Home
ಸುದ್ದಿಜಾಲ

ವಾಟ್ಸಾಪ್‌ ಬಳಸುವವರಿಗೆ ಬಿಗ್‌ ಶಾಕಿಂಗ್‌! ಸೇಲ್‌ ಆಗ್ತಿದೆ ನಿಮ್ಮ ವೈಯುಕ್ತಿಕ ಡೇಟಾ!

ವಾಟ್ಸಾಪ್‌ ಬಳಕೆದಾರರನ್ನು ಬೆಚ್ಚಿ ಬಿಳಿಸುವ ವರದಿಯೊಂದು ಇದೀಗ ಬಹಿರಂಗವಾಗಿದೆ. ಅಷ್ಟೇ ಅಲ್ಲ ವಾಟ್ಸಾಪ್‌ ಬಳಕೆ ಎಷ್ಟು ಸೂಕ್ತ ಅನ್ನೊ ಪ್ರಶ್ನೆ ಎಲ್ಲರಲ್ಲೂ ಮೂಡುವಂತಾಗಿದೆ. ಯಾಕಂದ್ರೆ ಅತಿ ದೊಡ್ಡ ಮಟ್ಟದ ಡೇಟಾ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ. ಅದರಲ್ಲೂ 500 ಮಿಲಿಯನ್ ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂಬ ಅಘಾತಕಾರಿ ಸುದ್ದಿ ಹೊರಬಿದ್ದಿದೆ.

ವಾಟ್ಸಾಪ್‌ನ

ಹೌದು, ವಾಟ್ಸಾಪ್‌ನ ಅತಿದೊಡ್ಡ ಡೇಟಾ ಲೀಕ್‌ ಪ್ರಕರಣ ಹೊರಬಂದಿದೆ. ಈ ಮೂಲಕ ನೀವು ನಾವೆಲ್ಲಾ ಬಳಸುತ್ತಿರುವ ವಾಟ್ಸಾಪ್‌ ಎಷ್ಟು ಸೇಫ್‌ ಅನ್ನುವಂತಾಗಿದೆ. ಈ ಡೇಟಾ ಲೀಕ್‌ಗೆ ಸಂಬಂಧಿಸಿದಂತೆ ಸೈಬರ್‌ ನ್ಯೂಸ್‌ ವರದಿ ಮಾಡಿದೆ. ಇದರಲ್ಲಿ 487 ಮಿಲಿಯನ್ ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳ 2022 ಡೇಟಾಬೇಸ್ ಅನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಸೈಬರ್‌ನ್ಯೂಸ್ ಹೇಳಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಈ ಪರಿಯ ಡೇಟಾ ಉಲ್ಲಂಘನೆಗೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಬೈಲ್‌

ವಾಟ್ಸಾಪ್‌ ಬಳಕೆದಾರರ ಮೊಬೈಲ್‌ ಸಂಖ್ಯೆಗಳ ಡೇಟಾ ಬೇಸ್‌ ಆನ್‌ಲೈನ್‌ನಲ್ಲಿ ಮಾರಾಟವಾಗ್ತಿದೆ. ಈ ಮೂಲಕ ವಾಟ್ಸಾಪ್‌ ಬಳಕೆದಾರರ ಅಗತ್ಯ ಮಾಹಿತಿ ಬೇರೆಯವರ ಪಾಲಾಗ್ತಿದೆ ಅನ್ನೊದು ಬಹಿರಂಗವಾಗಿದೆ. ಮಾರಾಟಕ್ಕಿರುವ ಡೇಟಾಬೇಸ್‌ನಲ್ಲಿ ಇಟಲಿ, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್, ರಷ್ಯಾ, ಫ್ರಾನ್ಸ್ ಮತ್ತು ಸೌದಿ ಅರೇಬಿಯಾ ಸೇರಿದಂತೆ 84 ವಿವಿಧ ದೇಶಗಳ ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳಿವೆ ಎಂದು ವರದಿಯಾಗಿದೆ.

ಮಿಲಿಯನ್

ಇನ್ನು ಈ ಡೇಟಾ ಸೆಟ್‌ 32 ಮಿಲಿಯನ್ ಯುಎಸ್ ಬಳಕೆದಾರರ ದಾಖಲೆಗಳು, 35 ಮಿಲಿಯನ್ ಇಟಾಲಿಯನ್ ದಾಖಲೆಗಳು, 11 ಮಿಲಿಯನ್ ಯುಕೆ ದಾಖಲೆಗಳು ಮತ್ತು ಸುಮಾರು 10 ಮಿಲಿಯನ್ ರಷ್ಯಾದ ಬಳಕೆದಾರರ ದಾಖಲೆಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಇದರಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಡೇಟಾಸೆಟ್ ಅನ್ನು $7,000 ಮತ್ತು UK $2,500 ಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಸುದ್ದಿಯಾಗ್ತಿದೆ. ಈ ಮಾಹಿತಿಯನ್ನು ದಾಳಿಕೋರರು ಸ್ಮಿಶಿಂಗ್ ಮತ್ತು ವಿಶಿಂಗ್ ದಾಳಿಗಳಿಗೆ ಬಳಸುತ್ತಿದ್ದಾರೆ ಎ್ನಲಾಗಿದೆ.

ಹ್ಯಾಕಿಂಗ್

ಸೈಬರ್‌ನ್ಯೂಸ್ ವರದಿಯ ಪ್ರಕಾರ, ಕೆಲವರು ನವೆಂಬರ್ 16 ರಂದು ಹ್ಯಾಕಿಂಗ್ ಕಮ್ಯೂನಿಟಿ ವೇದಿಕೆಯಲ್ಲಿ ಜಾಹೀರಾತು ಒಂದು ಪೋಸ್ಟ್ ಮಾಡಲಾಗಿದೆ. ಇದರಲ್ಲಿ 84 ದೇಶಗಳ ಡೇಟಾ ಮಾರಾಟಕ್ಕಿದೆ ಎಂದು ಹೇಳಲಾಗಿದೆ. ಇದರಲ್ಲಿ ವಾಟ್ಸಾಪ್‌ನ ಅಂದಾಜು ಎರಡು ಶತಕೋಟಿ ಸಕ್ರಿಯ ಮಾಸಿಕ ಬಳಕೆದಾರರಲ್ಲಿ ನಾಲ್ಕನೇ ಒಂದು ಭಾಗವು ಅಪಾಯದಲ್ಲಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಭಾರತೀಯ ವಾಟ್ಸಾಪ್ ಬಳಕೆದಾರರ 6 ಮಿಲಿಯನ್‌ಗಿಂತಲೂ ಹೆಚ್ಚು ದಾಖಲೆಗಳು ಮಾರಾಟದಲ್ಲಿವೆ ಎಂದು ಹೇಳಲಾಗಿದೆ.

ನಿಮ್ಮನ್ನ

ಇನ್ನು ನಿಮ್ಮನ್ನ ಬೆಚ್ಚಿಬಿಳಿಸುವ ಮತ್ತೊಂದು ಅಂಶವೆಂದರೆ ವಾಟ್ಸಾಪ್‌ನ ಡೇಟಾವನ್ನು ಹ್ಯಾಕರ್‌ಗಳು US ಡೇಟಾಸೆಟ್ ಅನ್ನು $7,000, UK $2,500 ಮತ್ತು ಜರ್ಮನಿ $2,000ಗೆ ಮಾರಾಟ ಮಾಡುತ್ತಿದ್ದರು. ಸೋರಿಕೆಯಾದ ಫೋನ್ ಸಂಖ್ಯೆಳು, ಬಳಕೆದಾರರ ವೈಯುಕ್ತಿಕ ಮಾಹಿತಿಗೆ ಹೆಚ್ಚಾಗಿ ಮಾರ್ಕೆಟಿಂಗ್‌ ಇದೆ ಎನ್ನಲಾಗಿದೆ. ಇದರ ನಡುವೆ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳು ಮತ್ತು ಸಂದೇಶಗಳ ಬಗ್ಗೆ ಜಾಗರೂಕರಾಗಿರಿ ಎಂದು ಹೇಳಿದೆ.

ವಾಟ್ಸಾಪ್‌

ವಾಟ್ಸಾಪ್‌ ಪ್ಲಾಟ್‌ಫಾರ್ಮ್ ಬಳಕೆದಾರರ ಮಾಹಿತಿ ಸುರಕ್ಷತೆಗಾಗಿ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಹೊಂದಿದೆ. ಇದರಿಂದ ಬಳಕೆದಾರರು ಚಾಟ್ ಮಾಡುವಾಗ ಹೆಚ್ಚಿನ ಭದ್ರತೆ ನೀಡುತ್ತದೆ. ಇನ್ನು ವಾಟ್ಸಾಪ್‌ ಸಂಸ್ಥೆಯು ಬಳಕೆದಾರರು ಚಾಟ್‌ ಮಾಡುವಾಗ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಬಗ್ಗೆ ಹೈಲೈಟ್‌ ಮಾಡುತ್ತಲೇ ಸಾಗಿದೆ. ವಾಟ್ಸಾಪ್‌ನಲ್ಲಿ ಬಳಕೆದಾರರು ಕಳುಹಿಸುವ ಎಲ್ಲ ಮೆಸೆಜ್‌ಗಳು ಎನ್‌ಕ್ರಿಪ್ಟ್ (encrypted) ಆಗಿರುತ್ತವೆ.

Best Mobiles in India

English summary
500 million WhatsApp users Mobile numbers put on sale: Report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+