2016 ರಲ್ಲಿ ಐಟಿ ಉದ್ಯೋಗಿಗಳಿಗೆ ಬೇಡಿಕೆ, ಯೂತ್ಸ್‌ಗಳಿಗೆ ಬಂಪರ್‌ ಆಫರ್

Written By:

    .ದೇಶದಾದ್ಯಂತ ಈಗ ಐಟಿ ಕ್ಷೇತ್ರಗಳಾದ ಇ-ವಾಣಿಜ್ಯ, ಹಣಕಾಸು ಸೇವೆ, ಮೊಬೈಲ್‌ ಉತ್ಪನ್ನಗಳ ಅಭಿವೃದ್ದಿ ಕ್ಷೇತ್ರಗಳಲ್ಲಿ ನೇಮಕಾತಿ ಬೇಡಿಕೆ ಹೆಚ್ಚಿದೆಯಂತೆ. ಅಲ್ಲದೇ ಡಾಟಾ ಅನಾಲಿಸಿಸ್ ಉದ್ಯೋಗಕ್ಕೂ ಬೇಡಿಕೆ ಹೆಚ್ಚಾಗಿದೆ. ಇದೊಂದು ರೀತಿಯಲ್ಲಿ ದೇಶದ ಯುವಜನತೆಗೆ ಬಂಪರ್ ಲಾಟರಿ ಹೊಡೆದಂತ ಸಂತೋಷದ ವಿಷಯವಾಗಿದೆ. ಹಾಗಾದರೆ ಸಂಬಳ ಎಷ್ಟು ಕೊಡಬಹುದು, ಅಂತಹ ಟಾಪ್‌ ಉದ್ಯೋಗಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

    1

    ಮ್ಯಾನ್ಸರ್‌ ಕನ್ಸಲ್ಟಿಂಗ್ ಸಿಇಒ ಸತ್ಯಾ ಸಿನ್ಹಾರವರು ಹೊಸ ಯುವಜನತೆಗೆ ಹೊಸ ಹೊಸ ರೀತಿಯ ಮೊಬೈಲ್‌ ಮತ್ತು ಆಪ್ಸ್‌ಗಳನ್ನು ಅಭಿವೃದ್ದಿಪಡಿಸುವಂತಹ ಪ್ರಾಡಕ್ಟ್‌ಗಳನ್ನು ಅಭಿವೃದ್ದಿಪಡಿಸುವಂತಹ ಉದ್ಯೋಗಿಗಳು ಅವಶ್ಯವಾಗಿದ್ದಾರೆ ಎಂದು ಹೇಳಿದ್ದಾರೆ. ಆದ್ದರಿಂದ ಸಾಫ್ಟ್‌ವೇರ್‌ ಸೃಜನಶೀಲರು, ಹೊಸ ಟೆಕ್ನಾಲಜಿಗಳಿಗೆ ಹೊಂದು ಕೊಳ್ಳುವಂತಹ ಪ್ರಾಡಕ್ಟ್‌ ಅಭಿವೃದ್ದಿ ಮಾಡುವವರಿಗೆ ಬೇಡಿಕೆ ಹೆಚ್ಚಿದೆ. ಕ್ಷೇತ್ರ : ಐಟಿ ಪ್ರಾಡಕ್ಟ್‌ ಕಂಪನಿ ಮತ್ತು ಉದ್ಯಮಗಳು ಕಿರಿಯರಿಗೆ 15 ಲಕ್ಷ ವಾರ್ಷಿಕ ವೇತನ ನೀಡಲು ಸಿದ್ದವಾಗಿದ್ದು, ಹಿರಿಯ ಉದ್ಯೋಗಿಗಳಿಗೆ ವಾರ್ಷಿಕವಾಗಿ 50 ಲಕ್ಷ ವೇತನ ನೀಡಲು ಕಂಪನಿಗಳು ಸಿದ್ದವಿವೆ.

    2

    ಇ-ಕಾಮರ್ಸ್‌ ಕ್ಷೇತ್ರಕ್ಕೆ ಯುವ ಪ್ರಮೋಟರ್‌ಗಳು ಮಾರುಕಟ್ಟೆಯನ್ನು ಅಧಿಕೃತವಾಗಿ ವಿಸ್ತರಿಸಲು ಬೇಕಾಗಿದ್ದಾರೆ. ವಾರ್ಷಿಕವಾಗಿ CXO ಮಟ್ಟದ ನೌಕರರಿಗೆ ಸ್ಟಾಕ್‌ ಆಯ್ಕೆಗಳ ಆಧಾರಿತವಾಗಿ ವಾರ್ಷಿಕವಾಗಿ 1-10 ಕೋಟಿ ವೇತನವನ್ನು ಹಿರಿಯ ವ್ಯವಸ್ಥಾಪಕರಿಗೆ ನೀಡಲು ಇ-ಕಾಮರ್ಸ್‌ ಕ್ಷೇತ್ರ ಸಿದ್ದವಾಗಿದೆ.

    3

    ಹಲವು ಕಂಪನಿಗಳು ಆನ್‌ಲೈನ್‌ ಬಗೆಗೆ ಹೆಚ್ಚು ತಿಳಿದುಕೊಂಡು, ಪ್ರಸ್ತುತದ ಬಗೆಗೆ ಡಿಜಿಟಲ್‌ ಮಾರುಕಟ್ಟೆಯನ್ನು ನಿರ್ವಹಿಸುವವರನ್ನು ನೇಮಕ ಮಾಡಲು ಹುಡುಕಾಡುತ್ತಿವೆ. ಕ್ಷೇತ್ರ : ಗ್ರಾಹಕರ ನಿರ್ವಹಣೆ, ಇ-ವಾಣಿಜ್ಯ, ಚಿಲ್ಲರೆ ಸಂಸ್ಥೆಗಳು, FMCG ಮತ್ತು ಸಾಸ್ ಕಂಪನಿಗಳು ಪ್ರಮುಖ ಉದಾಹರಣೆಗಳಾಗಿವೆ. ಅನುಭವದ ಆಧಾರದ ಮೇಲೆ ವಾರ್ಷಿಕವಾಗಿ 30-60 ಲಕ್ಷದವರೆಗೆ ಸಂಬಳ ನೀಡಲು ಸಿದ್ದವಾಗಿವೆ.

    4

    ಮುಂದಿನ ವರ್ಷಗಳಲ್ಲಿ ಮೊಬೈಲ್‌ ಪ್ರಾಡಕ್ಟ್‌ ಅಭಿವೃದ್ದಿ ಇಂಜಿನಿಯರ್‌ಗಳಿಗೆ ಬೇಡಿಕೆ ಅಧಿಕವಾಗಿ ಹೆಚ್ಚಲಿದ್ದು, ಸಾಫ್ಟ್‌ವೇರ್‌ ಪ್ರಾಡಕ್ಟ್‌ ಅಭಿವೃದ್ದಿಗಾರರು ಮತ್ತು ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ದಿಗಾರರಿಗೂ ಬೇಡಿಕೆ ಹೆಚ್ಚಾಗಲಿದೆ ಎಂದು ಜಿಎಸ್‌ಎಂಎ ವರದಿ ಹೇಳಿದೆ. ಬಳಕೆದಾರರ ಟ್ರೆಂಡ್‌ಗೆ ತಕ್ಕಂತೆ ಟೆಕ್ನಾಲಜಿಯನ್ನು ಅಭಿವೃದ್ದಿಗೊಳಿಸುವುದು ಉದ್ಯೋಗಿಗಳ ಕೆಲಸವಾಗಿದೆ. ಕ್ಷೇತ್ರ: ಐಟಿ ಕನ್ಸಲ್ಟಿಂಗ್ ಉದ್ಯಮಗಳು, ಇ- ಕಾಮರ್ಸ್‌ ಕಂಪನಿಗಳು ಮೊಬೈಲ್‌ ಅಪ್ಲಿಕೇಶನ್‌. ಈ ಕ್ಷೇತ್ರಗಳಲ್ಲಿ ಉದ್ಯೋಗಿಗಳು 12-40 ಲಕ್ಷದವರೆಗೂ ವಾರ್ಷಿಕ ವೇತನವನ್ನು ಪಡೆಯಬಹುದಾಗಿದೆ.

    5

    2016 ಪ್ರಾರಂಭವಾಗುತ್ತಿದ್ದಂತೆಯೇ ಸಣ್ಣ ಉದ್ಯಮಗಳಿಂದ ಹಿಡಿದು ಇನ್ಫೋಸಿಸ್‌ನಂತರಹ ದೊಡ್ಡ ಉದ್ಯಮಗಳವರೆಗೂ ಸಹ ಡೇಟಾ ವಿಶ್ಲೇಷಣೆಯನ್ನು ವಿಸ್ತರಿಸಲು ಸಿದ್ದವಾಗಿವೆ. ಈ ಉದ್ಯೋಗಗಳಿಗೆ ಗಣಿತ ವಿಷಯದಲ್ಲಿ ಹಾಗೂ ವಿಶ್ಲೇಷಣೆಯಲ್ಲಿ ಪರಿಣತಿ ಹೊಂದಿರಬೇಕಾಗಿದೆ. ಇತರ ಸೃಜನಶೀಲತೆಯು ಸಹ ಈ ಉದ್ಯೋಗಗಳಿಗೆ ಅವಶ್ಯಕವಾಗಿದೆ. ಈ ಕ್ಷೇತ್ರದಲ್ಲಿ ಪ್ರಾರಂಭದಲ್ಲಿ ಉದ್ಯೋಗಕ್ಕೆ ಸೇರುವವರಿಗೆ 2-10ಲಕ್ಷ ವಾರ್ಷಿಕ ವೇತನ ನೀಡಲು ಕಂಪನಿಗಳು ಸಿದ್ದವಾಗಿವೆ. ಹಿರಿಯ ಸ್ಥಾನಗಳಿಗೆ 70 ಲಕ್ಷದಿಂದ 1 ಕೋಟಿವರೆಗೂ ವಾರ್ಷಿಕ ವೇತನ ನೀಡಲಾಗುವುದು ಎನ್ನಲಾಗಿದೆ.

    ಗಿಜ್‌ಬಾಟ್‌

    ವಿಶ್ವವನ್ನೇ ಬದಲಿಸುವ ಟಾಪ್‌ ಟೆಕ್ನಾಲಜಿಗಳು
    ಕಂಪ್ಯೂಟರ್‌ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳುವುದು ಹೇಗೆ ?

    ಗಿಜ್‌ಬಾಟ್‌

    ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
    ಕನ್ನಡ.ಗಿಜ್‌ಬಾಟ್.ಕಾಂ

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

     

    English summary
    5 Hottest IT jobs of 2016. Read more about this in kannada.gizbot.com
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more