ಖಾಸಗಿ ಫೋಟೋ ಮತ್ತು ವೀಡಿಯೊಗಳನ್ನು ಹೈಡ್‌ ಮಾಡುವ 5 ಅತ್ಯುತ್ತಮ ಅಪ್ಲಿಕೇಶನ್‌ಗಳು?

|

ಸಾಮಾನ್ಯವಾಗಿ ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ನಿಮ್ಮ ಫೋಟೋ, ವೀಡಿಯೋಗಳನ್ನ ಸ್ಟೋರೇಜ್‌ ಮಾಡಿ ಇಟ್ಟುಕೊಂಡಿರುತ್ತಿರಿ. ಇವುಗಳಲ್ಲಿ ಕೆಲವು ಬೇರೆಯವರು ನೋಡಲು ಬಯಸದ ಫೋಟೋಗಳನ್ನು ಸಹ ನೀವು ಇಟ್ಟುಕೊಂಡಿರುತ್ತೀರಿ. ಇಂತಹ ಸನ್ನಿವೇಶದಲ್ಲಿ ನಿಮ್ಮ ಪ್ರೀತಿ ಪಾತ್ರರು, ನಿಮ್ಮ ಸ್ಮಾರ್ಟ್‌ಫೋನ್‌ ಪಡೆದು ಆ ಫೋಟೋಗಳನ್ನ ನೋಡಿದರೆ ನಿಮಗೆ ಆಗುವ ಕಸಿವಿಸಿ ಅಷ್ಟಿಷ್ಟಲ್ಲ. ಆದರೆ ನಿಮಗೆ ಖಾಸಗಿ ಎನಿಸುವ ಫೋಟೋಗಳು ಹಾಗೂ ವೀಡಿಯೋಗಳನ್ನ ಬೇರೆಯವರು ತೆರೆಯದಂತೆ, ಹಾಗೂ ಪ್ರತ್ಯೇಕವಾಗಿ ಸ್ಟೋರೇಜ್‌ ಮಾಡುವುದಕ್ಕೆ ಕೆಲವು ಆಪ್‌ಗಳಿವೆ.

ಫೋಟೋಗಳು

ಹೌದು, ನೀವು ಖಾಸಗಿಯಾಗಿಡಲು ಬಯಸಬಹುದಾದ ಬಹುಸಂಖ್ಯೆಯ ಫೋಟೋಗಳು ಮತ್ತು ವೀಡಿಯೊಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೆರೆಹಿಡಿದಿರುತ್ತೀರಿ. ಆದರೆ, ನಿಮ್ಮ ಫೋನ್ ಆಕಸ್ಮಿಕವಾಗಿ ಇನ್ನೊಬ್ಬರ ಕೈಗೆ ಸಿಕ್ಕಾಗ, ಅಥವಾ ಸ್ನೇಹಿತರು ನಿಮ್ಮ ಗ್ಯಾಲರಿ ಚೆಕ್‌ ಮಾಡಿದಾಗ ನಿಮಗೆ ಬೇಸರವಾಗಬಹುದು. ಹಾಗಂತ ಚಿಂತಿಸಬೇಕಾದ ಅಗತ್ಯವಿಲ್ಲ, ಏಕೆಂದರೆ ಸ್ಮಾರ್ಟ್‌ಫೋನ್‌ನಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಸಿಕ್ರೆಟ್‌ ಆಗಿ ಹೈಡ್‌ ಮಾಡುವ ಹಲವಾರು ಉತ್ತಮ ಅಪ್ಲಿಕೇಶನ್‌ಗಳಿವೆ. ಅಂತಹ ಐದು ಅತ್ಯುತ್ತಮ ಅಪ್ಲಿಕೇಶನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

Hide Pictures & Videos - Vaulty

Hide Pictures & Videos - Vaulty

ವಾಲ್ಟಿ ಅತ್ಯಂತ ವಿಶ್ವಾಸಾರ್ಹ ಫೋಟೋ / ವಿಡಿಯೋ ಮರೆಮಾಚುವ ಅಪ್ಲಿಕೇಶನ್‌ ಆಗಿದೆ. ಈ ಅಪ್ಲಿಕೇಶನ್‌ನಲ್ಲಿ ಗ್ಯಾಲರಿಯಿಂದ ಮರೆಮಾಡಲು ಬಯಸುವ ಮೀಡಿಯಾ ಫೈಲ್‌ಗಳನ್ನು ಆಯ್ಕೆ ಮಾಡಿ ಮತ್ತು ಅದನ್ನು ಪಾಸ್‌ವರ್ಡ್‌ನಿಂದ ಪ್ರೊಟೆಕ್ಟ್‌ ಮಾಡಬಹುದು. ಇನ್ನು ಈ ಅಪ್ಲಿಕೇಶನ್‌ ಪ್ರಮುಖ ಅಂಶವೆಂದರೆ ಇದು ಒಳಪ್ರವೇಶಿಸುವವರ "ಮಗ್‌ಶಾಟ್‌ಗಳನ್ನು" ಸೆರೆಹಿಡಿಯುತ್ತದೆ, ಬೇರೆ ಯಾರೇ ನಿಮ್ಮ ವಾಲ್ಟ್ ಅನ್ನು ಪ್ರವೇಶಿಸಲು ಪ್ರಯತ್ನಿಸುದರೇ ಅವರು ವಿಫಲರಾಗುತ್ತಾರೆ. ಜೊತೆಗೆ ನೀವು ಅಪ್ಲಿಕೇಶನ್ ಅನ್ನು ಅನ್ಲಾಕ್ ಮಾಡಿದ ಕ್ಷಣದಲ್ಲಿ ನಿಮ್ಮ ಖಾಸಗಿ ಜಾಗದಲ್ಲಿ ಬೇರೆ ಯಾರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರು ಅದು ನಿಮಗೆ ತಕ್ಷಣ ತಿಳಿಯುತ್ತದೆ. ಇನ್ನು ಈ ಅಪ್ಲಿಕೇಶನ್‌ ನಲ್ಲಿ ಪ್ರತ್ಯೇಕ ಪಾಸ್‌ವರ್ಡ್‌ಗಳೊಂದಿಗೆ ಅನೇಕ ಕಮಾನುಗಳನ್ನು ರಚಿಸುವ ಕಾರ್ಯವನ್ನು ನೀವು ಪಡೆಯುತ್ತೀರಿ, ಪ್ರತಿಯೊಂದರಲ್ಲೂ ವಿಭಿನ್ನ ರೀತಿಯ ಫೋಟೋಗಳು ಅಥವಾ ವೀಡಿಯೊಗಳನ್ನು ಸಂಗ್ರಹಿಸಬಹುದು.

Calculator by FishingNet

Calculator by FishingNet

Calculator by FishingNet ಅಪ್ಲಿಕೇಶನ್‌ ಕೂಡ ನಿಮ್ಮ ಖಾಸಗಿ ಫೋಟೋಗಳನ್ನ ಹೈಡ್‌ ಮಾಡುವ ಅಪ್ಲಿಕೇಶನ್‌ ಆಗಿದೆ. ಇದು ನೋಡುವುದಕ್ಕೆ ಕ್ಯಾಲ್ಕುಲೇಟರ್ ಅಪ್ಲಿಕೇಶನ್‌ನಂತೆ ಕಾರ್ಯನಿರ್ವಹಿಸುತ್ತದೆ. ಆದರೆ ಈ ಅಪ್ಲಿಕೇಶನ್‌ನ ಒಳಭಾಗದಲ್ಲಿ ಸುರಕ್ಷಿತ ವಾಲ್ಟ್ ಅನ್ನು ಮರೆಮಾಡಲಾಗಿದೆ. ಇದರಲ್ಲಿ ಸಿಕ್ರಿಟ್‌ ವಾಲ್ಟ್ ತೆರೆಯಲು "=" ಕೀಲಿಯನ್ನು ಟ್ರಾಪ್‌ ಮಾಡಬೇಕಿದೆ. ನಂತರ ನೀವು ನಿಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಮರೆಮಾಡಬಹುದಾಗಿದೆ. ಅದನ್ನು ಪ್ರೊಟೆಕ್ಟ್‌ ಮಾಡಲು ನೀವು ಕ್ಯಾಲ್ಕುಲೇಟರ್‌ನಲ್ಲಿ ಪಿನ್ ನಂಬರ್‌ ಅನ್ನು ಸೆಟ್‌ ಮಾಡಬಹುದಾಗಿದೆ.

Private Photo Vault

Private Photo Vault

ಪ್ರೈವೆಟ್‌ ಫೋಟೋ ವಾಲ್ಟ್ ಅಪ್ಲಿಕೇಶನ್‌ ಮೂಲಕ ನಿಮ್ಮ ಇಮೇಜ್‌ಗಳು ಮತ್ತು ವಿಐಡಿಗಳನ್ನು ಸುರಕ್ಷಿತವಾಗಿ ಮರೆಮಾಡಬಹುದಾಗಿದೆ. ನಿಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ಪಾಸ್‌ವರ್ಡ್ ಅಗತ್ಯವಿರುವುದರಿಂದ ಬೇರೆ ಯಾರೂ ಕೂಡ ಇದನ್ನು ವೀಕ್ಷಿಸಲು ಆಗದಂತೆ ಮಾಡಲಿದೆ. ಇದು ಕಂಪ್ಲಿಟ್‌ ಪಾಸ್‌ವರ್ಡ್‌ ಆಧಾರಿತ ಅಪ್ಲಿಕೇಶನ್ ಆಗಿದ್ದು, ವೈಯಕ್ತಿಕ ಫೋಟೋ ಆಲ್ಬಮ್‌ಗಳನ್ನು ರಕ್ಷಿಸಲು ಖಾಸಗಿ ಫೋಟೋ ವಾಲ್ಟ್ ನಿಮಗೆ ಅನುಮತಿಸುತ್ತದೆ. ಅಲ್ಲದೆ ಇದರಲ್ಲಿ ನೀವು ನಿಮ್ಮದೇ ಆದ ಸ್ವಂತ ವೈಯಕ್ತಿಕ ಫೋಟೋ ಲಾಕರ್ ಅನ್ನು ಸಹ ಕ್ರಿಯೆಟ್‌ ಮಾಡಿಕೊಳ್ಳಬಹುದಾಗಿದೆ. ಇನ್ನು ಈ ಅಪ್ಲಿಕೇಶನ್‌ ಅಲ್ಲಿ ನಿಮ್ಮ ಅಕೌಂಟ್‌ ಅನ್ನು ಮೊದಲು ಕ್ರಿಯೆಟ್‌ ಮಾಡಬೇಕಿದ್ದು, ಪಿನ್‌ ಸೆಟ್‌ ಮಾಡಬೇಕಿರುತ್ತದೆ. ನಂತರ ನಿಮಗಾಗಿ ಕ್ರಿಯೆಟ್‌ ಮಾಡಿರುವ ಫೋಟೋ ಆಲ್ಬಮ್‌ಗೆ ಹೋಗಿ ನೀವು ಫೋಟೋ ಹೈಡ್‌ ಮಾಡಲು ಪ್ಲಸ್ ಬಟನ್ ಒತ್ತಿರಿ. ಈ ಫೋಟೋಗಳನ್ನು ನಿಮ್ಮ ಗ್ಯಾಲರಿಯಿಂದ ತೆಗೆದುಹಾಕಲಾಗುತ್ತದೆ ಮತ್ತು ಖಾಸಗಿ ಫೋಟೋ ವಾಲ್ಟ್‌ಗೆ ಲಾಕ್ ಮಾಡಲಾಗುತ್ತದೆ.

Secret Photo Album

Secret Photo Album

ಇನ್ನು ನಿಮ್ಮ ಖಾಸಗಿ ಫೋಟೋಗಳು, ಇಲ್ಲವೇ ನೀವು ನೋಡಲು ಬಯಸುವ ಆ ವೀಡಿಯೋಗಳನ್ನು ಸಹ ಇದರಲ್ಲಿ ಸ್ಟೋರೇಜ್‌ ಮಾಡಬಹುದಾಗಿದ್ದು, ಬೇರೆಯವರು ಇದನ್ನು ಪ್ರವೇಶಿಸಲು ಆಗುವುದಿಲ್ಲ. ಏಕೆಂದರೆ ಈ ಅಪ್ಲಿಕೇಶನ್‌ ಕೂಡ ಪಾಸ್ವರ್ಡ್ ಪ್ರೊಟೆಕ್ಷನ್‌ ಅನ್ನು ನೀಡಲಿದೆ. ಇದು ಆಪ್‌ಸ್ಟೋರ್‌ನಲ್ಲಿ ವೇಗವಾಗಿ ಬೆಳೆಯುತ್ತಿರುವ ಖಾಸಗಿ ಫೋಟೋ ಸಂಗ್ರಹಣೆ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇನ್ನು ನೀವು ನಿಮ್ಮ ವೈಯಕ್ತಿಕ ವೀಡಿಯೊಗಳು ಮತ್ತು ಫೋಟೋ ಆಲ್ಬಮ್‌ಗಳನ್ನು ರಕ್ಷಿಸಲು ಪಾಸ್‌ವರ್ಡ್ ಸಂರಕ್ಷಿತ ಭದ್ರತಾ ವ್ಯವಸ್ಥೆಯನ್ನು ನೀಡಲಿದೆ.

LockMyPix protects your privacy!

LockMyPix protects your privacy!

ನಿಮ್ಮ ಖಾಸಗಿ ಫೋಟೋ ವಾಲ್ಟ್ ಮತ್ತು ವೀಡಿಯೊ ವಾಲ್ಟ್‌ ಅನ್ನು ಲಾಕ್‌ಮೈಪಿಕ್ಸ್‌ ಅಪ್ಲಿಕೇಶನ್‌ನಲ್ಲಿ ಹೈಡ್‌ ಮಾಡಬಹುದಾಗಿದೆ. ಈ ಅಪ್ಲಿಕೇಶನ್‌ನಲ್ಲಿ ನೀವು ಯಾವುದೇ ಮಾದರಿಯ ಖಾಸಗಿ ವಿಡಿಯೋಗಳನ್ನು ಎಇಎಸ್ ಎನ್‌ಕ್ರಿಪ್ಶನ್‌ನೊಂದಿಗೆ ವೈಯಕ್ತಿಕ ಫೋಟೋಗಳು ಮತ್ತು ವೀಡಿಯೊಗಳನ್ನು ಎನ್‌ಕ್ರಿಪ್ಟ್ ಮಾಡಿ ಪ್ರೊಟೆಕ್ಟ್‌ ಮಾಡಬಹುದಾಗಿದೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬೇರೆಯವರು ಯಾವುದನ್ನು ನೊಡುತ್ತಾರೆ ಎಂಬುದರ ಸಂಪೂರ್ಣ ನಿಯಂತ್ರಣವನ್ನು ಪಡೆಯುವ ಪ್ರಬಲ ಅಪ್ಲಿಕೇಶನ್ ಲಾಕ್‌ಮೈಪಿಕ್ಸ್ ಆಗಿದೆ. ಇನ್ನು ಈ ಅಪ್ಲಿಕೇಶನ್‌ ಅನ್ನು ಪಿನ್, ಫೇಸ್, ಫಿಂಗರ್‌ಪ್ರಿಂಟ್, ಪಾಸ್‌ವರ್ಡ್ ಅಥವಾ ಪ್ಯಾಟರ್ನ್‌ನೊಂದಿಗೆ ಲಾಗಿನ್ ಮಾಡಿ, ಹೈಡನ್‌ ಮಾಡಬಹುದಾಗಿದೆ.

Best Mobiles in India

English summary
We capture a multitude of photos and videos, which you may want to keep private.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X