Subscribe to Gizbot

ಎಚ್‌ಟಿಸಿ ಹೊಸ ಸ್ಮಾರ್ಟ್‌ಫೋನ್‌ಲ್ಲಿರುವ ವಿಶೇಷತೆಗಳೇನು?

Written By:

ತೈವಾನ್‌ ಮೂಲದ ಎಚ್‌ಟಿಸಿ ಕಂಪೆನಿಯ ಈ ವರ್ಷದ ದುಬಾರಿಯ ಬೆಲೆಯ ಸ್ಮಾರ್ಟ್‌ಫೋನ್‌ ಎಚ್‌ಟಿಸಿ ಒನ್‌ ಎಂ8 ಬಿಡುಗಡೆಯಾಗಿದೆ. ನ್ಯಾನೋ ಸಿಮ್‌ ಹಾಕಬಹುದಾದ ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ ಓಎಸ್‌ ಸ್ಮಾರ್ಟ್‌ಫೋನ್ ಇದಾಗಿದ್ದು,ಎಚ್‌ಟಿಸಿ ಒನ್‌ನಂತೆ ಮೆಟಲ್‌ ಬಾಡಿಯನ್ನು ಎಚ್‌ಟಿಸಿ ಈ ಸ್ಮಾರ್ಟ್‌‌‌‌ಫೋನ್‌ಗೆ ನೀಡಿದೆ. ಎಚ್‌ಟಿಸಿ ಈ ಸ್ಮಾರ್ಟ್‌ಫೋನಿಗೆ ಕೆಲವೊಂದು ವಿಶೇಷತೆಗಳನ್ನು ನೀಡಿದ್ದು ಮುಂದಿನ ಪುಟದಲ್ಲಿ ಈ ಸ್ಮಾರ್ಟ್‌‌ಫೋನಿನಲ್ಲಿರುವ ವಿಶೇಷತೆಗಳನ್ನು ವಿವರಿಸಲಾಗಿದೆ.

ಎಚ್‌‌ಟಿಸಿ ಒನ್‌ ಎಂ8

ವಿಶೇಷತೆ:
ಸಿಂಗಲ್‌ ಸಿಮ್‌ (ನ್ಯಾನೋ ಸಿಮ್‌)
5 ಇಂಚಿನ ಸುಪರ್‍ ಅಮೊಲೆಡ್ ಕೆಪಾಸಿಟಿವ್‌ ಸ್ಕ್ರೀನ್‌(1080 x 1920 ಪಿಕ್ಸೆಲ್‌,441 ಪಿಪಿಐ)
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್‌ ಓಎಸ್‌
2.3 GHz ಕ್ವಾಲಕಂ ಸ್ನಾಪ್‌ಡ್ರಾಗನ್ ಕ್ವಾಡ್‌ ಕೋರ್‌ ಪ್ರೊಸೆಸರ್‍
Adreno 330 ಗ್ರಾಫಿಕ್‌ ಪ್ರೊಸೆಸರ್‌
16/32ಜಿಬಿ ಆಂತರಿಕ ಮೆಮೊರಿ
2 GB ರ್‍ಯಾಮ್‌
ಹಿಂದುಗಡೆ 4 ಆಲ್ಟ್ರಾ ಪಿಕ್ಸೆಲ್‌ ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್‌ ಕ್ಯಾಮೆರಾ
ಮುಂದುಗಡೆ 5 ಎಂಪಿ ಕ್ಯಾಮೆರಾ
128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,4ಜಿ,ಬ್ಲೂಟೂತ್‌,ಜಿಪಿಎಸ್‌,ಎನ್‌ಎಫ್‌ಸಿ,
ಎಕ್ಸಲರೋಮೀಟರ್‌,ಲೈಟ್‌,ಗೈರೋ,ಪ್ರಾಕ್ಸಿಮಿಟಿ,ಕಂಪಾಸ್‌
2600 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಎಚ್‌ಟಿಸಿ ಹೊಸ ಸ್ಮಾರ್ಟ್‌ಫೋನ್‌ಲ್ಲಿರುವ ವಿಶೇಷತೆಗಳೇನು?


ಚಿತ್ರ ತೆಗೆದ ಬಳಿಕ ಅದಕ್ಕೆ ವಿವಿಧ ಎಫೆಕ್ಟ್‌ಗಳನ್ನು ನೀಡಿ ಫೋಟೋ ವನ್ನು ಮತ್ತಷ್ಟು ಸುಂದರಗೊಳಿಸಲು ಈ ಸ್ಮಾರ್ಟ್‌ಫೋನಲ್ಲಿ ಆಲ್ಟ್ರಾ ಪಿಕ್ಸೆಲ್‌ ಕ್ಯಾಮೆರಾದೊಂದಿಗೆ ಹಿಂದುಗಡೆ ಮತ್ತೊಂದು ಡ್ಯು ಕ್ಯಾಮೆರಾವನ್ನು ಎಚ್‌ಟಿಸಿ ನೀಡಿದೆ. ಈ ಡ್ಯು ಕ್ಯಾಮೆರಾ ಫೋಟೋಗೆ ಸಂಬಂಧಿಸಿದ ಮತ್ತಷ್ಟು ದೃಶ್ಯಗಳನ್ನು ಸೆರೆಹಿಡಿಯುತ್ತದೆ. ಫೋಟೋ ತೆಗೆದ ಬಳಿಕ ಮತ್ತೆ ಪುನಃ ಫೋಟೋವನ್ನು ರಿಫೋಕಸ್‌ ಮಾಡಿ ಮತ್ತಷ್ಟು ಎಫೆಕ್ಟ್‌‌ಗಳನ್ನು ಸೇರಿಸಲು ಈ ತಂತ್ರಜ್ಞಾನವನ್ನು ಸಹಕಾರಿಯಾಗಲಿದೆ.

ಎಚ್‌ಟಿಸಿ ಹೊಸ ಸ್ಮಾರ್ಟ್‌ಫೋನ್‌ಲ್ಲಿರುವ ವಿಶೇಷತೆಗಳೇನು?


ಮುಂದುಗಡೆ 5 ಎಂಪಿ ಕ್ಯಾಮೆರಾವನ್ನು ಹೊಂದಿದ್ದು,ಸೆಲ್ಫಿ ಫೋಟೋ ಕ್ಲಿಕ್ಕಿಸಲು ಟೈಮರ್‌ನ್ನು ಸಹ ಎಚ್‌ಟಿಸಿ ಈ ಸ್ಮಾರ್ಟ್‌‌ಫೋನಿಗೆ ನೀಡಿದೆ.

 ಡಾಟ್‌ ವ್ಯೂ ಫ್ಲಿಪ್‌ ಕವರ್‌:

ಎಚ್‌ಟಿಸಿ ಹೊಸ ಸ್ಮಾರ್ಟ್‌ಫೋನ್‌ಲ್ಲಿರುವ ವಿಶೇಷತೆಗಳೇನು?


ಎಚ್‌ಟಿಸಿ ಈ ಸ್ಮಾರ್ಟ್‌‌ಫೋನ್‌ಗಾಗಿ ಡಾಟ್‌ ವ್ಯೂ ಫ್ಲಿಪ್‌ಕವರನ್ನು ಬಿಡುಗಡೆ ಮಾಡಿದ್ದು,ಪೇಟೆಂಟ್‌ ಸಹ ತನ್ನ ಜೊತೆಗೆ ಇರಿಸಿಕೊಂಡಿದೆ. ಸ್ಮಾರ್ಟ್‌‌ಫೋನ್‌ ನೋಟಿಫಿಕೇಶನ್‌ಗಳು ಎಲ್‌ಇಡಿ ಶೈಲಿಯಲ್ಲಿ ಫ್ಲಿಪ್‌‌ಕವರ್‌ನಲ್ಲೇ ಕಾಣುವಂತೆ ಎಚ್‌ಟಿಸಿ ಹೊಸ ವಿನ್ಯಾಸದ ಫ್ಲಿಪ್‌ಕವರ್‌ನ್ನು ಅಭಿವೃದ್ಧಿಪಡಿಸಿದೆ.

 128 ಜಿಬಿ ವರೆಗೆ ಡೇಟಾವನ್ನು ಸಂಗ್ರಹಿಸಬಹುದು:

ಎಚ್‌ಟಿಸಿ ಹೊಸ ಸ್ಮಾರ್ಟ್‌ಫೋನ್‌ಲ್ಲಿರುವ ವಿಶೇಷತೆಗಳೇನು?

ಎಚ್‌ಟಿಸಿ ಇದುವರೆಗೆ ಎಸ್‌ಡಿ ಕಾರ್ಡ್‌ ಮೂಲಕ 64 ಜಿಬಿವರೆಗೆ ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್‌(ಎಚ್‌ಟಿಸಿ ಒನ್‌ ಮ್ಯಾಕ್ಸ್‌) ಈ ಹಿಂದೆ ಬಿಡುಗಡೆ ಮಾಡಿದೆ. ಆದರೆ 128 ಜಿಬಿ ವರೆಗಿನ ಡೇಟಾ ಸಂಗ್ರಹಿಸಬಹುದಾದ ಸ್ಮಾರ್ಟ್‌ಫೋನ್‌ನ್ನು ಮೊದಲ ಬಾರಿಗೆ ಬಿಡುಗಡೆ ಮಾಡಿದೆ.ಎಚ್‌ಟಿಸಿ ಒನ್‌ ಎಂ8 16/32 ಜಿಬಿ ಆಂತರಿಕ ಮೆಮೊರಿ 2ಜಿಬಿ ರ್‍ಯಾಮ್‌ನ್ನು ಒಳಗೊಂಡಿದೆ.

 ಭಾರತದಲ್ಲಿರುವ 4ಜಿಗೆ ಬೆಂಬಲ:

ಎಚ್‌ಟಿಸಿ ಹೊಸ ಸ್ಮಾರ್ಟ್‌ಫೋನ್‌ಲ್ಲಿರುವ ವಿಶೇಷತೆಗಳೇನು?


ಎಚ್‌ಟಿಸಿ ಒನ್‌ ಎಂ8 ಭಾರತದ 4ಜಿ ಮೊಬೈಲ್‌ ನೆಟ್‌ವರ್ಕ್‌‌ಗೆ ಬೆಂಬಲ ನೀಡುತ್ತದೆ. ಸದ್ಯಕ್ಕೆ ಭಾರತದಲ್ಲಿ ಕೆಲವೇ ಕೆಲವು ಕಂಪೆನಿಗಳ ಸ್ಮಾರ್ಟ್‌‌ಫೋನ್‌‌ಗಳು ಏರ್‌ಟೆಲ್‌ 4ಜಿ ನೆಟ್‌‌ವರ್ಕ್‌ಗೆ ಬೆಂಬಲ ನೀಡುತ್ತದೆ.ಐಫೋನ್‌ 5 ಎಸ್‌‌, ಐಫೋನ್‌ 5ಸಿ,ಎಲ್‌‌ಜಿ ಜಿ2, ಝೋಲೋ ಎಲ್‌ಟಿ 900 ಸ್ಮಾರ್ಟ್‌‌ಫೋನ್‌ಗಳು 4ಜಿಗೆ ಬೆಂಬಲ ನೀಡುತ್ತಿರುವ ಇತರ ಸ್ಮಾರ್ಟ್‌ಫೋನ್‌ಗಳಾಗಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot