Just In
Don't Miss
- News
"ಮೂಡ"ಕ್ಕೆ ಸುಳ್ಳು ಮಾಹಿತಿ ನೀಡಿ ಸರ್ಕಾರಿ ನೌಕರ ಪಡೆದಿರುವ ಸೈಟುಗಳೆಷ್ಟು ಗೊತ್ತೆ?
- Automobiles
ಆಟೋ ಮಾರುಕಟ್ಟೆ ಕುಸಿತದ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ
- Education
UPSC: 30 ಹುದ್ದೆಗಳು ಖಾಲಿ ಇವೆ…. ಜ.2ರೊಳಗೆ ಅರ್ಜಿ ಹಾಕಿ
- Lifestyle
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
- Sports
ಅಂಡರ್ಟೇಕರ್ vs ಬ್ರಾಕ್ ಲೆಸ್ನರ್, ರೋಮಾಂಚನಕಾರಿ ಕಾಳಗ: ವೀಡಿಯೋ
- Finance
ಚಿನ್ನದ ಮೇಲೆ ಹೂಡಿಕೆ ಮಾಡಲು ಬೊಂಬಾಟ್ ಐಡಿಯಾಗಳು
- Movies
ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಸ್ಮಾರ್ಟ್‌ಫೋನ್ ಕುರಿತ ಸತ್ಯಗಳು ಬಯಲು
ಸ್ಮಾರ್ಟ್‌ಫೋನ್‌ಗಳನ್ನು ಶರ್ಟ್ ಜೇಬಿನಲ್ಲಿ ಇಟ್ಟುಕೊಂಡ್ರೆ ಹೃದಯಕ್ಕೆ ತೊಂದರೆ, ಮಲಗುವ ವೇಳೆಯಲ್ಲಿ ತಲೆಪಕ್ಕದಲ್ಲಿ ಇರಿಸಿದರೆ ತಲೆಗೆ ತೊಂದರೆ ಎಂಬ ಹಲವು ಮಾಹಿತಿಗಳನ್ನು ನೀವು ಈ ಹಿಂದೆ ಕೇಳಿರಬಹುದು. ಇಂತಹ ಹಲವು ಸಂದೇಶಗಳು ನಿಮಗೆ ವಾಟ್ಸಾಪ್ ಮತ್ತು ಫೇಸ್‌ಬುಕ್ ಮೂಲಕ ಬಂದಿರಬಹುದು. ಆದರೆ ನೀವು ಆ ಮಾಹಿತಿಗಳು ಎಷ್ಟು ಸತ್ಯ ಹಾಗೂ ಎಷ್ಟು ಸತ್ಯವಲ್ಲ ಎಂದು ತಿಳಿಯುವ ಸಮಯ.
ಗಿಜ್‌ಬಾಟ್ ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್ ಬಗ್ಗೆ ನೀವು ತಿಳಿದಿರುವ ಕೆಲವು ಅಂತೆ ಕಂತೆಗಳ ವಿಷಯಗಳು ಎಷ್ಟು ಸತ್ಯ ಎಂಬುದನ್ನು ತಿಳಿಸುತ್ತಿದೆ.

ಫೋನ್ ಏರೊಪ್ಲೇನ್ ಮೋಡ್ ಆನ್
ಹಲವು ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿನ ಫ್ಲೈಟ್ ಮೋಡ್ ಫೀಚರ್ ಅನ್ನು ವಿಮಾನದಲ್ಲಿ ಹೋಗುವವರು ಮಾತ್ರ ಬಳಸಬೇಕು ಎಂದುಕೊಂಡಿದ್ದಾರೆ. ಆದರೆ ಈ ಫೀಚರ್ ಫೋನ್‌ಗೆ ಯಾವಾಗ ನೆಟ್‌ವರ್ಕ್ ಸಿಗುವುದಿಲ್ಲವೋ ಅಂತಹ ಸಂಧರ್ಭದಲ್ಲಿ ಫ್ಲೈಟ್ ಮೋಡ್ ಇಟ್ಟರೆ ಫೋನ್ ಬ್ಯಾಟರಿ ಪವರ್ ಉಳಿತಾಯ ಮಾಡಬಹುದಾಗಿದೆ.

ಮೊಬೈಲ್ ಫೋನ್‌ಗಳು ಪೆಟ್ರೋಲ್ ಬ್ಯಾಂಕ್ ಹತ್ತಿರ
ಕೆಲವು ಪೆಟ್ರೋಲ್ ಬ್ಯಾಂಕ್‌ಗಳು ನಿಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಎಂಬ ನಾಮಫಲಕ ಹೊಂದಿರುತ್ತವೆ. ಕಾರಣ ಪೆಟ್ರೋಲ್ ಹೆಚ್ಚು ಉರಿಯುವ ಅಂಶಗಳನ್ನು ಹೊಂದಿದ್ದು, ಕಿಡಿಯಿಂದ ಬೆಂಕಿ ಹತ್ತಿಕೊಳ್ಳಬಹುದು. ಆದರೆ ಮೊಬೈಲ್‌ನಿಂದ ಮಾತ್ರ ಅಲ್ಲ. ಆದರೂ ಸಹ ನೀವು ನಿಯಮ ಪಾಲಿಸುವುದು ಒಳ್ಳೆಯದು, ಕೆಲವೊಮ್ಮೆ ಮೊಬೈಲ್ ಬಿದ್ದರೆ ಕಿಡಿಯೂ ಸಹ ಬೆಂಕಿ ಉರಿಯಲು ಕಾರಣವಾಗಿಬಿಡುತ್ತದೆ.

ಅಧಿಕವಾಗಿ ಫೋನ್ ಚಾರ್ಜ್ ಮಾಡುವುದು
ರಾತ್ರಿ ಇಡಿ ಫೋನ್ ಚಾರ್ಜ್‌ಗೆ ಹಾಕುವುದು ಮೊಬೈಲ್ ಫೋನ್ ಕೆಡಲು ಕಾರಣವಾಗುತ್ತದೆ ಎಂಬ ಹಲವು ವಿಷಯಗಳನ್ನು ಕೇಳಿರಬಹುದು. ಆದರೆ ಫೋನ್ ಸಂಪೂರ್ಣ ಚಾರ್ಜ್ ಆದಮೇಲೆ ಸ್ವಯಂ ಚಾರ್ಜಿಂಗ್ ಅನ್ನು ನಿಲ್ಲಿಸುತ್ತದೆ. ಆದರೆ ನೀವು ರಾತ್ರಿ ವೇಳೆ ಮೊಬೈಲ್ ಚಾರ್ಜ್‌ಗೆ ಹಾಕಿದನಂತರ ಮೊಬೈಲ್ ನೋಡದಿರುವುದರಿಂದ ಕೆಲವೊಮ್ಮೆ ವಿದ್ಯುತ್ ಸಾಕೆಟ್‌ನಿಂದಾಗಿ ನಿಮ್ಮ ಮೊಬೈಲ್ ಹಾಳಾಗಬಹುದು.

ಇನ್‌ಕಾಗ್ನಿಟೊ ಮೋಡ್
ನೀವು ಅಜ್ಞಾತ ಮೋಡ್‌ನಲ್ಲಿ ಇಂಟರ್ನೆಟ್ ಬ್ರೌಸಿಂಗ್ ಇತಿಹಾಸ ಇರಿಸಿದರೆ ಅದು ಯಾರಿಗೂ ತಿಳಿಯುವುದಿಲ್ಲ ಎಂದು ತಿಳಿದಿರಬಹುದು. ಆದರೆ ನೀವು ಇಂಟರ್ನೆಟ್ ಬಳಸಿದ ಬ್ರೌಸಿಂಗ್ ಡೇಟಾವನ್ನು ಸರ್ಕಾರಿ ಮತ್ತು ಕಾನೂನು ಸಂಸ್ಥೆಗಳು ಬಳಸಿ ಆಕ್ಸೆಸ್‌ಮಾಡಬಹುದಾಗಿದೆ.

ಚಾರ್ಜಿಂಗ್ ಮಾಡುವ ವೇಳೆ ಮಾತನಾಡಬೇಡಿ
ಚಾರ್ಜಿಂಗ್ ಮಾಡುವ ವೇಳೆ ಫೋನ್‌ನಲ್ಲಿ ಮಾತನಾಡಬಾರದು ಎನ್ನುವ ವಿಷಯ ಕೇಳಿರಬಹುದು. ಹೌದು, ಫೋನ್ ಚಾರ್ಜಿಂಗ್ ಆಗುವ ವೇಳೆ ಮಾತನಾಡುವಾಗ ಫೋನ್ ಬ್ಲಾಸ್ಟ್ ಆಗಬಹುದು, ಫೋನ್ ಬ್ಯಾಟರಿ ಕಳಪೆಯಾಗಿದ್ದಲ್ಲಿ ಮಾತ್ರ. ಉತ್ತಮ ಕಂಪನಿಗಳ ಹಾಗೂ ಸರ್ಕಾರ ಅನುಮತಿಸಿದ ಬ್ಯಾಟರಿಗಳು ಇಂತಹ ಸಮಸ್ಯೆ ತರಲಾರವು.

ಗಿಜ್‌ಬಾಟ್
ಜನರ ಅಲೋಚನೆಗಳನ್ನು ತಿಳಿಯುವ ಸಾಫ್ಟ್‌ವೇರ್ ಆವಿಷ್ಕಾರ
ಅಧಿಕ ಸಂಬಳ ನೀಡುವ ಟೆಕ್ ಜಾಬ್‌ಗಳು
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790