ಫೇಸ್‌ಬುಕ್ ಉದ್ಯೋಗಿಯಾಗಲು ಇರಬೇಕಾದ ಅರ್ಹತೆಗಳೇನು?
2004 ರಲ್ಲಿ ಸ್ಥಾಪನೆಯಾದ ಫೇಸ್‌ಬುಕ್ ಇಂದು 13,000 ಉದ್ಯೋಗಿಗಳನ್ನೊಳಗೊಂಡು ವಿಶ್ವದಲ್ಲೇ ಅತಿ ದೊಡ್ಡ ಕಂಪೆನಿಯಾಗಿದೆ. 65 ದೇಶಗಳಲ್ಲಿ ತನ್ನ ಶಾಖೆಗಳನ್ನು ಫೇಸ್‌ಬುಕ್ ಹೊಂದಿದೆ. ತನ್ನ ಸಾಮಾಜಿಕ ನೆಟ್‌ವರ್ಕ್ ವೆಬ್‌ಸೈಟ್‌ಗಳು ಮತ್ತು ಇತರ ಬ್ರ್ಯಾಂಡ್‌ಗಳಿಗೆ ಹೆಸರುವಾಸಿಯಾಗಿರುವ ಫೇಸ್‌ಬುಕ್ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ಗಳನ್ನು ಒಳಗೊಂಡಿದೆ.
ಫೇಸ್‌ಬುಕ್ ಕಂಪೆನಿಯಲ್ಲಿ ನಿಮಗೆ ಉದ್ಯೋಗ ದೊರೆಯಬೇಕು ಎಂದಾದಲ್ಲಿ ಏನೆಲ್ಲಾ ಅರ್ಹತೆಗಳು ಇರಬೇಕು ಎಂಬುದನ್ನೇ ಇಂದಿನ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ. ಹಾಗಿದ್ದರೆ ಬನ್ನಿ ಆ ಆರ್ಹತೆಗಳ ಬಗ್ಗೆ ಇಂದು ತಿಳಿದುಕೊಳ್ಳೋಣ.

#1
ಫೇಸ್‌ಬುಕ್ ತನ್ನ ಉದ್ಯೋಗಿಗಳು ಬೋಲ್ಡ್ ಆಗಿರಬೇಕೆಂದು ಬಯಸುತ್ತದೆ. ಕಠಿಣ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ಛಲ ಉದ್ಯೋಗಿಗಳಲ್ಲಿ ಇರಬೇಕು ಎಂಬುದಾಗಿ ಮಾರ್ಕ್ ಜುಕರ್‌ಬರ್ಗ್ ಸ್ವತಃ ತಿಳಿಸಿದ್ದಾರೆ. ಉದ್ಯೋಗಿಗಳು ಯಾವಾಗಲೂ ಬೋಲ್ಡ್ ನಿರ್ಧಾರಗಳನ್ನೇ ತೆಗೆದುಕೊಳ್ಳಬೇಕು ಅದು ತಪ್ಪಾಗಿದ್ದಲ್ಲಿ ಕೂಡ ನಾವು ಅದನ್ನು ಮನ್ನಿಸುತ್ತೇವೆ. ಇದರಿಂದಲೇ ಅವರು ಛಲಗಾರರಾಗಿರಲು ಸಾಧ್ಯ.

#2
ಫೇಸ್‌ಬುಕ್ ಇಡೀಯ ವಿಶ್ವವನ್ನೇ ಹೆಚ್ಚು ತೆರೆದಂತಿರಿಸಲು ಮತ್ತು ಸಂಪರ್ಕದಲ್ಲಿರುವಂತೆ ಮಾಡಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. ಇದೇ ಸ್ವಭಾವವನ್ನು ತನ್ನ ಉದ್ಯೋಗಿಗಳಲ್ಲೂ ಫೇಸ್‌ಬುಕ್ ಬಯಸುತ್ತದೆ.

#3
ವೇಗವಾಗಿದ್ದು ಅಡ್ಡಿ ಆತಂಕಗಳನ್ನು ನಿವಾರಿಸುವ ಗುಣ ಅವರಲ್ಲಿರಬೇಕು ಎಂಬುದು ಜುಕರ್‌ಬರ್ಗ್ ಅಭಿಪ್ರಾಯವಾಗಿದೆ.

#4
ಫೇಸ್‌ಬುಕ್ ಎದುರು ನೋಡುತ್ತಿರುವ ಉದ್ಯೋಗಿಗಳು ಪಾರದರ್ಶಕ ವ್ಯಕ್ತಿತ್ವವನ್ನು ಒಳಗೊಂಡಿರುವವರಾಗಿರಬೇಕು. ಮುಚ್ಚು ಮರೆ ಇರಬಾರದು. ಏನಿದ್ದರೂ ಅದನ್ನು ದಿಟ್ಟ ಮನಸ್ಸಿನಿಂದ ತಿಳಿಸುವಂತವರಾಗಿಬೇಕು

#5
ತಮ್ಮನ್ನು ಆನ್‌ಲೈನ್‌ನಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ತಮ್ಮನ್ನು ತಮ್ಮಷ್ಟಕ್ಕೇ ಬೆಳೆಸಿಕೊಳ್ಳಲು ಫೇಸ್‌ಬುಕ್ ನೆರವನ್ನು ನೀಡುತ್ತದೆ. ಆದ್ದರಿಂದಲೇ ಸಾಮಾಜಿಕ ಮೌಲ್ಯವನ್ನು ಬೆಳೆಸಿಕೊಳ್ಳುವ ಉದ್ಯೋಗಿಗಳತ್ತ ಫೇಸ್‌ಬುಕ್ ತನ್ನ ಚಿತ್ತ ನೆಟ್ಟಿದೆ.



Click it and Unblock the Notifications








