Home
ಸುದ್ದಿಜಾಲ

ಐದು ವರ್ಷದ ಹುಡುಗಿ ಮಾಡಿದ ಈ ಅವಾಂತರ ಕೇಳಿದ್ರೆ ನೀವು ಕೂಡ ಶಾಕ್‌ ಆಗ್ತೀರಾ?

ಕೆಲವು ಸಲ ಮಕ್ಕಳು ಮಾಡುವ ಕೆಲಸಗಳನ್ನು ಫೋಷಕರನ್ನು ಪೇಚಿಗೆ ಸಿಲುಕಿಸಿಬಿಡುತ್ತವೆ. ಆದರೆ ಅಮೇರಿಕದಲ್ಲಿ ನಡೆದಿರುವ ಈ ಘಟನೆ ಫೋಷಕರನ್ನು ನಿಮಗೆ ಆಶ್ಚರ್ಯವನ್ನುಂಟು ಮಾಡುವುದರಲ್ಲಿ ಸಂದೇಹವಿಲ್ಲ. ತನ್ನ ಮಗಳು ಅಮೆಜಾನ್‌ನಲ್ಲಿ ಮಾಡಿರುವ ಆರ್ಡರ್‌ ಅನ್ನು ನೋಡಿಯೇ ತಾಯರಿ ದಿಗ್ಬ್ರಾಂತಳಾಗಿದ್ದಾಳೆ.

ಹೌದು, ಅಮೇರಿಕಾದಲ್ಲಿ ಐದು ವರ್ಷದ ಲೀಲಾ ಎಂಬ ಹುಡುಗಿ ಅಮೆಜಾನ್‌ನಲ್ಲಿ ಶಾಪಿಂಗ್‌ ಮಾಡಿದ್ದಾಳೆ. ಕೇವಲ ಶಾಪಿಂಗ್‌ ಮಾಡಿದ್ದರೆ ಇದು ಸುದ್ದಿಯಾಗುತ್ತಿರಲಿಲ್ಲ. ಆದರೆ ಈಕೆ ಅಮೆಜಾನ್‌ನಲ್ಲಿ ಬರೋಬ್ಬರಿ 3.25 ಲಕ್ಷ ರೂ ಮೌಲ್ಯದ ಆರ್ಡರ್‌ ಮಾಡಿರೋದು ಅಚ್ಚರಿಗೆ ಕಾರಣವಾಗಿದೆ. ಹಾಗಾದ್ರೆ 3.25 ಲಕ್ಷ ರೂ. ಬೆಲೆಗೆ ಆ ಹುಡುಗಿ ಏನನ್ನು ಆರ್ಡರ್‌ ಮಾಡಿದ್ದಾಳೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐದು ವರ್ಷದ ಹುಡುಗಿ ಮಾಡಿದ ಈ ಅವಾಂತರ ಕೇಳಿದ್ರೆ ನೀವು ಕೂಡ ಶಾಕ್‌ ಆಗ್ತೀರಾ?

ಅಮೇರಿಕಾದ ಮಹಿಳೆಯೊಬ್ಬರು ತಮ್ಮ ಫೋನ್‌ ಅನ್ನು ಮಗಳ ಕೈಗೆ ನೀಡಿದ್ದಾರೆ. ಮಗಳು ಫೋನ್‌ನಲ್ಲಿ ಆಟವಾಡುತ್ತಿದ್ದಾಳೆ ಎಂದುಕೊಂಡ ತಾಯಿ ಮಗಳ ಕಡೆಗೆ ಗಮನ ನೀಡಿಲ್ಲ. ಆದರೆ ಮಗಳು ಅಷ್ಟರಲ್ಲಿಯೇ ಬರೋಬ್ಬರಿ $4,000 ( 3.25 ಲಕ್ಷ ರೂ.)ಮೌಲ್ಯದ ಆರ್ಡರ್‌ ಅನ್ನು ಅಮೆಜಾನ್‌ ಮೂಲಕ ಮಾಡಿದ್ದಾಳೆ. ಇದು ಅವರ ತಾಯಿಗೆ ಸಾಕಷ್ಟು ಅಚ್ಚರಿಯನ್ನುಂಟು ಮಾಡಿದೆ.

ಇನ್ನು ತನ್ನ ಮಗಳು ಆರ್ಡರ್‌ ಮಾಡಿರುವ ಮೌಲ್ಯವನ್ನು ನೋಡಿ ಶಾಕ್‌ ಆದ ಮಹಿಳೆ ಏನೆಲ್ಲಾ ಆರ್ಡರ್‌ ಮಾಡಿದ್ದಾಳೆ ಎಂದು ಚೆಕ್‌ ಮಾಡಿದ್ದಾರೆ. ಇದರಲ್ಲಿ ಆ ಪುಟ್ಟ ಬಾಲಕಿ 10 ಮೋಟಾರ್ ಸೈಕಲ್‌ಗಳು, ಒಂದು ಜೀಪ್ ಮತ್ತು 10 ಜೋಡಿ ಕೌಗರ್ಲ್ ಬೂಟುಗಳನ್ನು ಆರ್ಡರ್‌ ಮಾಡಿರುವುದು ಕಂಡು ಬಂದಿದೆ ಎಂದು ಮಹಿಳೆ ಅಲ್ಲಿನ ಸ್ಥಳಿಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಐದು ವರ್ಷದ ಹುಡುಗಿ ಮಾಡಿದ ಈ ಅವಾಂತರ ಕೇಳಿದ್ರೆ ನೀವು ಕೂಡ ಶಾಕ್‌ ಆಗ್ತೀರಾ?

ಐದು ವರ್ಷದ ಬಾಲಕಿ ಆರ್ಡರ್‌ ಮಾಡಿರುವ ಬೈಕುಗಳು ಮತ್ತು ಜೀಪ್ ಬೆಲೆ ಸುಮಾರು $3,180 (ಅಂದಾಜು 2,61,524ರೂ) ಎನ್ನಲಾಗಿದೆ. ಹಾಗೆಯೇ ಕೌಗರ್ಲ್‌ ಬೂಟುಗಳ ಬೆಲೆ ಸುಮಾರು $600 (ಅಂದಾಜು 49,344ರೂ) ಎಂದು ಹೇಳಲಾಗಿದೆ. ಇನ್ನು ಆ ಹುಡುಗಿ ಆಟಿಕೆ ವಸ್ತುಗಳನ್ನು ಅಮೆಜಾನ್‌ನಲ್ಲಿ ನೋಡಿ "ಈಗ ಖರೀದಿಸಿ" (Buy Now) ಆಯ್ಕೆಯನ್ನು ಟ್ಯಾಪ್‌ ಮಾಡಿದ್ದಾಳೆ. ಈ ಮೂಲಕ ತನ್ನ ತಾಯಿಯ ಅಕೌಂಟ್‌ನಿಂದ 3.25 ಲಕ್ಷ ರೂ ಬೆಲೆಗೆ ಆರ್ಡರ್‌ ಮಾಡಿದ್ದಾಳೆ.

ಇನ್ನು ಮಹಿಳೆ ತನ್ನ ಮಗಳು ಮಾಡಿದ್ದ ಆರ್ಡರ್‌ ಅನ್ನು ಕ್ಯಾನ್ಸಲ್‌ ಮಾಡಲು ಪ್ರಯತ್ನಿಸಿದ್ದಾರೆ. ಇದರಲ್ಲಿ ಅರ್ಧದಷ್ಟು ಮೋಟರ್‌ ಸೈಕಲ್‌ ಆರ್ಡರ್‌ ಮತ್ತು ಕೌಗರ್ಲ್‌ ಬೂಟುಗಳ ಆರ್ಡರ್‌ ಅನ್ನು ಕ್ಯಾನ್ಸಲ್‌ ಮಾಡಿದ್ದಾರೆ. ಆದರೆ ಇನ್ನುಳಿದ ಐದು ಮೋಟಾರ್‌ಸೈಕಲ್‌ಗಳು ಮತ್ತು ಎರಡು ಆಸನಗಳ ಮಕ್ಕಳ ಜೀಪ್ ಅನ್ನು ಈಗಾಗಲೇ ರವಾನಿಸಲಾಗಿದೆ ಎಂದು ಅಮೆಜಾನ್‌ ಹೇಳಿದ್ದರಿಂದ ಅದನ್ನು ಕ್ಯಾನ್ಸಲ್‌ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಸದ್ಯ ಮಗಳು ಮಾಡಿದ ತಪ್ಪಿಗೆ ತಾನು ಏನು ಮಾಡಿಲ್ಲ ಎಂಬ ಮಾತನ್ನು ಹೇಳಿದ್ದಾರೆ.

ಐದು ವರ್ಷದ ಹುಡುಗಿ ಮಾಡಿದ ಈ ಅವಾಂತರ ಕೇಳಿದ್ರೆ ನೀವು ಕೂಡ ಶಾಕ್‌ ಆಗ್ತೀರಾ?

ಇದೇ ರೀತಿ ಇತ್ತೀಚಿಗೆ ಮಹಿಳೆಯೊಬ್ಬರು ಅಮೆಜಾನ್‌ನಲ್ಲಿ 12,000 ರೂಪಾಯಿ ಮೌಲ್ಯದ ಎಲೆಕ್ಟ್ರಿಕ್ ಟೂತ್ ಬ್ರಷ್ ಅನ್ನು ಆರ್ಡರ್ ಮಾಡಿ ಸುದ್ದಿಯಾಗಿದ್ದಳು ಮಾಡಿದ್ದರು. ಆದರೆ ಆಕೆಯ ಕೈ ಸೇರಿದ ಆರ್ಡರ್‌ ನೋಡಿ ಆಕೆ ಶಾಕ್‌ಗೆ ಒಳಗಾಗಿದ್ದಳು. ಏಕೆಂದರೆ ಆಕೆ ಆರ್ಡರ್‌ ಮಾಡಿದ್ದ ಎಲೆಕ್ಟ್ರಿಕ್‌ ಟೂತ್‌ ಬ್ರಷ್‌ ಬದಲಿಗೆ ಅಮೆಜಾನ್‌ ಬೇರೆ ಪದಾರ್ಥಗಳನ್ನು ಪಾರ್ಸಲ್‌ ಮಾಡಿತ್ತು. ಅಂದರೆ ಅಮೆಜಾನ್‌ ಆಕೆಗೆ ಚಾಟ್‌ ಮಸಾಲಾ ಪ್ಯಾಕ್‌ಗಳನ್ನು ಕಳುಹಿಸಿಕೊಟ್ಟಿತ್ತು. ಆಕೆಗೆ 12,000 ರೂಪಾಯಿ ಮೌಲ್ಯದ ವಸ್ತುವಿನ ಬದಲಿಗೆ ಅಮೆಜಾನ್‌ ಕೇವಲ ಹತ್ತಿಪ್ಪತ್ತು ರೂಪಾಯಿಯ ಚಾಟ್‌ಮಸಾಲಾ ಪ್ಯಾಕ್‌ಗಳನ್ನು ಕಳುಹಿಸಿತ್ತು. ‌

Best Mobiles in India

English summary
she found out that her daughter Lila had placed an order on Amazon worth almost $4,000(Rs 3.25 lakh) through her account.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+