ಆನ್ಲೈನ್ ಶಾಪಿಂಗ್ ಗೆ 5 ಸುರಕ್ಷಾ ಸೂತ್ರಗಳು

Posted By: Varun
ಆನ್ಲೈನ್ ಶಾಪಿಂಗ್ ಗೆ 5 ಸುರಕ್ಷಾ ಸೂತ್ರಗಳು

ದುಡ್ಡಿನ ವಿಷಯದಲ್ಲಿ ಎಷ್ಟು ಜಾಗರೂಕರಾಗಿದ್ದರೂ ಸಾಲದು. ಅದರಲ್ಲೂ ಆನ್ಲೈನ್ ಶಾಪಿಂಗ್ ಮಾಡುವಾಗ ಎಚ್ಚರ ವಹಿಸಲೇ ಬೇಕು. ಒಳ್ಳೆಯದು ಕೆಟ್ಟದ್ದು ಎಲ್ಲ ಕಡೆ ಇದೆ ಅಂದ ಮೇಲೆ ಒಳ್ಳೆಯದನ್ನ ಮಿಸ್ ಮಾಡಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ನೋಡಿ. ಹಾಗಾಗಿಯೇ ಆನ್ಲೈನ್ಶಾಪಿಂಗ್ ಮಾಡುವ ಸುರಕ್ಷಿತ 5 ವಿಧಾನಗಳು ಇಲ್ಲಿವೆ.

1 .ಗೊತ್ತಿರುವ ವೆಬ್ ಸೈಟ್ ಮೂಲಕವೆ ಮಾಡಿ:ಸರ್ಚ್ ಇಂಜಿನ್ ಮೂಲಕ ಶಾಪಿಂಗ್ ಮಾಡುವ ವೆಬ್ಸೈಟ್ ಹುಡುಕುವ ಬದಲು ಗೊತ್ತಿರುವ ಅಥವಾ ನಿಮ್ಮ ಸ್ನೇಹಿತರು ಉಪಯೋಗಿಸುವ ತಾಣಗಳಿಂದಲೇ ಖರೀದಿಸಿ. ಕೆಲವೊಂದು ವೆಬ್ ಸೈಟ್ ಗಳು ನಿಮ್ಮಲ್ಲಿನ ಅಮೂಲ್ಯವಾದ ಖಾಸಗಿ ಮಾಹಿತಿಯನ್ನ ಸಂಗ್ರಹಿಸಿ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

2. ಸಶಕ್ತ ಪಾಸ್ವರ್ಡ್ ಉಪಯೋಗಿಸಿ : ಸುಲಭವಾಗಿ ಊಹೆಗೆ ಸಿಕ್ಕುವ ಪಾಸ್ವರ್ಡ್ ಗಳಿಂದ ನಿಮ್ಮಅಕೌಂಟ್ ಅನ್ನ ಸುಲಭವಾಗಿ ಹ್ಯಾಕ್ ಮಾಡಬಹುದು. ಇದರಿಂದ ತಪ್ಪಿಸಿಕೊಳ್ಳಲು ಸಂಖ್ಯೆ ಹಾಗು ಅಕ್ಷರ ಮಿಶ್ರಿತ ಪಾಸ್ವರ್ಡ್ ಕೊಟ್ಟರೆ ನಿಮ್ಮ ಅಕೌಂಟ್ ಸುರಕ್ಷಿತವಾಗಿಡಬಹುದು.

3. ಸುರಕ್ಷತೆ ಕೋಡ್ ಪರೀಕ್ಷಿಸಿ: ಯಾವುದೇ ಶಾಪಿಂಗ್ ವೆಬ್ಸೈಟ್ ನೋಡುವಾಗ SSL ( secure socket locker) ಇದೆಯೇಎಂದು ಪರೀಕ್ಷಿಸಿ.

4. ಎಲ್ಲಾ ಮಾಹಿತಿ ಹೊರಗೆಡವಬೇಡಿ: ಯಾವುದೇ ಆನ್ಲೈನ್ ಶಾಪಿಂಗ್ ನಿಮ್ಮ ಸೆಕ್ಯೂರಿಟಿ ಕೋಡ್ ನ ಮಾಹಿತಿ ಅಥವಾ ಖಾಸಗಿ ಮಾಹಿತಿ ಕೇಳುವುದಿಲ್ಲ. ಹಾಗಾಗಿ ಈ ವಿಚಾರದಲ್ಲಿ ಎಚ್ಚರ ವಹಿಸಿ.

5. ನಿಮ್ಮ ಕ್ರೆಡಿಟ್ ಕಾರ್ಡ್ ವ್ಯವಹಾರದ ಬಗ್ಗೆ ಆಗಾಗ ಲೆಕ್ಕ ಇಡಿ: ಕ್ರೆಡಿಟ್ ಕಾರ್ಡ್ ನ ವ್ಯವಹಾರದ ಬಗ್ಗೆಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಿ. ಇಲ್ಲವೆ ನಿಮ್ಮ ಮೊಬೈಲ್ ಗೆ ಬರುವ ವ್ಯವಹಾರದ ಎಸ್.ಎಂ.ಎಸ್ ಆಗಾಗ ಗಮನಿಸುತ್ತಿರಿ.ಯಾವುದೇ ರೀತಿಯ ಸಂಶಯ ಬಂದಲ್ಲಿ ನೀವು ನಿಮ್ಮ ಬ್ಯಾಂಕ್ ಅನ್ನ ಸಂಪರ್ಕಿಸಬಹುದು.

ಮೇಲ್ಕಂಡ ಸೂತ್ರಗಳನ್ನು ಪಾಲಿಸಿ, ಶಾಪಿಂಗ್ ಮಜಾ ಇಮ್ಮಡಿಗೊಳಿಸಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot