Subscribe to Gizbot

ನೋಕಿಯಾ ಹೊರತರಲಿರುವ ಆಂಡ್ರಾಯ್ಡ್ ಡಿವೈಸ್‌ಗಳ ಮಹತ್ವವೇನು

Written By:

ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಕಾಲಿಡುತ್ತಿರುವ ನೋಕಿಯಾ ಮೈಕ್ರೋಸಾಫ್ಟ್‌ನೊಂದಗಿನ ತನ್ನ ಒಪ್ಪಂದಕ್ಕೆ ಅಂತ್ಯ ಹಾಡಲಿದೆ. ಆಂಡ್ರಾಯ್ಡ್ ಚಾಲಿತ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ತರುವ ಎಲ್ಲಾ ಪ್ರಯತ್ನವನ್ನು ನೋಕಿಯಾ ಮಾಡಲಿದೆ. ಮಿಲಿಯಗಟ್ಟಲೆ ಸ್ಮಾರ್ಟ್‌ಫೋನ್ ಬಳಕೆದಾರರು ನೋಕಿಯಾವನ್ನು ಬಹಳಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನೋಕಿಯಾವು ವಿಶ್ವದಲ್ಲೇ ಅತಿ ದೊಡ್ಡ ಫೋನ್ ತಯಾರಕ ಎಂಬ ಹೆಸರನ್ನು ಗಳಿಸಿಕೊಂಡಿದೆ. ಮೊಬೈಲ್ ಫೋನ್ ಎಂದರೆ ನೋಕಿಯಾ ಎಂಬುದಾಗಿಯೇ ಜನ ನೆನಪು ಮಾಡಿಕೊಳ್ಳುತ್ತಾರೆ. ಈಗ ಸ್ಯಾಮ್‌ಸಂಗ್ ಮತ್ತು ಆಪಲ್ ಗಳಿಸಿಕೊಂಡಿರುವ ಸ್ಥಾನವನ್ನೇ ನೋಕಿಯಾವು ಪಡೆದುಕೊಂಡಿದೆ.

ಓದಿರಿ: ರಿಲಾಯನ್ಸ್ ಜಿಯೋ 4G ಸಿಮ್ ಪಡೆಯಲು ಅನುಸರಿಸಬೇಕಾದ ಹಂತಗಳು

ಹಾಗಿದ್ದರೆ ಇಂದಿನ ಲೇಖನದಲ್ಲಿ ನೋಕಿಯಾ ಲಾಂಚ್ ಮಾಡಲಿರುವ ಆಂಡ್ರಾಯ್ಡ್ ಫೋನ್ ಮೇಲೆ ಬಳಕೆದಾರರ ಗಮನ ಏಕೆ ಕೇಂದ್ರೀಕೃತವಾಗಿದೆ ಎಂಬುದನ್ನು ಕೆಲವು ಅಂಶಗಳ ಮೂಲಕ ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ ಹೆಚ್ಚು ಶಕ್ತಿಯುತ ಬ್ರ್ಯಾಂಡ್ ಆಗಿದೆ

ನೋಕಿಯಾ ಹೆಚ್ಚು ಶಕ್ತಿಯುತ ಬ್ರ್ಯಾಂಡ್ ಆಗಿದೆ

ನೋಕಿಯಾ ಬಹಳಷ್ಟು ವರ್ಷಗಳಿಂದ ಫೋನ್ ಮಾರುಕಟ್ಟೆಯಲ್ಲಿ ಹೆಸರು ಗಳಿಸುತ್ತಿದ್ದು ಇಂಟರ್ನೆಟ್‌ನಲ್ಲಿ ನೋಕಿಯಾ ಬ್ರ್ಯಾಂಡ್ ಫೋನ್‌ಗಳು ಹೆಸರು ಮಾಡುತ್ತಿರುವುದನ್ನು ನಿಮಗೆ ಗಮನಿಸಬಹುದಾಗಿದೆ. ಹೆಚ್ಚಿನ ಗ್ರಾಹಕರ ಮನದಲ್ಲಿ ಈ ಬ್ರ್ಯಾಂಡ್ ಉತ್ತಮ ಹೆಸರನ್ನು ಪಡೆದುಕೊಂಡಿದೆ.

ಹಾರ್ಡ್‌ವೇರ್

ಹಾರ್ಡ್‌ವೇರ್

ನೋಕಿಯಾ 3310 ಹೆಸರು ಈಗಲೂ ಗ್ರಾಹಕರ ಮನದಲ್ಲಿದ್ದು ನೋಕಿಯಾ ಹೊಸದಾದ ಹಾರ್ಡ್‌ವೇರ್ ಅನ್ನು ಈ ವರ್ಷ ಲಾಂಚ್ ಮಾಡಿದರೆ ಗ್ರಾಹಕರು ಅದನ್ನು ಪಡೆದುಕೊಳ್ಳಲು ಮುನ್ನುಗ್ಗುವುದು ಖಂಡಿತ. ಅಷ್ಟೊಂದು ಪರಿಣಾಮಕಾರಿಯಾಗಿ ನೋಕಿಯಾ ಗ್ರಾಹಕರ ಮೇಲೆ ಮೋಡಿ ಮಾಡಿದೆ.

ವಿನ್ಯಾಸಗಳ ಪ್ರಭಾವ

ವಿನ್ಯಾಸಗಳ ಪ್ರಭಾವ

ಬೇರೆ ಬೇರೆ ವಿನ್ಯಾಸಗಳು ಮತ್ತು ಗಾತ್ರಗಳಲ್ಲಿ ಕಂಪೆನಿ ಬಂದಿದ್ದು ಬ್ರ್ಯಾಂಡ್ ತನ್ನ ಹ್ಯಾಂಡ್‌ಸೆಟ್‌ಗಳಿಗೆ ಹೆಸರುವಾಸಿಯಾಗಿದೆ. ಲ್ಯೂಮಿಯಾ ಫೋನ್‌ಗಳು ಕೂಡ ತಮ್ಮ ಅನನ್ಯ ವಿನ್ಯಾಸ ಮತ್ತು ಆಕರ್ಷಣೆಗೆ ಹೆಸರುವಾಸಿಯಾಗಿದೆ.

ಯಾವ ಮಾದರಿಯ ವಿನ್ಯಾಸ

ಯಾವ ಮಾದರಿಯ ವಿನ್ಯಾಸ

ನೋಕಿಯಾ ಈ ವರ್ಷ ಯಾವ ಮಾದರಿಯ ವಿನ್ಯಾಸವನ್ನು ಹೊರತರಲಿದೆ ಎಂಬ ಕುತೂಹಲ ಎಲ್ಲರ ಮನದಲ್ಲಿ ಮೂಡುತ್ತಿದೆ. ಆಂಡ್ರಾಯ್ಡ್‌ನಲ್ಲಿ ಇದು ಅನನ್ಯತೆಯನ್ನು ಉಂಟುಮಾಡುವುದು ನಿಜ. ಇಂದಿನ ದಿನಗಳಲ್ಲಿ ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳು ಸ್ಲಿಮ್ ಮಾದರಿಯಲ್ಲಿದ್ದು ಮನಸ್ಸನ್ನು ಆಕರ್ಷಿಸುವಂತಿದೆ. ನೋಕಿಯಾ ಈ ಬಾರಿ ಆಕರ್ಷಕವಾಗಿ ಮೂಡಿಬರುವುದು ನಿಜವಾಗಿದೆ.

ಸಮಸ್ಯೆ ನಿವಾರಕ

ಸಮಸ್ಯೆ ನಿವಾರಕ

ಈ ಮೊದಲು, ನೋಕಿಯಾ ವಿಂಡೋಸ್ ಫೋನ್ ಇಕೋಸಿಸ್ಟಮ್‌ನ ಅಪ್ಲಿಕೇಶನ್‌ಗಳು, ಸೇವೆಗಳು ಮತ್ತು ವಿಷಯ ಹಾಗೂ ಹೋಲಿಕೆಗಳ ಕಾರಣದಿಂದಾಗಿ ಆಂಡ್ರಾಯ್ಡ್ ಮತ್ತು ಐಓಎಸ್ ಪ್ಲಾಟ್‌ಫಾರ್ಮ್‌ಗಳಿಗೆ ಕಠಿಣ ಪೈಪೋಟಿಯನ್ನು ನೀಡಲು ಸಮರ್ಥವಾಗಿರಲಿಲ್ಲ. ಇದರಿಂದಾಗಿ ಮೈಕ್ರೋಸಾಫ್ಟ್ ಹಿಂದಕ್ಕೆ ಉಳಿದಿದೆ. 90 ಶೇಕಡಾದಷ್ಟು ಫೋನ್ ಬಳಕೆದಾರರು ಆಂಡ್ರಾಯ್ಡ್ ಮತ್ತು ಐಓಎಸ್ ಅನ್ನೇ ಬಳಸಿಕೊಳ್ಳುತ್ತಿದ್ದಾರೆ.

ನಾಗಟ್

ನಾಗಟ್

ಮಾಹಿತಿಗಳ ಪ್ರಕಾರ, ನೋಕಿಯಾವು ಆಂಡ್ರಾಯ್ಡ್ ನಾಗಟ್ ಸ್ಮಾರ್ಟ್‌ಫೋನ್‌ಗಳನ್ನು ಈ ವರ್ಷ ಬಿಡುಗಡೆ ಮಾಡಲಿದೆ. ಇದು ನಿಜವಾದಲ್ಲಿ, ಫೋನ್ ತಯಾರಕರು ಈ ಹಿಂದೆ ಅನುಭವಿಸಿದ್ದ ಸಮಸ್ಯೆಗಳು ನಿವಾರಣೆಗೊಳ್ಳಲಿದೆ.

ಸ್ಪರ್ಧಾರ್ತಕ ಬೆಲೆ

ಸ್ಪರ್ಧಾರ್ತಕ ಬೆಲೆ

ನೋಕಿಯಾವು ಫ್ಲ್ಯಾಗ್‌ಶಿಪ್ ಡಿವೈಸ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿದ್ದು ಇದು ಹೆಚ್ಚು ಲಾಭಕರ ಎಂದೆನಿಸಲಿದೆ. ನೋಕಿಯಾವು ಬಜೆಟ್ ಸ್ನೇಹಿ ಡಿವೈಸ್‌ಗಳಿಗೆ ಮಾತ್ರವೇ ಗಮನ ಹರಿಸಿದರೆ, ಇದು ಎಲ್ಲಾ ಬಳಕೆದಾರರನ್ನು ಆಕರ್ಷಿಸಲು ಸಾಧ್ಯವಿಲ್ಲ.

ಸ್ಪರ್ಧಾತ್ಮಕ ಬೆಲೆ

ಸ್ಪರ್ಧಾತ್ಮಕ ಬೆಲೆ

ನೋಕಿಯಾವು ಕೆಲವೊಂದು ಬದಲಾವಣೆಗಳನ್ನು ತಂದಲ್ಲಿ ಮಾತ್ರವೇ ಅದು ಬಳಕೆದಾರರಿಗೆ ಪ್ರಿಯವಾಗಲಿದ್ದು ಸ್ಪರ್ಧಾತ್ಮಕ ಬೆಲೆಯಲ್ಲೇ ಡಿವೈಸ್‌ಗಳನ್ನು ಹೊರತಂದರೂ ಆಕರ್ಷಕ ಫೀಚರ್‌ಗಳನ್ನು ಡಿವೈಸ್‌ಗಳಲ್ಲಿ ಪ್ರಸ್ತುತಪಡಿಸಬೇಕಾಗಿದೆ.

ನೋಕಿಯಾ ಅನ್ವೇಷಣೆ

ನೋಕಿಯಾ ಅನ್ವೇಷಣೆ

ಸಂಪೂರ್ಣ ವಿನ್ಯಾಸ ಮತ್ತು ಕ್ಯಾಮೆರಾ ತಂತ್ರಜ್ಞಾನದಲ್ಲಿ ನೋಕಿಯಾವು ಉತ್ತಮ ಪರಿಣತಿಯನ್ನು ಪಡೆದುಕೊಂಡಿದೆ. ಮೊಬೈಲ್ ಕ್ಯಾಮೆರಾ ವಿಭಾಗದಲ್ಲಿ ಹೊಸ ಸುಧಾರಣೆಯನ್ನು ತಂದ ಉತ್ಪಾದಕ ಇದಾಗಿದ್ದು 2012 ರಲ್ಲಿ ಈ ಅಂಶವನ್ನು ನಿಮಗೆ ಗಮನಿಸಬಹುದಾಗಿದೆ. ಫೋನ್‌ಗಳ ವಿನ್ಯಾಸ ಮತ್ತು ರಚನಾ ಹಂತದಲ್ಲಿ ಮಾರ್ಪಾಡುಗಳನ್ನು ತಂದಿರುವುದೇ ನೋಕಿಯಾ ಹಿರಿಮೆಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Below are some points that will justify why people are excited about an Android smartphone from Nokia. This will give you a clear picture of why you too are waiting to get your hands on one.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot