ಶ್ಯೋಮಿ ರೆಡ್ಮೀ ನೋಟ್‌ನ ದಾಖಲೆ ಓಟ ಫ್ಲಿಪ್‌ಕಾರ್ಟ್‌ನಲ್ಲಿ

By Shwetha
|

ಶ್ಯೋಮಿಯ ಪ್ರಥಮ ಫ್ಲ್ಯಾಶ್ ಸೇಲ್ ಭಾರತದಲ್ಲಿ ಹೊಸ ಸಂಚಲನವನ್ನೇ ಉಂಟುಮಾಡುತ್ತಿದೆ. ಎಮ್‌ಐ 3 ಮತ್ತು ರೆಡ್ಮೀ 1ಎಸ್‌ ಫ್ಲ್ಯಾಶ್ ಸೇಲ್‌ನಂತೆಯೇ ಶ್ಯೋಮಿಯ ಇನ್ನೊಂದು ಉತ್ಪನ್ನ ಮಾರುಕಟ್ಟೆಯಲ್ಲಿ ಹೊಸ ಇತಿಹಾಸವನ್ನು ದಾಖಲಿಸಹೊರಟಿದೆ.

ಇದನ್ನೂ ಓದಿ: ಹೊಸ ವರ್ಷಕ್ಕಾಗಿ ಹೊಸ ಹೊಸ ಫೋನ್‌ಗಳು

ಶ್ಯೋಮಿ ರೆಡ್ಮೀ ನೋಟ್‌ನ 50,000 ಯೂನಿಟ್‌ಗಳು ಫಸ್ಟ್ ಫ್ಲ್ಯಾಶ್ ಸೇಲ್‌ನಲ್ಲಿ ಮಾರಾಟವನ್ನು ಕಂಡುಕೊಂಡಿದ್ದು ಬರೇ 6 ಸೆಕುಂಡುಗಳಲ್ಲಿ ಫ್ಲಿಪ್‌ಕಾರ್ಟ್ ನಲ್ಲಿ ಮಾರಾಟ ಮುಕ್ತಾಯ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿದೆ. ಶ್ಯೋಮಿ ಅಧ್ಯಕ್ಷ ಹುಗೋ ಬಾರ್ರಾ, ಟ್ವಿಟ್ಟರ್‌ನಲ್ಲಿ ಈ ಸುದ್ದಿಯನ್ನು ಬಿತ್ತರಿಸಿದ್ದಾರೆ. ಇನ್ನು ಭಾರತದ ಅಧಿಕೃತ ಟ್ವಿಟ್ಟರ್ ಖಾತೆ ಈ ಸುದ್ದಿಯನ್ನುಅರುಹಿದೆ.

ಮಿಂಚಿನ ಮಾರಾಟ‌ದಲ್ಲಿ ಮಿಂಚಿದ ಶ್ಯೋಮಿ

ಇನ್ನು ಸಂಸ್ಥೆ ಹೇಳುವಂತೆ ರೆಡ್ಮೀ ನೋಟ್‌ನ ನಂತರದ ಫ್ಲ್ಯಾಶ್ ಸೇಲ್ ಡಿಸೆಂಬರ್ 9 ರಂದು ನಡೆಸಲಾಗುತ್ತಿದ್ದು, ನೋಂದಾವಣೆಯನ್ನು ಮಂಗಳವಾರ ಸಂಜೆ 6 ಗಂಟೆಯಿಂದ ಡಿಸೆಂಬರ್ 8 ಸೋಮವಾರ ಮಧ್ಯರಾತ್ರಿಯವರೆಗೆ ನಡೆಸಲಾಗುವುದು ಎಂದು ತಿಳಿಸಿದೆ.

ರೆಡ್ಮೀ ನೋಟ್ ಬೆಲೆ ರೂ 8,999 ಆಗಿದ್ದು ಇದು ಡ್ಯುಯಲ್ ಸಿಮ್ ಹಾಗೂ ಡ್ಯುಯಲ್ ಸ್ಟ್ಯಾಂಡ್‌ಬೈ ಬೆಂಬಲದೊಂದಿಗೆ ಬಂದಿದೆ. ಮತ್ತು ಆಂಡ್ರಾಯ್ಡ್ 4.2.2 ಓಎಸ್ ಇದರಲ್ಲಿ ಚಾಲನೆಯಾಗುತ್ತಿದೆ. ರೆಡ್ಮೀ ನೋಟ್ 5.5 ಇಂಚಿನ 720x1280 ಪಿಕ್ಸೆಲ್ ಐಪಿಎಸ್ ಎಲ್‌ಸಿಡಿ ಸ್ಕ್ರೀನ್ ಜೊತೆಗೆ ಬಂದಿದ್ದು ಇದರ ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಮತ್ತು ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದೆ. ಫೋನ್ 8ಜಿಬಿ ಆಂತರಿಕ ಸಂಗ್ರಹಣೆಯೊಂದಿಗೆ ಬಂದಿದ್ದು ಇದನ್ನು 32ಜಿಬಿವರೆಗೆ ಎಸ್ ಡಿ ಕಾರ್ಡ್ ಮೂಲಕ ವಿಸ್ತರಿಸಬಹುದು.

Best Mobiles in India

English summary
Xiaomi's first flash sale for its newest budget offering in India, the Redmi Note, has been successful in the manner the Mi 3 and Redmi 1S flash sales have been in the past.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X