ಸ್ಟಾರ್‌ವಾರ್ಸ್ ಸ್ಪೆಷಲ್ ಎಡಿಷನ್ ಒನ್‌ಪ್ಲಸ್ 5T ಬಿಡುಗಡೆ!..ನಾಳೆಯಿಂದ ಅಮೆಜಾನ್‌ನಲ್ಲಿ ಸೇಲ್!!
ಬೆಂಗಳೂರಿನಲ್ಲಿ ಕಾಮಿಕ್ ಕಾನ್ ಆಯೋಜಿಸಿದ ಇವೆಂಟ್‌ನಲ್ಲಿ ಈ ಬಗ್ಗೆ ವಿಡಿಯೋ ಟೀಸರ್ ಬಿಡುಗಡೆಯಾಗಿದ್ದು, ಡಿಸೆಂಬರ್ 15 ರಿಂದ ಅಮೆಜಾನ್‌ನಲ್ಲಿ ಫೋನ್ ಮಾರಾಟಕ್ಕಿವೆ.!!
ಸ್ಟಾರ್‌ವಾರ್ಸ್ ಸರಣಿ ಸಿನಿಮಾಗಳ ಅಭಿಮಾನಿಗಳಿಗಾಗಿಯೇ ಸ್ಟಾರ್‌ವಾರ್ಸ್ ಸ್ಪೆಷಲ್ ಎಡಿಷನ್ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗಿವೆ.!! ಬೆಂಗಳೂರಿನಲ್ಲಿ ಕಾಮಿಕ್ ಕಾನ್ ಆಯೋಜಿಸಿದ ಇವೆಂಟ್‌ನಲ್ಲಿ ಈ ಬಗ್ಗೆ ವಿಡಿಯೋ ಟೀಸರ್ ಬಿಡುಗಡೆಯಾಗಿದ್ದು, ಡಿಸೆಂಬರ್ 15 ರಿಂದ ಅಮೆಜಾನ್‌ನಲ್ಲಿ ಫೋನ್ ಮಾರಾಟಕ್ಕಿವೆ.!!
ಒನ್‌ಪ್ಲಸ್ ಟಿ ಸ್ಟಾರ್‌ವಾರ್ಸ್ ಲಿಮಿಟೆಡ್ ಎಡಿಷನ್ ಸ್ಮಾರ್ಟ್‌ಫೋನ್‌ಗಳನ್ನು ಸ್ಟಾರ್‌ವಾರ್ಸ್ ಅಭಿಮಾನಿಗಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಸೀಮಿತ ಆವೃತ್ತಿಯ ಈ ಸ್ಮಾರ್ಟ್‌ಫೋನ್‌ಗಳು ಸ್ಟಾರ್ ವಾರ್ಸ್ ಚಲನಚಿತ್ರಗಳ ಥೀಮ್‌ಗಳ ಜೊತೆಗೆ ಸ್ಟಾರ್‌ವಾರ್ಸ್‌ನ ಟ್ರೇಡ್‌ಮಾರ್ಕ್ ಚಿತ್ರವನ್ನು ಮೊಬೈಲ್ ಹಿಂಬಾಗದಲ್ಲಿ ಅಳವಡಿಸಲಾಗಿದೆ.!!


ವಿನ್ಯಾಸದಲ್ಲಿ ಮಾತ್ರವಲ್ಲದೆ ಒನ್‌ಪ್ಲಸ್ 5T ಮೊಬೈಲ್ ತಂತ್ರಜ್ಞಾನದಲ್ಲಿಯೂ ಸ್ಟಾರ್ ವಾರ್ಸ್ ವಿಷಯಗಳು ಸೇರಿಕೊಂಡಿದ್ದು, ಸ್ಟಾರ್‌ವಾರ್ ಅಭಿಮಾನಿಗಳು ಕೊನೆಯವರೆಗೂ ಸ್ಟಾರ್‌ವಾರ್ಸ್ ಅನುಭವ ಹೊಂದಲು ಸ್ಟಾರ್‌ವಾರ್ಸ್ ಥೀಮ್‌ಗಳು, ವಾಲ್‌ಪೇಪರ್ ಮತ್ತ ಪ್ಯಾಕ್ಸ್‌ಗಳನ್ನು ಮೊದಲೇ ಇನ್‌ಸ್ಟಾಲ್ ಮಾಡಲಾಗಿದೆ.!!
ಇನ್ನು ಲಿಮಿಟೆಡ್ ಆವೃತ್ತಿ ಸ್ಟಾರ್ ವಾರ್ಸ್ OnePlus 5T ಫೋನ್‌ಗಳಲ್ಲಿ ಕೇವಲ ಸ್ಟಾರ್ ವಾರ್ಸ್ ವಿನ್ಯಾಸ ಮತ್ತು ಮತ್ತು ಕಸ್ಟಮೈಸ್ ಸ್ಟಾರ್ ವಾರ್ಸ್ ವಿಷಯಗಳು ಮಾತ್ರವಲ್ಲದೆ, 6GB RAM ಮತ್ತು 8GB RAM ರೂಪಾಂತರದ ಆಯ್ಕೆಗಳನ್ನು ಹೊಂದಿರುವ ಟಾಪ್-ಆಫ್-ಲೈನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 835 ಚಿಪ್‌ಸೆಟ್ ಬೆಂಬಲಿತ ಸ್ಮಾರ್ಟ್‌ಫೋನ್ ಇದಾಗಿದೆ.!!

18: 9 ಆಕಾರ ಅನುಪಾತದೊಂದಿ 6 ಇಂಚಿನ ಆಪ್ಟಿಕ್ AMOLED ಸ್ಕ್ರೀನ್, 20MP + 16MP ಹಿಂಬದಿ ಕ್ಯಾಮರಾ, ಆಂಡ್ರಾಯ್ಡ್ 7.1.1 ನೌಗಾಟ್ ಮತ್ತು ಫೇಸ್ ಅನ್ಲಾಕ್‌ನಂತಹ ವೈಶಿಷ್ಟ್ಯಗಳನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ. OnePlus 5T ಫೋನ್ ಜೊತೆಗೆ ಸ್ಟಾರ್‌ವಾರ್ಸ್ ಸ್ಪೆಷಲ್ ಎಡಿಷನ್‌ನಲ್ಲಿ ಬಂದಿರುವ ಇತರ ಗ್ಯಾಜೆಟ್‌ಗಳು ಸಹ ಜನರ ಕಣ್ಮನ ಸೆಳೆಯುತ್ತಿದ್ದು, ಅವುಗಳು ಯಾವುವು? ಮತ್ತು ವಿಶೇಷತೆಗಳು ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಸ್ಟಾರ್ ವಾರ್ಸ್ ಡರ್ತ್ ವಾಡೆರ್ 6 ಚಿತ್ರ!!
ಸ್ಟಾರ್‌ವಾರ್ಸ್ ಸ್ಪೆಷಲ್ ಎಡಿಷನ್‌ನಲ್ಲಿ ಬಂದಿರುವ ಬ್ಲ್ಯಾಕ್ ಡರ್ತ್ ವಾಡೆರ್‌ನ ಆಕ್ಷನ್ ಫಿಗರ್ ಇಲ್ಲದೆ ಎ ಸ್ಟಾರ್ ವಾರ್ಸ್ ಸಂಗ್ರಹಣೆ ಅಪೂರ್ಣ ಎನ್ನಬಹುದು.!! 6 ಇಂಚಿನ ಈ ಸ್ಟಾರ್ ವಾರ್ಸ್ ಫಿಗರ್ ಅಮೆಜಾನ್ ಇಂಡಿಯಾದಲ್ಲಿ ಲಭ್ಯವಿದ್ದು, ಪ್ರತಿ ಸ್ಟಾರ್ ವಾರ್ಸ್ ಅಭಿಮಾನಿಗಳು ಡರ್ತ್ ವಾಡೆರ್ 6 ಅನ್ನು ಖರೀದಿಸಬಹುದು.!!

ಬಿಬಿ-8 ಸ್ಪೀರೋ ವಿತ್ ಫೋರ್ಸ್ ಬ್ಯಾಂಡ್!!
ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಸೇರಿಸಲಾದ ತರಂಗದಿಂದ ನಿಯಂತ್ರಿಸಬಹುದಾದ ಬಿಬಿ-8 ಸ್ಪೀರೋ ವಿತ್ ಫೋರ್ಸ್ ಬ್ಯಾಂಡ್ ಕೂಡ ಸ್ಟಾರ್‌ವಾರ್ಸ್ ಸ್ಪೆಷಲ್ ಎಡಿಷನ್‌ನಲ್ಲಿ ಹೊರಬಂದಿದೆ. ಈ ಫೋರ್ಸ್ ಬ್ಯಾಂಡ್ Thingeek.com ನಲ್ಲಿ ಲಭ್ಯವಿದ್ದು, ಸ್ಟಾರ್‌ವಾರ್ಸ್ ಅಭಿಮಾನಿಗಳು ಸಂಗ್ರಹಿಸಲು ಉತ್ತಮ ಗ್ಯಾಜೆಟ್ ಆಗಿದೆ.!!

ಸ್ಟಾರ್‌ವಾರ್ಸ್ ಆರ್2 ಡಿ2 ಯುಸ್‌ಬಿ ಕಾರ್ ಚಾರ್ಜರ್!!
ಎರಡು ಡಿವೈಸ್‌ಗಳನ್ನು ಒಮ್ಮೆಲೇ ಚಾರ್ಜ್ ಮಾಡಬಹುದಾದ, 2.1 ಎಎಂಪಿ ಚಾರ್ಜಿಂಗ್ ಸಾಮರ್ಥ್ಯ ಸ್ಟಾರ್‌ವಾರ್ಸ್ ಸ್ಪೆಷಲ್ ಎಡಿಷನ್‌ನಲ್ಲಿ ಆರ್2 ಡಿ2 ಯುಸ್‌ಬಿ ಕಾರ್ ಚಾರ್ಜರ್ ಲಭ್ಯವಿದೆ. ಇದು ಕೂಡ Thingeek.com ನಲ್ಲಿ ಲಭ್ಯವಿದ್ದು, ಕಾರಿನಲ್ಲಿ ಚಾರ್ಜಿಂಗ್ ಸೌಲಭ್ಯಕ್ಕೆ ಉತ್ತಮ ಡಿವೈಸ್ ಎನ್ನಬಹುದು.!!

ಸ್ಟಾರ್ ವಾರ್ಸ್ ಮಿಲೇನಿಯಂ ಫಾಲ್ಕನ್ ಬುಕ್ ಲೈಟ್!!
ಬುಕ್ ಪ್ರಿಯರಿಗೆ ಓದಲು ಸಹಾಯವಾಗುವ ಬುಕ್ ಲೈಟ್ ಸ್ಟಾರ್‌ವಾರ್ಸ್ ವಿಶೇಷ ಎಡಿಷನ್‌ನಲ್ಲಿ ಬಿಡುಗಡೆಯಾಗಿದೆ ಎಂದರೆ ನೀವು ನಂಬಲೇಬೇಕು.!! ಬುಕ್ ಲೈಟ್ ಖರೀದಿಸಬೇಕು ಎಂದು ಕೊಳ್ಳುವ ಸ್ಟಾರ್‌ವಾರ್ಸ್ ಅಭಿಮಾನಿಗಳಿಗೆ Thingeek.com ನಲ್ಲಿ ಸ್ಟಾರ್ ವಾರ್ಸ್ ಮಿಲೇನಿಯಂ ಫಾಲ್ಕನ್ ಬುಕ್ ಲೈಟ್ ಲಭ್ಯವಿದೆ.!!


Click it and Unblock the Notifications