ರಿಲಾಯನ್ಸ್ ಜಿಯೋ ಭಾರತದಲ್ಲಿ ಶೀಘ್ರದಲ್ಲೇ ಲಾಂಚ್ ಮಾಡುವ ಸೇವೆಗಳಿವು!

ರಿಲಾಯನ್ಸ್ ಜಿಯೋ ಶೀಘ್ರದಲ್ಲೇ ಭಾರತದಲ್ಲಿ ಲಾಂಚ್‌ ಮಾಡಲಿರುವ 5 ಹೊಸ ಸೇವೆಗಳು ಯಾವುವು ಎಂದು ತಿಳಿಯಿರಿ.

By Suneel
|

ಕೇವಲ 5 ತಿಂಗಳ ಹಿಂದಷ್ಟೇ ಹೊಸ ವಿಶೇಷ ಆಫರ್‌ಗಳೊಂದಿಗೆ ರಿಲಾಯನ್ಸ್ ಜಿಯೋ ಭಾರತೀಯ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟಿತ್ತು. ಇಂದು ರಿಲಾಯನ್ಸ್ ಜಿಯೋ ಎಂಬ ಪದವೇ ಎಲ್ಲೆಲ್ಲೂ ಪ್ರತಿಧ್ವನಿಸುತ್ತಿದೆ. ಗ್ರಾಹಕರಿಗೆ ಜಿಯೋದ ಮುಖ್ಯ ಆಕರ್ಷಣೆ ಎಂದರೆ 'ವೆಲ್ಕಮ್ ಆಫರ್'. ಅದು ಎಲ್ಲರೂ ಅನ್‌ಲಿಮಿಟೆಡ್ ಉಚಿತ ಡಾಟಾವನ್ನು 3 ತಿಂಗಳು ಮನಬಂದಂತೆ ಬಳಸುವ ಆಫರ್.

ಆಫರ್‌ ಓಕೆ. ಆದರೆ ಗ್ರಾಹಕರು ಹೆಚ್ಚಾದಂತೆ, ಗ್ರಾಹಕ ಸಹಾಯವಾಣಿ ಸೇವೆ ಕಡಿಮೆ ಮತ್ತು ಇತರೆ ಹಲವು ಸಮಸ್ಯೆಗಳಿಂದ ಜಿಯೋ ತನ್ನ ಹಿಂದಿನ ವೇಗವನ್ನು ಕಳೆದುಕೊಳ್ಳುತ್ತಿದೆ. ಆದರೂ ಸಹ ಜಿಯೋ ತನ್ನ ಹೊಸತನವನ್ನೇ ಉಳಿಸಿಕೊಳ್ಳಲು ಇತರೆ ಹಲವು ಹೊಸ ಸೇವೆಗಳನ್ನು ಆರಂಭಿಸುತ್ತಿದೆ. ಅವುಗಳಲ್ಲಿ ಈಗಾಗಲೇ ಗಿಜ್‌ಬಾಟ್‌ನಲ್ಲಿ ತಿಳಿಸಿರುವಂತೆ ಬ್ರಾಡ್‌ಬ್ಯಾಂಡ್ ಸೇವೆ ಸಹ ಒಂದು. ಜಿಯೊ ಶೀಘ್ರದಲ್ಲೇ ಭಾರತದಲ್ಲಿ ಲಾಂಚ್‌ ಮಾಡಲಿರುವ 5 ಹೊಸ ಸೇವೆಗಳು ಯಾವುವು ಎಂದು ತಿಳಿಯಿರಿ.

ರಿಲಾಯನ್ಸ್ ಜಿಯೋ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಪ್ಲಾನ್: 500 ರೂಗೆ 600GB ಡಾಟಾ!

ಜಿಯೋ ಮನಿ(Jio Money)

ಜಿಯೋ ಮನಿ(Jio Money)

ಪೇಟಿಎಮ್ ರೀತಿಯಲ್ಲಿ ಸೇವೆ ಒದಗಿಸುವ ಜಿಯೋದ ಹೊಸ ಸೇವೆ 'ಜಿಯೋ ಮನಿ (Jio Money)' ಶೀಘ್ರದಲ್ಲಿ ಭಾರತದಲ್ಲಿ ಲಾಂಚ್ ಆಗಲಿದೆ. ಜಿಯೋ ಹೇಳಿರುವ ಪ್ರಕಾರ ಈ ಸೇವೆಯನ್ನು ಹೆಚ್ಚು ಗ್ರಾಹಕರು ಬಳಸಬೇಕು. ಕ್ಯಾಶ್‌ಲೆಸ್ ಪರಿಹಾರ ನೀಡುವ, ದಿನನಿತ್ಯ ಬಳಸ ಬೇಕಾದ ಸೇವೆ ಇದು ಎಂದು ಹೇಳಿದೆ.

ಶಾಪಿಂಗ್ ಮಾಲ್‌ಗಳಲ್ಲಿ, ಮೆಟ್ರೊ ಸೇವೆಗೆ ಮತ್ತು ಕ್ಯಾಬ್‌ ರೈಡ್‌ ಸೇವೆಗಳಿಗೆ ಕ್ಯಾಶ್‌ ಬದಲು 'ಜಿಯೋ ಮನಿ' ಬಳಸಬಹುದಾದ ಸೇವೆಯನ್ನು ನೀಡಲಿದೆ.

ವಾಯ್ಸ್ ಓವರ್ ವೈಫೈ

ವಾಯ್ಸ್ ಓವರ್ ವೈಫೈ

ನಮಗೆಲ್ಲಾ ತಿಳಿದಿರುವಂತೆ ಜಿಯೋ ಉಚಿತ ವಾಯ್ಸ್ ಕರೆ, ಪ್ರತಿಸ್ಪರ್ಧಿಗಳ ನಡುವೆ ಯುದ್ಧ ಕ್ರಿಯೇಟ್ ಮಾಡಿದೆ. ಆದರೆ ಕಂಪನಿ ಪುನಃ 'ವಾಯ್ಸ್ ಓವರ್ ವೈಫೈ' ಎಂಬ ಹೊಸ ಸೇವೆಯನ್ನು ಪರಿಚಯಿಸಲಿದೆ. ಈ ಸೇವೆಯು ಎಲ್ಲಾ ಸಮಯದಲ್ಲೂ ಜಿಯೋ ವೈಫೈ ಸೇವೆಗೆ ಟ್ರಾವೆಲಿಂಗ್ ಸಮಯದಲ್ಲೂ ಸಂಪರ್ಕ ನೀಡುತ್ತದೆ.

ಜಿಯೋಫೈ ವೈಫೈ

ಜಿಯೋಫೈ ವೈಫೈ

ರಿಲಾಯನ್ಸ್ ಜಿಯೋ ತನ್ನ ಡಾಟಾ ಪ್ಲಾನ್‌ನಲ್ಲಿ ಜಿಯೋಫೈ ಪರಿಚಯಿಸಿತ್ತು. ಜಿಯೋಫೈ ಜನವರಿ 2017 ರಿಂದ ಲಭ್ಯ ಎಂದು. ಜಿಯೋಫೈ, ನಿವು ಇತರೆ ನೆಟ್‌ವರ್ಕ್‌ನಲ್ಲಿ ಇದ್ದರೇ ಸ್ವಯಂಚಾಲಿತವಾಗಿ ಜಿಯೋ ನೆಟ್‌ವರ್ಕ್‌ಗೆ ಕನೆಕ್ಟ್‌ ಮಾಡುತ್ತದೆ. ಆದರೆ ಒಮ್ಮೆ ಪಾಸ್‌ವರ್ಡ್‌ ಅನ್ನು ನೀಡಿ ನಂತರ ಇಂಟರ್ನೆಟ್ ಸಂಪರ್ಕ ಪಡೆಯಬಹುದು.

ಜಿಯೋ ಸ್ಮಾರ್ಟ್‌ ಹೋಮ್‌

ಜಿಯೋ ಸ್ಮಾರ್ಟ್‌ ಹೋಮ್‌

ರಿಲಾಯನ್ಸ್ ಜಿಯೋ ತನ್ನ 'ಜಿಯೋ ಸ್ಮಾರ್ಟ್‌ ಹೋಮ್‌'ನಿಂದ, ಗೂಗಲ್‌ ತನ್ನ 'ಗೂಗಲ್ ಹೋಮ್‌' ಪ್ರಾಡಕ್ಟ್‌'ನಿಂದ ಹೇಗೆ ಮನೆ ನಿಯಂತ್ರಣ ಮಾಡುತ್ತದೋ ಅದೇ ರೀತಿಯಲ್ಲಿ ಮನೆ ನಿಯಂತ್ರಿಸಲಿದೆ. ಇದು ಲಾಂಚ್‌ ಆದಲ್ಲಿ ಅಮೆಜಾನ್ ಎಖೋ ತೆಗೆದುಕೊಳ್ಳಲಿದ್ದು, ಈ ಸರ್ವೀಸ್ 1Gbps ವೇಗ ಹೊಂದಿರುತ್ತದೆ.

ಜಿಯೋ ಸ್ಮಾರ್ಟ್‌ ಕಾರ್

ಜಿಯೋ ಸ್ಮಾರ್ಟ್‌ ಕಾರ್

ಜಿಯೋ ಭಾರತೀಯ ಗ್ರಾಹಕರಿಗೆ ಎಲಾನ್‌ ಮಸ್ಕ್‌'ರವರ ಟೆಸ್ಲಾ ಕಾರಿನಂತೆ, 'ಜಿಯೋ ಸ್ಮಾರ್ಟ್‌ ಕಾರನ್ನು ಪರಿಚಯಿಸಲಿದೆ. ಇದು ಆನ್‌ಬೋರ್ಡ್ ಡಯಾಗ್ನೋಸ್ಟಿಕ್‌ಗೆ ಕನೆಕ್ಟ್ ಆಗಿರುತ್ತದೆ. ಇದು ಫೋನ್‌'ಗೆ, ಜಿಯೋ ಕಾರ್‌ ಕನೆಕ್ಟ್ ಆಪ್‌ ಮುಖಾಂತರ ಸಂಪರ್ಕ ಹೊಂದಿರುತ್ತದೆ. ಇದನ್ನು ಇತರೆ ಸಾಮಾನ್ಯ ಕಾರುಗಳಂತೆ ಬದಲಾಯಿಸಲು ಅವಕಾಶವಿರುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
5 Things That Reliance Jio Could Announce Soon in India. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X