ಮಾರುಕಟ್ಟೆಯಲ್ಲಿ ಲಭ್ಯವಿರುವ 5 ಅತ್ಯುತ್ತಮ ಡ್ಯುಯೆಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನ್‌!

|

ಟೆಕ್‌ವಲಯದಲ್ಲಿ ಸಾಕಷ್ಟು ವಿಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿವೆ. ವಿವಿಧ ಕಂಪೆನಿಗಳ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಗ್ರಾಹಕರ ಕೈ ಸೇರಿವೆ. ಅಷ್ಟೇ ಅಲ್ಲ ಪ್ರತಿನಿತ್ಯವೂ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡುತ್ತಲೇ ಇರುತ್ತವೆ. ಇನ್ನು ಕೆಲವು ಮಾದರಿಯ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆಯನ್ನ ಹುಟ್ಟುಹಾಕಿರುತ್ತವೆ. ಇನ್ನು ಟೆಕ್ನಾಲಜಿ ಮುಂದುವರೆದಂತೆ ಸಾಕಷ್ಟು ವಿಶೇಷ ಸ್ಮಾರ್ಟ್‌ಫೋನ್‌ಗಳು ಕೂಡ ಮಾರುಕಟ್ಟೆಗೆ ಎಂಟ್ರಿ ನೀಡಲು ಪ್ರಾರಂಭಿಸಿವೆ.

ಸ್ಮಾರ್ಟ್‌ಫೋನ್‌

ಹೌದು, ಟೆಕ್‌ವಲಯದಲ್ಲಿ ಹಲವು ಕಂಪೆನಿಗಳು ತಮ್ಮ ವಿಶೇಷ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿವೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಸ್ಮಾರ್ಟ್‌ಫೋನ್‌ ವಲಯದ ವಿಸ್ಮಯ ಅಂತಾನೇ ಕರೆಯುವ ಡ್ಯುಯೆಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ಗಳು ಕೂಡ ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಾಗೂ ಮಾರುಕಟ್ಟೆಗೆ ಎಂಟ್ರಿ ನೀಡಲು ಸಿದ್ದತೆ ನಡೆಸಿರುವ ಐದು ಅತ್ಯುತ್ತಮ ಡ್ಯುಯೆಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಸಿಕೊಡ್ತೀವಿ ಈ ಲೇಖನವನ್ನ ಓದಿರಿ.

ಸ್ಯಾಮ್ಸಂಗ್ ಗ್ಯಾಲಕ್ಸಿ ಫೋಲ್ಡ್‌

ಸ್ಯಾಮ್ಸಂಗ್ ಗ್ಯಾಲಕ್ಸಿ ಫೋಲ್ಡ್‌

ಭಾರತದಲ್ಲಿ ನೀವು ಖರೀದಿಸಬಹುದಾದ ಏಕೈಕ ಮಡಿಸಬಹುದಾದ ಫೋನ್ ಇದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 1,536 x 2,152 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 7.3-ಇಂಚಿನ QXGA+ ಡೈನಾಮಿಕ್ ಅಮೋಲೆಡ್ ಡಿಸ್‌ಪ್ಲೇಯನ್ನ ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 4.2: 3 ರಚನೆಯ ಅನುಪಾತವನ್ನು ಹೊಂದಿದೆ. ಜೊತೆಗೆ ಇನ್ಫಿನಿಟಿ ಫ್ಲೆಕ್ಸ್ ಡಿಸ್‌ಪ್ಲೇ ಅರ್ಧದಷ್ಟು ಮಡಚಿಕೊಳ್ಳುತ್ತದೆ ಮತ್ತು ಮೇಲ್ಮೈಯಲ್ಲಿ 4.58-ಇಂಚಿನ ಸ್ಕ್ರೀನ್‌ ಅನ್ನು ಸಹ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್‌ ಹೊಂದಿದ್ದು,ಆಂಡ್ರಾಯ್ಡ್‌ 9 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ 12GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹಾಗೂ ಡ್ಯುಯೆಲ್‌ ಸೆಲ್ಫಿ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್

ಇನ್ನು ಗ್ಯಾಲಕ್ಸಿ ಫೋಲ್ಡ್‌ ಡ್ಯುಯೆಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಯಶಸ್ಸಿನ ನಂತರ ಮಾರುಕಟ್ಟೆಗೆ ಶೀಘ್ರದಲ್ಲೇ ತನ್ನ ಎರಡನೇ ಮಡಚಬಹುದಾದ ಫೋನ್ ಗ್ಯಾಲಕ್ಸಿ Z ಫ್ಲಿಪ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಮೋಟೋ ರೇಜರ್ ವಿನ್ಯಾಸವನ್ನು ಹೊಂದಿದೆ. ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಫೋನ್‌ 1500 ಚಾರ್ಜಿಂಗ್ ಹೊಂದಿರುವ 3300mAh ಬ್ಯಾಟರಿಯನ್ನು ಹೊಂದಿದೆ ಮತ್ತು ಒಮ್ಮೆ ಮಡಿಸಿದ ನಂತರ ಸಾಕಷ್ಟು ಸೂಕ್ಷ್ಮವಾಗಿರುತ್ತದೆ.

ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುಯೊ

ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುಯೊ

ಇನ್ನು ಸಾಪ್ಟವೇರ್‌ ಕ್ಷೇತ್ರದ ದಿಗ್ಗಜ ಮೈಕ್ರೋಸಾಫ್ಟ್ ಕೂಡ ತನ್ನ ಮೈಕ್ರೋಸಾಫ್ಟ್‌ ಸರ್ಫೇಸ್ ಡ್ಯುಯೊ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿದೆ. ಇದು ಮಡಿಸಬಹುದಾದ ಡಿಸ್‌ಪ್ಲೇಯನ್ನು ಹೊಂದಿಲ್ಲ. ಆದರೆ 360 ಡಿಗ್ರಿಗಳನ್ನು ತಿರುಗಿಸುವ ಪೇಟೆಂಟ್ ಮತ್ತು ಸ್ಲಿಮ್ ಹಿಂಜ್ನ ಎರಡೂ ಬದಿಯಲ್ಲಿ ಎರಡು ವಿಭಿನ್ನ ಪರದೆಗಳನ್ನು ಒಟ್ಟುಗೂಡಿಸುತ್ತದೆ. ಏಕಕಾಲದಲ್ಲಿ ಎರಡು ವಿಭಿನ್ನ ಪರದೆಗಳಲ್ಲಿ ಮುಕ್ತವಾಗಿ ಮಲ್ಟಿ ಟಾಸ್ಕ್‌ ಅನ್ನು ಮಾಡಬಹುದಾಗಿದೆ. ಇನ್ನು ಸರ್ಫೇಸ್ ಡ್ಯುಯೊ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 ಪ್ರೊಸೆಸರ್‌ ಅನ್ನು ಹೊಂದಿದ್ದು, ಇದು ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಮೋಟೋ ರೇಜರ್ 2019

ಮೋಟೋ ರೇಜರ್ 2019

ಇನ್ನು ಮೋಟೋ ರೇಜರ್‌ ಸ್ಮಾರ್ಟ್‌ಫೋನ್‌ 21: 9 ರಚನೆಯ ಅನುಪಾತ ಹೊಂದಿರುವ 6.2-ಇಂಚಿನ ಲಂಬ ಫ್ಲಿಪ್-ವ್ಯೂ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯ ಮೇಲ್ಭಾಗದಲ್ಲಿ ಸೆಲ್ಫಿ ಕ್ಯಾಮೆರಾ ವನ್ನು ನೀಡಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಅನ್ನು ಮಡಿಸಿದಾಗ 2.7-ಇಂಚಿನ ಕವರ್ ಡಿಸ್‌ಪ್ಲೇ ಇನ್ಸಟಾಂಟ್‌-ವೀಕ್ಷಣೆ ಸ್ಕ್ರೀನ್‌ ಅನ್ನು ನೀಡಲಿದೆ. ಇದರಲ್ಲಿ ಅಧಿಸೂಚನೆಗಳನ್ನು ನೋಡುವುದು, ಮೊದಲೇ ತ್ವರಿತ ಪ್ರತ್ಯುತ್ತರಗಳನ್ನು ಕಳುಹಿಸುವುದು, ಮ್ಯೂಸಿಕ್‌ ಪ್ಲೇಬ್ಯಾಕ್ ಅನ್ನು ನಿಯಂತ್ರಿಸುವುದು ಇತ್ಯಾದಿಗಳಿಗೆ ಇದನ್ನು ಬಳಸಲಾಗುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ 2510mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ನೀಡಲಾಗಿದ್ದು, 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ಹುವಾವೇ ಮೇಟ್ x

ಹುವಾವೇ ಮೇಟ್ x

ಇನ್ನು ಹುವಾವೇ ಮೇಟ್ x ಸ್ಮಾರ್ಟ್‌ಫೋನ್‌ 6.6-ಇಂಚಿನ ಫುಲ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದರಲ್ಲಿ 5.4 ಎಂಎಂ ತೆಳುವಾದ, ಎಂಟು ಇಂಚಿನ ಟ್ಯಾಬ್ಲೆಟ್ ಆಗಿ ಪರಿವರ್ತಿಸಲು ತೆರೆದುಕೊಳ್ಳುತ್ತದೆ, ಈ ಸ್ಮಾರ್ಟ್‌ಫೋನ್ ಮೋಡ್‌ನಲ್ಲಿ ವೀಕ್ಷಣೆ ಪ್ರದೇಶವನ್ನು ದ್ವಿಗುಣಗೊಳಿಸುತ್ತದೆ. ಹುವಾವೇ ಇದನ್ನು ಫಾಲ್ಕನ್ ವಿಂಗ್ ಮೆಕ್ಯಾನಿಕಲ್ ಹಿಂಜ್ ಎಂದು ಕರೆಯುತ್ತದೆ.ಅಲ್ಲದೆ ಇದು ಎರಡು ಬ್ಯಾಟರಿಯನ್ನು ಹೊಂದಿದ್ದು, ಒಟ್ಟು 4500mAh ಸಾಮರ್ಥ್ಯವನ್ನು 55W HUAWEI ಸೂಪರ್‌ಚಾರ್ಜ್ ಬೆಂಬಲದೊಂದಿಗೆ ಸಂಯೋಜಿಸುತ್ತದೆ. ಅಲ್ಲದೆ ಇದು ಕಿಲೋನ್ 980 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಬಲಾಂಗ್ 5000 5G ಮೋಡೆಮ್ ಅನ್ನು ಸಹ ಒಳಗೊಂಡಿದೆ.

Best Mobiles in India

English summary
As smartphone tech seeks new solutions to accommodate bigger and better screens, the foldable smartphone became an inevitable answer.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X