ಆಫರ್‌ನಲ್ಲಿ ಲಭ್ಯವಾಗಲಿವೆ ಆಪಲ್‌ನ ಈ ಐದು ಆಪ್‌ಗಳು!

|

ಹಬ್ಬ ಹರಿದಿನಗಳು, ರಜಾದಿನಗಳು ಬಂತು ಅಂದ್ರೆ ಸಾಕು ಟೆಕ್‌ ಮಾರುಕಟ್ಟೆಯಲ್ಲಿ ಸಾಕಷ್ಟು ಆಫರ್‌ಗಳ ಸುರಿಮಳೆ ಆಗುತ್ತೆ. ಗ್ರಾಹಕರನ್ನ ಸೆಳೆಯುವ ದೃಷ್ಟಿಯಿಂದ ಕೆಲವು ಕಂಪೆನಿಗಳು ರಿಯಾಯಿತಿ ದರವನ್ನ ಘೋಷಣೆ ಮಾಡಿರುತ್ತವೆ. ಸದ್ಯ ಐಪೋನ್‌ ಕೂಡ ತನ್ನ ಬಳಕೆದಾರರಿಗೆ ರಿಯಾಯಿತಿ ದರದಲ್ಲಿ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಿದೆ. ಈ ಅವಕಾಶ ಸೀಮಿತ ಅವಧಿಯವರೆಗೆ ಮಾತ್ರ ಆಗಿದ್ದು, ಅದಷ್ಟು ಬೇಗ ಐಪೋನ್‌ ಬಳಕೆದಾರರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.

ಹೌದು

ಹೌದು, ಐಫೋನ್ ಮತ್ತು ಐಪ್ಯಾಡ್ ಅಪ್ಲಿಕೇಶನ್‌ಗಳು ಸೀಮಿತ ಅವಧಿಗೆ ಉಚಿತವಾಗಿ ಲಭ್ಯವಿದೆ. ಈ ರಿಯಾಯಿತಿ ದರದ ಅವಕಾಶ ಒಂದು ವಾರದಲ್ಲಿ ಕೊನೆಗೊಳ್ಳಬಹುದು ಇಲ್ಲವೇ ಒಂದು ದಿನದಲ್ಲಿಯೇ ಕೊನೆಗೊಳ್ಳಬಹುದು. ಸಾಮಾನ್ಯ ದಿನಗಳಲ್ಲಿ ಈ ಆಪ್ಲಿಕೇಶನ್‌ಗಳಿಗೆ ಆಪಲ್‌ ಸ್ಟೋರ್‌ನಲ್ಲಿ ಶುಲ್ಕ ಪಾವತಿಸಿ ಈ ಆಪ್‌ಗಳನ್ನ ಡೌನ್‌ಲೋಡ್‌ ಮಾಡಬೇಕಾಗುತ್ತದೆ. ಅಷ್ಟಕ್ಕೂ ಉಚಿತ ದರದಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾದ ಐಫೋನ್ ಮತ್ತು ಐಪ್ಯಾಡ್ನ ಆ ಐದು ಆಪ್‌ಗಳು ಯಾವುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಕೊಡ್ತೀವಿ ನೋಡಿ.

ಟವರ್‌ ಆಫ್‌ ಪಾರ್ಚುನ್‌

ಟವರ್‌ ಆಫ್‌ ಪಾರ್ಚುನ್‌

ಟವರ್‌ ಆಫ್‌ ಫಾರ್ಚುನ್‌ ಐಫೋನ್ ಮತ್ತು ಐಪ್ಯಾಡ್ ಫೋನ್‌ಗಳ ಒನ್‌ ಆಫ್‌ ದಿ ಬೆಸ್ಟ್‌ ಗೇಮ್‌ ಆಗಿದೆ. ರೆಟ್ರೋ ಶೈಲಿಯಲ್ಲಿ ಮೂಡಿ ಬರುವ ಈ ಗೇಮ್‌ ಮಗಳನ್ನ ಕಾಪಾಡುವ ವೃದ್ದ ತಂದೆಯ ಮಾದರಿಯಲ್ಲಿ ಮೂಡಿ ಬಂದಿದ್ದು ಗೇಮ್‌ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಈ ಗೇಮ್‌ನಲ್ಲಿ ಯುದ್ಧ, ನಿಧಿ, ಕೌಟುಂಬಿ ಸಾಮರಸ್ಯದಂತಹ ಸನ್ನಿವೇಶಗಳು ಮೂಡಿಬರುತ್ತವೆ.

ಅಲ್ಲದೆ 39 ಹಂತಗಳಲ್ಲಿ ಶತೃಗಳನ್ನ ತಂದೆ ಎದುರಿಸುವ ಸನ್ನಿವೇಶ ಮಗಳನ್ನ ರಕ್ಷಣೆ ಮಾಡುವ ಸನ್ನಿವೇಶಗಳು ಈ ಗೇಮ್‌ನಲ್ಲಿ ಮೂಡಿಬಂದಿದೆ. ಸಾಮಾನ್ಯ ದಿನಗಳಲ್ಲಿ ಈ ಆಪ್ಲಿಕೇಶನ್ ಡೌನ್‌ಲೋಡ್‌ ಶುಲ್ಕ 70.40ರೂ ಇರಲಿದ್ದು, ಇದೀಗ ಇದನ್ನ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶವಿದ್ದು ರೆಟ್ರೋ ಶೈಲಿ ಇಷ್ಟ ಪಡುವವರಿಗೆ ಉತ್ತಮ ಆಯ್ಕೆಯಾಗಿದೆ.

ಐಕ್ಯೂ ಟೆಸ್ಟ್ ಪ್ರೊ

ಐಕ್ಯೂ ಟೆಸ್ಟ್ ಪ್ರೊ

ನಮ್ಮ ಬುದ್ದಿ ಶಕ್ತಿಗೆ ಕೆಲಸ ಕೊಡುವ ಉತ್ತಮ ಗೇಮ್‌ ಆಪ್ಲಿಕೇಶನ್‌ಗಳಲ್ಲಿ ಇದು ಕೂಡ ಒಂದಾಗಿದ್ದು. ಈ ಗೇಮ್ ಆಪ್‌ನಲ್ಲಿ ನಮ್ಮ ಐಕ್ಯೂ ಮಟ್ಟವನ್ನ ಅರಿಯಬಹುದಾಗಿದೆ. ಮೆದುಳಿಗೆ ಕೆಲಸಕೊಡುವ ಗೇಮ್‌ ಮಾದರಿ ಇದರಲ್ಲಿ ಇರಲಿದ್ದು ಬುದ್ದಿ ಕ್ಷಮತೆ ಬಯಸುವವರು ಈ ಗೇಮ್‌ ಆಪ್ಲಿಕೇಶನ್‌ಗಳನ್ನ ಹೆಚ್ಚು ಇಷ್ಟ ಪಡುತ್ತಾರೆ. ಸಾಮಾನ್ಯ ದಿನಗಳಲ್ಲಿ ಈ ಆಪ್ಲಿಕೇಶನ್‌ ಡೌನ್‌ಲೋಡ್‌ ಶುಲ್ಕ 212.46ರೂ ಆಗಿದ್ದು, ಸದ್ಯ ಇದೀಗ ಉಚಿತವಾಗ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದ್ದು, ಒಮ್ಮೆ ಐಪ್ಯಾಡ್‌, ಆಪಲ್‌ ಪ್ಲೇ ಸ್ಟೋರ್‌ಗೆ ವಿಸಿಟ್‌ ಮಾಡಿ.

ಫೋಟೊ ಎಡಿಟರ್‌

ಫೋಟೊ ಎಡಿಟರ್‌

ಐಫೋನ್ ಮತ್ತು ಐಪ್ಯಾಡ್ ಫೋನ್‌ಗಳ ಒನ್‌ ಆಪ್‌ ದಿ ಬೆಸ್ಟ್‌ ಪೋಟೋ ಎಡಿಟರ್‌ ಆಪ್ಲಿಕೇಶನ್‌ ಇದಾಗಿದ್ದು. ಈ ಆಪ್‌ನಿಂದ ನಿಮ್ಮ ಜೀವನದ ಸೂಂದರ ಕ್ಷಣಗಳ ಪೋಟೋವನ್ನ ಇನ್ನಷ್ಟು ಸುಂದರವಾಗಿಸಬಹುದಾಗಿದೆ. ಅಷ್ಟೇ ಅಲ್ಲ ಪೋಟೋ ಜೊತೆಗೆ ಡೈರಿ ಬರೆಯೋದಕ್ಕೂ ಇದರಲ್ಲಿ ಅವಕಾಶ ನೀಡಿರೊದ್ರಿಂದ ಉತ್ತಮ ಆಯ್ಕೆಯಾಗಿದೆ. ಜೊತೆಗೆ ಈ ಆಪ್‌ನಲ್ಲಿ ಉತ್ತಮ ಗುಣಮಟ್ಟದ ಗ್ರಾಫಿಕ್ಸ್‌ ಟೆಂಪ್ಲೇಟ್‌ ಲಭ್ಯವಿದ್ದು ಪೋಟೋಗಳ ಸೌಂದರ್ಯವನ್ನ ಇನ್ನಷ್ಟು ಹೆಚ್ಚಿಸಬಹುದಾಗಿದೆ. ಇನ್ನು ಸಾಮಾನ್ಯ ದಿನಗಳಲ್ಲಿ ಇದರ ಡೌನ್‌ಲೋಡ್‌ ಶುಲ್ಕ 70.39ರೂ ಆಗಿದ್ದು ಸದ್ಯ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದ್ದು, ಸೀಮಿತ ದಿನಗಳವರೆಗೆ ಮಾತ್ರ ಈ ಅವಕಾಶ ಸಿಗಲಿದೆ.

ಕಿಪ್‌ಕಾಮ್‌

ಕಿಪ್‌ಕಾಮ್‌

ಇದು ನಮ್ಮ ಆರೋಗ್ಯದ ಮಾಹಿತಿಯನ್ನ ತಿಳಿಸುವ ಒನ್‌ ಆಪ್‌ ದಿ ಬೆಸ್ಟ್‌ ಆಪ್‌ ಆಗಿದೆ. ಈ ಆಪ್‌ನ ಮೂಲಕ ಉಸಿರಾಟ ತೊಂದರೆಗಳ ವಿರುದ್ದ ಹೋರಾಡಬಹುದಾಗಿದೆ. ನಮ್ಮ ದೇಹವನ್ನ ಶಾಂತಗೊಳಿಸುವ ಮತ್ತು ದೀರ್ಘ ಉಸಿರಾಟದ ವ್ಯಾಯಾಮ ಮಾಡಲು ಬೇಕಾದ ಮಾಹಿತಿಯನ್ನ ಇದು ತಿಳಿಸಿಕೊಡುತ್ತದೆ. ಒಂದು ರೀತಿಯಲ್ಲಿ ಇದು ವ್ಯಾಯಾಮ ಕಲಿಸಿಕೊಡುವ ಆಪ್‌ ಕೂಡ ಹೌದು. ಇದು ನಮ್ಮ ದೇಹದ ಒತ್ತಡವನ್ನ ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ ನಮ್ಮ ಉಸಿರಾಟದ ಬಗ್ಗೆ ಇದರ ಸೆಟ್ಟಿಂಗ್‌ ಮೂಡ್‌ನಲ್ಲಿ ಮಾಹಿತಿಯನ್ನ ಸೆಟ್‌ ಮಾಡಬಹುದಾಗಿದೆ. ಸಾಮಾನ್ಯ ದಿನಗಳಲ್ಲಿ ಈ ಆಪ್‌ ಡೌನ್‌ಲೋಡ್‌ ಶುಲ್ಕ 70.40ರೂ ಆಗಿದ್ದು ಸದ್ಯ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಡಕ್ ಹಂಟ್ AR

ಡಕ್ ಹಂಟ್ AR

ಇದೊಂದು ಗೇಮ್‌ ಆಪ್‌ ಆಗಿದ್ದು ಹೈ ಪವರ್‌ ಸಿಂಗಲ್‌ ಪ್ಲೇಯರ್‌ ಗೇಮ್‌ ಇದಾಗಿದೆ. ಈ ಗೇಮ್‌ನಲ್ಲಿ ಬಾತುಕೋಳಿಗಳು ಹಾರುವ ಮುನ್ನವೇ ಗನ್‌ ಇಂದ ಶೂಟ್‌ ಮಾಡಬೇಕಾಗಿರುತ್ತದೆ. ಈ ಗೇಮ್‌ ಟೈಂ ಪಾಸ್‌ ಮಾಡುವುದಕ್ಕೆ ಉತ್ತಮ ಅನುಭವ ನೀಡಲಿದೆ. ಅಲ್ಲದೆ ಈ ಗೇಮ್‌ ಅನ್ನ ಎಲ್ಲಾ ವಯೋಮಾನದವರು ಆಡಬಹುದಾಗಿದ್ದು, ಗೇಮ್‌ ಮುಂದುವರೆದಂತೆ ಆಟದ ಗತಿ ಕೂಡ ವೇಗವಾಗಿರುತ್ತದೆ. ಸಾಮಾನ್ಯ ದಿನಗಳಲ್ಲಿ 141.50ರೂ ಡೌನ್‌ಲೋಡ್‌ ಶುಲ್ಕ ಇರಲಿದ್ದು ಸದ್ಯ ಉಚಿತವಾಗಿ ಡೌನ್‌ಲೋಡ್‌ ಮಾಡಬಹುದಾಗಿದೆ. ಈ ಗೇಮ್‌ ಇಷ್ಟ ಪಡುವವರು ಈ ಅವಕಾಶವನ್ನ ಉಪಯೋಗಿಸಿಕೊಳ್ಳಬಹುದಾಗಿದೆ.

Most Read Articles
Best Mobiles in India

Read more about:
English summary
The weeks ahead of the holidays each year are all about getting the best deals on popular products. But no matter how deep the discounts are out there right now, getting stuff for free is still better. We’ve rounded up the five best paid iPhone and iPad apps that are on sale for free on Thursday and listed them right here in this post. These are all limited-time deals that could end at any moment though, so hurry up and download them before it’s too late.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X