4,299 ರೂ. ಬೆಲೆಯ ಈ ಸ್ಮಾರ್ಟ್‌ ಗ್ಯಾಜೆಟ್ ಖರೀದಿಗೆ ಕ್ಯೂ ನಿಲ್ತೀರಾ!!..ಏಕೆ ಗೊತ್ತಾ?

|

ಮಾರುಕಟ್ಟೆಗೆ ದಾಂಗುಡಿ ಇಟ್ಟಿರುವ ಸ್ಮಾರ್ಟ್‌ ಗ್ಯಾಜೆಟ್‌ಗಳನ್ನು ಮನೆಗೆ ಅಳವಡಿಸಿ, ನಿಮ್ಮ ಮೊಬೈಲ್‌ ಫೋನ್‌ನಿಂದಲೇ ಅವುಗಳನ್ನು ನಿಯಂತ್ರಿಸಬಹುದಾದ ವಿಶೇಷ ಗ್ಯಾಜೆಟ್‌ಗಳು ಇಂದು ಬೇಕಾದಷ್ಟಿವೆ. ಆದರೆ, ಅವುಗಳ ಬೆಲೆ ಮಾತ್ರ ಗಗನಕ್ಕೆ ಕೈಚಾಚಿದಂತೆ ಇರುತ್ತದೆ ಎಂಬುದು ನಿಮ್ಮ ಅಭಿಪ್ರಾಯವಿರಬಹುದು. ಆದರೆ, ನಿಮ್ಮ ಅಬಿಪ್ರಾಯ ಕೂಡ ಸುಳ್ಳಾಗಿರಬಹುದು.

ಹೌದು, ಇಂತಹ ಹಾಡು ಬೇಕೆಂದರೆ ಸಾಕು ಪ್ಲೇ ಮಾಡುವ, ಹೇಳಿದರೆ ಸಾಕು ಹವಾನಿಯಂತ್ರಿತ ಯಂತ್ರ ಚಾಲೂ ಆಗುವ, ಆದೇಶ ಕೊಟ್ಟರೆ ಸಾಕು ಸ್ಟ್ರಾಂಗ್ ಕಾಫಿ ಎಂದು ಕೇಳಿದರೆ ಸಾಕು ಬಿಸಿ ಬಿಸಿ ಕಾಫಿ ತಯಾರಿಸುವ, ಪ್ರವಾಸ ಹೋದರೂ ಮನೆಯನ್ನು ಕಾಯುವ ಗ್ಯಾಜೆಟ್‌ಗಳು ಸಹ ಈಗ ನಮ್ಮ ಬಜೆಟ್‌ಗೆ ತಕ್ಕಂತೆ ಖರೀದಿಗೆ ಲಭ್ಯವಾಗುತ್ತಿವೆ ಎಂದರೆ ಆಶ್ಚರ್ಯವೇನಿಲ್ಲ.

4,299 ರೂ. ಬೆಲೆಯ ಈ ಸ್ಮಾರ್ಟ್‌ ಗ್ಯಾಜೆಟ್ ಖರೀದಿಗೆ ಕ್ಯೂ ನಿಲ್ತೀರಾ!!

ಮೊಬೈಲ್ ಮಾತಿನ ಮೂಲಕವೇ ಮನೆಯಲ್ಲಿ ಹಲವು ಕೆಲಸಗಳನ್ನು ನಿರ್ವಹಿಸುವ ಹಲವು ಗ್ಯಾಜೆಟ್‌ಗಳು ಈಗ ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿವೆ. ನೀವು ಕೂಡ ಇವುಗಳನ್ನು ಖರೀದಿಸಲು ಶಕ್ತರಾಗಿದ್ದೀರಿ. ಹಾಗಾಗಿ, ಇಂದಿನ ಲೇಖನದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿರುವ ದಿ ಬೆಸ್ಟ್ ಗ್ಯಾಜೆಟ್‌ಗಳನ್ನು ನಾವು ನಿಮಗೆ ಪರಿಚಯಿಸುತ್ತಿದ್ದೇವೆ.

ಬ್ಲೂಟೂತ್‌ ಕಾಫಿ ಯಂತ್ರ!

ಬ್ಲೂಟೂತ್‌ ಕಾಫಿ ಯಂತ್ರ!

ನಿಮ್ಮ ಅಡುಗೆ ಮನೆಗೂ ಸ್ಮಾರ್ಟ್ ತಂತ್ರಜ್ಞಾನದ ಸ್ಪರ್ಶ ನೀಡಬೇಕೆಂದರೆ, ನೆಸ್‌ಕೆಫೆ ಇ ಕನೆಕ್ಟೆಡ್ ಕಾಪಿ ಗ್ಯಾಜೆಟ್ ಅನ್ನು ಅಳವಡಿಸಿದರೆ ಸಾಕು. ಬ್ಲೂಟೂತ್‌ ನೆಟ್‌ವರ್ಕ್ ಸಹಾಯದಿಂದ ಕೆಲಸ ಮಾಡುವ ಈ ಯಂತ್ರ ನೀವು ಕೇಳಿದಾಗ ಬಿಸಿ ಬಿಸಿ ಕಾಫಿ ಮಾಡಿಕೊಡುತ್ತದೆ. ನಿಮಗೆ ಬೇಕೆಂದಾಗ ಒಂದು ಆದೇಶ ಕೊಟ್ಟರೆ ಸಾಕು ಕ್ಷಣಗಳಲ್ಲಿ ಕಾಫಿ ತಯಾರಾಗುತ್ತದೆ. ಇಂತಹ ಕಾಫಿ ಯಂತ್ರದ ಬೆಲೆ ಕೇವಲ 6,499 ರೂಪಾಯಿಗಳಾಗಿವೆ.

ಮನೆ ಮೇಲೆ ಸ್ಮಾರ್ಟ್‌ ಕಣ್ಣು!

ಮನೆ ಮೇಲೆ ಸ್ಮಾರ್ಟ್‌ ಕಣ್ಣು!

ಪರಿವಾರ ಸಮೇತ ದೂರದ ಪ್ರದೇಶಗಳಿಗೆ ಹೊದಾಗ ಅಥವಾ ಮನೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದಿರುವಾಗ, ಮನೆ ಮೇಲೆ ಒಂದು ಕಣ್ಣಿಟ್ಟಿರಲು ಎಜ್ವಿಜ್ ಮಿನಿ ಒ 1080ಪಿ ಸಾಧನ ನಿಮಗೆ ನೆರವಾಗುತ್ತದೆ. ವೈ-ಫೈ ನೆಟ್‌ವರ್ಕ್ ಸಹಾಯದಿಂದ ಕೆಲಸ ಮಾಡುವ ಈ ಗ್ಯಾಜೆಟ್ ಮೋಷನ್ ಸೆನ್ಸರ್ ಸಹಾಯದಿಂದ ಮನೆಯಲ್ಲಿನ ಚಲನವಲನಗಳನ್ನು ಗುರಿತಿಸಿ ಎಚ್ಚರಿಸುತ್ತದೆ. ಇದು ಸೆರೆಹಿಡಿಯುವ ಗುಣಮಟ್ಟದ ವಿಡಿಯೊಗಳನ್ನು ವೈಡ್ ಆಂಗಲ್‌ನಲ್ಲಿ ನೋಡಬಹುದಾಗಿದೆ. ಇದರ ಬೆಲೆ 4,299 ರೂ.ಗಳು ಮಾತ್ರ.

ಓಕ್ಟರ್ ಸ್ವಿಚ್‌ಗಳು

ಓಕ್ಟರ್ ಸ್ವಿಚ್‌ಗಳು

ನಿಮ್ಮ ಮನೆಯಲ್ಲಿರುವ ಯಾವುದೇ ಬಲ್ಪ್, ಗೀಸರ್, ಏ.ಸಿ ಸೇರಿದಂತೆ ಹೀಗೆ ಯಾವುದೇ ವಿದ್ಯುತ್ ಉಪಕರಣವನ್ನು ಬಳಸುತ್ತಿದ್ದರೂ ಅವುಗಳನ್ನು ವೈಫೈ ನೆಟ್‌ವರ್ಕ್‌ ಜತೆಗೆ ಜೋಡಿಸಲು ಓಕ್ಟರ್ ಸ್ಮಾರ್ಟ್ ಹೋಮ್ ಕಿಟ್‌ ನಿಮಗೆ ನೆರವಾಗುತ್ತದೆ. ವಿದ್ಯುತ್ ಪರಿಕರಗಳಿಗೆ ಸ್ಮಾರ್ಟ್‌ ತಂತ್ರಜ್ಞಾನದ ಸ್ಪರ್ಶ ಕೊಡುವ ಈ ಗ್ಯಾಜೆಟ್ ಅನ್ನು ಫೋನ್‌ನಿಂದ ಅಷ್ಟೇ ಅಲ್ಲದೇ, ವಾಯ್ಸ್‌ ಅಸಿಸ್ಟಂಟ್ ಮೂಲಕವೂ ನಿಯಂತ್ರಿಸಬಹುದು. ಇದರ ಬೆಲೆ 14,450 ರೂ.ಗಳು ಮಾತ್ರ.

ಹ್ಯು ಮೋಷನ್ ಸೆನ್ಸರ್

ಹ್ಯು ಮೋಷನ್ ಸೆನ್ಸರ್

ನೀವು ಮನೆಗೆ ಪ್ರವೇಶಿಸುತ್ತಿದ್ದಂತೆಯೇ, ಮನೆಯಲ್ಲಿನ ದೀಪಗಳು ಉರಿಯುವಂತೆ ಮಾಡಲು, ನೀವು ಮಲಗಿದ್ದಾಗ ಅಪರಿಚಿತರು ಯಾರಾದರೂ ಕೋಣೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ ದೀಪಗಳು ಆನ್‌ ಆಗಿ ಅವರು ನಿಮ್ಮ ಕಣ್ಣಿಗೆ ಬೀಳುವಂತೆ ಮಾಡಲು ಫಿಲಿಪ್ಸ್‌ 4100248U7 ಹ್ಯು ಮೋಷನ್ ಸೆನ್ಸರ್ ಸ್ಮಾರ್ಟ್‌ ಗ್ಯಾಜೆಟ್ ಅನ್ನು ನೀವು ಬಳಸಬಹುದು.ಬ್ಯಾಟರಿ ಸಹಾಯದಿಂದ ಕೆಲಸ ಮಾಡುವ ಈ ವೈರ್‌ಲೆಟ್ ಸಾಧನದ ಬೆಲೆ ಕೇವಲ 7,890 ರೂಪಾಯಿಗಳು ಮಾತ್ರ.

ಫಿಲಿಪ್ಸ್ ಬಲ್ಪ್!

ಫಿಲಿಪ್ಸ್ ಬಲ್ಪ್!

ತಂತಿ ರಹಿತವಾಗಿಯೇ ಕಾರ್ಯನಿರ್ವಹಿಸುವ 'ಹ್ಯು ಮಿನಿ ಸ್ಟಾರ್ಟರ್‌' ಇದ್ದರೆ ಸಾಕು ನಿಮ್ಮ ಮನೆಯ ಬೆಳಕಿಗೂ ಸ್ಮಾರ್ಟ್ ತಂತ್ರಜ್ಞಾನದ ಸ್ಪರ್ಶ ಕೊಡಬಹುದು. 10 ವಾಟ್ ಸಾಮರ್ಥ್ಯದ ಮೂರು ಬಲ್ಬ್‌ಗಳ ಜತೆಗೆ ಪುಟ್ಟದಾದ ಒಂದು ರೌಟರ್ ಇದ್ದು, ಇಂತಿಷ್ಟೇ ಸಮಯಕ್ಕೆ ಆನ್‌ ಮತ್ತು ಆಫ್‌ ಆಗುವ ಹಾಗೆ ಸಮಯ ಹೊಂದಿಸಬಹುದು. ಮನೆಯಲ್ಲಿ ಇದ್ದಾಗ ಫೋನ್‌ನ ಅಗತ್ಯವಿಲ್ಲದೇ ನಿಮ್ಮ ಮಾತಿನ ಮೂಲಕವೇ ನಿಯಂತ್ರಿಸಬಹುದು. ಇವುಗಳ ಬೆಲೆ 12,480 ರೂಪಾಯಿಗಳಾಗಿವೆ.

ಮಕ್ಕಳ ಸುರಕ್ಷತೆಗೆ 'ಕಿಡ್ಡೊಶೀಲ್ಡ್' ವಾಚ್!..ಇದಿದ್ದರೆ ಪೋಷಕರಿಗೆ ಭಯವಿಲ್ಲ!!

ಮಕ್ಕಳ ಸುರಕ್ಷತೆಗೆ 'ಕಿಡ್ಡೊಶೀಲ್ಡ್' ವಾಚ್!..ಇದಿದ್ದರೆ ಪೋಷಕರಿಗೆ ಭಯವಿಲ್ಲ!!

ಮಕ್ಕಳನ್ನು ಎಷ್ಟೇ ಜಾಗೃತವಾಗಿ ನೋಡಿಕೊಂಡರೂ ಸಹ ಕೆಲವೊಮ್ಮೆ ಪೋಷಕರು ಯಾಮಾರಿಬಿಡುವುದು ಉಂಟು. ಅಂಗಡಿಗೋ, ಶಾಲೆ ಹೋದ ಮಗು ಮನೆಗೆ ನಿಗದಿತ ಸಮಯದಲ್ಲಿ ವಾಪಸ್ ಬಾರದಿದ್ದರೆ ಆಗುವಂತಹ ಸಂಕಟ ಪೋಷಕರಿಗೆ ಹೇಳಲು ಸಾಧ್ಯವಿಲ್ಲ. ನಮ್ಮ ಮಕ್ಕಳನ್ನು ಯಾರಾದರೂ ಅಪಹರಣ ಮಾಡಿರಬಹುದು ಅಥವಾ ಮಕ್ಕಳು ಅಚಾನಕ್ ಆಗಿ ದಾರಿ ತಪ್ಪಿ ನಮ್ಮಿಂದ ದೂರಾಗಬಹುದು ಎಂಬ ಭಯ ಕೂಡ ಎಲ್ಲಾ ಪೋಷಕರಿಗೂ ಯಾವಾಗಲೂ ಕಾಡುತ್ತಿರುತ್ತದೆ ಅಲ್ಲವೇ.?

ಹಾಗಾಗಿಯೇ ಯುನಿಜಿಪಿಎಸ್ ಎಂಬ ಕಂಪನಿಯು ಮಕ್ಕಳ ಮತ್ತು ಮಹಿಳೆಯರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಉದ್ದೇಶದಿಂದ 'ಕಿಡ್ಡೊ ಶೀಲ್ಡ್' ಎನ್ನುವ ಜಿಪಿಎಸ್ ಆಧಾರಿತ ಸ್ಮಾರ್ಟ್‌ವಾಚ್ ಒಂದನ್ನು ಬಿಡುಗಡೆ ಮಾಡಿದೆ. ಈ ವಾಚ್ ಜಿಪಿಎಸ್ ಆಧಾರಿತವಾಗಿದ್ದು, ಪೋಷಕರು ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾ ವಹಿಸಬಹುದಾಗಿದೆ. ಹಾಗಾದರೆ, ಹೇಗಿದೆ ಈ ಕಿಡ್ಡೊ ಶೀಲ್ಡ್' ಸ್ಮಾರ್ಟ್‌ವಾಚ್? ಹೇಗೆ ಕೆಲಸ ಮಾಡುತ್ತದೆ? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಏನಿದು ‘ಕಿಡ್ಡೊ ಶೀಲ್ಡ್’ ?

ಏನಿದು ‘ಕಿಡ್ಡೊ ಶೀಲ್ಡ್’ ?

ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿರುವ ಈ ‘ಕಿಡ್ಡೊ ಶೀಲ್ಡ್' ಒಂದು ಸ್ಮಾರ್ಟ್‌ವಾಚ್ ಆಗಿದೆ. ಈ ವಾಚ್‌ನಲ್ಲಿರುವ ಆಧುನಿಕ ಜಿಪಿಎಸ್ ತಂತ್ರಜ್ಞಾನ ಸಹಾಯದಿಮದ ಮೊಬೈಲ್‌, ಲ್ಯಾಪ್‌ಟ್ಯಾಪ್‌ಗಳ ಮೂಲಕ ಮಕ್ಕಳ ಮೇಲೆ ನಿಗಾ ಇಡಬಹುದು. ವಾಚ್ ಕಟ್ಟಿಕೊಂಡಿರುವ ಮಕ್ಕಳು ಎಲ್ಲಿದ್ದಾರೆ ಎಂಬುದನ್ನು ನಿಖರವಾಗಿ ತಿಳಿಯುವಂತಹ ವ್ಯವಸ್ಥೆ ಈ ವಾಚ್‌ನಲ್ಲಿದೆ.

ಹೇಗಿದೆ ‘ಕಿಡ್ಡೊ ಶೀಲ್ಡ್’ ?

ಹೇಗಿದೆ ‘ಕಿಡ್ಡೊ ಶೀಲ್ಡ್’ ?

10ಕ್ಕೂ ಅಧಿಕ ದಿನಗಳವರೆಗೆ ಬ್ಯಾಟರಿ ಬ್ಯಾಕಪ್‌ ಸಾಮರ್ಥ್ಯ ಹೊಂದಿರುವ ಒಂದು ಸ್ಮಾರ್ಟ್‌ವಾಚ್ ಇದಾಗಿದೆ. ಈ ವಾಚ್‌ನಲ್ಲಿ ಮೊಬೈಲ್‌ ಫೋನ್‌ಗೆ ಬಳಸುವಂತಹ ಸಿಮ್ ಅಳವಡಿಸಲಾಗಿರುತ್ತದೆ. ಈ ಸಾಧನ ಖರೀದಿಸಿದ ನಂತರ ಕಂಪನಿಗೆ ಬಳಕೆದಾರರ ಮೊಬೈಲ್‌ ಸಂಖ್ಯೆ ಮತ್ತು ಇ-ಮೇಲ್‌ ಐಡಿ ನೀಡಬೇಕು. ಆಗ ವಾಚ್‌ನಲ್ಲಿರುವ ಸಿಮ್ ಜತೆಗೆ ಸಂಪರ್ಕ ಸಾಧಿಸುವ ಸೆಟ್ಟಿಂಗ್‌ಗಳು ಸಿಗುತ್ತವೆ. ಇದಕ್ಕೆ ಪ್ರತಿ ತಿಂಗಳು 100 ರೂ. ರೀಚಾರ್ಜ್ ಮಾಡಿಸಬೇಕಾಗುತ್ತದೆ.

ವಾಚ್ ಕಾರ್ಯವೈಖರಿ ಹೇಗಿದೆ?

ವಾಚ್ ಕಾರ್ಯವೈಖರಿ ಹೇಗಿದೆ?

ಈ ಸಾಧನದಲ್ಲಿರುವ ‘ಎಸ್‌ಒಎಸ್' ಕೀ ಎಂಬ ಆಯ್ಕೆಯನ್ನು ನೀಡಲಾಗಿದ್ದು, ಈ ಕೀಯನ್ನು ಪ್ರೆಸ್‌ ಮಾಡುವ ಮೂಲಕ ತಾವು ಅಪಾಯದಲ್ಲಿರುವ ಸಂದೇಶವನ್ನು ಈಗಾಗಲೇ ಸೇವ್ ಮಾಡಿರುವ ಮೊಬೈಲ್‌ ಸಂಖ್ಯೆಗೆ ಕಳುಹಿಸಬಹುದು. 10 ಬೇರೆ ಬೇರೆ ಮೊಬೈಲ್‌ ಸಂಖ್ಯೆಗಳನ್ನು ಸೇವ್ ಮಾಡುವ ಸೌಲಭ್ಯವೂ ಇದರಲ್ಲಿದ್ದು, ತುರ್ತು ಸಂದರ್ಭದಲ್ಲಿ ಕೇವಲ ಒಬ್ಬರಿಗೆ ಮಾತ್ರವೇ ಎಸ್‌ಒಎಸ್ ಸಂದೇಶ ರವಾನೆಯಾಗುತ್ತದೆ.

ಪ್ರತಿ ಹೆಜ್ಜೆಯನ್ನೂ ಗಮನಿಸಬಹುದು!

ಪ್ರತಿ ಹೆಜ್ಜೆಯನ್ನೂ ಗಮನಿಸಬಹುದು!

ಈ ‘ಕಿಡ್ಡೊ ಶೀಲ್ಡ್' ವಾಚ್ ಅನ್ನು ಮಕ್ಕಳ ಕೈಗೆ ಕಟ್ಟಿದರೆ ಅವರ ಪ್ರತಿ ಹೆಜ್ಜೆಯನ್ನೂ ನಿಖರವಾಗಿ ಗಮನಿಸಬಹುದು. ಮೊಬೈಲ್‌ ಅಥವಾ ಕಂಪ್ಯೂಟರ್‌ನಲ್ಲಿ ಮ್ಯಾಪ್‌ ಮಾಡುವ ಮೂಲಕ ಅವರ ಎಲ್ಲಾ ಚಲನವಲನದ ಮೇಲೆ ನಿಗಾ ಇರಿಸಬಹುದು. ಒಂದು ವೇಳೆ ಮಕ್ಕಳನ್ನು ಅಪಹರಿಸಿದರೆ, ಅಪಹರಣಕಾರರ ವಾಹನ ಚಲಿಸುತ್ತಿರುವ ದಿಕ್ಕು, ವೇಗ ಮತ್ತು ಸ್ಥಳದ ಬಗ್ಗೆ ನಿಖರವಾದ ಮಾಹಿತಿಯನ್ನು ಸಹ ತಿಳಿಯಬಹುದು.

ವಾಚ್ ಬಳಕೆ ಹೇಗೆ?

ವಾಚ್ ಬಳಕೆ ಹೇಗೆ?

ವಾಚ್ ಖರೀದಿಸಿದ ನಂತರ ಮೊಬೈಲ್‌ನಲ್ಲಿ unigps.in ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಲ್ಯಾಪ್‌ಟಾಪ್‌ನಲ್ಲಾದರೆ ಯುನಿಸುರಕ್ಷಾ ಜಾಲತಾಣಕ್ಕೆ ಭೇಟಿ ನೀಡಿ ಲಾಗಿನ್ ಆಗಬೇಕು. ಈಗ ನೀವು ಮ್ಯಾಪ್‌ ಮೂಲಕ ಅವರು ಎಲ್ಲಿದ್ದಾರೆ ಎನ್ನುವುದನ್ನು ಪತ್ತೆ ಮಾಡಬಹುದು. ಅಥವಾ ವಾಚ್‌ನಲ್ಲಿ ಮಯ ನಿಗದಿ ಮಾಡಿಟ್ಟರೆ ಆ ಅವಧಿ ಮುಗಿಯುತ್ತಿದ್ದಂತೆಯೇ ಮಗ /ಮಗಳು ಮನೆಗೆ ಹಿಂದಿರುಗದೇ ಇದ್ದರೆ ಎಚ್ಚರಿಕೆ ಸಂದೇಶವನ್ನು ಸಹ ಪಡೆಯಬಹುದು.

ಈ ಸ್ಮಾರ್ಟ್‌ವಾಚ್‌ನಲ್ಲಿ ಇಯರ್‌ಫೋನ್‌

ಈ ಸ್ಮಾರ್ಟ್‌ವಾಚ್‌ನಲ್ಲಿ ಇಯರ್‌ಫೋನ್‌

ಇತರೆ ವಿಶೇಷತೆಗಳು ಯಾವುವು? ಅಳವಡಿಸಿಕೊಳ್ಳುವ ಸೌಲಭ್ಯವನ್ನು ಒದಗಿಸಿರುವುದರಿಂದ ಮೊಬೈಲ್‌ಫೋನ್‌ಗೆ ಕರೆ ಮಾಡುವ ಹಾಗೆ ಕರೆ ಮಾಡಿ, ಮಾತನಾಡಿಸುವುದಕ್ಕೂ ಅವಕಾಶವಿದೆ. ಕರೆ ಬಂದ ಕೂಡಲೇ ಎಚ್ಚರಿಸಲು ಅಲಾರಂ ಸದ್ದು ಬರುವಂತೆ ತಯಾರಿಸಲಾಗಿದೆ. ಚಾರ್ಜ್‌ ಮಾಡಿಕೊಳ್ಳಲು ಪಿನ್‌ ಅಳವಡಿಸಲಾಗಿದೆ. ಜಿಪಿಎಸ್‌ ಟ್ರ್ಯಾಕರ್‌ ಇರುವುದರಿಂದ ಅವರು ಇರುವಂತಹ ಸ್ಥಳವನ್ನೂ ಸುಲಭವಾಗಿ ಪತ್ತೆ ಮಾಡಬಹುದಾಗಿದೆ.

ವಾಚ್ ಬೆಲೆ ಎಷ್ಟು?

ವಾಚ್ ಬೆಲೆ ಎಷ್ಟು?

ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿರುವ ಈ ‘ಕಿಡ್ಡೊ ಶೀಲ್ಡ್' ಸ್ಮಾರ್ಟ್‌ವಾಚ್ ಬೆಲೆ ₹ 2,640 ರಿಂದ ಆರಂಭವಾಗಲಿದೆ. ವಾಚ್ ಖರೀದಿ ಮೇಲೆ ವಾರೆಂಟಿ ಜೊತೆಗೆ ವಾಚ್ ಅನ್ನು ವಾಪಸ್ ಮಾಡಬಹುದಾದಂತಹ ಆಯ್ಕೆಯನ್ನು ಸಹ ನೀಡಲಾಗಿದೆ. ಪ್ರತಿ ತಿಂಗಳು ಕೇವಲ 100 ರೂಪಾಯಿ ವೆಚ್ಚದಲ್ಲಿ ಮಕ್ಕಳ ಸುರಕ್ಷತೆ ಕೂಡ ಖಾತ್ರಿ ನೀಡುವ ಈ ವಾಚ್ ಆನ್‌ಲೈನಿನಲ್ಲಿ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯವಿದೆ.

Best Mobiles in India

English summary
Introducing the smartest way to sleep better. here are the 5 smart gadgets that helps to have soundless ,stress less sleep. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X