ಇಂಟರ್ನೆಟ್ ಬಳಕೆಗಾಗಿ 5 ಕಟ್ಟುನಿಟ್ಟಿನ ಭದ್ರತೆಗಳು

By Shwetha
|

ಇಂಟರ್ನೆಟ್ ಬಳಕೆಯನ್ನು ಹೆಚ್ಚು ಹೆಚ್ಚು ನೀವು ಮಾಡಿದಂತೆಲ್ಲಾ ಅದರ ಭದ್ರತೆ ಕಡೆಗೂ ನೀವು ಗಮನವನ್ನು ಹರಿಸಬೇಕಾಗುತ್ತದೆ. ನಿಮ್ಮನ್ನು ಮತ್ತು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸುಭದ್ರವಾಗಿ ಇರಿಸಿಕೊಳ್ಳಬೇಕಾದ ಹೆಚ್ಚುವರಿ ಜವಬ್ದಾರಿ ನಿಮ್ಮ ಮೇಲಿದ್ದು ಆನ್‌ಲೈನ್ ಭದ್ರತೆ ಈ ನಿಟ್ಟಿನಲ್ಲಿ ಅತಿ ಪ್ರಮುಖವಾಗಿದೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ನಿಮ್ಮ ಆನ್‌ಲೈನ್ ಭದ್ರತೆಯನ್ನು ಇನ್ನಷ್ಟು ಗಟ್ಟಿಯಾಗಿ ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಎರಡು ದೃಢೀಕರಣ ಬಳಸಿ
ಎರಡು ದೃಢೀಕರಣಗಳನ್ನು ಬಳಸಿ ಅಂದರೆ ಪಾಸ್‌ವರ್ಡ್ ಒನ್ ಟೈಮ್ ಕೋಡ್ ಇವೇ ಮುಂತಾದವುಗಳನ್ನು ಬಳಸಿ. ಒಮ್ಮೊಮ್ಮೆ ಪಠ್ಯ ಸಂದೇಶದ ಮೂಲಕ ನಿಮ್ಮ ಫೋನ್‌ಗೆ ಕೋಡ್‌ಗಳನ್ನು ಕಳುಹಿಸಲಾಗುತ್ತದೆ. ಪಾಸ್‌ವರ್ಡ್‌ಗೆ ಪ್ರವೇಶವನ್ನು ಪಡೆಯುವ ಮುಂಚೆ, ಎರಡನೇ ಪಾಸ್‌ವರ್ಡ್ ಅನ್ನು ನಮೂದಿಸುವುದು ಅತೀ ಅಗತ್ಯವಾಗಿದೆ.

ಇಂಟರ್ನೆಟ್ ಬಳಕೆಗಾಗಿ 5 ಕಟ್ಟುನಿಟ್ಟಿನ ಭದ್ರತೆಗಳು

ನಿಮ್ಮ ಬ್ರೌಸರ್ ಹಾಗೂ ಡಿವೈಸ್‌ಗಳನ್ನು ಅಪ್‌ಡೇಟ್ ಮಾಡಿ
ಬ್ರೌಸರ್‌ಗಳು, ಆಪರೇಟರ್‌ ಸಿಸ್ಟಮ್‌ಗಳು ಮತ್ತು ಮೊಬೈಲ್ ಡಿವೈಸ್‌ಗಳಿಗೆ ಅಪ್‌ಡೇಟ್‌ಗಳು ಅತೀ ಅಗತ್ಯವಾಗಿದೆ. ಆಗಾಗ್ಗೆ ಇದನ್ನು ಮಾಡುವುದು ತಲೆನೋವೇ ಆದರೂ ಇದು ಅತಿ ಮುಖ್ಯವಾಗಿದೆ.

ಇಂಟರ್ನೆಟ್ ಬಳಕೆಗಾಗಿ 5 ಕಟ್ಟುನಿಟ್ಟಿನ ಭದ್ರತೆಗಳು

ಅನನ್ಯ ಪಾಸ್‌ವರ್ಡ್ ಹಾಗೂ ಪಾಸ್‌ವರ್ಡ್ ಮ್ಯಾನೇಜರ್ ಬಳಸಿ
ಬಲವಾದ ಪಾಸ್‌ವರ್ಡ್‌ಗಳನ್ನು ಮಾಡುವಲ್ಲಿ ಜನರು ಸೋಲುತ್ತಾರೆ. ಆದ್ದರಿಂದ ನಿಮ್ಮ ಪಾಸ್‌ವರ್ಡ್ ಎಂದೂ ಬಲಯುತವಾಗಿರಲಿ. ಅಂತೆಯೇ ರಹಸ್ಯವಾಗಿರಲಿ. ನಿಮ್ಮ ಪಾಸ್‌ವರ್ಡ್‌ಗಳು ಸರಳವಾಗಿದ್ದಷ್ಟು ಹ್ಯಾಕರ್‌ಗಳು ಅದನ್ನು ಸುಲಭವಾಗಿ ಪಡೆದುಕೊಳ್ಳಬಹುದು.

ಇಂಟರ್ನೆಟ್ ಬಳಕೆಗಾಗಿ 5 ಕಟ್ಟುನಿಟ್ಟಿನ ಭದ್ರತೆಗಳು

ಗೂಗಲ್ ಭದ್ರತಾ ಪರಿಶೀಲನೆ ಪಡೆದುಕೊಳ್ಳಿ
ನಿಮ್ಮ ಇತ್ತೀಚಿನ ಸೈನ್ ಇನ್ ಚಟುವಟಿಕೆಯನ್ನು ಇದು ಪೂರ್ವವೀಕ್ಷಣೆ ಮಾಡುತ್ತದೆ. ಆದ್ದರಿಂದ ಗೂಗಲ್ ಭದ್ರತೆ ಪರಿಶೀಲನೆ ಅತೀ ಮುಖ್ಯವಾಗಿದೆ.

ಇಂಟರ್ನೆಟ್ ಬಳಕೆಗಾಗಿ 5 ಕಟ್ಟುನಿಟ್ಟಿನ ಭದ್ರತೆಗಳು

ಸಾಧ್ಯವಾದಾಗಲೆಲ್ಲಾ HTTPS ಅನ್ನು ಬಳಸಿ
ಹೈಪರ್ ಟೆಕ್ಸ್ಟ್ ಟ್ರಾನ್‌ಫರ್ ಪ್ರೊಟೊಕಾಲ್‌ನ ಭದ್ರತಾ ಆವೃತ್ತಿಯಾಗಿರುವ HTTPS ನಿಮ್ಮ ಮತ್ತು ವೆಬ್‌ಸೈಟ್ ಸರ್ವರ್‌ಗಳ ನಡುವೆ ವಾಹಕವಾಗಿ ಕೆಲಸ ಮಾಡುತ್ತದೆ.

ಇಂಟರ್ನೆಟ್ ಬಳಕೆಗಾಗಿ 5 ಕಟ್ಟುನಿಟ್ಟಿನ ಭದ್ರತೆಗಳು
Best Mobiles in India

English summary
This article tells about 5 easy internet security tips for secure access.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X