ಭಾರತದಲ್ಲಿ ಲಭ್ಯವಿರುವ ಐದು ಅತ್ಯುತ್ತಮ ಮೆಡಿಕಲ್ ಆಪ್‌ಗಳು!
ಇದು ಡಿಜಿಟಲ್ ಜಗತ್ತು ಇಲ್ಲಿ ಎಲ್ಲವೂ ತಂತ್ರಜ್ಞಾನ ಆಧಾರಿತವಾಗಿದೆ. ಟಚ್‌ನಲ್ಲಿಯೇ ಕಾರ್ಯನಿರ್ವಹಿಸೋ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು, ದೇಹದ ಚಲನೆಯಲ್ಲಿಯೇ ಆರೋಗ್ಯದ ಮಾಹಿತಿ ನೀಡುವ ಸ್ಮಾರ್ಟ್‌ವಾಚ್‌ಗಳು ಕೂಡ ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಷ್ಟೇ ಯಾಕೆ ಯಾವುದೇ ವಿಚಾರಗಳನ್ನು ಬಗ್ಗೆ ಮಾಹಿತಿ ಬೇಕಾದರೂ, ಯಾವ ಕೆಲಸವನ್ನು ಬೇಕಾದರೂ ನಿರ್ವಹಿಸಬಲ್ಲ ಆಪ್‌ಗಳು ಕೂಡ ಇಂದು ಲಭ್ಯವಿವೆ. ಹೀಗಾಗಿ ಇಂದಿನ ಜಮಾನವೇ ಆಪ್‌ಗಳ ಮೇಲೆ ಸಾಕಷ್ಟು ಅವಲಂಬಿತವಾಗಿ ಹೋಗಿದೆ.

ಹೌದು, ಇಂದಿನ ಜಮಾನದಲ್ಲಿ ಎಲ್ಲವೂ ಆಪ್ ಆಧಾರಿತವಾಗಿದೆ, ಅಷ್ಟೇ ಯಾಕೆ ನೀವು ಕುಳಿತ ಜಾಗದಲ್ಲಿಯೇ ನಿಮ್ಮ ಆರೋಗ್ಯದ ಮಟ್ಟವನ್ನ ನಿರ್ಧರಿಸಬಲ್ಲ ಆಪ್‌ಗಳಿವೆ, ನಿಮ್ಮ ದೇಹಕ್ಕೆ ಬೇಕಾಗುವ ಔಷದಿಗಳ ಮಾಹಿತಿಯನ್ನು ತಿಳಿಸುವ ಹೆಲ್ತ್ ಆಧಾರಿತ ಆಪ್‌ಗಳು ಕೂಡ ಲಭ್ಯವಿದೆ. ಸದ್ಯ ಇಡೀ ಜಗತ್ತೇ ಕರೋನಾ ವೈರಸ್‌ನಂತಹ ಭೀಕರ ಆರೋಗ್ಯ ಸಮಸ್ಯಗೆ ತುತ್ತಾಗಿದೆ. ಇಂತಹ ಸಂಧರ್ಭದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಸೂಕ್ತ. ಅದರಲ್ಲೂ ನಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವ ಹಾಗೂ ನಾವು ಬಯಸಿದ ಔಷದಿಯನ್ನ ತಲುಪಿಸುವ ಆತ್ಮಿಯ ಸ್ನೇಹಿತನಿದ್ದರೆ ಹೇಗೆ ಅಲ್ಲವೇ. ಆ ಕೆಲಸ ಮಾಡಲು ಕೂಡ ಆಪ್‌ಗಳಿದ್ದು, ಆ ಅತ್ಯುತ್ತಮ ಆಪ್‌ಗಳು ಯಾವುದು ಅನ್ನೊದನ್ನು ಈ ಲೇಖನದಲ್ಲಿ ತಿಳಸಿಕೊಡ್ತೀವಿ ಓದಿ.

ನೆಟ್‌ಮೆಡ್
ಸದ್ಯ ಲಭ್ಯವಿರುವ ಅತ್ಯುತ್ತಮ ಮೆಡಿಕಲ್ ಆಪ್‌ಗಳಲ್ಲಿ ನೆಟ್‌ಮೆಡ್ ಕೂಡ ಒಂದಾಗಿದ್ದು. ಈ ಆಪ್ ಆನ್‌ಲೈನ್ ಫಾರ್ಮಸಿ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಆಪ್ ಅನ್ನು ಆಪ್ ಸ್ಟೋರ್ ಅಥವಾ ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು, ನಂತರ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳುವುದರಿಂದ ನಿಮಗೆ ತುಂಬಾ ಉಪಯುಕ್ತವಾಗಲಿದೆ. ಇದರಿಂದ ನಿಮಗೆ ಬೇಕಾದ ಔಷದಗಳನ್ನ ಖರೀದಿಸಲು ಅವಕಾಶ ಸಿಗುತ್ತದೆ. ವೈಧ್ಯರು ಶಿಫಾರಸು ಮಾಡಿದ ಔಷಧಿಯನ್ನು ಆಪ್‌ನಲ್ಲಿ ಅಪ್‌ಲೋಡ್ ಮಾಡಿ ನಿಮ್ಮ ವಿಳಾಸವನ್ನ ನಮೂದಿಸಿದರೆ ಸಾಕು ಭಾರತದ ಯಾವುದೇ ಮೂಲೆಯಲ್ಲಿ ನೀವಿದ್ದರೂ ನಿಮ್ಮ ಮನೆ ಬಾಗಿಲಿಗೆ ನೀವು ಆರ್ಡರ್ ಮಾಡಿದ ಔಷದಿಯನ್ನ ತಲುಪಿಸುತ್ತದೆ.

ಮೆಡ್‌ಲೈಫ್
ಇದು ಕೂಡ ಅತ್ಯುತ್ತಮ ಮೆಡಿಸನ್ ಒದಗಿಸುವ ಆಫ್ ಆಗಿದ್ದು, ನಿಮಗೆ ತುರ್ತು ಸಂಧರ್ಭಗಳಲ್ಲಿ ಬಾರಿ ಉಪಯುಕ್ತವಾಗಲಿದೆ. ಈ ಆಪ್‌ನಲ್ಲಿ ಕೂಡ ನೀವು ಔಷದಿಗಳನ್ನು ಮತ್ತು ಇತರ ಆರೋಗ್ಯ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಅಷ್ಟೇ ಯಾಕೆ ನಿಮಗೆ ಆರೋಗ್ಯ ಕೈ ಕೊಟ್ಟೆರೆ ನೀವು ಲಭ್ಯವಿರುವ ಸ್ಥಳದ ಸಮೀಪ ಇರುವ ಆಸ್ಪತ್ರೆ ಹಾಗೂ ವೈಧ್ಯರ ಬಗ್ಗೆ ಮಾಹಿತಿಯನ್ನ ನೀಡುತ್ತದೆ. ಅಲ್ಲದೆ ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತದೆ

ಮೈ ಶುಗರ್
ಮಧುಮೇಹದ ಬಗ್ಗೆ ನಿಖರ ಮಾಹಿತಿ ತಿಳಿಸುವ ಅಪ್ಲಿಕೇಶನ್‌ಗಳಲ್ಲಿ ಮೈ ಶುಗರ್ ಆಪ್ ಕೂಡ ಒಂದಾಗಿದೆ. ಇದು ಡಯಾಬಿಟಿಸ್ ಅಪ್ಲಿಕೇಶನ್ ಆಗಿದ್ದು, ಬ್ಲಡ್ ಶುಗರ್ ಬಗ್ಗೆ ಮಾಹಿತಿಯನ್ನ ನೀಡುವುದಲ್ಲದೆ ಅದರ ನಿಯಮಿತ ನಿಯಂತ್ರಣಕ್ಕೆ ಸಂಬಂಧಿಸಿದ ಮಾಹಿತಿಯನ್ನ ನೀಡುತ್ತದೆ. ಅಷ್ಟೇ ಅಲ್ಲ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಟ್ಯಾಬ್ ಮಾಡಲು ಇದರ ಲಾಗ್‌ಬುಕ್ ನಿಮಗೆ ಸಹಾಯ ಮಾಡುತ್ತದೆ. ಕಾರ್ಬ್-ಲಾಗರ್, ಇನ್ಸುಲಿನ್ ಕ್ಯಾಲ್ಕುಲೇಟರ್ ಮತ್ತು ಅಂದಾಜು HbA1c ಬಗ್ಗೆ ಮಾಹಿತಿ ನೀಡುತ್ತದೆ. ಅಲ್ಲದೆ ಮದುಮೇಹ ರೋಗಿಗಳ ಆಹಾರ ಪದ್ಧತಿ, ಔಷಧಿಗಳು ಮತ್ತು ಕಾರ್ಬ್ ಸೇವನೆಯನ್ನು ನೀಡುತ್ತದೆ.

ಪ್ರಾಕ್ಟೊ
ಈ ಅಪ್ಲಿಕೇಶನ್ ನಿಮಗೆ ವೈದ್ಯರನ್ನು ಹುಡುಕಲು, ತುರ್ತು ಸಮಯದಲ್ಲಿ ವೈಧ್ಯರನ್ನ ಬೇಟಿ ಮಾಡಲು, ಬೇಟಿ ಸಮಯವನ್ನ ಕಾಯ್ದಿರಿಸಲು ಮತ್ತು ಆನ್‌ಲೈನ್‌ನಲ್ಲಿ ವೈದ್ಯರನ್ನು ಸಂಪರ್ಕಿಸಲು ಅವಕಾಶ ಕಲ್ಪಿಸುತ್ತದೆ. ಇದಲ್ಲದೆ ಆನ್‌ಲೈನ್‌ನಲ್ಲಿ ಔಷಧಿಗಳು ಮತ್ತು ಆರೋಗ್ಯ ಉತ್ಪನ್ನಗಳು, ಆರೋಗ್ಯ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿಯೇ ಪರೀಕ್ಷಿಸಿಕೊಳ್ಳಲು ಇದು ನಿಮಗೆ ಅವಕಾಶ ಕಲ್ಪಿಸಿದೆ.

ಮೆಡ್‌ಸ್ಕೇಪ್
ಮೆಡ್‌ಸ್ಕೇಪ್ ಅಪ್ಲಿಕೇಶನ್ ಆರೋಗ್ಯಕ್ಕೆ ಸಂಬಂಧಿಸಿದ ವೀಡಿಯೊಗಳು ಮತ್ತು ವೈದ್ಯಕೀಯ ಕಾರ್ಯವಿಧಾನಗಳ ಜೊತೆಗೆ ವೈದ್ಯಕೀಯ ಸುದ್ದಿಗಳ ಬಗ್ಗೆ ಸಾಮಾನ್ಯ ಜ್ಞಾನವನ್ನು ಒದಗಿಸುತ್ತದೆ. ಅಷ್ಟೇ ಅಲ್ಲ ಮೆಡ್‌ಸ್ಕೇಪ್ ಔಷಧಿಗಳ ಅಡ್ಡಪರಿಣಾಮಗಳ ಬಗ್ಗೆ ಕೂಡ ಮಾಹಿತಿಯನ್ನು ನೀಡುತ್ತದೆ. ಇದಲ್ಲದೆ ನಿಮಗೆ ಬೇಕಾದ ಯಾವುದೇ ಔಷದಿಯನ್ನ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೆ ಆ ಔಷದಿಯ ಪರಿಣಾಮವೇನು,ಅದರಿಂದಾಗುವ ಉಪಯೋಗವೇನು ಅನ್ನೊದರ ಮಾಹಿತಿಯನ್ನ ಈ ಆಪ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








