ಚೀನಾ ಮೊಬೈಲ್ ಕಂಪೆನಿಗಳಿಗೆ ಸವಾಲ್ ಹಾಕಿದ 'ಗ್ಯಾಲಕ್ಸಿ ಆನ್ ಮ್ಯಾಕ್ಸ್'!! ಏಕೆ ಗೊತ್ತಾ?
ಭಾರಿ ಫೀಚರ್ಸ್ ಹೊತ್ತು ಬಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್ ಮತ್ತೆ ಸ್ಯಾಮ್‌ಸಂಗ್ ಮಾರುಕಟ್ಟೆಯನ್ನು ಕ್ಲಿಕ್ ಮಾಡಿದೆ.!!
ಕಳೆದ ಒಂದು ವರ್ಷದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಸ್ಯಾಮ್‌ಸಂಗ್ ಕಂಪೆನಿಯ ಸ್ಮಾರ್ಟ್‌ಫೋನ್ ಎಂದರೆ ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನ್.!! ಭಾರಿ ಫೀಚರ್ಸ್ ಹೊತ್ತು ಬಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್ ಮತ್ತೆ ಸ್ಯಾಮ್‌ಸಂಗ್ ಮಾರುಕಟ್ಟೆಯನ್ನು ಕ್ಲಿಕ್ ಮಾಡಿದೆ.!!
ಹೌದು, ಚೀನಾ ಮೊಬೈಲ್ ಕಂಪೆನಿಗಳ ಏಟಿಗೆ ಹೆದರಿದ್ದ ಸ್ಯಾಮ್‌ಸಂಗ್ ಇದೀಗ ಅತ್ಯುದ್ಬುತ ಫೀಚರ್ಸ್ ಹೊಂದಿರುವ ಗ್ಯಾಲಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಮೂಲಕ ಮತ್ತೆ ತನ್ನ ಮಾರುಕಟ್ಟೆ ಅಧಿಪತ್ಯವನ್ನು ಸ್ಥಾಪಿಸಿಕೊಳ್ಳುತ್ತಿದೆ.!! ಇನ್ನು ಗ್ಯಾಲಕ್ಸಿ ಆನ್ ಮ್ಯಾಕ್ಸ್ ಬೆಲೆಯೂ ಕೂಡ ಸ್ಪರ್ಧಾತ್ಮಕವಾಗಿದೆ.!!
ಹಾಗಾದರೆ, ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಏಕೆ ಖರೀದಿಸಲು ಬೆಸ್ಟ್? ಏನೆಲ್ಲಾ ಫೀಚರ್ಸ್ ಹೊಂದಿದೆ? ಬೆಲೆ ಎಷ್ಟು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

5.7 ಇಂಚ್ ಹೆಚ್‌ಡಿ ಡಿಸ್‌ಪ್ಲೇ!!
ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್ 5.7 ಇಂಚ್ 1080x1920 ಪಿಕ್ಸೆಲ್ ಹೆಚ್‌ಡಿ, ಡಿಸ್‌ಪ್ಲೇ ಹೊಂದಿದೆ. ಮಲ್ಟಿಮೀಡಿಯಾಗೆ ಅತ್ಯುತ್ತಮ ಅನುಭವ ನೀಡುವ ಡಿಸ್‌ಪ್ಲೇ ಸ್ಮಾರ್ಟ್‌ಫೋನ್‌ನಲ್ಲಿದ್ದು, ಸನ್‌ಲೈಟ್ ಇದ್ದಾಗಲೂ ಡಿಸ್‌ಪ್ಲೇ ಬ್ರೈಟ್‌ನೆಸ್ ಅಡ್ಜಸ್ಟ್ ಮಾಡಬೇಕಿಲ್ಲ.!!

ಆನ್ ಮ್ಯಾಕ್ಸ್ ಕಾರ್ಯನಿರ್ವಹಣೆಗೆ ಸಾಟಿಯಿಲ್ಲ.!!
ಆನ್ ಮ್ಯಾಕ್ಸ್ 2.39GHz ಆಕ್ಟಕೋರ್ ಪ್ರೊಸೆಸರ್ ಹೊಂದಿದ್ದು, 4GB RAM ಮೂಲಕ ಕಾರ್ಯನಿರ್ವಹಣೆ ನೀಡಲಿದೆ.ಸ್ಮಾರ್ಟ್‌ಫೋನ್‌ನಲ್ಲಿ 32 GB ಆಂತರಿಕ ಮೆಮೊರಿ ಲಭ್ಯವಿದ್ದು, ಕಾರ್ಯನಿರ್ವಹಣೆಗೆ ಬೇರೆ ಮಧ್ಯಮ ಬೆಲೆಯ ಸಾಟಿಯಿಲ್ಲ ಎನ್ನಬಹುದು.

ಫ್ಲಾಗ್‌ಶಿಪ್ ಕ್ಯಾಮೆರಾ ಸ್ಮಾರ್ಟ್‌ಫೋನ್ !!
ರೆಡ್‌ಮಿ, ಲೆನೊವೊ ಸೇದಂತೆ ಹಲವು ಕಂಪೆನಿಗಳಿಗೆ ಕ್ಯಾಮೆರಾದಲ್ಲಿಯೇ ಸೆಡ್ಡು ಹೊಡೆದಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್! 13MP ರಿಯರ್ ಕ್ಯಾಮೆರಾ ಮತ್ತು 13mP ಸೆಲ್ಫಿ ಕ್ಯಾಮೆರಾ ಮೂಲಕ ಸ್ಮಾರ್ಟ್‌ಫೋನ್ ಖರೀದಿಸಲು ಉತ್ತಮವಾಗಿದೆ.

3,300mAh ಬ್ಯಾಟರಿ ಇದೆ:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನಿನಲ್ಲಿ 3,300mAh ಬ್ಯಾಟರಿ ಕಾಣಬಹುದಾಗಿದೆ. ಇದಲ್ಲದೇ 4G VoLTE HD ವಿಡಿಯೋ ಕಾಲಿಂಗ್ ಸಫೋರ್ಟ್ ಮಾಡಲಿದೆ.

ಆನ್ ಮ್ಯಾಕ್ಸ್ ಬೆಲೆ ಎಷ್ಟು?
ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್ ಮಧ್ಯಮ ಬಜೆಟ್ ಬೆಲೆಯನ್ನು ಹೊಂದಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ 16.999 ರೂಪಾಯಿಗಳಿಗೆ ಲಭ್ಯವಿದೆ.!! 4GB RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಇಷ್ಟು ಬೆಲೆಗೆ ಸಿಗುತ್ತಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್ ಇದಾಗಿದೆ.!!


Click it and Unblock the Notifications








