ಹ್ಯಾಪಿ ನ್ಯೂ ಇಯರ್ ಆಫರ್: ಜಿಯೋ ಸಿಮ್ ಖರೀದಿಗೆ 5 ಕಾರಣಗಳು

By Suneel
|

ರಿಲಾಯನ್ಸ್ ಜಿಯೋ ಮಾಲಿಕರಾದ ಮುಕೇಶ್ ಅಂಬಾನಿ'ರವರು ನೆನ್ನೆ ತಾನೆ(ಗುರುವಾರ) ಜಿಯೋ ಗ್ರಾಹಕರಿಗೆ ಹ್ಯಾಪಿ ನ್ಯೂಸ್ ಹೇಳಿದ್ರು. ಅದು ಜಿಯೋ ಹಳೆಯ ಮತ್ತು ಹೊಸ ಗ್ರಾಹಕರಿಬ್ಬರು ಸಹ ಮಾರ್ಚ್ 31 20117 ರವರೆಗೆ 'ಹ್ಯಾಪಿ ನ್ಯೂ ಇಯರ್' ಆಫರ್‌ನೊಂದಿಗೆ ಉಚಿತ ಡೇಟಾ, ಉಚಿತ ವಾಯ್ಸ್ ಕರೆ ಮತ್ತು ಮೆಸೇಜ್‌ಗಳ ಸೇವೆ ಪಡೆಯಬಹುದು ಎಂಬುದು.

ಹ್ಯಾಪಿ ನ್ಯೂ ಇಯರ್ ಆಫರ್: ಜಿಯೋ ಸಿಮ್ ಖರೀದಿಗೆ 5 ಕಾರಣಗಳು

ವಿಪರ್ಯಾಸ ಅಂದ್ರೆ ಜಿಯೋದ ನೆಟ್‌ವರ್ಕ್‌ ಬಗ್ಗೆ ಇರುವ ಹಲವು ಬಳಕೆದಾರರ ವಿಮರ್ಶೆಯಿಂದ, ಜಿಯೋ ಮಾರ್ಚ್ 31 20117 ರವರೆಗೆ ಉಚಿತ ಡೇಟಾ, ಕರೆ, ಮೆಸೇಜ್‌ ಸೇವೆ ನೀಡುತ್ತಿದ್ದರೂ, ಸಿಮ್‌ ಪಡೆಯುವುದೋ ಬೇಡವೋ ಎಂಬ ಸಂಶಯದಲ್ಲಿದ್ದಾರೆ.

ನೆಟ್‌ವರ್ಕ್‌ ಸರಿಯಾಗಿ ಸಿಗುತ್ತೋ ಇಲ್ವೋ, 4G ನಿಜವಾಗಲು ವರ್ಕ್‌ ಆಗುತ್ತಿದೆಯೋ ಇಲ್ವೋ, ಉಚಿತ ಡೇಟಾವನ್ನು ಸರಿಯಾಗಿ ಉಪಯೋಗಿಸಲು ಸಾಧ್ಯವೋ ಇಲ್ವೋ ಈ ರೀತಿಯ ಹಲವು ಸಂಶಯಗಳನ್ನು ಹೊಂದಿರುವವರು ಇದ್ದಾರೆ. ಆದ್ರೆ ನಾವು ತಿಳಿಸುವ ಈ ಕಾರಣಗಳು ಖಂಡಿತ ನಿಮ್ಮನ್ನು ಜಿಯೋ 4G ಸಿಮ್‌ ಖರೀದಿಸಿ, ಬೆನಿಫಿಟ್ ಎಂಜಾಯ್‌ ಮಾಡಲು ಖಂಡಿತ ಪ್ರೇರೇಪಿಸುತ್ತವೆ.

ರಿಲಾಯನ್ಸ್ ಜಿಯೋ 4G ಸಿಮ್‌ ಖರೀದಿಸಿ, ಉಚಿತ ಸೇವೆ ಬೆನಿಫಿಟ್ ಪಡೆಯಲು 5 ಕಾರಣಗಳು

ಉಚಿತ ಮತ್ತು ಚೀಪ್‌ ಇಂಟರ್ನೆಟ್‌

ಉಚಿತ ಮತ್ತು ಚೀಪ್‌ ಇಂಟರ್ನೆಟ್‌

ರಿಲಾಯನ್ಸ್ ಜಿಯೋ 4G ಸಿಮ್ ಉಚಿತ ಮತ್ತು ಅನ್‌ಲಿಮಿಟೆಡ್ 4G ಡೇಟಾವನ್ನು ವೆಲ್ಕಮ್‌ ಆಫರ್ ಅಡಿಯಲ್ಲಿ ಡಿಸೆಂಬರ್ 31 ವರೆಗೆ ನೀಡಿತ್ತು. ಆದರೆ ಈಗ ರಿಲಾಯನ್ಸ್ ಜಿಯೋ 'ಜಿಯೋ ಹ್ಯಾಪಿ ನ್ಯೂ ಇಯರ್' ಆಫರ್‌ನಲ್ಲಿ ಉಚಿತ ಡೇಟಾ, ಕರೆ , ಮೆಸೇಜ್‌ ಮತ್ತು ಆಪ್‌ ಆಕ್ಸೆಸ್ ನೀಡುತ್ತಿದೆ. ಈ ಆಫರ್ ಡಿಸೆಂಬರ್ 4, 2016 ಇಂದ ಮಾರ್ಚ್‌ 31, 2017 ವರೆಗೆ ನೀಡುತ್ತಿದೆ.

 HD ವೀಡಿಯೊ ಕರೆ ಉಚಿತವಾಗಿ ಎಂಜಾಯ್ ಮಾಡಿ

HD ವೀಡಿಯೊ ಕರೆ ಉಚಿತವಾಗಿ ಎಂಜಾಯ್ ಮಾಡಿ

ಹಲವು ಬಳಕೆದಾರರು ಜಿಯೋ ಕರೆ ಸ್ಥಗಿತ ಮತ್ತು ಇತರೆ ನೆಟ್‌ವರ್ಕ್‌ಗಳಿಗೆ ವಾಯ್ಸ್ ಕರೆ ಮಾಡಲು ಸಾಧ್ಯವಾಗದಿರುವ ಸಮಸ್ಯೆಗಳ ದೂರು ನೀಡುತ್ತಿದ್ದಾರೆ. ಆದರೆ ಉಚಿತ HD ವೀಡಿಯೊ ಕರೆ ಎಂಜಾಯ್‌ ಮಾಡಲು ಹಲವು ಮಾರ್ಗಗಳಿವೆ. ಜಿಯೋ ಸಿಮ್‌ ಉಚಿತ ಡೇಟಾ ಸೇವೆ ಬಳಸಿಕೊಂಡು ಗೂಗಲ್‌ ಅಲೋ, ಫೇಸ್‌ಬುಕ್‌ ಮೆಸೇಂಜರ್, ವಾಟ್ಸಾಪ್, ಇತರೆ ಆಪ್‌ಗಳನ್ನು ಬಳಸಿಕೊಂಡು, ಡೇಟಾ ಬಳಕೆಗೆ ಹಣ ಪಾವತಿಸದೇ ವೀಡಿಯೊ ಕರೆ ಮಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನರಂಜನಾತ್ಮಕ ಆಪ್‌ಗಳ ಉತ್ತಮ ಬಳಕೆ

ಮನರಂಜನಾತ್ಮಕ ಆಪ್‌ಗಳ ಉತ್ತಮ ಬಳಕೆ

ಜಿಯೋದ ಉಚಿತ ಡೇಟಾ ಬಳಕೆಯಿಂದ, ಮ್ಯೂಸಿಕ್, ಟಿವಿ, ಮತ್ತು ಸಿನೆಮಾ ಆಪ್‌ಗಳ ಆಕ್ಸೆಸ್ ಪಡೆಯಬಹುದು. ಈ ಆಪ್‌ಗಳ ಮೂಲಕ ಬಫರ್ ಇಲ್ಲದೇ ಸೂಪೇರಿಯರ್ ಗುಣಮಟ್ಟದ ಸಿನಿಮಾಗಳನ್ನು ಮತ್ತು ನೆಚ್ಚಿನ ಟಿವಿ ಶೋಗಳನ್ನು, ಹಾಡುಗಳನ್ನು ವಿವಿಧ ಭಾಷೆಗಳಲ್ಲಿ ಮನರಂಜನೆ ಪಡೆಯಬಹುದು.

ಪ್ರತಿಯೊಬ್ಬರೂ ಸಹ ಬೆನಿಫಿಟ್ ಪಡೆಯಬಹುದು

ಪ್ರತಿಯೊಬ್ಬರೂ ಸಹ ಬೆನಿಫಿಟ್ ಪಡೆಯಬಹುದು

ರಿಲಾಯನ್ಸ್ ಜಿಯೋ ತನ್ನ ಸೇವೆ ಲಾಂಚ್‌ ಮಾಡಿದ ನಂತರ, ಇತರೆ ಟೆಲಿಕಾಂಗಳಾದ ಏರ್‌ಟೆಲ್‌, ವೊಡಾಫೋನ್, ಐಡಿಯಾ ಸೆಲ್ಯೂಲಾರ್, ಬಿಎಸ್‌ಎನ್‌ಎಲ್‌ ಸರ್ವೀಸ್ ಪ್ರೊವೈಡರ್‌ಗಳು ಅತೀ ಕಡಿಮೆ ಬೆಲೆಯ ಸೇವೆಯನ್ನು ಆಫರ್ ಮಾಡುತ್ತಿದ್ದಾರೆ. ಜಿಯೋ ಬಳಕೆದಾರರು ತಮ್ಮ ಪ್ರಾಥಮಿಕ ನಂಬರ್ ಆಗಿ ಇತರೆ ನೆಟ್‌ವರ್ಕ್‌ ಸಿಮ್‌ ಬಳಸುತ್ತಿದ್ದಲ್ಲಿ, ಅತೀ ಕಡಿಮೆ ಬೆಲೆಯ ಇತರೆ ಟೆಲಿಕಾಂಗಳ ಡೇಟಾ ಆಫರ್‌ನ ಬೆನಿಫಿಟ್ ಪಡೆಯಬಹುದು.

ಬಜೆಟ್ 4G LTE ಫೋನ್ಸ್ ಬೆಳವಣಿಗೆ

ಬಜೆಟ್ 4G LTE ಫೋನ್ಸ್ ಬೆಳವಣಿಗೆ

ರಿಲಾಯನ್ಸ್ ಜಿಯೋದಿಂದ ಬಂದ ಇನ್ನೊಂದು ಗುಡ್‌ ನ್ಯೂಸ್‌ ಇದು. 4G LTE ಫೋನ್‌ಗಳ ತಯಾರಿಕೆಯು ಹೆಚ್ಚಿದೆ ಮತ್ತು ಅತೀ ಕಡಿಮೆ ಬೆಲೆಯು ಹೌದು. ಈ VoLTE ಸ್ಮಾರ್ಟ್‌ಫೋನ್‌ಗಳನ್ನು ರೂ.6,000 ದಲ್ಲಿ ಭಾರತದಲ್ಲಿ ಖರೀದಿಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
5 Reasons to Get Reliance Jio SIM in India: Happy New Year Offer, Cheap LTE Phones & More. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X