Home
ಸುದ್ದಿಜಾಲ

ಆನ್‌ಲೈನ್‌ನಲ್ಲಿ ಹಣಗಳಿಸಲು ಲಭ್ಯವಿರುವ 5 ಅತ್ಯುತ್ತಮ ಆಪ್‌ಗಳು!

ಇದು ಡಿಜಿಟಲ್‌ ಜಮಾನ, ಇಲ್ಲಿ ಎಲ್ಲವೂ ಟೆಕ್ನಾಲಜಿ ಆಧಾರಿತವಾಗಿದೆ. ಅದರಲ್ಲೂ ಟೆಕ್ನಾಲಜಿ ಮುಂದುವರೆದಂತೆ ಎಲ್ಲವೂ ಆಪ್‌ಮಯವಾಗುತ್ತಿವೆ. ಅಂಗೈ ಅಗಲದ ಸ್ಮಾರ್ಟ್‌ಫೋನ್‌ಗಳು ಜಾಸ್ತಿಯಾದಂತೆ ಈ ಆಪ್‌ಗಳ ಭರಾಟೆ ಕೂಡ ಜಾಸ್ತಿ ಆಗಿದ್ದು. ಎಲ್ಲಾ ಕೆಲಸಗಳಿಗೂ ಆಪ್‌ ಆಧಾರಿತ ಸೇವೆಗಳು ಇಂದು ಲಭ್ಯವಾಗುತ್ತಿವೆ. ಎಲ್ಲಾ ಮಾದರಿಯ ಆಪ್‌ಗಳು ಕೂಡ ಇಂದು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿವೆ. ಸದ್ಯ ಭಾರತದಲ್ಲಿಯೂ ಕೂಡ ಆಪ್‌ಗಳ ಭರಾಟೆ ಜೋರಾಗಿದ್ದು, ಎಲ್ಲಾ ಸೇವಾವಲಯದಲ್ಲೂ ಇಂದು ಆಪ್‌ಗಳ ಬಳಕೆ ಜಾಸ್ತಿಯಾಗುತ್ತಿದೆ.

ಹೌದು

ಹೌದು, ಇಂದಿನ ದಿನಗಳಲ್ಲಿ ಆಪ್‌ಗಳ ಬಳಕೆ ಜಾಸ್ತಿಯಾಗುತ್ತಿದ್ದು, ಎಲ್ಲಾ ವಲಯಗಳಲ್ಲೂ ಆಪ್‌ಗಳ ಬಳಕೆಯನ್ನ ನಾವಿಂದು ಕಾಣಬಹುದಾಗಿದೆ. ಸದ್ಯ ನಾವಿಂದು ಭಾರತದಲ್ಲಿ ಲಭ್ಯವಿರುವ ಹಣ ಸಂಪಾಧಿಸುವ ಆಪ್ಲಿಕೇಶನ್‌ಗಳ ಬಗ್ಗೆ ಮಾಹಿತಿಯನ್ನ ನೀಡುತ್ತೀವಿ ನೊಡಿ. ಸದ್ಯ ಆಪ್‌ಗಳ ಸೇವೆಗಳಲ್ಲಿ ಕೆಲ ಆಪ್‌ಗಳು ಕ್ಯಾಶ್‌ ಬ್ಯಾಕ್‌ ರೂಪದಲ್ಲಿ ಬಳಕೆದಾರರಿಗೆ ಹಣವನ್ನು ನಿಡಿದರೆ, ಇನ್ನು ಕೆಲವು ಆಪ್‌ಗಳು ಬಳಕೆದಾರರಿಗೆ ಆನ್‌ಲೈನ್‌ನಲ್ಲಿ ಹಣಗಳಿಸುವ ಸುಲಭ ಮಾರ್ಗವಾಗಿವೆ. ಅಂತಹ ಮಾದರಿಯ ಕೆಲವು ಅತ್ಯುತ್ತಮ ಆಪ್‌ಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡುತ್ತಿವಿ ಓದಿ.

ಪೇಬಾಕ್ಸ್

ಪೇಬಾಕ್ಸ್

ಇದು ಭಾರತದಲ್ಲಿ ಲಭ್ಯವಿರುವ ಬಳಕೆದಾರರು ಹಣಗಳಿಸಬಹುದಾದ ಅತ್ಯುತ್ತಮ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇದು ಪೇಟಿಎಂ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಆಪ್‌ ಆಗಿದೆ. ರಿಯಲ್‌ಟೈಮ್‌ ಉಳಿತಾಯ ಮಾಡುವುದರ ಜೊತೆಗೆ PayTM ಕ್ಯಾಶ್‌ಬ್ಯಾಕ್ ಹಣವನ್ನು ಸಂಪಾದಿಸುವುದು ಹೇಗೆ ಅನ್ನುವುದನ್ನ ಪೇಬಾಕ್ಸ್ ಅವಕಾಶ ಕಲ್ಪಿಸುತ್ತದೆ. ಇನ್ನು ಇದು ಸರಳ ವೆಬ್ ಆಧಾರಿತ ಅಪ್ಲಿಕೇಶನ್‌ ಆಗಿದ್ದು, ನೋಂದಣಿಯ ನಂತರ ಇನ್‌ಸ್ಟಾಂಟ್‌ ಹಣವನ್ನು ಗಳಿಸಬಹುದಾಗಿದೆ. ಈ ಹಣ ಸಂಪಾದಿಸುವ ಅಪ್ಲಿಕೇಶನ್‌ನಿಂದ, ನೀವು ಕ್ಯಾಶ್‌ಬ್ಯಾಕ್ ಅನ್ನು PayTM ಅಥವಾ Mobikwik Wallet ಗೆ ವರ್ಗಾಯಿಸಬಹುದಾಗಿದೆ. ಇದರಲ್ಲಿ ನಿಮ್ಮದೆ ಆದ ನಿಗದಿತ ದೈನಂದಿನ ಚಟುವಟಿಕೆಗಳನ್ನು ಮಾಡುವ ಮೂಲಕ ನೀವು ಸಾವಿರಾರು ಹಣವನ್ನು ಸಂಪಾದಿಸಬಹುದಾಗಿದೆ.

4 ಫನ್

4 ಫನ್

ಈ ಆಪ್ಲಿಕೇಶನ್‌ ಕೂಡ ಹಣ ಗಳಿಸ ಬಹುದಾದ ಆಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. 2020 ಪ್ರಾರಂಭದಲ್ಲಿ ಬಳಕೆದಾರರಿಗೆ ಹಣವನ್ನು ಪಾವತಿಸುವ ಟ್ರೆಂಡಿಂಗ್ ಅಪ್ಲಿಕೇಶನ್‌ಗಳಲ್ಲಿ ಇದು ಕೂಡ ಒಂದಾಗಿ ಗುರುತಿಸಿಕೊಂಡಿದೆ. ಇನ್ನು ಇದು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಮೂಲಕ ಹಣ ಸಂಪಾದಿಸಲು ಅವಕಾಶ ನೀಡುತ್ತದೆ. ಹೊಸ ಮೊಬೈಲ್ ಸಂಖ್ಯೆಯೊಂದಿಗೆ ಈ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಿದ ನಂತರ, ಬಳಕೆದಾರರಿಗೆ ರೂ .100 ಸಿಗುತ್ತದೆ, ಅದನ್ನು ಪೇಟಿಎಂ ಖಾತೆಗೆ ವರ್ಗಾಯಿಸಬಹುದಾಗಿದೆ. ಅಲ್ಲದೆ ಇದರ ಮೂಲಕ ಇನ್ನಷ್ಟು ಹಣಗಳಿಸಲು ಸಾಧ್ಯವಿದ್ದು, ಫ್ರೀ ರಿಚಾರ್ಜ್‌, ಟಿಕೆಟ್ ಬುಕಿಂಗ್, ಪ್ರಯಾಣ ಇತ್ಯಾದಿಗಳನ್ನು ಮಾಡಲು ಅವಕಾಶ ಸಿಗಲಿದೆ.

ರೋಜ್ ಧನ್

ರೋಜ್ ಧನ್

ರೋಜ್ ಧನ್ ವೋಚರ್‌ಶೋ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದ್ದು ಇದು ಬಳಕೆದಾರರಿಗೆ ಸುಲಭವಾಗಿ ಹಣವನ್ನು ಸಂಪಾದಿಸಲು ಅನುವು ಮಾಡಿಕೊಡುತ್ತದೆ.ಇದು ಭಾರತದ ಅತ್ಯುತ್ತಮ ಹಣ ಗಳಿಸುವ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದ್ದು, ವೇಗವಾಗಿ ಹಣ ಸಂಪಾದಿಸಲು ಇದು ಅತ್ಯಂತ ಉಪಯುಕ್ತ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ.ಇದರಲ್ಲಿ ಲಬ್ಯವಾಗುವ ಕ್ರೆಡಿಟ್‌ ಕಾರ್ಡ್‌ಗಳಿಂದ ಹಣವನ್ನ ಗಳಿಸಬಹುದಾಗಿದೆ. ರೋಜ್ ಧಾನ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಸೈನ್ ಅಪ್ ಮಾಡಿದ ನಂತರ ತಕ್ಷಣ 25 ರೂ ಹಣಗಳಿಸಬಹುದಾಗಿದೆ. ಮೊದಲು ಪ್ರೊಫೈಲ್ ಐಕಾನ್‌ಗೆ ಹೋಗಿ.> ರೆಫರೆಲ್‌ ಕೋಡ್ ಸೇರಿಸಿ> ಪ್ರತಿನಿತ್ಯ ಹಣವನ್ನ ಗಳಿಸಬಹುದಾಗಿದೆ.

ಕ್ರೆಡ್

ಕ್ರೆಡ್

ಲಬ್ಯವಿರುವ ಅತ್ಯುತ್ತಮ ಹಣಕಾಸು ಆಪ್‌ಗಳಲ್ಲಿ ಇದು ಕೂಡ ಒಂದಾಗಿದ್ದು, ಇದನ್ನ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್‌ ಮಾಡಿದ ನಂತರ ಕ್ರೆಡಿಟ್‌ ಕ್ಲಬ್‌ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡಬೇಕಿರುತ್ತದೆ. ನಂತರ ಕ್ರೆಡ್‌ಗೆ ಅನ್ವಯಿಸು ಆಯ್ಕೆಮಾಡಿ ನಂತರ ನಿಮ್ಮ ಮೊಬೈಲ್‌ ಖಾತೆಯನ್ನ ನಿಮ್ಮ ಬ್ಯಾಂಕ್‌ ಖಾತೆಯಂತೆ ನೊಂದಾಯಿಸಬೇಕಾಗುತ್ತದೆ. ನಂತರ ನಿವು ಕ್ರೇಡಿಟ್‌ಅನ್ನು ಇದರಲ್ಲಿ ನೊಮದಾಯಿಸಬೇಕು ಈ ಮೂಲಕ ನೀವು ಪ್ರತಿಭಾರಿಯೂ ಪಾವತಿಸುವ ಕ್ಯಾಶ್‌ ಮೂಲಕ ಕ್ಯಾಶ್‌ಬ್ಯಾಕ್‌ ಅನ್ನು ಪಡೆಯಬಹುದಾಗಿದೆ. 10 ಕ್ರೆಡಿಟ್ ಪಡೆದರೆ ಅದು 1000 ರೂ.ಗಿಂತ ಹೆಚ್ಚಿನ ಕ್ಯಾಶ್‌ಬ್ಯಾಕ್ ಗಳಿಸಬಹುದಾಗಿದೆ.

ಅಮೆಜಾನ್ ಪೇ

ಅಮೆಜಾನ್ ಪೇ

ಆನ್‌ಲೈನ್‌ ಮೂಲಕ ಹಣ ಗಳಿಸುವ ಅಪ್ಲಿಕೇಶನ್‌ಗಳಲ್ಲಿ ಇದು ಕೂಡ ಒಂದಾಗಿದೆ. ಈ ಆಪ್ಲಿಕೇಶನ್‌ಪ್ರತಿ ರೆಫರಲ್‌ಗೆ ಕ್ಯಾಶ್‌ಬ್ಯಾಕ್ ಗಳಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಯುಪಿಐ ವಹಿವಾಟಿಗೆ ಬಳಕೆದಾರರು ಹೊಸಬರಾಗಿದ್ದರೆ, ಬಳಕೆದಾರರು ರೂ. 75 / - ಅಮೆಜಾನ್ ಪೇ ಅನ್ನು ಪಡೆಯಲು ಅರ್ಹರಾಗಿರುತ್ತಾರೆ. ಜೊತೆಗೆ ಪ್ರತಿಭಾರಿಯು ಅಮೆಜಾನ್ ಪೇ ಯುಪಿಐಗೆ ಹೋಗಿ ಮತ್ತು ಆಹ್ವಾನಿಸಿ ಕ್ಲಿಕ್ ಮಾಡಿ ಮತ್ತು ನಿಮ್ಮ ಸ್ನೇಹಿತರನ್ನು ಆಹ್ವಾನಿಸಲು ಒಂದು ಆಯ್ಕೆಯನ್ನು ಸಂಪಾದಿಸಿ ಮತ್ತು ರೂ. 31 ಅನ್ನು ಪಡೆಯಬಹುದಾಗಿದೆ.

Best Mobiles in India

English summary
There are tons of Money Earning Apps In India. In these apps offer, you could earn double money online. And out which we listed only those that guaranteed lets you earn money instantly. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+