Home
ಸುದ್ದಿಜಾಲ

ದಿನಕ್ಕೆ 5 ಗಂಟೆಗಳಿಗಿಂತ ಹೆಚ್ಚು ಮೊಬೈಲ್ ಬಳಸ್ತೀರಾ?..ಈ ಶಾಕಿಂಗ್ ಸುದ್ದಿ ನೋಡಿ!

ಬಿಟ್ಟುಬಿಡದೇ ಕಾಡುತ್ತಿರುವ ಸ್ಮಾರ್ಟ್‌ಫೋನ್‌ ಎಂಬ ಮಾಯೆಯಲ್ಲಿ ಯುವಕರು, ಯುವತಿಯರು ಸೇರಿದಂತೆ ಪ್ರತಿಯೊಬ್ಬರೂ ಮುಳುಗಿದ್ದಾರೆ. ಇಂತಹ ಸ್ಮಾರ್ಟ್‌ಫೋನ್ ಅವಲಂಬಿತರಿಗೆ ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಸಂಶೋಧನಾ ವರದಿ ಪ್ರಕಾರ, ಒಂದು ದಿನಕ್ಕೆ ಐದು ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಸ್ಮಾರ್ಟ್‌ಫೋನ್‌ಗಳನ್ನು ಬಳಸುವವರಿಗೆ ಬೊಜ್ಜಿನ ಅಪಾಯ ಎದುರಾಗಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ದಿನಕ್ಕೆ 5 ಗಂಟೆಗಳಿಗಿಂತ ಹೆಚ್ಚು ಮೊಬೈಲ್ ಬಳಸ್ತೀರಾ?..ಈ ಶಾಕಿಂಗ್ ಸುದ್ದಿ ನೋಡಿ!

ಹೌದು, ಅತಿಯಾಗಿ ಮೊಬೈಲ್​ ಬಳಸುವವರ ಪೈಕಿ ಶೇಕಡ 43 ರಷ್ಟು ಜನರು ಬೊಜ್ಜನ್ನು ಹೆಚ್ಚಿಸುವ ಮತ್ತು ಹೃದ್ರೋಗದ ಅಪಾಯವನ್ನು ಎದುರು ನೋಡುತ್ತಾರೆ ಎಂದು ಸಂಶೋಧನೆಯ ಮೂಲಕ ತಿಳಿಯಲಾಗಿದೆ. ಕಳೆದ ​2018 ಜೂನ್​ನಿಂದ ಡಿಸೆಂಬರ್​ 2018ವರೆಗೆ ಸೈಮನ್ ಬೊಲಿವಾರ್ ವಿಶ್ವವಿದ್ಯಾಲಯದ ಆರೋಗ್ಯ ವಿಜ್ಞಾನ ವಿಭಾಗದ 1060 ವಿದ್ಯಾರ್ಥಿಗಳನ್ನು ಸಂಶೋಧನೆಗೆ ಒಳಪಡಿಸಿದಾಗ ಇಂತಹದೊಂದು ಶಾಕಿಂಗ್ ಡಿಪೋರ್ಟ್ ಸಂಶೋಧಕರ ಕೈಗೆ ಸಿಕ್ಕಿದೆ.

ಈ ಸಂಶೋಧನೆಗಾಗಿ ಸರಾಸರಿ 19 ವರ್ಷ ಮತ್ತು 20 ವರ್ಷ ವಯಸ್ಸಿನ 700 ಮಹಿಳೆಯರು ಮತ್ತು 360 ಪುರುಷರನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಶೇಕಡಾ 36.1 ರಷ್ಟು ಅಧಿಕ ತೂಕ ಮತ್ತು 42.6 ರಷ್ಟು ಬೊಜ್ಜು ಹೊಂದಿರುವ ಪುರುಷರು ಮತ್ತು ಶೇಕಡಾ 63.9 ರಷ್ಟು ಅಧಿಕ ತೂಕ ಮತ್ತು 57.4 ರಷ್ಟು ಬೊಜ್ಜು ಹೊಂದಿರುವ ಮಹಿಳೆಯರಿದ್ದರು. ಇವರೆಲ್ಲರ ಮೇಲೆ ನಡೆದ ಒಟ್ಟಾರೆ ಅಧ್ಯಯನದಿಂದ ಮೊಬೈಲ್ ಬಳಕೆ ಹೆಚ್ಚು ಬೊಜ್ಜು ತರಲಿದೆ ಎಂಬ ಅಂಶ ತಿಳಿದುಬಂದಿದೆ.

ದಿನಕ್ಕೆ 5 ಗಂಟೆಗಳಿಗಿಂತ ಹೆಚ್ಚು ಮೊಬೈಲ್ ಬಳಸ್ತೀರಾ?..ಈ ಶಾಕಿಂಗ್ ಸುದ್ದಿ ನೋಡಿ!

ಒಟ್ಟಾರೆ ಸಂಶೋಧನೆಯಲ್ಲಿ ಸಂಶೋಧಕರ ಪ್ರಕಾರ, ದಿನಕ್ಕೆ ಐದು ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಸ್ಮಾರ್ಟ್‌ಫೋನ್ ಬಳಸಿದರೆ ಸ್ಥೂಲಕಾಯದ ಅಪಾಯವು ಶೇಕಡಾ 43 ರಷ್ಟು ಹೆಚ್ಚಾಗಿ ಕಂಡು ಬರುತ್ತೆ ಅನ್ನೋದನ್ನು ತಿಳಿದುಕೊಳ್ಳಲಾಗಿದೆ. ಸಂಶೋಧನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್​ಗಳನ್ನು ಹೆಚ್ಚು ಬಳಸುವುದರೊಂದಿಗೆ ಸ್ವೀಟ್​ ಡ್ರಿಂಕ್ಸ್​​, ಫಾಸ್ಟ್​ ಫುಡ್ ಹೆಚ್ಚು ತಿನ್ನುತ್ತಾರೆ. ಆದರೆ ದೈಹಿಕ ಚಟುವಟಿಕೆಗಳಿಂದ ದೂರ ಉಳಿಯುತ್ತಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ.

21 ನೇ ಶತಮಾನದಲ್ಲಿ ಪ್ರತಿಯೊಬ್ಬರೂ ಸ್ಮಾರ್ಟ್‌ಫೋನ್‌ ಬಳಕೆಯಲ್ಲಿ ತಮ್ಮ ಬಹುತೇಕ ಸಮಯವನ್ನು ಕಳೆಯುತ್ತಾರೆ. ಇದರಿಂದಲೇ ಬೊಜ್ಜು ಎಂಬ ಮಹಾಮಾರಿ ಕಾಲಿಡುತ್ತಿದೆ ಎಂಬ ಮಾತುಗಳು ಸಂಶೋಧಕರಲ್ಲಿ ಮನೆಮಾಡಿತ್ತು. ಆದರೆ, ಇದೀಗ ಅವರ ಮಾತು ನಿಜವಾಗಿದೆ. ಐದು ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಸ್ಮಾರ್ಟ್‌ಫೋನ್‌ಗಳನ್ನು ಬಳಸುವವರಿಗೆ ಬೊಜ್ಜು ಅಪಾಯ ಗ್ಯಾರಂಟಿ ಅನ್ನೋದನ್ನು ಸಂಶೋಧನೆ ದೃಢೀಕರಿಸಿ ಎಚ್ಚರಿಸಿದೆ.

Best Mobiles in India

English summary
Spending too much time using the smartphone facilitates sedentary behaviors, reduces the time of physical activity, which increases the risk of premature death, diabetes, heart disease and different types of cancer. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+