ಭಾರತದಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 5 ಮೆಸೆಂಜಿಂಗ್‌ ಆಪ್ಸ್‌!

|

ಟೆಕ್ನಾಲಜಿ ಬೆಳೆದಂತೆ ಸಾಕಷ್ಟು ಬದಲಾವಣೆಗಳು ಈ ಜಗತ್ತಿನಲ್ಲಿ ನಡೆಯುತ್ತಲೇ ಇವೆ. ಮೊಬೈಲ್ ನಲ್ಲಿ ಮಾತನಾಡುತ್ತ ಸಮಯ ಕಳೆಯುವುದಕ್ಕಿಂತ ಮೆಸೇಜ್ ಕಳಿಸಿ ಮಾತನಾಡುವ ವಿಭಿನ್ನ ಪ್ರಪಂಚದಲ್ಲಿ ಸದ್ಯ ನಾವು ಜೀವಿಸುತ್ತಿದ್ದೇವೆ. ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯವಿರುವ ಟೆಕ್ಸ್ಟ್ ಮೆಸೇಜಿಂಗ್ ಆಪ್ ಗಳಿಂದ ಇದು ಸಾಧ್ಯವಾಗಿದೆ. ಪ್ರತಿಯೊಬ್ಬರೂ ಕೂಡ ಆಂಡ್ರಾಯ್ಡ್ ಡಿವೈಸ್ ಗಳನ್ನು ಹೊಂದಿರುವುದರಿಂದ ಡೆವಲಪರ್ ಗಳು ಕೂಡ ಸಾಕಷ್ಟು ಹೊಸ ಹೊಸ ಮೆಸೇಜಿಂಗ್ ಆಪ್ ಗಳನ್ನು ಆಂಡ್ರಾಯ್ಡ್ ಡಿವೈಸ್ ಗಳಿಗಾಗಿ ಅಭಿವೃದ್ಧಿ ಪಡಿಸುತ್ತಲೇ ಇದ್ದಾರೆ.

ಮೆಸೇಜಿಂಗ್ ಆಪ್

ಹೌದು, ಮೆಸೇಜಿಂಗ್ ಆಪ್ ಗಳಾಗಿ ಹಲವು ಆಪ್‌ಗಳು ಮೆಸೇಜ್ ಗಳನ್ನು ಎಕ್ಸ್ ಚೇಂಜ್ ಮಾಡಿಕೊಳ್ಳುವುದಕ್ಕಾಗಿಯೇ ರಚಿತಗೊಂಡಿವೆ. ಆದರೆ ಈ ಆಪ್ಸ್ ಗಳು ಎಸ್ಎಂಎಸ್ ಇನ್ ಬಾಕ್ಸ್ ನ್ನು ರಿಪ್ಲೇಸ್ ಮಾಡುವುದಕ್ಕೆ ಸಾಧ್ಯವಿಲ್ಲ. ಕೆಲವು ಸೂಕ್ಷ್ಮ ಮಾಹಿತಿಗಳು ಅಂದರೆ ದೃಢೀಕರಣದ ಕೋಡ್ ಗಳು, ಒನ್ ಟೈಮ್ ಪಾಸ್ ವರ್ಡ್ ಗಳು ಇತ್ಯಾದಿಗಳು ಎಸ್ಎಂಎಸ್ ಇನ್ ಬಾಕ್ಸ್ ಗೆ ಬಂದು ಬೀಳುತ್ತವೆ. ಹಾಗಾದ್ರೆ ಸದ್ಯ ಭಾರತದಲ್ಲಿ ಲಭ್ಯವರಿಉವ ಟಾಪ್‌ 5 ಮೆಸೆಂಜರ್‌ ಪ್ಲಾಟ್‌ಫಾರ್ಮ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ವಾಟ್ಸಾಪ್

ವಾಟ್ಸಾಪ್

ವಿಶ್ವದಲ್ಲಿಯೇ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಮದಿರುವ ಇನ್ಸಟಂಟ್‌ ಮೆಸೇಜಿಂಗ್‌ ಆಪ್‌ ವಾಟ್ಸಾಪ್‌. ವಾಟ್ಸಾಪ್‌ ಇದು ವಿಶ್ವದ ಅತ್ಯಂತ ಪ್ರಸಿದ್ಧ ಮೆಸೆಂಜರ್ ಅಪ್ಲಿಕೇಶನ್ ಆಗಿದೆ. ಇದು ಸಾಕಷ್ಟು ಹೊಸ ಮಾದರಿಯ ಫಿಚರ್ಸ್‌ಗಳನ್ನ ಬಳಕೆದಾರರಿಗೆ ಪರಿಚಯಿಸುತ್ತಲೇ ಇದ್ದು, ಬಳಕೆದಾರರ ಸ್ನೇಹಿ ಎನಿಸಿಕೊಂಡಿದೆ. ಇನ್ನು ವಾಟ್ಸಾಪ್‌ನಲ್ಲಿ ವಾಯ್ಸ್‌, ವೀಡಿಯೊ ಚಾಟ್‌, ಪಠ್ಯ ಸಂದೇಶಗಳು, ಗ್ರೂಪ್‌ ಚಾಟ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. ಅಲ್ಲದೆ GIF ಗಳು ಮತ್ತು ವೀಡಿಯೊ ಮುಂತಾದ ಮಲ್ಟಿಮೀಡಿಯಾ ಫೀಚರ್ಸ್‌ಗಳನ್ನು ಬೆಂಬಲಿಸುತ್ತದೆ.

ಟೆಲಿಗ್ರಾಮ್

ಟೆಲಿಗ್ರಾಮ್

ಸಾಮಾನ್ಯ ಚಾಟ್‌ಗಳಿಗಾಗಿ ಕ್ಲೈಂಟ್-ಸರ್ವರ್ ಎನ್‌ಕ್ರಿಪ್ಶನ್‌ನೊಂದಿಗೆ ವೇಗವಾಗಿ, ಎನ್‌ಕ್ರಿಪ್ಟ್ ಮಾಡಿದ ಚಾಟ್ ಸಂದೇಶ ಕಳುಹಿಸುವಿಕೆಯನ್ನು ಟೆಲಿಗ್ರಾಮ್‌ ಹೊಂದಿದೆ. ಇದರಲ್ಲಿ Fixed ಚಾಟ್ ಮೋಡ್ ಅಂತ್ಯದಿಂದ ಕೊನೆಯವರೆಗೆ Gory cryptographyಯನ್ನು ಹೊಂದಿದೆ. ಅಲ್ಲದೆ ಇದು ನಿಮಗೆ ಮತ್ತು ನಿಮ್ಮ ಉದ್ದೇಶಿತ ರಿಸೀವರ್‌ಗೆ ಓದಲು ಸುಲಭವಾಗುತ್ತದೆ. ಜೊತೆಗೆ ಟೆಲಿಗ್ರಾಮ್ ಬಳಸಿ,ವೀಡಿಯೊಗಳನ್ನು, ವರದಿಗಳನ್ನು ಹಂಚಿಕೊಳ್ಳಬಹುದಾಗಿದ್ದು, ಲಭ್ಯವಿರುವ ಐದು ಅತ್ಯುತ್ತಮ ಮೆಸೆಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ.

ಸ್ನ್ಯಾಪ್‌ಚಾಟ್

ಸ್ನ್ಯಾಪ್‌ಚಾಟ್

ಸ್ನ್ಯಾಪ್‌ಚಾಟ್ ಒಂದು ಯೂನಿಕ್‌ ಮೆಸೆಂಜರ್ ಅಪ್ಲಿಕೇಶನ್ ಆಗಿದೆ. ಇದು ವಾಯ್ಸ್‌ ಕಾಲ್‌, ವೀಡಿಯೊ ಸಂದೇಶಗಳು, ಫೋಟೋ ಸಂದೇಶಗಳು ಮತ್ತು ಪಠ್ಯ ಸಂದೇಶಗಳು ಸೇರಿದಂತೆ ಕೆಲವು ಆಸಕ್ತಿದಾಯಕ ಫೀಚರ್ಸ್‌ಗಳನ್ನು ಒದಗಿಸುತ್ತದೆ. ಇದರಲ್ಲಿ ಸ್ಟೇಟಸ್‌ ಸ್ಟೋರಿಸ್‌ ಅನ್ನು ಸಹ ಶೇರ್‌ ಮಾಡಬಹುದಾಗಿದ್ದು, ಸಾಕಷ್ಟು ಆಸಕ್ತಿದಾಯಕವಾಗಿದೆ.

ಟ್ರೂಪ್ ಮೆಸೆಂಜರ್

ಟ್ರೂಪ್ ಮೆಸೆಂಜರ್

ಟ್ರೂಪ್ ಮೆಸೆಂಜರ್ businessಗಾಗಿ ಹೆಸರಾಂತ ಮೆಸೆಂಜರ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಗ್ರೂಪ್‌ ಚಾಟ್‌, ಫೈಲ್ ಪ್ರಿವ್ಯೂ ಮತ್ತು ನಿರ್ವಹಣೆ, ವಾಯ್ಸ್-ವಿಡಿಯೋ ಕಾಲ್‌ ಮತ್ತು ಕಾನ್ಫರೆನ್ಸಿಂಗ್, ಸ್ಕ್ರೀನ್ ಶೇರ್‌ ಮತ್ತು ರಿಮೋಟ್ ಸ್ಕ್ರೀನ್ ಕಮಟ್ರೋಲ್‌ ಸ್ಟೆಲ್ತ್ ಮೆಸೇಜಿಂಗ್ ಫೀಚರ್ಸ್‌ ಅನ್ನು ಹೊಂದಿದೆ. ಇನ್ನು ಟ್ರೂಪ್ ಮೆಸೆಂಜರ್ ಅಪ್ಲಿಕೇಶನ್ ಅನ್ನು ಸರ್ಕಾರ, ರಕ್ಷಣಾ ಸಂಸ್ಥೆಗಳು ವ್ಯಾಪಕವಾಗಿ ಬಳಸುತ್ತವೆ. ವಿಶೇಷವಾಗಿ ಡೇಟಾ ಮಾಲೀಕತ್ವ ಮತ್ತು ಗೌಪ್ಯತೆಗಾಗಿ ಬಳಸಲಾಗುತ್ತೆ.

ಹೈಕ್‌

ಹೈಕ್‌

ಭಾರತದಲ್ಲಿ ವಿನ್ಯಾಸಗೊಳಿಸಲಾದ ಮತ್ತು ಅಭಿವೃದ್ಧಿಪಡಿಸಿದ ಇನ್ಸಟಂಟ್‌ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಹೈಕ್‌ ಕೂಡ ಒಂದಾಗಿದೆ. ಇದು ಸಾಮಾನ್ಯವಾಗಿ ಯುವಜನತೆಯನ್ನ ಆಧಾರವಾಗಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಬೃಹತ್ ಸ್ಟಿಕ್ಕರ್ ಲೈಬ್ರರಿಯನ್ನು ಒಳಗೊಂಡಿದ್ದು, ಸ್ಟಿಕ್ಕರ್‌ಗಳ ಜೊತೆಗೆ, Hide ಚಾಟ್ ಆಯ್ಕೆಗಳನ್ನು ಹೊಂದಿದೆ.

Best Mobiles in India

Read more about:
English summary
Here's a list of top five trending messaging applications available on both Android and iOS.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X