54 % ಭಾರತೀಯರು ಪೋಲಿ ಮೆಸೇಜ್ ಪಂಟರು

Posted By: Varun
54 % ಭಾರತೀಯರು ಪೋಲಿ ಮೆಸೇಜ್ ಪಂಟರು
ಸಾಹಸ ಸಿಂಹ ವಿಷ್ಣುವರ್ಧನ್ ನಟಿಸಿರುವ "ಕೋಟಿಗೊಬ್ಬ" ಚಿತ್ರದಲ್ಲಿ ಒಂದು ಸೀನ್ ಹೀಗಿದೆ. ಆಟೋ ಓಡಿಸುತ್ತಿರುವ ಹೀರೋ, ಹಿಂದೆ ಕೂತಿರುವ ಹೀರೋಯಿನ್ ಜೊತೆ ಮಾತನಾಡುತ್ತಹೀಗೆ ಹೇಳುತ್ತಾನೆ- 'ಒಬ್ಬ ಚೀನಾದವನು ಕೆಲಸ ಮಾಡದಿದ್ರೆ ಸತ್ತೊಗ್ತಾನೆ, ಬ್ರಿಟೀಷ್ ದವನು ಸುಖ ಪಡದೆ ಇದ್ರೆ ಸತ್ತೊಗ್ತಾನೆ, ಆದ್ರೆ ಒಬ್ಬ ಭಾರತೀಯ ಮಾತಾಡ್ದಿದ್ರೆ ಸತ್ತೊಗ್ತಾನೆ' ಅಂತ.

ಈ ರೀತಿಯ ಮೊಬೈಲ್ ಬಂದ ಮೇಲಂತೂ ಮಾತಾಡೋದು, ಮೆಸೇಜ್ ಕಳ್ಸೋದ್ರಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ಟಾಯ್ಲೆಟ್ ಗೂ ಹೋಗಿ ಫೋನಲ್ಲಿ ಮಾತಾಡ್ತಾರೆ, ಮೆಸೇಜ್ ಪ್ಯಾಕ್ ಹಾಕಿಸ್ಕೊಂಡು ಫಾರ್ವರ್ಡ್ ಮಾಡ್ತಾನೆ ಇರ್ತಾರೆ. ಕಾಲೇಜ್ ಹುಡುಗರ ವಿಷಯಕ್ಕೆ ಬಂದರಂತೂ ಕೇಳೋದೇ ಬೇಡಾ.ಅಷ್ಟು ಹುಚ್ಚು ಹಿಡಿಸಿಕೊಂಡು ಬಿಟ್ಟಿದ್ದಾರೆ.

ಇಷ್ಟೆಲ್ಲಾ ಯಾಕೆ ಹೇಳ್ಬೇಕಾಯ್ತು ಅಂತಂದ್ರೆ ನ್ಯೂಯಾರ್ಕ್ ನ ಒಂದು ಕಂಪನಿಯ ವರದಿಯ ಪ್ರಕಾರ ಸುಮಾರು 50 % ಗೂ ಹೆಚ್ಚು ಭಾರತೀಯರು ಪೋಲಿ sms ಹಾಗು ಚಿತ್ರಗಳನ್ನು ಕಳುಹಿಸುತ್ತರಂತೆ!

ವಿಶ್ವದಾದ್ಯಂತ ಸಾಕಷ್ಟು ಜನರನ್ನು ಸಂದರ್ಶಿಸಿ ಮಾಡಿರುವ ಈ ವರದಿಯ ಪ್ರಕಾರ ಪ್ರಚೋದಕ ಮೆಸೇಜ್ ಕಳುಹಿಸುವುದರಲ್ಲಿ ಬ್ರಜಿಲ್ ದೇಶ ಮೊದಲಂತೆ (64 %). ಇದೆ ವರದಿಯ ಪ್ರಕಾರ, ಇಂಟರ್ವ್ಯೂ ಮಾಡಿದ ಸುಮಾರು 84 % ಜನರು ಒಂದು ದಿನವೂ ತಮ್ಮ ಮೊಬೈಲ್ ಬಿಟ್ಟು ಇರುವುದಕ್ಕೆ ಆಗಲ್ಲ ಅಂತಾ ಒಪ್ಪಿಕೊಂಡರಂತೆ.

ತಂತ್ರಜ್ಞಾನ ಮುಂದುವರೆದಂತೆ ಮಾನವನಿಗೆ ವಸ್ತುಗಳ ಮೇಲಿನ ವ್ಯಾಮೋಹ ಅತಿಯಾಗಿದ್ದು, ಕೆಲವು ದೇಶಗಳಲ್ಲಿ ಶೌಚಾಲಯಗಳ ಸೌಲಭ್ಯವಿಲ್ಲದಿದ್ದರೂ, ಮೊಬೈಲ್ ಸೇವೆ ಇರುವುದು ಅಚ್ಚರಿಯ ವಿಷಯವೆ ಸರಿ ಅಂತಾ ಈ ವರದಿ ಹೇಳಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot