ನಿಮ್ಮ ರೆಫ್ರಿಜರೇಟರ್ ದೀರ್ಘಕಾಲ ಬಾಳಿಕೆ ಬರಬೇಕೆ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
ಪ್ರತಿಯೊಬ್ಬರ ಮನೆಯಲ್ಲಿಯೂ ರೆಫ್ರಿಜರೇಟರ್ ಇದ್ದೇ ಇರುತ್ತದೆ. ಒಮ್ಮೆ ತೆರೆದು ನೋಡಿದ್ರೆ, ಫ್ರಿಡ್ಜ್ ತುಂಬಾ ಸಾಮಾನಗಳೇ ತುಂಬಿ ತುಳುಕುತ್ತಿರುತ್ತವೆ. ಅದರಲ್ಲಿ ಕೆಲವು ಅಗತ್ಯವಸ್ತುಗಳಿದ್ದರೆ, ಇನ್ನೂ ಕೆಲವು ಉಪಯೋಗಿಸಲು ಯೋಗ್ಯವಲ್ಲದ ವಸ್ತುಗಳನ್ನು ತುಂಬಿಸಿಟ್ಟಿರುತ್ತಾರೆ. ಅಂತವರು ತಪ್ಪದೇ ಈ ಸುದ್ದಿ ಓದಿ.
ನಿಮ್ಮ ರೆಫ್ರಿಜರೇಟರ್ ಬಗ್ಗೆ ನೀವು ಸರಿಯಾಗಿ ಕಾಳಜಿ ವಹಿಸಿದರೆ, ಯಾವುದೇ ದುರಸ್ತಿ ಇಲ್ಲದೆ ಅದು ಸುಮಾರು ವರ್ಷಗಳವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ, ಕೆಲವರು ಕ್ಲೀನ್ ಮಾಡುವ ಗೋಜಿಗೂ ಹೋಗುವುದಿಲ್ಲ. ಬದಲಾಗಿ, ಅದರ ಮೇಲೆ ಇನ್ನಷ್ಟು ತುಂಬುತ್ತಾರೆ.

ಹಾಗಿದ್ರೆ, ನಿಮ್ಮ ರೆಫ್ರಿಜರೇಟರ್‌ನ ಕಾರ್ಯಕ್ಷಮತೆಯನ್ನು ಅತ್ಯುತ್ತಮವಾಗಿಸಲು ಮತ್ತು ಫ್ರಿಡ್ಜ್‌ನಲ್ಲಿ ಸಂಗ್ರಹಿಸಲಾದ ನಿಮ್ಮ ಆಹಾರ ಪದಾರ್ಥಗಳು ದೀರ್ಘಕಾಲ ಬಳಸಲು ಯೋಗ್ಯವಾಗಿರಬೇಕಾದರೆ, ನಾವು ತಿಳಿಸುವ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ.
ವರ್ಷಕ್ಕೊಮ್ಮೆ ಬಾಗಿಲಿನ ಮೇಲಿನ ರಬ್ಬರ್ ಸೀಲ್ ಬದಲಾಯಿಸಿ
ರೆಫ್ರಿಜರೇಟರ್ ದೀರ್ಘಕಾಲ ಉಳಿಯಬೇಕೆಂಬುದು ಪ್ರತಿಯೊಬ್ಬರ ಬಯಕೆ. ರೆಫ್ರಿಜರೇಟರ್‌ನಲ್ಲಿ ಯಾವುದೇ ಸಮಸ್ಯೆಗಳಿಲ್ಲದಿದ್ದರೆ, ಪ್ರತಿ 12 ತಿಂಗಳಿಗೊಮ್ಮೆ ರೆಫ್ರಿಜಿರೇಟರ್ ಬಾಗಿಲಿನ ರಬ್ಬರ್ ಸೀಲ್ ಅನ್ನು ಪರಿಶೀಲಿಸಿ. ಒಂದುವೇಳೆ ಅದು ಸಡಿಲವಾಗಿದ್ದರೆ ಅಥವಾ ಎಲ್ಲೋ ಹರಿದರೆ, ಅದನ್ನು ಮೊದಲು ಬದಲಾಯಿಸಿ. ನೀವು ರೆಫ್ರಿಜರೇಟರ್‌ನ ರಬ್ಬರ್ ಸೀಲ್ ಅನ್ನು ಬದಲಾಯಿಸದಿದ್ದರೆ, ರೆಫ್ರಿಜರೇಟರ್ ನೀರನ್ನು ತಂಪಾಗಿಸುವುದಿಲ್ಲ.
ಹೀಗೆ ಮಾಡಿದ್ರೆ ವಿದ್ಯುತ್ ಉಳಿತಾಯ ಆಗುತ್ತದೆ
ರೆಫ್ರಿಜರೇಟರ್ ಬಾಗಿಲುಗಳನ್ನು ಆಗಾಗ್ಗೆ ಸ್ವಚ್ಛಗೊಳಿಸದಿದ್ದರೆ, ಅದು ಆಹಾರವನ್ನು ಸರಿಯಾಗಿ ತಂಪುಗೊಳಿಸುವುದಿಲ್ಲ. ಇದನ್ನು ತಪ್ಪಿಸಲು ಬಾಗಿಲುಗಳನ್ನು ಸ್ವಚ್ಛಗೊಳಿಸುವುದು ಉತ್ತಮ. ಬಾಗಿಲುಗಳನ್ನು ಸ್ವಚ್ಛಗೊಳಿಸುವುದರಿಂದ ರೆಫ್ರಿಜರೇಟರ್‌ನಲ್ಲಿ ತಂಪನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದಲ್ಲದೇ ವಿದ್ಯುತ್ ಉಳಿತಾಯವೂ ಆಗುತ್ತದೆ, ಕರೆಂಟ್ ಬಿಲ್ ಹೊರೆ ತಪ್ಪುತ್ತದೆ.
ತಾಪಮಾನ ಸೆಟ್ಟಿಂಗ್ ಬಗ್ಗೆ ಗಮನಕೊಡಿ
ಮುಖ್ಯವಾಗಿ ನೀವು ರೆಫ್ರಿಜರೇಟರ್‌ನ ತಾಪಮಾನ ಸೆಟ್ಟಿಂಗ್ ಬಗ್ಗೆ ಗಮನಕೊಡಬೇಕು. ಯಾವಾಗಲೂ ರೆಫ್ರಿಜರೇಟರ್‌ನ ತಾಪಮಾನ ಸೆಟ್ಟಿಂಗ್ 38 ರಿಂದ 42 ಡಿಗ್ರಿ ಫ್ಯಾರನ್‌ಹೀಟ್ ನಡುವೆ ಇರಬೇಕು. ಫ್ರಿಡ್ಜ್‌ನ ತಾಪಮಾನ ನಿಯಂತ್ರಣ ಸೆಟ್ಟಿಂಗ್‌ಗಳನ್ನು ನಿರಂತರವಾಗಿ ಪರಿಶೀಲಿಸಬೇಕು. ಅದರ ಮೇಲೆ ಹೆಚ್ಚು ಲೋಡ್ ಆಗದಂತೆ ನೋಡಿಕೊಳ್ಳಿ.
ಫ್ರಿಡ್ಜ್ ಅನ್ನು ಡಿಫ್ರಾಸ್ಟ್ ಮಾಡಿ
ರೆಫ್ರಿಜರೇಟರ್ ಹಾನಿಯಾಗದಂತೆ ತಡೆಯಲು, ಕಾಲಕಾಲಕ್ಕೆ ಅದನ್ನು ಡಿಫ್ರಾಸ್ಟಿಂಗ್ ಮಾಡಿ. ಡಿಫ್ರಾಸ್ಟಿಂಗ್ ನಿಮ್ಮ ಫ್ರಿಡ್ಜ್‌ನಲ್ಲಿ ಸಂಗ್ರಹವಾಗುವುದನ್ನು ತಡೆಯುತ್ತದೆ. ಅಲ್ಲದೇ, ಫ್ರಿಡ್ಜ್ ಕಡಿಮೆ ವಿದ್ಯುತ್ ಬಳಸುತ್ತದೆ.
ವರ್ಷಕ್ಕೆ 2 ಬಾರಿ ಕಂಡೆನ್ಸರ್ ಕಾಯಿಲ್ ಸ್ವಚ್ಛಗೊಳಿಸಿ
ರೆಫ್ರಿಜರೇಟರ್ ಹಾನಿಯಾಗದಂತೆ ತಡೆಯಲು, ಅದರ ಕಂಡೆನ್ಸರ್ ಕಾಯಿಲ್‌ಗಳನ್ನು ವರ್ಷಕ್ಕೆ ಎರಡು ಬಾರಿ ಸ್ವಚ್ಛಗೊಳಿಸಬೇಕು. ಇದು ಫ್ರಿಡ್ಜ್‌ನ ಶೇಕಡಾ 70 ಪ್ರತಿಶತದಷ್ಟು ತೊಂದರೆಗಳನ್ನು ಪರಿಹರಿಸುತ್ತದೆ. ಏಕೆಂದರೆ ಫ್ರಿಡ್ಜ್‌ನ ಸುರುಳಿಗಳು ಮತ್ತು ಫ್ಯಾನ್‌ಗಳಲ್ಲಿ ಧೂಳು ಸಂಗ್ರಹವಾಗುವುದರಿಂದ, ಕಂಡೆನ್ಸರ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಇದರಿಂದ ಫ್ರಿಡ್ಜ್ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ತಂಪಾಗಿಸುವುದಿಲ್ಲ.
ರೆಫ್ರಿಜರೇಟರ್‌ನಲ್ಲಿ ಏನನ್ನು ಇಡಬೇಕು
ಫ್ರಿಡ್ಜ್‌ನಲ್ಲಿ ಹಣ್ಣುಗಳು, ತರಕಾರಿಗಳು, ಉಪ್ಪಿನಕಾಯಿಗಳು, ಕಾಂಡಿಮೆಂಟ್ಸ್, ಹಾಲು, ಚಾಕೊಲೇಟ್‌ಗಳು, ಬೇಯಿಸಿದ ಆಹಾರ, ಮೊಟ್ಟೆಗಳನ್ನು ಇಡುವುದು ಸೂಕ್ತ. ಆದರೆ, ಐಸ್ ಕ್ರೀಮ್, ಘನೀಕೃತ ಆಹಾರಗಳು, ಮಾಂಸ ಇತ್ಯಾದಿಗಳನ್ನು ಇಡಲಾಗುತ್ತದೆ. ಈ ವಸ್ತುಗಳನ್ನು ಫ್ರಿಡ್ಜ್‌ನಲ್ಲಿ ಅಥವಾ ರೆಫ್ರಿಜರೇಟರ್‌ನ ಫ್ರೀಜರ್ ವಿಭಾಗದಲ್ಲಿ ಸಂಗ್ರಹಿಸಲು ಸೂಕ್ತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ರೆಫ್ರಿಜರೇಟರ್ ಬಳಸುವುದು ಹೆಚ್ಚು. ಈ ಸಮಯದಲ್ಲೂ ನಿಮ್ಮ ಫ್ರಿಡ್ಜ್ ದೀರ್ಘಕಾಲ ಉಳಿಯಬೇಕು ಮತ್ತು ಬೇಸಿಗೆಯಲ್ಲಿ ಯಾವುದೇ ಹಾನಿಯಾಗಬಾರದು ಎಂದು ಬಯಸಿದರೆ, ನಾವು ನಿಮಗೆ ಈ ಮೇಲಿನಂತೆ ತಿಳಿಸಿರುವ ಕೆಲವು ಸಿಂಪಲ್ ಟಿಪ್ಸ್‌ಗಳನ್ನು ಪಾಲಿಸಿ. ಹೀಗೆ ಮಾಡಿದರೆ ನಿಮ್ಮ ಫ್ರಿಡ್ಜ್‌ಗೆ ಯಾವುದೇ ಹಾನಿಯಾಗುವುದಿಲ್ಲ. ನಿಮ್ಮ ಫ್ರಿಡ್ಜ್ ಯಾವುದೇ ಸಮಸ್ಯೆಗಳಿಲ್ಲದೆ ದೀರ್ಘಕಾಲ ಬಾಳಿಕೆ ಬರುತ್ತದೆ.


Click it and Unblock the Notifications








