ಇನ್ನು 15 ದಿನಗಳ ಕಾಲ ಬರಿ 5 SMS !

Posted By: Varun
ಇನ್ನು 15 ದಿನಗಳ ಕಾಲ ಬರಿ 5 SMS !
ಈಗಾಗಲೇ ಈಶಾನ್ಯ ರಾಜ್ಯಗಳಲ್ಲಿನ ಜನರಿಗೆ ತಮ್ಮ ತಮ್ಮ ರಾಜ್ಯಗಳಿಗೆ ವಾಪಸ್ ಹೋಗುವಂತೆ ಎಚ್ಚರಿಕೆಯ ಮೆಸೇಜ್ ಬಂದು, ಪ್ರತಿನಿತ್ಯ ಸಾವಿರಾರು ಮಂದಿ ಟ್ರೈನ್ ನಲ್ಲಿ ವಾಪಸ್ ಹೋಗುತ್ತಿರುವ ಸುದ್ದಿಯನ್ನು ನೀವು ಬಲ್ಲಿರಿ.

ಇದರಿಂದ ಎಚ್ಚೆತ್ತು ಕೊಂಡಿರುವ ಕೇಂದ್ರ ಸರ್ಕಾರ, ಈ ರೀತಿಯ ಆತಂಕಕಾರಿ ಮೆಸೇಜುಗಳನ್ನು ತಡೆಗಟ್ಟಲು ಕ್ರಮ ಕೈಗೊಂಡಿದ್ದು, ಇವತ್ತಿನಿಂದ 15 ದಿನಗಳ ಕಾಲ ನೀವು ಪ್ರತಿದಿನ ಕೇವಲ 5 SMS ಅನ್ನು ಮಾತ್ರ ಕಳುಹಿಸಬಹುದಾಗಿದ್ದು, ಎಲ್ಲಾ ರೀತಿಯ ಸಾಮೂಹಿಕ SMS ಹಾಗು MMS ಗಳನ್ನೂ ನಿರ್ಬಂಧಿಸಿದೆ.

ಈಗಾಗಲೇ ಬೆಂಗಳೂರು, ಪೂನಾ, ಮುಂಬೈ ಸೇರಿದಂತೆ ದೇಶಾದ್ಯಂತ ಹಲವಾರು ನಗರಗಳಲ್ಲಿ ಗಲಭೆಗಳು ಆಗಿದ್ದು, ಇದನ್ನು ತಡೆಗಟ್ಟಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಈ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಹಾಗಾಗಿ ನೀವು ಇನ್ನು 15 ದಿನಗಳ ಕಾಲ 5 SMS ಗಳನ್ನು ಜೋಪಾನವಾಗಿ ಬಳಸಿ. ಹಾಗೂ ನಿಮಗೆ ಮೆಸೇಜ್ ಮಾಡಬೇಕಾಗಿದ್ದರೆ way2sms.com ನಂತಹ ಉಚಿತ SMS ಕಳುಹಿಸುವ ವೆಬ್ಸೈಟ್ ಗಳಲ್ಲಿ ಖಾತೆ ತೆರೆದು ಅದರ ಸೇವೆ ಬಳಸಿಕೊಳ್ಳಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot