ಗೇಮಿಂಗ್‌ಗೆ ಉತ್ತಮವಾಗಿರುವ ಐದು ಪ್ರಮುಖ ಡಿವೈಸ್‌ಗಳು!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಗೇಮ್‌ಗಲು ಸಾಕಷ್ಟು ಪ್ರಖ್ಯಾತಿಯನ್ನ ಗಳಿಸಿವೆ. ಸಮಯವನ್ನ ಕಳೆಯಲು, ಬೇಸರವನ್ನ ಕಳೆಯಲು ಹಾಗೂ ಏಕಾಂಗಿತನವನ್ನ ಹೋಗಲಾಡಿಸಲು ಕೆಲವರು ಗೇಮಿಂಗ್‌ ಮೊರ ಹೋಗುತ್ತಾರೆ. ಅದರಲ್ಲೂ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮೇಲಂತೂ ಸ್ಮಾರ್ಟ್‌ಗೇಮ್‌ಗಳ ಹಾವಳಿ ತುಸು ಜಾಸ್ತಿನೇ ಇದೆ. ಇನ್ನು ಇದೀಗ ಕೊರೊನಾ ಬೀತಿಯಿಂದ ಲಾಕ್‌ಡೌನ್‌ ಆದೇಶವಿದೆ. ಎಲ್ಲಿಯೂ ಹೋಗದೆ ಮನೆಯೊಳಗಡೆಯೆ ಕುಳಿತಿರಬೇಕಾದ ಸನ್ನಿವೇಶವಿದೆ. ಈ ಸಂದರ್ಭದಲ್ಲಿ ಕೆಲವರು ಗೇಮಿಂಗ್‌ ಮೊರ ಹೋಗುತ್ತಾರೆ. ಹಾಗಾದ್ರೆ ಗೇಮಿಂಗ್‌ ಸೂಕ್ತವಾದ ಡಿವೈಸ್‌ಗಳು ಯಾವುವು ಅನ್ನೊದು ಕೂಡ ನಿಮಗೆ ತಿಳಿದಿರಲೇಬೇಕು.

ಹೌದು

ಹೌದು, ನಿವು ಗೇಮಿಂಗ್ ಅನ್ನು ಇಷ್ಟಪಟ್ಟರೆ, ನಿಮ್ಮ ಗೇಮಿಂಗ್‌ ಸಮಯವನ್ನ ಸಾಕಷ್ಟು ಉತ್ತಮವಾಗಿರಿಕೊಳ್ಳಬೇಕೆಂದರೆ ಅದಕ್ಕೆ ತಕ್ಕಂತ ಡಿವೈಸ್‌ಗಳು ಇದ್ದರೆ ಉತ್ತಮ. ಏಕೆಂದರೆ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಗೇಮಿಂಗ್‌ಗೆ ಉತ್ತಮವಾಗಿಲ್ಲ. ಅಷ್ಟೇ ಯಾಕೆ ಎಲ್ಲಾ ಕಂಪ್ಯೂಟರ್‌ಗಳು ಸ್ವೀಕಾರಾರ್ಹ ಫ್ರೇಮ್ ರೇಟ್‌ನಲ್ಲಿ ಗೇಮ್‌ ಆಡಲು ಸೂಕ್ತವಾಗಿಲ್ಲ. ಇದೇ ಕಾರಣಕ್ಕೆ ಗೇಮಿಂಗ್ ಹಾರ್ಡ್‌ವೇರ್ ಸ್ವತಃ ಒಂದು ವರ್ಗವಾಗಿ ಗುರುತಿಸಿಕೊಂಡಿದೆ. ಇನ್ನು ಗೇಮಿಂಗ್‌ ಆಡುವಾಗ ಡಿವೈಸ್‌ ಅನ್ನು ತಂಪಾಗಿರಿಸಿಕೊಳ್ಳುವುದು, ಬ್ಯಾಟರಿ ಪ್ಯಾಕ್‌ಅಪ್‌ ಎಲ್ಲವೂ ಉತ್ತಮವಾಗಿರಬೇಕು. ಇದರಿಂದಾಗಿ ನಿಮ್ಮ ಗೇಮಿಂಗ್‌ ಅನುಭವವನ್ನ ಉತ್ತಮವಾಗಿಸಬಲ್ಲ ಟಾಪ್ 5 ಡಿವೈಸ್‌ಗಳ ಬಗ್ಗೆ ಮಾಹಿತಿಯನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಒದಿ.

ಡೆಲ್ ಏಲಿಯನ್ವೇರ್ 17 ಏರಿಯಾ 51

ಡೆಲ್ ಏಲಿಯನ್ವೇರ್ 17 ಏರಿಯಾ 51

ಡೆಲ್ ಏಲಿಯನ್ವೇರ್ 17 ಇದು ಒಂದು ಲ್ಯಾಪ್‌ಟಾಪ್ ಆಗಿದ್ದು ಇದನ್ನು ಗೇಮಿಂಗ್‌ಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು 9 ನೇ ತಲೆಮಾರಿನ ಇಂಟೆಲ್ ಕೋರ್ ಐ 9-9900 ಎಚ್‌ಕೆ ಪ್ರೊಸೆಸರ್‌ಅನ್ನು ಹೊಂದಿದೆ. ಜೊತೆಗೆ 32GB RAM ಮತ್ತು 64GB ಸಂಗ್ರಹ ಸಾಮರ್ಥ್ಯವನ್ನ ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ನಲ್ಲಿ ಸುಧಾರಿತ ಸೈರೋ-ಟೆಕ್ ಕೂಲಿಂಗ್ ಸಿಸ್ಟಮ್ ಇದ್ದು, ಇದು ಡ್ಯುಯಲ್ ವೆಂಟ್ಸ್ ಮತ್ತು ವಿಶೇಷ ಕೂಲಿಂಗ್ ಪೈಪ್‌ಗಳ ಸಂಯೋಜನೆಯಾಗಿದ್ದು, ಗಂಟೆಗಳ ಗೇಮಿಂಗ್ ಸೆಷನ್‌ಗಳ ನಂತರ ಉನ್ನತ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ. ಪವರ್‌ಫುಲ್‌ ಗೇಮ್‌ಗಳಿಗಾಗಿ ಇದರಲ್ಲಿ ಲ್ಯಾಪ್‌ಟಾಪ್ ಎನ್‌ವಿಡಿಯಾ ಜೀಫೋರ್ಸ್ ಆರ್‌ಟಿಎಕ್ಸ್ 2080 (ಮೊಬೈಲ್) ಗ್ರಾಫಿಕ್ಸ್ ಕಾರ್ಡ್ ಅನ್ನು ಹೊಂದಿದೆ. ಅಲ್ಲದೆ ಎಫ್‌ಹೆಚ್‌ಡಿ ರೆಸಲ್ಯೂಶನ್ ಐಪಿಎಸ್ ಮತ್ತು ಹೆಚ್ಚಿನ 144Hz ರಿಫ್ರೆಶ್ ದರವನ್ನು ಹೊಂದಿರುವ ಡಿಸ್‌ಪ್ಲೇಯನ್ನ ಒಳಗೊಂಡಿದೆ.

ಸೋನಿ ಪಿಎಸ್ 4 ಪ್ರೊ 1TB

ಸೋನಿ ಪಿಎಸ್ 4 ಪ್ರೊ 1TB

ಇನ್ನು ನೀವು ಗೇಮಿಂಗ್‌ಗಾಗಿಯೇ ಖರೀದಿಸಬಹುದಾದ ಅತ್ಯುತ್ತಮ ಗೇಮಿಂಗ್ ಯಂತ್ರಗಳಲ್ಲಿ ಸೋನಿ ಪಿಎಸ್‌ 4 ಪ್ರೊ ಕೂಡ ಒಂದಾಗಿದೆ. ಇದು ಇತರ ಕನ್ಸೋಲ್‌ಗಳಲ್ಲಿ ಲಭ್ಯವಿಲ್ಲದ ಸೋನಿ ಎಕ್ಸ್‌ಕ್ಲೂಸಿವ್‌ಗಳು ಗೇಮರುಗಳಿಗೆ ಅವಕಾಶವನ್ನ ನೀಡಲಿದೆ. ಹಾಗೂ ಇದು ಪ್ಲೇಸ್ಟೇಷನ್ ಸ್ಟೋರ್ ಮೂಲಕ ನವೀಕರಿಸಲು ಸಹಾಯ ಮಾಡಲಿದೆ. ಇನ್ನು ಈ ಪಿಎಸ್ 4 ಉತ್ತಮ ಗ್ರಾಫಿಕ್ಸ್ ಗುಣಮಟ್ಟವನ್ನು ಹೊಂದಿದ್ದು, ಅದರ ಕಸ್ಟಮ್ ಗ್ರಾಫಿಕ್ಸ್ ಚಿಪ್ 4K ರೆಸಲ್ಯೂಶನ್ ಅನ್ನು ಬೆಂಬಲಿಸುವ ಸಾಮರ್ಥ್ಯ ಹೊಂದಿದೆ. ಇದು ಗೇಮಿಂಗ್‌ ಮಾತ್ರವಲ್ಲದೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಅಥವಾ ಯೂಟ್ಯೂಬ್‌ನಿಂದ 4k ಸ್ಕ್ರೀನ್‌ನಲ್ಲಿ ಸ್ಟ್ರೀಮ್ ಮಾಡಬಹುದಾಗಿದೆ.

ರಿಯಲ್‌ಮಿ X2

ರಿಯಲ್‌ಮಿ X2

ರಿಯಲ್‌ಮಿ X2 ಗೇಮರುಗಳಿಗಾಗಿ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಆಗಿದೆ.ಈ ಸ್ಮಾರ್ಟ್‌ಫೋನ್ ಹಲವಾರು ಗೇಮಿಂಗ್-ಕೇಂದ್ರಿತ ಫೀಚರ್ಸ್‌ಗಳನ್ನ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 730G SoC ಪ್ರೊಸೆಸರ್‌ ಹೊಂದಿದೆ. ಅಲ್ಲದೆ 8GB RAM ಅನ್ನು ಸಹ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಗೇಮಿಂಗ್‌ಗೆ ಸೂಕ್ತವಾಗಿರುವ ಸಾಫ್ಟ್‌ವೇರ್ ಅನ್ನು ಅಳವಡಿಸಲಾಗಿದೆ. ಇದರಲ್ಲಿ ಗೇಮ್‌ಗಳನ್ನು ಸುಲಭಗೊಳಿಸುವ ಟಚ್ ಬೂಸ್ಟ್ ಇದೆ, ಡ್ಯುಯಲ್ ಆಂಟಿ-ಲಾಕ್ ಆಂಟೆನಾ ಮತ್ತು ಆನ್‌ಲೈನ್ ಗೇಮ್‌ಗಳಲ್ಲಿ ಪೂರ್ಣ ವೇಗದ ಗೇಮಿಂಗ್ ಮೋಡ್ ಅನ್ನು ನೀಡಲಿದೆ. ಜೊತೆಗೆ ಕೂಲಿಂಗ್‌ ಸಿಸ್ಟಂ ಜೊತೆಗೆ 30W VOOC ಫಾಸ್ಟ್ ಚಾರ್ಜ್ 4.0 ಮೂಲಕ ಗೇಮಿಂಗ್ ಮತ್ತು ವೇಗದ ಚಾರ್ಜಿಂಗ್‌ಗೆ ಫೋನ್ ದೀರ್ಘ ಬ್ಯಾಟರಿ ಅವಧಿಯನ್ನು ನೀಡುತ್ತದೆ.

ಪಿಎಸ್ ವಿಆರ್ ಮೆಗಾ ಪ್ಯಾಕ್

ಪಿಎಸ್ ವಿಆರ್ ಮೆಗಾ ಪ್ಯಾಕ್

ವಿಭಿನ್ನ ರೀತಿಯ ಗೇಮಿಂಗ್‌ಗೆ ಸೂಕ್ತವಾದ ಡಿವೈಸ್‌ ಇದಾಗಿದೆ. ಇನ್ನು ಪಿಎಸ್ ವಿಆರ್ ಮೆಗಾಪ್ಯಾಕ್ ಬಳಕೆದಾರರಿಗೆ 3D ಗೇಮಿಂಗ್ ಅನುಭವವನ್ನು ನೀಡಲು ಒಎಲ್ಇಡಿ-ಸ್ಕ್ರೀನ್ ವಿಆರ್ ಹೆಡ್‌ಸೆಟ್‌ ಅನ್ನು ಹೊಂದಿದೆ. ನಿಮ್ಮ ಗೆಳೆಯರ ಜೊತೆ ಗೇಮಿಂಗ್‌ ಆಡುವಾಗ ಅದನ್ನು ಸ್ಟ್ರೀಮ್ ಮಾಡಲು ಅನುಮತಿಸುವ ಪಿಎಸ್ ಕ್ಯಾಮೆರಾವನ್ನು ಇದು ಹೊಂದಿದೆ. ಪಿಎಸ್ ವಿಆರ್ ಮೆಗಾ ಪ್ಯಾಕ್ ಸೋನಿಯ ಪ್ಲೇಸ್ಟೇಷನ್ 4ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ವಿಆರ್‌ಗೆ ಹೊಂದಿಕೊಂಡ 5 ಗೇಮ್‌ಗಳ ಸ್ಟೋರೇಜ್‌ನೊಮದಿಗೆ ಲಬ್ಯವಾಗಲಿದೆ.

ಏಸರ್ ನೈಟ್ರೋ

ಏಸರ್ ನೈಟ್ರೋ

ಏಸರ್ ನೈಟ್ರೊ ಸ್ಲಿಮ್ 23.8-ಇಂಚಿನ ಪಿಸಿ ಮಾನಿಟರ್ ಆಗಿದೆ. ಉತ್ತಮ ಗೇಮಿಂಗ್ ಅನುಭವವನ್ನು ನೀಡಲು ಈ ಮಾನಿಟರ್‌ನ ಪ್ರತಿಯೊಂದು ಭಾಗವನ್ನು ಟ್ಯೂನ್ ಮಾಡಲಾಗಿದೆ. 144Hz ವೇಗದ ರಿಫ್ರೆಶ್ ರೇಟ್‌ ಹೊಂದಿದ್ದು, ಸುಪ್ತತೆ ಕಡಿಮೆ ಹೊಂದಿದೆ. ಜೊತೆಗೆ ಶೂಟಿಂಗ್ ಆಟಗಳಂತೆ ವೇಗದ ಗತಿಯ ಆಟಗಳಲ್ಲಿ ಇದು ನಿಮಗೆ ಅನುಕೂಲವನ್ನು ನೀಡುತ್ತದೆ. ವೇಗವು ಇಲ್ಲಿ ಪ್ರಧಾನವಾಗಿದ್ದು, ಮಾನಿಟರ್ AMD ರೇಡಿಯನ್ ಫ್ರೀಸಿಂಕ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಇದು ಉತ್ತಮ ಗುಣಮಟ್ಟದ ದೃಶ್ಯಗಳನ್ನು ಕಾಪಾಡಿಕೊಳ್ಳುವಾಗ, ವೈವಿಧ್ಯಮಯ ಫ್ರೇಮ್ ದರವನ್ನು ಸುಗಮಗೊಳಿಸಲು ಗ್ರಾಫಿಕ್ಸ್ ಕಾರ್ಡ್‌ನೊಂದಿಗೆ ಮಾನಿಟರ್ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಜೊತೆಗೆ ಈ ಮಾನಿಟರ್ 1920 x 1080 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ.

Most Read Articles
Best Mobiles in India

Read more about:
English summary
Gamers have special needs. Fast machines, cool accessories, specialised hardware are some of their requirements.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more