟರ ಮಟ್ಟಿಗೆ ಇದು ಮಲ್ಟಿ ಟಾಸ್ಕ್ ಪೋರ್ಸ್ ಮಾದರಿಯಲ್ಲಿದೆ. ಈ ಆಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಲ್ಲಿ 99ರೂ, ಗಳನ್ನ ಪಾವತಿ ಮಾಡಿ ಪಡೆಯಬೇಕಾಗುತ್ತದೆ.

ಜೆಡ್ಜ್(Zedge)
ಇದು ವಾಲ್‌ಪೇಪರ್‌ಗಳು, ರಿಂಗ್‌ಟೋನ್‌ಗಳು, ಅಧಿಸೂಚನೆ ಆಲರ್ಟ್‌ಮ್ಯೂಸಿಕ್ ಮತ್ತು ಅಲಾರಂ ಟ್ಯೂನ್ ಅಪ್ಲಿಕೇಶನ್ ಆಗಿದೆ. ಇದು ನಿಮ್ಮ ಡಿವೈಸ್‌ನ ಬೇಸಿಕ್ ಪಾರ್ಟ್‌ಗಳನ್ನ ಕಸ್ಟಮೈಸ್ ಮಾಡಲು ಕೆಲವು ಆಯ್ಕೆಗಳನ್ನು ನೀಡುತ್ತದೆ. ಅಲ್ಲದೆ ನಿಮಗೆ ನೆನಪಿನಲ್ಲಿಡಬೇಕಾದ ದಿನಗಳನ್ನ ನೀವು ಒಮ್ಮೆ ನೋಡ್ ಮಾಡಿದರೆ ಆ ದಿನದ ಥೀಮ್ ಅನ್ನು ಮಾಡುತ್ತದೆ. ಅಲ್ಲದೆ ನಿಮಗೆ ಬೇಕಾದ ವಾಲ್‌ಪೇಪರ್‌ಗಳನ್ನ ಇದರಲ್ಲಿ ಆಯ್ಕೆ ಮಾಡಬಹುದಾಗಿದೆ. ಈ ಆಪ್ ಉಚಿತವಾಗಿ ಲಭ್ಯವಾಗಲಿದೆ.

ಬೌನ್ಸರ್
ಇದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿನ ಅತ್ಯುತ್ತಮ ಸೆಕ್ಯೂರಿಟಿ ಆಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ತಾತ್ಕಾಲಿಕ ಪ್ರವೇಶವನ್ನು ಸಹ ನೀಡಬಹುದಾಗಿರುತ್ತದೆ. ಇದು ನಿಮ್ಮ ಸ್ಮಾರ್ಟ್‌ಫೋನ್‌ನ ಪ್ರೈವಸಿ, ಬ್ಯಾಟರಿ ಲೈಫ್, ಮತ್ತು ಇತರೆ ಆಪ್‌ಗಳಿಂದ ರಕ್ಷಣೆ ನೀಡುತ್ತದೆ. ಈ ಆಪ್ಲಿಕೇಶನ್ ಅನ್ನು ಒಮ್ಮೆ ತೆರೆದು ಇತರೆ ಆಪ್‌ಗೆ ಎಂಟ್ರಿ ಕೊಟ್ಟರೆ ನಂತರ ಅದನ್ನ ಕ್ಲೋಸ್ ಮಾಡುವ ತನಕ ಇತರೆ ಆಪ್‌ಗಳ ನೋಟಿಫಿಕೇಶನ್ ನಿಮಗೆ ಬರುವುದಿಲ್ಲ. ಬೇಕಿದ್ದರೆ ಯಾವುದೇ ಅನುಮತಿ ಇಲ್ಲದೆಯೂ ಸೊಶೀಯಲ್ ಮೀಡಿಯಾ ಅಪ್ಲಿಕೇಶನ್‌ನ ಎಲ್ಲಾ ಫೀಚರ್ಸ್‌ಗಳನ್ನು ಬಳಸಲು ಇದು ಉತ್ತಮ ಆಪ್ ಆಗಿದೆ.

1ವೆದರ್
ಯಾವುದೇ ಸ್ಮಾರ್ಟ್‌ಫೋನ್ ಇರಲಿ ಅದರಲ್ಲಿ ವಾತಾವರಣದ ಹವಾಮಾನದ ಬಗ್ಗೆ ಮಾಹಿತಿ ನೀಡುವ ಆಪ್ಲಿಕೇಶನ್ ಇದ್ದೇ ಇರುತ್ತದೆ. ಇದು ಪ್ರಸ್ತುತ ಹವಾಮಾನ, 12 ವಾರಗಳವರೆಗೆ ಬದಲಾಗಬಹುದಾದ ವಾತಾವರಣದ ಮುನ್ಸೂಚನೆ, ರೇಡಾರ್ ಮತ್ತು ಇತರ ಅಂಕಿಅಂಶಗಳನ್ನು ತೋರಿಸುವ ಸರಳ, ಪುಟ ವಿನ್ಯಾಸವನ್ನು ಹೊಂದಿದೆ. ಈ ಅಪ್ಲಿಕೇಶನ್ ತೆರೆದಾಗ ಬಳಕೆದಾರರು ಹವಾಮಾನಕ್ಕೆ ಸಂಬಂಧಿಸಿದ ಸಂಗತಿಗಳ ಆವೃತ್ತಿಯನ್ನ ತಿಳಿಯಬಹುದಾಗಿದೆ. ಇನ್ನು ಹವಾಮಾನ ಅಪ್ಲಿಕೇಶನ್‌ಗಳಲ್ಲಿ ಡಾರ್ಕ್ ಸ್ಕೈ, ವೆದರ್ ಅಂಡರ್‌ಗ್ರೌಂಡ್ ಮತ್ತು ಟುಡೆ ವೆದರ್ ಎನ್ನುವ ಫೀಚರ್ಸ್‌ಗಳನ್ನ ಸಹ ನೀಡಲಾಗಿರುತ್ತದೆ. ಇನ್ನು ಆಪ್ಲಿಕೇಶನ್ ಉಚಿತವಾಗಿ ಲಭ್ಯವಿದೆ.

ಗೂಗಲ್ ಡ್ರೈವ್
ಗೂಗಲ್ ಡ್ರೈವ್ ಇದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ ಕ್ಲೌಡ್ ಸ್ಟೋರೇಜ್ ಆಪ್ ಆಗಿದೆ. ಇದರಲ್ಲಿ ಬಳಕೆದಾರರು ಸೈನ್ ಅಪ್ ಮಾಡಿದ ನಂತರ ಶಾಶ್ವತವಾಗಿ 15GB ಸಂಗ್ರಹ ಸಾಮರ್ಥ್ಯವನ್ಉ ಪಡೆಯುತ್ತಾರೆ. ಅಗತ್ಯವಿದ್ದರೆ ಇನ್ನು ಹೆಚ್ಚಿನ ಸ್ಟೋರೇಜ್ ಸಾಮರ್ಥ್ಯವನ್ನ ಖರೀದಿಸಬಹುದಾಗಿದೆ. ಇನ್ನು ಈ ಆಪ್ಲಿಕೇಶನ್‌ನಲ್ಲಿ ಗೂಗಲ್ ಡಾಕ್ಸ್, ಗೂಗಲ್ ಶೀಟ್‌ಗಳು, ಗೂಗಲ್ ಸ್ಲೈಡ್‌ಗಳು, ಗೂಗಲ್ ಫೋಟೋಗಳು, ಜಿಮೇಲ್, ಗೂಗಲ್ ಕ್ಯಾಲೆಂಡರ್ ಮತ್ತು ಗೂಗಲ್ ಕೀಪ್ ಕೂಡ ಸೇರಿವೆ. ಈ ಅಪ್ಲಿಕೇಶನ್‌ನಲ್ಲಿ ನೀವು ಮೈಕ್ರೋಸಾಫ್ಟ್ ಆಫೀಸ್ ಡಾಕ್ಯುಮೆಂಟ್, ಮೈಕ್ರೋಸಾಫ್ಟ್ ಆಫೀಸ್ ಒನ್‌ಡ್ರೈವ್ ಮತ್ತು ಇತರೆ ದಾಖಲಾತಿಗಳನ್ನು ಸಹ ಸ್ಟೋರ್ ಮಾಡಬಹುದಾಗಿದೆ. ಇದು ಕೂಡ ಉಚಿತವಾಗಿ ದೊರೆಯುವ ಆಪ್ ಆಗಿದೆ.

ಗೂಗಲ್ ಮ್ಯೂಸಿಕ್
ಗೂಗಲ್‌ನ ಅಧಿಕೃತ ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆ ಇದಾಗಿದ್ದು, ಇದು ವಿಶಾಲವಾದ ಮ್ಯೂಸಿಕ್ ಲೈಬ್ರರಿಯನ್ನು ಒದಗಿಸುತ್ತದೆ. ಅಲ್ಲದೆ ಬಳಕೆದಾರರು ಆನ್‌ಲೈನ್ ಮೂಲಕ ಮ್ಯೂಸಿಕ್ ಡೌನ್‌ಲೋಡ್‌ಗಾಗಿ ಸ್ಟೋರೇಜ್ ಮಾಡಲು ಅವಕಾಶವಿದ್ದು. ತಮ್ಮದೇ ಆದ 50,000 ಹಾಡುಗಳನ್ನು ಅಪ್‌ಲೋಡ್ ಮಾಡಲು ಸಹ ಅವಕಾಶ ನೀಡುತ್ತದೆ. ಅಷ್ಟೇ ಅಲ್ಲ ಈಗಾಗ್ಲೆ ನಿಮ್ಮಲ್ಲಿ ಲಭ್ಯವಿರುವ MP3 ಅನ್ನು ಗೂಗಲ್ ಪ್ಲೇ ಮ್ಯೂಸಿಕ್‌ಗೆ ಅಪ್‌ಲೋಡ್ ಮಾಡಬಹುದಾಗಿದೆ. ಮ್ಯೂಸಿಕ್ ಆನಂದಿಸಲು ಉತ್ತಮ ಆಪ್ ಆಗಿದ್ದು, ಇದು ಸ್ಪಾಟಿಫೈ ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆಗೆ ಪೈಪೋಟಿ ನೀಡುತ್ತಿದೆ.


Click it and Unblock the Notifications








